ಭಾರತದಲ್ಲೇ ಮೊದಲ ಬಾರಿಗೆ eSIM ಬಾಕ್ಸ್ ಜಾಲ ಪತ್ತೆ; 55 ದಿನಗಳ ಕಾರ್ಯಾಚರಣೆ ಬಳಿಕ ನಾಲ್ವರ ಬಂಧನ

Date:

ದೇಶದಲ್ಲೇ ಮೊದಲ ಬಾರಿಗೆ ಇಂತಹ ಪ್ರಕರಣವನ್ನು ಭೇದಿಸಿರುವುದಾಗಿ ಹೇಳಲಾಗಿರುವ ಕರ್ನಾಟಕ ರಾಜ್ಯ ಪೊಲೀಸ್ ಸೈಬರ್ ಕಮಾಂಡ್ ಘಟಕವು, ಬೆಂಗಳೂರಿನ ವೈಟ್‌ಫೀಲ್ಡ್ ತಂತ್ರಜ್ಞಾನ ವಲಯದ ಎರಡು ವಸತಿ ಅಪಾರ್ಟ್‌ಮೆಂಟ್‌ಗಳಲ್ಲಿ ರಹಸ್ಯವಾಗಿ ಕಾರ್ಯನಿರ್ವಹಿಸುತ್ತಿದ್ದ ಅಕ್ರಮ ಎಲೆಕ್ಟ್ರಾನಿಕ್ ಸಿಮ್‌ (eSIM) ಬಾಕ್ಸ್ ಜಾಲವನ್ನು ಪತ್ತೆಹಚ್ಚಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯ ತಿರೋಡಾದ ನಾಲ್ವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

- Advertisement -

ಸುಮಾರು 55 ದಿನಗಳ ಸುದೀರ್ಘ ತಾಂತ್ರಿಕ ತನಿಖೆಯ ಬಳಿಕ ಈ ಜಾಲ ಬೇಧಿಸಲಾಗಿದೆ. ಸಾಮಾನ್ಯ ಭೌತಿಕ ಸಿಮ್ ಕಾರ್ಡ್‌ಗಳಿಗಿಂತ ಭಿನ್ನವಾಗಿ, ವರ್ಚುವಲ್ ಇ-ಸಿಮ್ ಪ್ರೊಫೈಲ್‌ಗಳನ್ನು ಎನ್‌ಕ್ರಿಪ್ಟ್ ಮಾಡಿದ ನೆಟ್‌ವರ್ಕ್‌ಗಳ ಮೂಲಕ ಬಳಸಲಾಗುತ್ತಿದ್ದುದರಿಂದ, ಅವುಗಳ ಮೂಲ ಮತ್ತು ಕಾರ್ಯಾಚರಣೆಯ ಸ್ಥಳವನ್ನು ಪತ್ತೆಹಚ್ಚುವುದು ತನಿಖಾಧಿಕಾರಿಗಳಿಗೆ ದೊಡ್ಡ ಸವಾಲಾಗಿತ್ತು. ಹಲವು ಹಂತಗಳ ಡಿಜಿಟಲ್ ಪ್ರಕ್ರಿಯೆಗಳನ್ನು ಪರಿಶೀಲಿಸಿ, ಕೊನೆಗೂ ಈ ಜಾಲದ ತಾಂತ್ರಿಕ ಮೂಲಸೌಕರ್ಯ ಮತ್ತು ಪೂರೈಕೆ ವ್ಯವಸ್ಥೆಯನ್ನು ಪತ್ತೆಹಚ್ಚಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

SIRನ ಒಳನೋಟ: ಸೇರ್ಪಡೆಗಿಂತ ಹೊರಗಿಡುವುದಕ್ಕೆ ಆದ್ಯತೆ ನೀಡಿದಾಗ ಏನಾಗುತ್ತದೆ?

SIR ಕರಡು ಪಟ್ಟಿಯಲ್ಲಿರುವ ಮತದಾರರ ಸಂಖ್ಯೆಯು ನೈಜ ವಯಸ್ಕ ಜನಸಂಖ್ಯೆಯ ಅಂದಾಜಿಗಿಂತ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಿರುವುದಕ್ಕೆ ಕಾರಣವೇನು? ಈ ಕಾಣೆಯಾದ ಮತದಾರರೆಲ್ಲ ಯಾರು? ಅವರು ಮತದಾರರ ಪಟ್ಟಿಯಲ್ಲಿ ಬಿಟ್ಟು ಹೋಗಿದ್ದು ಹೇಗೆ?...

