ಇವಿಎಂ ದತ್ತಾಂಶಗಳನ್ನು ಅಳಿಸಬೇಡಿ ಎಂದು ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದೆ. ಮತ ಎಣಿಕೆ ಮುಗಿದ ನಂತರವೂ ಎಲೆಕ್ಟ್ರಾನಿಕ್ ಮತ ಯಂತ್ರಗಳ ದತ್ತಾಂಶವನ್ನು ಅಳಿಸಬಾರದು ಎಂದು ಕೋರಿ ಸಲ್ಲಿಸಲಾದ ಅರ್ಜಿಗೆ ಪ್ರತಿಕ್ರಿಯೆಯಾಗಿ ಸುಪ್ರೀಂ ಕೋರ್ಟ್ ಈ ಸೂಚನೆ ನೀಡಿದೆ.
ಸದ್ಯಕ್ಕೆ, ಇವಿಎಂನಿಂದ ಯಾವುದೇ ದತ್ತಾಂಶವನ್ನು ಅಳಿಸಬೇಡಿ ಅಥವಾ ಯಾವುದೇ ದತ್ತಾಂಶವನ್ನು ಮರುಲೋಡ್ ಮಾಡಬೇಡಿ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಪೀಠ ಹೇಳಿದೆ.
ಚುನಾವಣೆಯ ನಂತರ ಇವಿಎಂ ಮೆಮೊರಿ ಮತ್ತು ಮೈಕ್ರೋಕಂಟ್ರೋಲರ್ ಅನ್ನು ಸುಡುವ ಪ್ರಕ್ರಿಯೆಯ ಬಗ್ಗೆ ಚುನಾವಣಾ ಆಯೋಗವು ನ್ಯಾಯಾಲಯಕ್ಕೆ ಮಾಹಿತಿಯನ್ನು ಒದಗಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಎಡಿಆರ್, ಹರಿಯಾಣ ಹಾಗೂ ಕಾಂಗ್ರೆಸ್‌ನ ಒಂದು ಗುಂಪು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕರ್ನಾಟಕ ಮಾನವೀಯ ಮಾದರಿಯ ತಿರಸ್ಕರಿಸಿ ನೆತ್ತರು ಹರಿಸಿದ ಅಮಿತ್ ಶಾ
ವಿಚಾರಣೆ ಸಂದರ್ಭದಲ್ಲಿ ಎಡಿಆರ್ ಪರವಾಗಿ ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಹಾಜರಾಗಿದ್ದರು. ಸುಪ್ರೀಂ ಕೋರ್ಟ್ ತೀರ್ಪಿನಂತೆ ಪ್ರಮಾಣಿತ ಕಾರ್ಯಾಚರಣೆ ವಿಧಾನವನ್ನು ಚುನಾವಣಾ ಆಯೋಗ ಅಳವಡಿಸಿಕೊಳ್ಳಬೇಕು. ಒಂದು ವೇಳೆ ಇವಿಎಂ ತಂತ್ರಾಂಶದಲ್ಲಿ ದೋಷವಿದ್ದರೆ ಅಥವಾ ತಿರುಚಿರುವ ಆರೋಪದ ಬಗ್ಗೆ ಯಾರಾದರೂ ಅನುಮಾ ವ್ಯಕ್ತಪಡಿಸಿದರೆ ಈ ಬಗ್ಗೆ ಪರೀಕ್ಷಿಸಲು ಕೋರಬಹುದು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.
ಇವಿಎಂ ಅನ್ನು ನಾಶಗೊಳಿಸುವುದಿಲ್ಲ ಎಂದು ಸಾಬೀತುಪಡಿಸಲು ಇವಿಎಂನ ಸುಟ್ಟ ಮೆಮೊರಿ ಹಾಗೂ ಮೈಕ್ರೊಕಂಟ್ರೋಲರ್ ಅನ್ನು ಇಂಜಿನಿಯರ್ ಪರಿಶೀಲಿಸಬೇಕು ಎಂದು ಅರ್ಜಿದಾರರು ಕೋರ್ಟ್‌ಗೆ ಮನವಿ ಸಲ್ಲಿಸಿದರು.
ಮುಂದಿನ 15 ದಿನಗಳಲ್ಲಿ ಈ ಬಗ್ಗೆ ವಿವರ ನೀಡುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತು. ಮುಂದಿನ ವಿಚಾರಣೆ ಮಾರ್ಚ್ 3 ರಂದು ನಡೆಯಲಿದೆ.
