ನಿರುದ್ಯೋಗದ ನೆಪ ಬೇಡ; ಮಗನಿಗೆ ಜೀವನಾಂಶ ಕೊಡಲು ತಂದೆಗೆ ಕೋರ್ಟ್‌ ಸೂಚನೆ

Date:

ನಿರುದ್ಯೋಗ ಮತ್ತು ಇತರೆ ಕೌಟುಂಬಿಕ ಜವಾಬ್ದಾರಿಗಳ ನೆಪವೊಡ್ಡಿ ತಂದೆಯಾದವನು ತನ್ನ ಮಗನಿಗೆ ಜೀವನಾಂಶ ನೀಡುವ ಕಾನೂನಾತ್ಮಕ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ದೆಹಲಿ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ. ತನ್ನ ಅಪ್ರಾಪ್ತ ಮಗನಿಗೆ ಪ್ರತಿ ತಿಂಗಳು 6,000 ರೂ. ಜೀವನಾಂಶ ಪಾವತಿಸುವಂತೆ ವ್ಯಕ್ತಿಯೊಬ್ಬರಿಗೆ ದೆಹಲಿಯ ಸಾಕೇತ್ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಶೀತಲ್ ಚೌಧರಿ ಪ್ರಧಾನ್ ನಿರ್ದೇಶನ ನೀಡಿದ್ದಾರೆ.

- Advertisement -

“ಅಪ್ರಾಪ್ತ ಬಾಲಕ, 2015ರಿಂದ ತನ್ನ ತಾಯಿಯೊಂದಿಗೇ ವಾಸಿಸುತ್ತಿದ್ದಾನೆ. ಕಳೆದ ಹತ್ತು ವರ್ಷಗಳಿಂದ ಆತನ ಪಾಲನೆ-ಪೋಷಣೆಗೆ ತಂದೆ ಯಾವುದೇ ರೀತಿಯ ಹಣಕಾಸಿನ ನೆರವು ನೀಡಿಲ್ಲ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಮಗನಿಗೆ ಹಣ ನೀಡದೆ ಸತಾಯಿಸಿರುವುದು ಕೇವಲ ಬೇಜವಾಬ್ದಾರಿತನ ಮಾತ್ರವಲ್ಲ, ಬದಲಿಗೆ ಇದು ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ‘ಆರ್ಥಿಕ ದೌರ್ಜನ್ಯ’ವೂ ಆಗಿದೆ” ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಮೆರಿಕದ ಮಧ್ಯಂತರ ಚುನಾವಣೆ: ಬೆಲೆ ಏರಿಕೆ, ಇರಾನ್ ಯುದ್ಧದ...

ಅಮೆರಿಕದಲ್ಲಿ ಏರುತ್ತಿರುವ ಪೆಟ್ರೋಲ್ ಬೆಲೆ, ದುಬಾರಿಯಾಗುತ್ತಿರುವ ದಿನಬಳಕೆಯ ವಸ್ತುಗಳು ಹಾಗೂ ಇರಾನ್ ವಿರುದ್ಧದ ಯುದ್ಧದ ಆರ್ಥಿಕ ಪರಿಣಾಮಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ದೊಡ್ಡ ರಾಜಕೀಯ ಸವಾಲಾಗಿವೆ. ನವೆಂಬರ್ 3ರಂದು ನಡೆಯಲಿರುವ ಮಧ್ಯಂತರ...

ಖಾಲಿದ್‌ರಂತೆ ಸಿಜೆಪಿ ನಾಯಕರನ್ನೂ ದೀರ್ಘ ಜೈಲುವಾಸದ ಸುಳಿಯಲ್ಲಿ ಸಿಲುಕಿಸುವ...

ಚುನಾವಣಾ ಆಯೋಗದ ಅಕ್ರಮ ಪ್ರಶ್ನಿಸಿದ ಸಿಜೆಪಿ ನಾಯಕರ ವಿರುದ್ಧ ಸರಣಿ ದೂರು ದಾಖಲಿಸಲಾಗುತ್ತಿದೆ. ಮೋದಿ ಸರ್ಕಾರದ ಅವಧಿಯಲ್ಲಿ ‘ವಿಚಾರಣೆಯೇ ಒಂದು ಶಿಕ್ಷೆ’ ಎನ್ನುವ ತಂತ್ರ ಪುನರಾವರ್ತನೆಯಾಗುತ್ತಿದೆಯೇ? ಉಮರ್‌ ಖಾಲಿದ್‌ ರೀತಿಯಲ್ಲೇ ಸೌರವ್ ದಾಸ್,...