OBC ಮೀಸಲಾತಿಗೆ ಮತಾಂತರದ ಬೇಲಿ: ಸುಪ್ರೀಂ ಹೊಸ ಆದೇಶದಲ್ಲಿ...

ಧರ್ಮ ಬದಲಾದರೆ ಸಾಮಾಜಿಕ ಹಿಂದುಳಿದಿರುವಿಕೆಯೂ ಅಳಿಸಿಹೋಗುತ್ತದೆಯೇ? ಮಂಡಲ್ ಆಯೋಗದ 11 ಮಾನದಂಡಗಳಲ್ಲಿ ಧರ್ಮಕ್ಕೆ ಸ್ಥಾನವಿಲ್ಲದಿದ್ದರೂ, ಮತಾಂತರವನ್ನು ಮೀಸಲಾತಿಯ ಅರ್ಹತೆಗೆ ಜೋಡಿಸಿರುವುದೇಕೆ? ಇಂದಿರಾ ಸಾಹ್ನಿ ತೀರ್ಪಿಗೆ ವಿರೋಧಾಭಾಸವಾಗಿದೆ ಸುಪ್ರೀಂ ಕೋರ್ಟ್‌ನ ಹೊಸ ತೀಪು! 1992ರಲ್ಲಿ ಸುಪ್ರೀಂ...

ಭಾರ್ತಿ ಏರ್‌ಟೆಲ್ ಲಿಮಿಟೆಡ್‌ನ ಬೆಂಗಳೂರಿನ ಮುಖ್ಯ ವೃತ್ತ ನೊಡಲ್ ಅಧಿಕಾರಿ, ವೈಟ್‌ಫೀಲ್ಡ್ ಮತ್ತು ಕಾಡುಗೋಡಿ ಪ್ರದೇಶಗಳಲ್ಲಿ ಏರ್‌ಟೆಲ್ ಸಂಪರ್ಕಗಳ ಮೂಲಕ ಅನುಮಾನಾಸ್ಪದ ಹಾಗೂ ಅನಧಿಕೃತ ಕರೆ ಸಂಚಾರ ನಡೆಯುತ್ತಿರುವ ಕುರಿತು 2026ರ ಆಗಸ್ಟ್ 26ರಂದು ದೂರು ಸಲ್ಲಿಸಿದ್ದರು. ಈ ದೂರಿನ ಆಧಾರದಲ್ಲಿ ವೈಟ್‌ಫೀಲ್ಡ್ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿತ್ತು.

ಆರೋಪಿಗಳು ಸಾಂಪ್ರದಾಯಿಕ ಭೌತಿಕ ಸಿಮ್ ಕಾರ್ಡ್‌ಗಳ ಬದಲಿಗೆ ವರ್ಚುವಲ್ ಇ-ಸಿಮ್ ಪ್ರೊಫೈಲ್‌ಗಳನ್ನು ಬಳಸುತ್ತಿದ್ದುದರಿಂದ, ಉಪಕರಣಗಳಿರುವ ಸ್ಥಳ ಹಾಗೂ ಅವುಗಳಿಗೆ ಸಂಬಂಧಿಸಿದ ಸಾಧನಗಳ ಗುರುತನ್ನು ಪತ್ತೆಹಚ್ಚಲು ವ್ಯಾಪಕ ಸೈಬರ್ ಫೊರೆನ್ಸಿಕ್ ಪರಿಶೀಲನೆ ಮತ್ತು ತಾಂತ್ರಿಕ ದತ್ತಾಂಶಗಳ ವಿಶ್ಲೇಷಣೆ ನಡೆಸಬೇಕಾಯಿತು. ಈ ಕಾರ್ಯಾಚರಣೆಯಲ್ಲಿ ಕರ್ನಾಟಕದ ದೂರಸಂಪರ್ಕ ಇಲಾಖೆಯ (DoT) ಅಧಿಕಾರಿಗಳ ಸಹಕಾರವನ್ನೂ ಪಡೆಯಲಾಯಿತು. ಸುಮಾರು ಎರಡು ತಿಂಗಳ ನಿರಂತರ ನಿಗಾ ಮತ್ತು ತಾಂತ್ರಿಕ ಪರಿಶೀಲನೆಯ ಬಳಿಕ, ವೈಟ್‌ಫೀಲ್ಡ್ ವಿಭಾಗದ ಎರಡು ಪ್ರತ್ಯೇಕ ಅಪಾರ್ಟ್‌ಮೆಂಟ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಕ್ರಮ ಕೇಂದ್ರಗಳ ಮೇಲೆ ಜಂಟಿ ತಂಡಗಳು ದಾಳಿ ನಡೆಸಿದವು.

