ಅಧಿಕಾರದ ಅಂಕಗಣಿತ vs ಸಂಘಟನೆಯ ರಸಾಯನ: ಪದವೀಧರರ ಮತ ಯಾರ ಕಡೆ?

Date:

ಆಗ್ನೇಯ ಪದವೀಧರ ಕ್ಷೇತ್ರದ ವಿಧಾನಪರಿಷತ್ ಚುನಾವಣೆ ನಾಳೆ (ಶುಕ್ರವಾರ) ನಡೆಯಲಿದೆ. ಆಡಳಿತಾರೂಢ ಕಾಂಗ್ರೆಸ್‌ಗೆ ಇದು ಹೊಸ ರಾಜಕೀಯ ಅಧ್ಯಾಯದ ವೇದಿಕೆಯಾಗಲಿದೆಯೇ? ಅಥವಾ ಬಿಜೆಪಿ-ಜೆಡಿಎಸ್ ಮೈತ್ರಿ ತನ್ನ ಸಾಂಪ್ರದಾಯಿಕ ಪ್ರಾಬಲ್ಯ ಉಳಿಸಿಕೊಳ್ಳಲಿದೆಯೇ? ಈ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಿದೆ ಈ ಚುನಾವಣಾ ಕಣ.

- Advertisement -

ಕಣದಲ್ಲಿ ಹತ್ತು ಅಭ್ಯರ್ಥಿಗಳಿದ್ದರೂ ಪ್ರಮುಖ ಪೈಪೋಟಿ ಕಾಂಗ್ರೆಸ್‌ನ ಶಶಿ ಹುಲಿಕುಂಟೆಮಠ್ ಮತ್ತು ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಕೆ.ಎಂ. ಸುರೇಶ್ ನಡುವೆ. ಒಂದೆಡೆ ಅಧಿಕಾರದಲ್ಲಿರುವ ಪಕ್ಷದ ರಾಜಕೀಯ ಪ್ರಭಾವ ಮತ್ತು ಸಚಿವರು, ಶಾಸಕರ ಬೆಂಬಲ. ಮತ್ತೊಂದೆಡೆ ಕ್ಷೇತ್ರದಲ್ಲಿ ಹಿಂದಿನಿಂದಲೂ ನೆಲೆಯೂರಿರುವ ಬಿಜೆಪಿ-ಜೆಡಿಎಸ್ ಸಂಘಟನಾ ಬಲ. ಈ ಎರಡರ ಸೆಣಸಾಟ ಚುನಾವಣೆಯ ಕುತೂಹಲ ಹೆಚ್ಚಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

SIRನ ಒಳನೋಟ: ಸೇರ್ಪಡೆಗಿಂತ ಹೊರಗಿಡುವುದಕ್ಕೆ ಆದ್ಯತೆ ನೀಡಿದಾಗ ಏನಾಗುತ್ತದೆ?

SIR ಕರಡು ಪಟ್ಟಿಯಲ್ಲಿರುವ ಮತದಾರರ ಸಂಖ್ಯೆಯು ನೈಜ ವಯಸ್ಕ ಜನಸಂಖ್ಯೆಯ ಅಂದಾಜಿಗಿಂತ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಿರುವುದಕ್ಕೆ ಕಾರಣವೇನು? ಈ ಕಾಣೆಯಾದ ಮತದಾರರೆಲ್ಲ ಯಾರು? ಅವರು ಮತದಾರರ ಪಟ್ಟಿಯಲ್ಲಿ ಬಿಟ್ಟು ಹೋಗಿದ್ದು ಹೇಗೆ?...

OBC ಮೀಸಲಾತಿಗೆ ಮತಾಂತರದ ಬೇಲಿ: ಸುಪ್ರೀಂ ಹೊಸ ಆದೇಶದಲ್ಲಿ...