ಎಚ್ಚೆತ್ತುಕೊಳ್ಳುತ್ತಿವೆ DMK, YSRCP; ಡಿಲಿಮಿಟೇಷನ್‌ ಮಸೂದೆ ಮತ್ತೆ ಸೋಲುವ...

ಮೋದಿಯವರ ಅಹಂಕಾರದ ಆಡಳಿತಕ್ಕೆ ದಕ್ಷಿಣ ಭಾರತವು ಎಂದಿಗೂ ತಲೆಬಾಗುವುದಿಲ್ಲ, ಮತ್ತು ಈ ಬಾರಿಯ ಅವರ ಹತಾಶೆಯ ರಾಜಕೀಯ ಕುತಂತ್ರಗಳು ಅವರ ಪಾಲಿಗೆ ತಿರುಗುಬಾಣವಾಗಿ ದೇಶದ ಪ್ರಜಾಪ್ರಭುತ್ವವು ಗೆಲ್ಲುವುದು ಖಚಿತ ಮಹಿಳಾ ಮೀಸಲಾತಿ ಎಂಬ ಪವಿತ್ರ...

“ಪತಿಯಾದವನು ತನ್ನ ಸ್ವಂತ ಖರ್ಚು-ವೆಚ್ಚಗಳನ್ನು ಹೇಗೆ ನಿಭಾಯಿಸುತ್ತಾನೆ ಎಂಬುದು ಆತನಿಗೆ ಬಿಟ್ಟ ವಿಷಯ. ತನಗೆ ಕೆಲಸವಿಲ್ಲ ಅಥವಾ ವೃದ್ಧ ತಾಯಿಯ ಜವಾಬ್ದಾರಿ ಇದೆ ಎಂಬ ನೆಪಗಳನ್ನು ಒಡ್ಡುವುದರಿಂದ ಕಾನೂನುಬದ್ಧವಾಗಿ ಮದುವೆಯಾಗಿರುವ ಪತ್ನಿ ಮತ್ತು ಅಪ್ರಾಪ್ತ ಮಗನನ್ನು ಸಲಹುವ ಜವಾಬ್ದಾರಿಯಿಂದ ಆತನಿಗೆ ವಿನಾಯಿತಿ ಸಿಗುವುದಿಲ್ಲ” ಎಂದು ಕೋರ್ಟ್‌ ದೃಢವಾಗಿ ಹೇಳಿದೆ.

ಅದೂ ಅಲ್ಲದೆ, ಆತ ತನಗೆ ಕೆಲಸವಿಲ್ಲ ಎಂದು ಹೇಳುತ್ತಿದ್ದರೂ ತನ್ನ ದಿನನಿತ್ಯದ ಖರ್ಚುಗಳ ನಿಖರ ವಿವರಗಳನ್ನು ನ್ಯಾಯಾಲಯದ ಮುಂದೆ ಮರೆಮಾಚಿರುವುದು ಆತನ ನಡವಳಿಕೆಯನ್ನು ಸಂಶಯಿಸುವಂತೆ ಮಾಡಿದೆ ಎಂದೂ ಕೋರ್ಟ್ ಹೇಳಿದೆ.