ಕಾಡುಗೋಡಿ ಕೇಂದ್ರದ ತಲಾ 32 ಸ್ಲಾಟ್‌ಗಳ ಸಾಮರ್ಥ್ಯವಿರುವ ಆರು ಸಿಮ್ ಬಾಕ್ಸ್‌ಗಳು ಪತ್ತೆಯಾಗಿದ್ದು, ಒಟ್ಟು 192 ಸ್ಲಾಟ್‌ಗಳಲ್ಲಿ ವಿವಿಧ ದೂರಸಂಪರ್ಕ ಸೇವಾ ಪೂರೈಕೆದಾರರಿಗೆ ಸೇರಿದ ಇ-ಸಿಮ್ ಸಂಪರ್ಕಗಳನ್ನು ಸಕ್ರಿಯಗೊಳಿಸಲಾಗಿತ್ತು. ಪಟ್ಟಂದೂರು ಅಗ್ರಹಾರ ಕೇಂದ್ರದಲ್ಲಿ ತಲಾ 32 ಸ್ಲಾಟ್‌ಗಳ ಸಾಮರ್ಥ್ಯವಿರುವ ನಾಲ್ಕು ಸಿಮ್ ಬಾಕ್ಸ್‌ಗಳು ಪತ್ತೆಯಾಗಿದ್ದು, ಒಟ್ಟು 128 ಸ್ಲಾಟ್‌ಗಳಲ್ಲಿ ಸಕ್ರಿಯ ಸಂಪರ್ಕಗಳಿದ್ದವು. ಎರಡೂ ಕೇಂದ್ರಗಳನ್ನು ಒಟ್ಟಾಗಿ ಬಳಸುವ ಮೂಲಕ ಒಂದೇ ಸಂಘಟಿತ ಜಾಲದಲ್ಲಿ 320 ಸಂಪರ್ಕಗಳ ಸಾಮರ್ಥ್ಯವನ್ನು ಹೊಂದಲಾಗಿತ್ತು.

ಈ ವ್ಯವಸ್ಥೆಯು ಅಕ್ರಮ ದೂರಸಂಪರ್ಕ ವಿನಿಮಯ ಕೇಂದ್ರದಂತೆ ಕಾರ್ಯನಿರ್ವಹಿಸುತ್ತಿತ್ತು. ವಿದೇಶಗಳಿಂದ ಆರಂಭವಾಗುವ ಕರೆಗಳ ಮೂಲವನ್ನು ಮರೆಮಾಚಿ, ಅನಧಿಕೃತ ಕರೆ ಸಂಚಾರವನ್ನು ಸ್ಥಳೀಯ ಕರೆಗಳಂತೆ ತೋರಿಸುವ ಮೂಲಕ ದೂರಸಂಪರ್ಕ ಜಾಲದ ಭದ್ರತಾ ವ್ಯವಸ್ಥೆಗಳನ್ನು ಮತ್ತು ಕಾನೂನುಬದ್ಧ ಕರೆ ಕಣ್ಗಾವಲು ವ್ಯವಸ್ಥೆಗಳನ್ನು ತಪ್ಪಿಸಿಕೊಳ್ಳಲು ಈ ಜಾಲವನ್ನು ಬಳಸಲಾಗುತ್ತಿತ್ತು ಎಂದು ಪೊಲೀಸರು ಶಂಕಿಸಿದ್ದಾರೆ.

ವರ್ಚುವಲ್ ಇ-ಸಿಮ್ ಪ್ರೊಫೈಲ್‌ಗಳಿಗೆ ಸಂಬಂಧಿಸಿದ ಡಿಜಿಟಲ್ ಸುಳಿವುಗಳನ್ನು ಪರಿಶೀಲಿಸಿದ ತನಿಖಾಧಿಕಾರಿಗಳು, ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯ ತಿರೋಡಾವರೆಗೆ ತನಿಖೆಯನ್ನು ವಿಸ್ತರಿಸಿದರು. ಅಲ್ಲಿ ಆರೋಪಿಗಳು ಸಿಮ್ ಕಾರ್ಡ್‌ಗಳಿಗೆ ಸಂಬಂಧಿಸಿದ ಗುರುತಿನ ಮಾಹಿತಿಯನ್ನು ಸಂಗ್ರಹಿಸಿ, ಅವುಗಳನ್ನು ಸಕ್ರಿಯ ಇ-ಸಿಮ್ ಪ್ರೊಫೈಲ್‌ಗಳಾಗಿ ಪರಿವರ್ತಿಸಿ, ಬೆಂಗಳೂರಿನ ಸಿಮ್ ಬಾಕ್ಸ್ ಕೇಂದ್ರಗಳಿಗೆ ದೂರದಿಂದಲೇ ಪೂರೈಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಈ ಸಂಬಂಧ ತಿರೋಡಾ ನಿವಾಸಿಗಳಾದ ನಾಲ್ವರನ್ನು ಬಂಧಿಸಲಾಗಿದೆ. ತನಿಖೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಅವರ ಹೆಸರುಗಳನ್ನು ಪೊಲೀಸರು ಬಹಿರಂಗಪಡಿಸಿಲ್ಲ.

ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಇ-ಸಿಮ್ ಬಾಕ್ಸ್ ಜಾಲವು ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿದ್ದ ಹಲವು ಸೈಬರ್ ಅಪರಾಧಗಳಿಗೆ ದೂರಸಂಪರ್ಕ ಮೂಲಸೌಕರ್ಯ ಒದಗಿಸುತ್ತಿದ್ದಿರಬಹುದು. ಅವುಗಳಲ್ಲಿ ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಇ-ಸಿಮ್ ಬಾಕ್ಸ್ ಜಾಲವು ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿದ್ದ ಹಲವು ಸೈಬರ್ ಅಪರಾಧಗಳಿಗೆ ದೂರಸಂಪರ್ಕ ಮೂಲಸೌಕರ್ಯ ಒದಗಿಸುತ್ತಿದ್ದಿರಬಹುದು. ಅವುಗಳಲ್ಲಿ ಪ್ರಮುಖವಾಗಿ: ಅನಧಿಕೃತ ದೂರವಾಣಿ ಕರೆಗಳ ಮೂಲಕ ನಡೆಯುವ ಸೈಬರ್ ಬೆದರಿಕೆಗಳು, ಡಿಜಿಟಲ್ ಅರೆಸ್ಟ್ ವಂಚನೆಗಳು, ಸೆಕ್ಸ್ಟಾರ್ಷನ್‌ (ಖಾಸಗಿ ಚಿತ್ರಗಳು ಅಥವಾ ಮಾಹಿತಿಯನ್ನು ದುರುಪಯೋಗಪಡಿಸಿಕೊಳ್ಳುವುದಾಗಿ ಬೆದರಿಸಿ ಹಣ ವಸೂಲಿ) ಹಾಗೂ ದೊಡ್ಡ ಮೊತ್ತದ ಆರ್ಥಿಕ ವಂಚನೆಗಳು ಸೇರಿವೆ.

ಇದನ್ನೂ ಓದಿ: NCRP ವರದಿ: 6 ವರ್ಷಗಳಲ್ಲಿ ಸಾವಿರಾರು ಕೋಟಿ ನುಂಗಿದ ಸೈಬರ್‌ ವಂಚಕರು!

ಈ ಅಕ್ರಮ ಜಾಲದ ಮೂಲಕ ನಡೆದಿರಬಹುದಾದ ವಂಚನೆಗಳ ಒಟ್ಟು ಮೊತ್ತ ನೂರಾರು ಕೋಟಿ ರೂಪಾಯಿಗಳನ್ನು ತಲುಪುವ ಸಾಧ್ಯತೆಯಿದೆ ಎಂದು ಪೊಲೀಸರು ಪ್ರಾಥಮಿಕವಾಗಿ ಅಂದಾಜಿಸಿದ್ದಾರೆ. ಕರ್ನಾಟಕ ಸೈಬರ್ ಕಮಾಂಡ್‌ನ ಪೊಲೀಸ್ ಮಹಾನಿರ್ದೇಶಕ ಡಾ. ಪ್ರಣಬ್ ಮೊಹಂತಿ, ಐಪಿಎಸ್, ಈ ಕುರಿತು ಪ್ರತಿಕ್ರಿಯಿಸಿ, “ಪ್ರಾಥಮಿಕ ಸುಳಿವುಗಳು ಈ ಜಾಲದ ವ್ಯಾಪ್ತಿಯಲ್ಲಿ ನೂರಾರು ಕೋಟಿ ರೂಪಾಯಿಗಳಷ್ಟು ದೊಡ್ಡ ಆರ್ಥಿಕ ಹಾನಿಯಾಗಿರುವ ಸಾಧ್ಯತೆಯನ್ನು ಸೂಚಿಸುತ್ತವೆ. ಆದರೆ, ನಿಜವಾದ ಸಂತ್ರಸ್ತರ ಸಂಖ್ಯೆ, ಆರ್ಥಿಕ ನಷ್ಟದ ಮೊತ್ತ ಮತ್ತು ಜಾಲದ ಸಂಪೂರ್ಣ ವ್ಯಾಪ್ತಿಯನ್ನು ಮುಂದುವರಿದ ತನಿಖೆ ಹಾಗೂ ವಿವಿಧ ಇಲಾಖೆಗಳ ಸಮನ್ವಯದ ಮೂಲಕ ಪರಿಶೀಲಿಸಬೇಕಿದೆ” ಎಂದು ತಿಳಿಸಿದ್ದಾರೆ.