ಧರ್ಮ ಬದಲಾದರೆ ಸಾಮಾಜಿಕ ಹಿಂದುಳಿದಿರುವಿಕೆಯೂ ಅಳಿಸಿಹೋಗುತ್ತದೆಯೇ? ಮಂಡಲ್ ಆಯೋಗದ 11 ಮಾನದಂಡಗಳಲ್ಲಿ ಧರ್ಮಕ್ಕೆ ಸ್ಥಾನವಿಲ್ಲದಿದ್ದರೂ, ಮತಾಂತರವನ್ನು ಮೀಸಲಾತಿಯ ಅರ್ಹತೆಗೆ ಜೋಡಿಸಿರುವುದೇಕೆ? ಇಂದಿರಾ ಸಾಹ್ನಿ ತೀರ್ಪಿಗೆ ವಿರೋಧಾಭಾಸವಾಗಿದೆ ಸುಪ್ರೀಂ ಕೋರ್ಟ್‌ನ ಹೊಸ ತೀಪು! 1992ರಲ್ಲಿ ಸುಪ್ರೀಂ...

ಈ ಕ್ಷೇತ್ರ ಆರಂಭದಿಂದಲೂ ಬಿಜೆಪಿ-ಜೆಡಿಎಸ್ ಪ್ರಾಬಲ್ಯದ ಕ್ಷೇತ್ರ ಎಂದೇ ಗುರುತಿಸಿಕೊಂಡಿದೆ. ಅದನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ಈ ಬಾರಿ ಸಂಘಟಿತ ಪ್ರಯತ್ನ ನಡೆಸಿದೆ. ಕ್ಷೇತ್ರ ವ್ಯಾಪ್ತಿಯ 32 ವಿಧಾನಸಭಾ ಕ್ಷೇತ್ರಗಳ ಪೈಕಿ 24ರಲ್ಲಿ ಕಾಂಗ್ರೆಸ್ ಶಾಸಕರಿರುವುದು ಪಕ್ಷದ ಪ್ರಮುಖ ಬಲ. ಡಿಸಿಎಂ ಡಾ. ಜಿ. ಪರಮೇಶ್ವರ, ಮಾಜಿ ಸಚಿವರಾದ ಕೆ.ಎನ್. ರಾಜಣ್ಣ, ಟಿ.ಬಿ. ಜಯಚಂದ್ರ, ಟಿ. ರಘುಮೂರ್ತಿ ಸೇರಿದಂತೆ ಹಲವು ನಾಯಕರು ಪ್ರಚಾರದಲ್ಲಿ ಸಕ್ರಿಯರಾಗಿದ್ದಾರೆ.

ರಾಜ್ಯದಲ್ಲಿ ತಮ್ಮದೇ ಪಕ್ಷದ ಸರ್ಕಾರ ಇರುವುದರಿಂದ ಪದವೀಧರರ ಸಮಸ್ಯೆಗಳಿಗೆ ಪರಿಷತ್ತಿನಲ್ಲಿ ಪರಿಣಾಮಕಾರಿಯಾಗಿ ಧ್ವನಿ ಎತ್ತಿ ಪರಿಹಾರ ಕಂಡುಕೊಳ್ಳಬಹುದು ಎಂದು ಶಶಿ ಹುಲಿಕುಂಟೆಮಠ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಉದ್ಯೋಗ, ಯುವ ನಿಧಿ ಮತ್ತು ಯುವಜನರ ಭವಿಷ್ಯದ ವಿಚಾರಗಳು ಅವರ ಪ್ರಚಾರದ ಕೇಂದ್ರಬಿಂದು.

