ಸ್ಟೆಥಸ್ಕೋಪ್ ಹಿಡಿದು ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರೀಗ ಸಾರ್ವಜನಿಕರ ಸಮಸ್ಯೆ ಪರಿಹರಿಸುವ ಸಲುವಾಗಿ ವಿಧಾನಸಭೆಯ ಮೆಟ್ಟಿಲು ತುಳಿದಿದ್ದಾರೆ. ಭಾರಿ ಕುತೂಹಲಕಾರಿ ವಿದ್ಯಮಾನದಲ್ಲಿ ತೆಲಂಗಾಣ ಚುನಾವಣೆಯಲ್ಲಿ 15 ವೈದ್ಯರು ಗೆಲುವು ಗಳಿಸಿದ್ದು, ವಿಧಾನಸಭೆ ಪ್ರವೇಶಿಸಲು ಸಜ್ಜಾಗಿದ್ದಾರೆ.
ಜಯಗಳಿಸಿರುವ 15 ವೈದ್ಯರಲ್ಲಿ 11 ಮಂದಿ ಕಾಂಗ್ರೆಸ್, ಬಿಆರ್‌ಎಸ್ 3 ಹಾಗೂ ಬಿಜೆಪಿಯಿಂದ ಒಬ್ಬರು ಆಯ್ಕೆಯಾಗಿದ್ದಾರೆ.
ಕಾಂಗ್ರೆಸಿನಿಂದ ನಿಜಾಮಾಬಾದ್ ಗ್ರಾಮಾಂತರ ಕ್ಷೇತ್ರದಿಂದ ಗೆದ್ದಿರುವ ಡಾ ಆರ್ ಭೂಪತಿ ರೆಡ್ಡಿ, ಡಾ. ರಾಮ್ ಚಂದರ್ ನಾಯ್ಕ್ (ಡೋರ್ನಕಲ್), ಡಾ ವಂಶಿ ಕೃಷ್ಣ (ಅಚಂಪೇಟೆ), ಡಾ ಮುರಳಿ ನಾಯ್ಕ್ (ಮಹಬೂಬಾಬಾದ್), ಡಾ ಕೆ ಸತ್ಯ ನಾರಾಯಣ (ಮನಕೊಂಡೂರು) ಕ್ಷೇತ್ರಗಳಿಂದ ತೆಲಂಗಾಣ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚೆನ್ನೈ ನಂತರ ಆಂಧ್ರಕ್ಕೆ ಅಪ್ಪಳಿಸಿದ ಮಿಚಾಂಗ್ ಚಂಡಮಾರುತ
ನಾರಾಯಣ ಪೇಟೆಯಿಂದ ಡಾ. ಪರ್ಣಿಕಾ ರೆಡ್ಡಿ, ನಾರಾಯಣಖೇಡ್‌ನಿಂದ ಮಕ್ಕಳ ತಜ್ಞ ಡಾ.ಪಿ. ಸಂಜೀವ ರೆಡ್ಡಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.
ಮೇಡಕ್‌ನಿಂದ ಡಾ ಮೈನಂಪಲ್ಲಿ ರೋಹಿತ್, ಚೆನ್ನೂರು ಕ್ಷೇತ್ರದಿಂದ ವಿವೇಕ್ ವೆಂಕಟಸ್ವಾಮಿ, ಸತ್ತುಪಲ್ಲಿಯಿಂದ ಎಂ ರಾಗಮಯಿ, ನಾಗರ್ಕರ್ನೂಲ್‌ನಿಂದ ಡಾ ಕುಚುಕುಲ್ಲಾ ರಾಜೇಶ್ ರೆಡ್ಡಿ ವಿಧಾನಸಭೆ ಪ್ರವೇಶಿಸಿದ್ದು ಇವರೆಲ್ಲರೂ ಹಸ್ತದ ಗುರುತಿನಿಂದ ಜಯದ ನಗೆ ಬೀರಿದ್ದಾರೆ.
ಇವರ ಜೊತೆ ಭದ್ರಾಚಲಂ ಕ್ಷೇತ್ರದಿಂದ ಡಾ.ತೆಲ್ಲಂ ವೆಂಕಟ ರಾವ್, ಜಗತಿ ಕ್ಷೇತ್ರದಿಂದ ಸಂಜಯ್ ಕುಮಾರ್, ಕೊರಟ್ವಲಾದಿಂದ ಕಲ್ವಾಕುಂಟ ಸಂಜಯ್ ಬಿಆರ್‌ಎಸ್‌ನಿಂದ ಗೆಲುವು ಸಾಧಿಸಿದರೆ, ಸಿರ್ಪುರ ಕ್ಷೇತ್ರದಿಂದ ಡಾ ಪಾಲ್ವಾಯಿ ಹರೀಶ್ ಬಾಬು ಬಿಜೆಪಿಯಿಂದ ಜಯಗಳಿಸಿದ್ದಾರೆ.
ನೂತನ ಶಾಸಕ ಕಂ ವೈದ್ಯರಲ್ಲಿ ಒಪಿಡಿ, ದಂತ ಚಿಕಿತ್ಸಕ, ಮೂಳೆ ವಿಭಾಗ, ಶಸ್ತ್ರ ಚಿಕಿತ್ಸಕ, ನೇತ್ರ ವಿಭಾಗ ಸೇರಿದಂತೆ ಎಲ್ಲ ವಿಭಾಗದವರು ಸೇರಿದ್ದಾರೆ.