ವಿಚಾರಣೆ ವೇಳೆ ನ್ಯಾಯಾಲಯವು, ಪತಿಯ ವಾದಗಳನ್ನು ಸಂಪೂರ್ಣವಾಗಿ ತಳ್ಳಿಹಾಕುತ್ತಾ ಕೆಲವು ಅತ್ಯಂತ ಪ್ರಮುಖ ಕಾನೂನು ಸೂತ್ರಗಳನ್ನು ನೆನಪಿಸಿದೆ. “ಸಂಕಷ್ಟದಲ್ಲಿರುವ ಮಹಿಳೆ ಮತ್ತು ಮಗು ನಿರ್ಗತಿಕರಾಗುವುದನ್ನು ಹಾಗೂ ಬೀದಿಗೆ ಬೀಳುವುದನ್ನು ತಡೆಯುವುದೇ ಜೀವನಾಂಶ ನೀಡಿಕೆಯ ಮುಖ್ಯ ಉದ್ದೇಶ. ಪತ್ನಿ ಸುಶಿಕ್ಷಿತಳಾಗಿದ್ದಾಳೆ ಮತ್ತು ಆಕೆಗೆ ದುಡಿಯುವ ಸಾಮರ್ಥ್ಯವಿದೆ ಎಂಬ ಪತಿಯ ವಾದಕ್ಕೆ ಮನ್ನಣೆ ನೀಡಲಾಗುವುದಿಲ್ಲ. ಕೇವಲ ಶೈಕ್ಷಣಿಕ ಅರ್ಹತೆಯನ್ನು ಹೊಂದಿರುವುದು ಜೀವನಾಂಶವನ್ನು ನಿರಾಕರಿಸಲು ಸೂಕ್ತ ಆಧಾರವಾಗಲಾರದು. ಏಕೆಂದರೆ ದುಡಿಯುವ ಸಾಮರ್ಥ್ಯ ಇರುವುದು ಮತ್ತು ಪ್ರಸ್ತುತ ನಿಜವಾಗಿ ಗಳಿಸುತ್ತಿರುವುದು ಇವೆರಡೂ ಸಂಪೂರ್ಣವಾಗಿ ವಿಭಿನ್ನ ವಿಷಯಗಳಾಗಿವೆ. ಪತ್ನಿ ವಿದ್ಯಾವಂತೆಯಾಗಿದ್ದರೂ ಸದ್ಯಕ್ಕೆ ಯಾವುದೇ ಕೆಲಸ ಮಾಡುತ್ತಿಲ್ಲ ಮತ್ತು ಮಗನ ಸಂಪೂರ್ಣ ಪಾಲನೆಯಲ್ಲಿ ತೊಡಗಿಸಿಕೊಂಡಿರುವುದರಿಂದ ಆಕೆಗೆ ಸ್ವತಂತ್ರ ಆದಾಯವಿಲ್ಲ” ಎಂಬುದನ್ನು ಗಮನಿಸಿದೆ.

ಮತ್ತೊಂದೆಡೆ, ಪತಿ ತಾನು ನಿರುದ್ಯೋಗಿ ಎಂದು ಹೇಳಿಕೊಂಡಿದ್ದರೂ ಆತ ದೃಢಕಾಯನಾಗಿದ್ದು ದುಡಿಯಲು ಎಲ್ಲ ರೀತಿಯ ದೈಹಿಕ ಶಕ್ತಿ ಹೊಂದಿದ್ದಾನೆ. ಇಷ್ಟಿದ್ದರೂ ಆತ ತನ್ನ ಹಣಕಾಸಿನ ದಾಖಲೆಗಳನ್ನಾಗಲಿ ಅಥವಾ ಆದಾಯದ ಅಫಿಡವಿಟ್ ಅನ್ನಾಗಲಿ ನ್ಯಾಯಾಲಯಕ್ಕೆ ಸಲ್ಲಿಸದೆ ಸತ್ಯವನ್ನು ಮುಚ್ಚಿಡಲು ಯತ್ನಿಸಿದ್ದಾನೆ. ಪತ್ನಿಯು ತನಗೆ ಮತ್ತು ಮಗನಿಗೆ ತಿಂಗಳಿಗೆ ಕನಿಷ್ಠ 20ರಿಂದ 30 ಸಾವಿರ ರೂಪಾಯಿಗಳ ಖರ್ಚು ಬರುತ್ತಿದೆ ಎಂದು ತಿಳಿಸಿ, ಅದಕ್ಕೆ ಪೂರಕವಾಗಿ ಮಗನ ಶಾಲಾ ಶುಲ್ಕದ ದಾಖಲೆಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದರು. ಇದನ್ನು ಕೂಲಂಕಷವಾಗಿ ಪರಿಶೀಲಿಸಿದ ಕೋರ್ಟ್, ಮಗನಿಗೆ ಹದಿನೆಂಟು ವರ್ಷ ತುಂಬುವವರೆಗೆ ಪ್ರತಿ ತಿಂಗಳು 6,000 ರೂಪಾಯಿಗಳ ಜೀವನಾಂಶ ನೀಡಲು ಪತಿ ಸಂಪೂರ್ಣ ಶಕ್ತನಾಗಿದ್ದಾನೆ ಎಂದು ತೀರ್ಪು ನೀಡಿದೆ.