ಆದರೆ ವಿಧಾನಸಭಾ ಕ್ಷೇತ್ರಗಳ ಸಂಖ್ಯಾಬಲವೇ ಪದವೀಧರ ಕ್ಷೇತ್ರದ ಗೆಲುವಿನ ನೇರ ಮಾನದಂಡವಲ್ಲ. ವಿಧಾನಸಭಾ ಚುನಾವಣೆಯ ಮತದಾರರ ಸ್ವರೂಪ ಬೇರೆ, ಪದವೀಧರ ಕ್ಷೇತ್ರದಲ್ಲಿ ನೋಂದಾಯಿತ ಮತದಾರರ ಸ್ವರೂಪ ಬೇರೆ. ಶಾಸಕರ ಪ್ರಭಾವ ಪದವೀಧರರ ಮೊದಲ ಪ್ರಾಶಸ್ತ್ಯದ ಮತವಾಗಿ ಪರಿವರ್ತನೆಯಾಗುತ್ತದೆಯೇ ಎಂಬುದೇ ಕಾಂಗ್ರೆಸ್ ಮುಂದಿರುವ ನಿಜವಾದ ಸವಾಲು. ಜೊತೆಗೆ ಪ್ರಚಾರದಲ್ಲಿ ಕಂಡ ಒಗ್ಗಟ್ಟು ಮತದಾನದ ದಿನದವರೆಗೂ ಮುಂದುವರಿಯುತ್ತದೆಯೇ ಎಂಬುದೂ ಮುಖ್ಯ.

ಬೂತ್ ಮಟ್ಟದ ಕಾರ್ಯಕರ್ತರ ಜಾಲ, ವಿಧಾನಸಭಾ ಕ್ಷೇತ್ರವಾರು ನಾಯಕರ ಸಂಘಟನೆ ಮತ್ತು ಜೆಡಿಎಸ್ ಬೆಂಬಲವನ್ನು ಮೈತ್ರಿ ತನ್ನ ಗೆಲುವಿನ ಆಧಾರವೆಂದು ಪರಿಗಣಿಸಿದೆ. ಕಳೆದ ಕೆಲವು ತಿಂಗಳಿಂದ ಕ್ಷೇತ್ರದಾದ್ಯಂತ ಪ್ರಚಾರ ನಡೆಸಿರುವ ಕೆ.ಎಂ. ಸುರೇಶ್, ಪದವೀಧರರ ಸಮಸ್ಯೆಗಳನ್ನು ಆಲಿಸಿರುವುದಾಗಿ ಹೇಳಿದ್ದಾರೆ.

ರಾಜ್ಯ ಸರ್ಕಾರದ ಆಡಳಿತ ವೈಫಲ್ಯ, ನೇಮಕಾತಿ ಪ್ರಕ್ರಿಯೆಗಳಲ್ಲಿನ ಅಕ್ರಮ ಆರೋಪಗಳು ಮತ್ತು ಯುವಜನರ ಉದ್ಯೋಗದ ಪ್ರಶ್ನೆಗಳನ್ನು ಮೈತ್ರಿ ಮುಂದಿಟ್ಟಿದೆ. ಕೇಂದ್ರ ಸರ್ಕಾರದ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ನವೋದ್ಯಮ ಕಾರ್ಯಕ್ರಮಗಳೂ ಪ್ರಚಾರದ ಭಾಗವಾಗಿವೆ. ಆದರೆ ಸಾಂಪ್ರದಾಯಿಕ ಮತಬ್ಯಾಂಕ್ ಮತ್ತು ಬೂತ್ ಮಟ್ಟದ ಸಂಘಟನೆ ನಿಜವಾದ ಮತಗಳಾಗಿ ಪರಿವರ್ತನೆಯಾಗಬೇಕು. ಮೈತ್ರಿ ಪಕ್ಷಗಳ ಕಾರ್ಯಕರ್ತರು ಮತ್ತು ಸ್ಥಳೀಯ ನಾಯಕರ ನಡುವೆ ಸಮನ್ವಯ ಸಾಧಿಸುವುದೂ ಅಷ್ಟೇ ಮುಖ್ಯ.