ದಾಳಿಯಲ್ಲಿ ವಶಪಡಿಸಿಕೊಂಡಿರುವ ಸಿಮ್ ಬಾಕ್ಸ್ ಉಪಕರಣಗಳು, ಗೇಟ್‌ವೇ ಹಾರ್ಡ್‌ವೇರ್ ಮತ್ತು ಕ್ಲೌಡ್ ಲಾಗ್‌ಗಳ ತಾಂತ್ರಿಕ ಪರಿಶೀಲನೆ ಮುಂದುವರಿದಿದೆ. ಈ ಪರಿಶೀಲನೆಯ ಮೂಲಕ ಆ ಕೇಂದ್ರಗಳ ಮೂಲಕ ಹಾದುಹೋದ ಪ್ರತಿಯೊಂದು ಕರೆಯ ವಿವರಗಳನ್ನು ಪತ್ತೆಹಚ್ಚುವುದು, ವಂಚನೆಗೆ ಬಳಸಲಾದ ಸಂಪರ್ಕಗಳನ್ನು ಗುರುತಿಸುವುದು ಹಾಗೂ ಈ ಜಾಲವನ್ನು ನಿಯಂತ್ರಿಸುತ್ತಿದ್ದ ಪ್ರಮುಖ ಆರೋಪಿಗಳನ್ನು ಪತ್ತೆಹಚ್ಚುವುದು ತನಿಖಾಧಿಕಾರಿಗಳ ಮುಂದಿನ ಗುರಿಯಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ಯಾರಾ ಏಷ್ಯನ್ ಗೇಮ್ಸ್ 2026: ಒಂದೇ ದಿನ ಎರಡು ಚಿನ್ನದ ಪದಕ ಗೆದ್ದು ಬೀಗಿದ ಶೀತಲ್ ದೇವಿ

ಏಷ್ಯನ್ ಪ್ಯಾರಾ ಗೇಮ್ಸ್ 2026 ರಲ್ಲಿ ಭಾರತದ ಹೆಮ್ಮೆಯ ಪ್ಯಾರಾ ಆರ್ಚರಿ...

ಮೈಸೂರು ದಸರಾ: ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕನಿಗೆ ಗಂಭೀರ ಗಾಯ, ಐಸಿಯುನಲ್ಲಿ ಚಿಕಿತ್ಸೆ

ಮೈಸೂರಿನ ದಸರಾ ಜಂಬೂಸವಾರಿ ಮೆರವಣಿಗೆಯ ವೇಳೆ ಪೊಲೀಸರು ನಡೆಸಿದ ಲಘು ಲಾಠಿ...

ಪಕ್ಷಾಂತರ ಪರ್ವ: ಮೋದಿ ಸರ್ಕಾರದ ಅಧಿಕಾರದ ಆಸೆಗೆ ಪ್ರಜಾಸತ್ತಾತ್ಮಕ ಮೌಲ್ಯಗಳ ಬಲಿ

ಭಾರತದಲ್ಲಿ 2022 ಮತ್ತು 2026ರ ನಡುವಿನ ಅವಧಿಯಲ್ಲಿ ರಾಜಕೀಯ ಕ್ಷೇತ್ರದಲ್ಲಿ ಬಹುದೊಡ್ಡ...

ಈ ದಿನ ಸಂಪಾದಕೀಯ | ನಾಗರಿಕ ಸಭ್ಯತೆ, ಹೊಣೆಗಾರಿಕೆ ಮತ್ತು ಸಾಮಾಜಿಕ ಮಾಧ್ಯಮಗಳು

ತಂತ್ರಜ್ಞಾನ ನಮ್ಮ ಕೈಗೆ ಅಪಾರ ಶಕ್ತಿಯನ್ನು ಕೊಟ್ಟಿದೆ. ಆ ಶಕ್ತಿಯನ್ನು ವಿವೇಚನೆಯಿಂದ...