ಈ ಲೇಖನ ಓದಿದ್ದೀರಾ?: ನಿಜವಾದ ಶಿಸ್ತಿನ ಪಕ್ಷ ಕಾಂಗ್ರೆಸ್ಸೋ? ಬಿಜೆಪಿಯೋ?

ಈ ದಂಪತಿಯ ದಾಂಪತ್ಯ ಜೀವನವು ಆರಂಭವಾದ ಕೆಲವೇ ತಿಂಗಳುಗಳಲ್ಲಿ ಮುರಿದುಬಿದ್ದಿತ್ತು ಎಂಬುದು ಪ್ರಕರಣದ ಮತ್ತೊಂದು ಕಹಿ ಸತ್ಯ. ದಂಪತಿಗಳು 2013ರ ಫೆಬ್ರವರಿಯಲ್ಲಿ ಹಿಂದು ಸಂಪ್ರದಾಯದಂತೆ ಅತ್ಯಂತ ವಿಜೃಂಭಣೆಯಿಂದ ಮದುವೆಯಾಗಿದ್ದರು. ವಿವಾಹದ ಪರಿಪೂರ್ಣ ವೆಚ್ಚವನ್ನು ಮಹಿಳೆಯ ಪೋಷಕರೇ ಪಾವತಿಸಿದ್ದರು. ಅದಕ್ಕಾಗಿ, ಹತ್ತು ಲಕ್ಷಕ್ಕೂ ಹೆಚ್ಚು ಹಣ ಭರಿಸಿದ್ದು, ಮಾಡಿದ್ದಲ್ಲದೆ ಪತಿಗೆ ಬೆಲೆಬಾಳುವ ಉಡುಗೊರೆಗಳು, ಚಿನ್ನಾಭರಣ ಹಾಗೂ ಗೃಹೋಪಯೋಗಿ ವಸ್ತುಗಳನ್ನು ನೀಡಿದ್ದರು. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ಪತಿ ಮತ್ತು ಆತನ ಪೋಷಕರು ವರದಕ್ಷಿಣೆಗಾಗಿ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಲು ಆರಂಭಿಸಿದ್ದರು. ಆಕೆಯನ್ನು ಪದೇ ಪದೇ ಮನೆಯಿಂದ ಹೊರಹಾಕಿದ್ದರು. 2013ರ ಅಕ್ಟೋಬರ್‌ನಲ್ಲಿ ಆಕೆ ಮಹಿಳಾ ದೌರ್ಜನ್ಯ ತಡೆ ಘಟಕಕ್ಕೆ ದೂರು ನೀಡಿದ್ದರು. ಪತಿ ಮತ್ತು ಆತನ ಪೋಷಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಆ ವೇಳೆಗೆ ಮಹಿಳೆ ಗರ್ಭಿಣಿಯಾಗಿದ್ದರು.2013ರ ನವೆಂಬರ್‌ನಲ್ಲಿ ದಂಪತಿಗೆ ಗಂಡು ಮಗು ಜನಿಸಿತು. ನಂತರ, 2015ರ ಏಪ್ರಿಲ್‌ನಲ್ಲಿ ಕೌಟುಂಬಿಕ ನ್ಯಾಯಾಲಯದ ಮುಂದೆ ಇಬ್ಬರ ನಡುವೆ ರಾಜಿ ಸಂಧಾನ ನಡೆಸಲಾಗಿತ್ತು. ಅದರಂತೆ ಪತಿಯ ಕುಟುಂಬದಿಂದ ದೂರವಾಗಿ ಬಾಡಿಗೆ ಮನೆಯಲ್ಲಿ ಪ್ರತ್ಯೇಕವಾಗಿ ವಾಸಿಸಲು ಇಬ್ಬರೂ ಒಪ್ಪಿಕೊಂಡಿದ್ದರು. ಆದರೆ ಪತ್ನಿಯ ಪ್ರಕಾರ, ಈ ತಾತ್ಕಾಲಿಕ ವ್ಯವಸ್ಥೆಯು ಕೇವಲ ಕೆಲವು ತಿಂಗಳು ಮಾತ್ರ ನಡೆಯಿತು. 2015ರ ಜುಲೈನಲ್ಲಿ ಪತಿ ಮತ್ತೆ ಪತ್ನಿ ಮತ್ತು ಮಗನನ್ನು ಒಂಟಿಯಾಗಿ ಕೈಬಿಟ್ಟು ತನ್ನ ಪೋಷಕರನ್ನು ಸೇರಿಕೊಂಡನು. ಅಂದಿನಿಂದ ಆಕೆ ತನ್ನ ಮಗನನ್ನು ಒಬ್ಬಳೇ ಸಾಕಿ ಬೆಳೆಸುತ್ತಿದ್ದಾರೆ. 2018ರ ಅಕ್ಟೋಬರ್‌ನಲ್ಲಿ ಆಕೆಯ ತಂದೆ ತೀರಿಕೊಂಡ ನಂತರ, ತಾಯಿಯ ಮನೆಯಲ್ಲೇ ವಾಸವಿದ್ದು ಅತ್ಯಂತ ಕಷ್ಟದ ಆರ್ಥಿಕ ಪರಿಸ್ಥಿತಿಯಲ್ಲಿ ಮಗನನ್ನು ಓದಿಸುತ್ತಿದ್ದಾರೆ. 2025ರ ಸೆಪ್ಟೆಂಬರ್‌ನಲ್ಲಿ ಕೆಳ ನ್ಯಾಯಾಲಯವು ಆಕೆಯ ದೂರನ್ನು ವಜಾಗೊಳಿಸಿದಾಗ, ಆಕೆ ನ್ಯಾಯಕ್ಕಾಗಿ ಹಿರಿಯ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಪ್ರಾಪ್ತ ಮಗನ ಕಾರು ಅಪಘಾತದಲ್ಲಿ ಮೂವರ ಸಾವು; ತಂದೆ ವಿರುದ್ಧದ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಕಾರ

ಅಪ್ರಾಪ್ತ ವಯಸ್ಸಿನ ಮಗನಿಗೆ ಕಾರು ಚಲಾಯಿಸಲು ಅವಕಾಶ ನೀಡಿದ ಆರೋಪ ಎದುರಿಸುತ್ತಿರುವ...

ರಾತ್ರೋರಾತ್ರಿ ತುರ್ತು ವಿಚಾರಣೆ ಕೋರಿ ದೆಹಲಿ ಹೈಕೋರ್ಟ್ ಮೊರೆಹೋದ ಸಿಜೆಪಿ ನಾಯಕರು

ತಮ್ಮ ನ್ಯಾಯಾಂಗ ಬಂಧನ ವಿಸ್ತರಣೆಯನ್ನು ಪ್ರಶ್ನಿಸಿ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ)...

ಹೊರದೇಶಗಳ ದೊಂಬಿಯನ್ನು ಭಾರತದ ಯುವ ಹೋರಾಟಕ್ಕೆ ಸಮೀಕರಿಸುತ್ತಿರುವ ʼಮಡಿಲ ಮಾಧ್ಯಮʼಗಳು; ಇದೇನಾ ಪತ್ರಿಕೋದ್ಯಮ?

ಹೊರದೇಶಗಳ ಬೀದಿಗಳಲ್ಲಿ ನಡೆಯುವ ದೊಂಬಿ, ಲೂಟಿಗೂ, ಭಾರತದ ಯುವಕರು ಸಂವಿಧಾನದತ್ತ ಹಕ್ಕಿಗಾಗಿ...

ಪ್ರಧಾನಿ ಮೋದಿ ಜೊತೆ ನಾಳೆ ಖರ್ಗೆ ಸಭೆ: ಎಸ್‌ಐಆರ್, ಕ್ಷೇತ್ರ ಪುನರ್‌ವಿಂಗಡಣೆ, ಮಹಿಳಾ ಮೀಸಲಾತಿ ಕುರಿತು ಚರ್ಚೆ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್), ಕ್ಷೇತ್ರ ಮರುವಿಂಗಡಣೆ ಮತ್ತು...