ಕ್ಷೇತ್ರದ ಒಟ್ಟು 1.84 ಲಕ್ಷ ಮತದಾರರಲ್ಲಿ ತುಮಕೂರು ಜಿಲ್ಲೆಯೊಂದರಲ್ಲೇ 50,060 ಮತದಾರರಿದ್ದಾರೆ, ಅಂದರೆ ಸುಮಾರು ಶೇ. 27. ಈ ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಪ್ರಭಾವಿ ನಾಯಕರ ಬೆಂಬಲವಿದ್ದರೆ, ಮೈತ್ರಿಗೂ ಸಂಘಟನಾ ನೆಲೆ ಮತ್ತು ರಾಜಕೀಯ ಸಂಪರ್ಕಗಳಿವೆ. ಹೀಗಾಗಿ ಶಾಸಕರ ಸಂಖ್ಯೆಯ ಆಧಾರದಲ್ಲಿ ಮಾತ್ರ ಮೇಲುಗೈ ಯಾರಿಗೆ ಎಂದು ಹೇಳಲಾಗದು. ತುಮಕೂರು ನಗರ ಮತ್ತು ಗ್ರಾಮೀಣ ಭಾಗದ ಪದವೀಧರರು, ಉದ್ಯೋಗಾಕಾಂಕ್ಷಿಗಳು ಹಾಗೂ ಸರ್ಕಾರಿ ನೌಕರರ ನಿಲುವು ಫಲಿತಾಂಶದ ಮೇಲೆ ಪ್ರಭಾವ ಬೀರಬಹುದು. ಚಿತ್ರದುರ್ಗ, ಚಿಕ್ಕಬಳ್ಳಾಪುರ, ಕೋಲಾರ, ದಾವಣಗೆರೆ ಜಿಲ್ಲೆಗಳಲ್ಲೂ ಇದೇ ಲೆಕ್ಕಾಚಾರ ನಡೆಯುತ್ತಿದೆ.

ಉದ್ಯೋಗಾವಕಾಶ, ಸರ್ಕಾರಿ ನೇಮಕಾತಿ, ಪರೀಕ್ಷೆಗಳ ಪಾರದರ್ಶಕತೆ, ನಿರುದ್ಯೋಗ, ಕೌಶಲಾಭಿವೃದ್ಧಿ, ಸ್ವಯಂ ಉದ್ಯೋಗ ಮತ್ತು ನವೋದ್ಯಮಗಳಿಗೆ ಪ್ರೋತ್ಸಾಹ ಇವು ಯುವ ಪದವೀಧರರ ಬದುಕಿಗೆ ನೇರ ಸಂಬಂಧಿಸಿದ ವಿಚಾರಗಳು. ಇವುಗಳಲ್ಲಿ ಕಾಂಗ್ರೆಸ್ ತನ್ನ ನೇಮಕಾತಿ ನೀತಿ ಮತ್ತು ಭರವಸೆಗಳನ್ನು ಮುಂದಿಟ್ಟರೆ, ಮೈತ್ರಿ ನೇಮಕಾತಿ ಅಕ್ರಮ ಆರೋಪ ಮತ್ತು ಸರ್ಕಾರದ ವೈಫಲ್ಯಗಳನ್ನು ಅಸ್ತ್ರವಾಗಿಸಿಕೊಂಡಿದೆ. ಪದವೀಧರರು ಪಕ್ಷನಿಷ್ಠೆಗಿಂತ ಅಭ್ಯರ್ಥಿಯ ಕಾರ್ಯಕ್ಷಮತೆ ಮತ್ತು ಮೇಲ್ಮನೆಯಲ್ಲಿ ಧ್ವನಿ ಎತ್ತುವ ಬದ್ಧತೆಗೆ ಆದ್ಯತೆ ನೀಡಿದರೆ ಲೆಕ್ಕಾಚಾರ ಅನಿರೀಕ್ಷಿತ ತಿರುವು ಪಡೆಯಬಹುದು.

