5 ವರ್ಷಗಳಲ್ಲಿ ₹11,300 ಕೋಟಿ ಮೌಲ್ಯದ ಮಾದಕ ಜಾಲ ಪತ್ತೆ; ಅದಾನಿ ಬಂದರಲ್ಲಿ ಸಿಕ್ಕಿದ್ದೆಷ್ಟು?

Date:

Advertisements
ಏಳು ಪ್ರಕರಣಗಳಿಗೆ ಸಾಕ್ಷಿಯಾಗಿರುವ ಮುಂಬೈನ ನೆಹರೂ ಬಂದರು ಮೊದಲ ಸ್ಥಾನದಲ್ಲಿದೆ. ಮುಂದ್ರಾದ ಅದಾನಿ ಬಂದರಲ್ಲಿ ಮೂರು ಪ್ರಕರಣಗಳು ವರದಿಯಾಗಿವೆ.

2020 ಮತ್ತು 2024ರ ನಡುವೆ ಮುಂಬೈನ ಜವಾಹರಲಾಲ್ ನೆಹರೂ ಬಂದರು ಮತ್ತು ಮುಂದ್ರಾದ ಅದಾನಿ ಬಂದರು ಸೇರಿದಂತೆ ಒಂಬತ್ತು ಭಾರತೀಯ ಬಂದರುಗಳಲ್ಲಿ ಸುಮಾರು 5,000 ಕೆ.ಜಿ ಮಾದಕ ವಸ್ತುಗಳನ್ನು, 94.2 ಲಕ್ಷ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಗೃಹ ಸಚಿವಾಲಯ ಕಳೆದ ವಾರ ಸಂಸತ್ತಿಗೆ ತಿಳಿಸಿದೆ.

11,300 ಕೋಟಿ ರೂ. ಮೌಲ್ಯದ ಡ್ರಗ್‌ ವಶಕ್ಕೆ ಪಡೆದಿರುವುದನ್ನು ಸರ್ಕಾರ ಒಪ್ಪಿಕೊಂಡಿದೆ. 10,932 ಕೋಟಿ ರೂ. ಮೌಲ್ಯದ 4,963 ಕೆಜಿ ಹೆರಾಯಿನ್, ಕೊಕೇನ್, ಮೆಥಾಂಫೆಟಮೈನ್ ಮತ್ತು 94.2 ಲಕ್ಷ ಟ್ರಾಮಾಡಾಲ್ ಮಾತ್ರೆಗಳನ್ನು ಜಪ್ತಿ ಮಾಡಲಾಗಿದೆ.

ಸಿಪಿಐ ಸಂಸದ ಪಿ.ಪಿ.ಸುಧೀರ್ ಅವರ ಪ್ರಶ್ನೆಗೆ ಸಂಬಂಧಿಸಿದಂತೆ ಆಗಸ್ಟ್ 20 ರಂದು ರಾಜ್ಯಸಭೆಗೆ ಗೃಹಸಚಿವಾಲಯ ಪ್ರತಿಕ್ರಿಯೆ ನೀಡಿದೆ. ಐದು ವರ್ಷಗಳಲ್ಲಿ 19 ಮಾದಕ ವಸ್ತು ಜಪ್ತಿ ಪ್ರಕರಣಗಳು ನಡೆದಿವೆ ಎಂದು ಸಚಿವಾಲಯ ಹೇಳಿದೆ.

Advertisements

ಏಳು ಪ್ರಕರಣಗಳಿಗೆ ಸಾಕ್ಷಿಯಾಗಿರುವ ಮುಂಬೈನ ನೆಹರೂ ಬಂದರು ಮೊದಲ ಸ್ಥಾನದಲ್ಲಿದೆ. ಮುಂದ್ರಾದ ಅದಾನಿ ಬಂದರಲ್ಲಿ ಮೂರು ಪ್ರಕರಣಗಳು ವರದಿಯಾಗಿವೆ.

ಗೃಹ ಸಚಿವಾಲಯದ ಮಾಹಿತಿಯ ಪ್ರಕಾರ, 2021ರ ಸೆಪ್ಟೆಂಬರ್ 19ರಂದು ಅದಾನಿ ಬಂದರಿನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅತಿ ಹೆಚ್ಚು ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಅಂದರೆ 5,976 ಕೋಟಿ ರೂ. ಮೌಲ್ಯದ 2,988 ಕೆಜಿ ಹೆರಾಯಿನ್ ಅದಾನಿ ಬಂದರಿನಲ್ಲಿ ಜಪ್ತಿಯಾಗಿತ್ತು. ಈ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ ಮತ್ತು ಮೂವರು ದಲ್ಲಾಳಿಗಳ ಪರವಾನಗಿಗಳನ್ನು ನಿಷೇಧಿಸಲಾಗಿದೆ.

260 ಕೋಟಿ ರೂ. ಮೌಲ್ಯದ ಐವತ್ತೆರಡು ಕೆಜಿ ಕೊಕೇನ್ ಅನ್ನು ಮೇ 26, 2022 ರಂದು ಮತ್ತು ಅದೇ ವರ್ಷ ಜುಲೈ 11ರಂದು 150 ಕೋಟಿ ರೂ. ಮೌಲ್ಯದ 75 ಕೆಜಿ ಹೆರಾಯಿನ್ ಅನ್ನು ಅದಾನಿ ಬಂದರಿನಲ್ಲಿ ವಶಕ್ಕೆ ಪಡೆಯಲಾಗಿದೆ.

2020ರಲ್ಲಿ ನೆಹರೂ ಬಂದರಲ್ಲಿ 382 ಕೋಟಿ ರೂ. ಮೌಲ್ಯದ 191 ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಳ್ಳಲಾಗಿತ್ತು. 2020ರಲ್ಲಿ ಒಂದೇ ಒಂದು ಪ್ರಕರಣ ದಾಖಲಾದರೂ ಮುಂದಿನ ವರ್ಷ ಐದು ವರ್ಷಗಳಲ್ಲಿ ಅತಿ ಹೆಚ್ಚು ಜಪ್ತಿ ಕಾರ್ಯ ನೆಹರೂ ಬಂದರಲ್ಲಿ ನಡೆದಿದೆ.

ಇದನ್ನೂ ಓದಿರಿ: ಏನಿದು ಅನಿಲ್ ಅಂಬಾನಿ ಬ್ಯಾಂಕ್ ವಂಚನೆ? ಕ್ರಮ ಕೈಗೊಳ್ಳುತ್ತಾರ ಮೋದಿ?

2022ರಲ್ಲಿ ಆರು ಸ್ಥಳಗಳಲ್ಲಿ ಹತ್ತು ಪ್ರಕರಣಗಳು ಕಂಡು ಬಂದಿದ್ದು, 2,417 ಕೋಟಿ ರೂ. ಮೌಲ್ಯದ 1,161 ಕೆಜಿ ಮಾದಕ ದ್ರವ್ಯಗಳು ಸಿಕ್ಕಿವೆ. 2023 ರಲ್ಲಿ ಗಾಂಧಿಧಾಮ್‌ನ ಎವಿ ಜೋಶಿ ಸಿಎಫ್‌ಎಸ್‌ನಿಂದ ಐದು ಕೋಟಿ ರೂ. ಮೌಲ್ಯದ ಒಂದು ಕೆಜಿ ಕೊಕೇನ್ ವಶಕ್ಕೆ ಪಡೆಯಲಾಗಿದೆ. ಕಳೆದ ವರ್ಷ ಟ್ರಾಮಾಡಾಲ್ ಮಾತ್ರೆಗಳನ್ನು ವಶಪಡಿಸಿಕೊಂಡ ಮೂರು ಪ್ರಕರಣಗಳು ನಡೆದಿವೆ.

19 ಕೇಸ್‌ಗಳ ಪೈಕಿ ಐದು ಪ್ರಕರಣಗಳು ವಿಚಾರಣೆಯಲ್ಲಿವೆ ಮತ್ತು ಆರು ಜಪ್ತಿಗಳಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ. ಒಂದು ಪ್ರಕರಣದಲ್ಲಿ, ಚಾರ್ಜ್‌ಶೀಟ್ ಇನ್ನೂ ರೂಪಿಸಲಾಗಿಲ್ಲ. ಇನ್ನೊಂದು ಪ್ರಕರಣದಲ್ಲಿ, ನಾಲ್ವರು ವ್ಯಕ್ತಿಗಳು ಮತ್ತು ರಫ್ತು ಕಂಪನಿಯ ವಿರುದ್ಧ ನ್ಯಾಯಾಲಯದಲ್ಲಿ ಕ್ರಿಮಿನಲ್ ದೂರು ದಾಖಲಿಸಲಾಗಿದೆ. ಇತರ ಪ್ರಕರಣಗಳ ವಿವರಗಳು ಲಭ್ಯವಿಲ್ಲ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತೆಲಂಗಾಣ | ಅಂತರ್ಜಾತಿ ವಿವಾಹದ ಕಾರಣಕ್ಕೆ ಸಾಮಾಜಿಕ ಬಹಿಷ್ಕಾರ

ಅಂತರ್ಜಾತಿ ವಿವಾಹವಾದ ಕಾರಣಕ್ಕಾಗಿ ಕುಟುಂಬವೊಂದಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ ಪ್ರಕರಣ ತೆಲಂಗಾಣದ...

ಜಮ್ಮು ಕಾಶ್ಮೀರ ಮೇಘಸ್ಫೋಟ: ಹತ್ತನೇ ದಿನಕ್ಕೆ ಕಾಲಿಟ್ಟ ಕಾರ್ಯಾಚರಣೆ, ಇನ್ನೂ 36 ಮಂದಿ ನಾಪತ್ತೆ

ಜಮ್ಮು ಕಾಶ್ಮೀರ ಮೇಘಸ್ಫೋಟ ದುರಂತದಲ್ಲಿ ಕನಿಷ್ಠ 68 ಮಂದಿ ಸಾವನ್ನಪ್ಪಿ 36...

ಬ್ಯಾಂಕ್ ವಂಚನೆ ಪ್ರಕರಣ: ಅನಿಲ್ ಅಂಬಾನಿ ನಿವಾಸದ ಮೇಲೆ ಸಿಬಿಐ ದಾಳಿ, ಎಫ್‌ಐಆರ್ ದಾಖಲು

ಸುಮಾರು ಎರಡು ಸಾವಿರ ಕೋಟಿ ರೂಪಾಯಿ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ...

Download Eedina App Android / iOS

X