ಈ ಚುನಾವಣೆಯಲ್ಲಿ ಪ್ರಾಶಸ್ತ್ಯದ ಮತದಾನ ಪದ್ಧತಿ ಇರುವುದರಿಂದ ಜನಸಂದಣಿ, ನಾಯಕರ ಹೇಳಿಕೆ ಅಥವಾ ಬಹಿರಂಗ ಬೆಂಬಲದ ಆಧಾರದಲ್ಲಿ ಗೆಲುವಿನ ಅಂತರ ಅಂದಾಜಿಸುವುದು ಕಷ್ಟ. ಮೊದಲ ಪ್ರಾಶಸ್ತ್ಯದ ಮತಗಳ ಹಂಚಿಕೆ, ಮಾನ್ಯ ಮತಗಳ ಸಂಖ್ಯೆ ಮತ್ತು ಎಣಿಕೆ ನಿಯಮಗಳು ಅಂತಿಮ ಫಲಿತಾಂಶದಲ್ಲಿ ನಿರ್ಣಾಯಕ. ಹತ್ತು ಅಭ್ಯರ್ಥಿಗಳಿರುವುದರಿಂದ ಮತ ಹಂಚಿಕೆ ಹೇಗಾಗುತ್ತದೆ ಎಂಬುದೂ ಕುತೂಹಲ ಮೂಡಿಸಿದೆ.

ಕಾಂಗ್ರೆಸ್ ಗೆದ್ದರೆ ಮೈತ್ರಿಯ ಸಾಂಪ್ರದಾಯಿಕ ಪ್ರಾಬಲ್ಯಕ್ಕೆ ಸವಾಲು ಹಾಕಿದಂತಾಗುತ್ತದೆ, ಮುಂದಿನ ಚುನಾವಣೆಗಳಿಗೆ ಪಕ್ಷದ ಸಂಘಟನಾ ವಿಶ್ವಾಸವೂ ಹೆಚ್ಚುತ್ತದೆ. ಬಿಜೆಪಿ-ಜೆಡಿಎಸ್ ಗೆದ್ದರೆ, ವಿಧಾನಸಭಾ ಕ್ಷೇತ್ರಗಳ ಸಂಖ್ಯಾಬಲ ಮಾತ್ರ ಪರಿಷತ್ ಗೆಲುವನ್ನು ಖಚಿತಪಡಿಸುವುದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಲಿದೆ. ಯಾರೇ ಗೆದ್ದರೂ ಫಲಿತಾಂಶ ಎರಡೂ ಶಕ್ತಿಗಳ ಸಂಘಟನಾ ಸಾಮರ್ಥ್ಯ, ಯುವಜನರೊಂದಿಗಿನ ಸಂಪರ್ಕ ಮತ್ತು ಮುಂದಿನ ರಾಜಕೀಯ ಕಾರ್ಯತಂತ್ರದ ಮೇಲೆ ಪರಿಣಾಮ ಬೀರಲಿದೆ.

ಮೇಲ್ನೋಟಕ್ಕೆ ಇದು ಎರಡು ಬಣಗಳ ನೇರ ಹಣಾಹಣಿ. ಆದರೆ ವಾಸ್ತವದಲ್ಲಿ ಕಾಂಗ್ರೆಸ್‌ನ ಆಡಳಿತಾತ್ಮಕ ಪ್ರಭಾವ, ಮೈತ್ರಿಯ ಸಂಘಟನಾ ಬಲ ಮತ್ತು ಪದವೀಧರರ ಸ್ವತಂತ್ರ ನಿರ್ಧಾರ ಎಂಬ ಮೂರು ಅಂಶಗಳ ನಡುವಿನ ಸ್ಪರ್ಧೆ ಇದು. ಅಭ್ಯರ್ಥಿಗಳ ವಿಶ್ವಾಸ ಮತ್ತು ಚುನಾವಣಾ ವಾಸ್ತವದ ನಡುವಿನ ಅಂತರವನ್ನು ಮತದಾರರ ತೀರ್ಪು ಮಾತ್ರ ಸ್ಪಷ್ಟಪಡಿಸಬಲ್ಲದು.

WhatsApp Image 2024 08 09 at 10.52.48 1578a566
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು ದಸರಾ : ಅಧಿಕಾರಿಗಳ ಕುಟುಂಬಸ್ಥರ ಕಾಲಿನ ಬಳಿ ಮಾಧ್ಯಮದವರಿಗೆ ಆಸನ

 'ತುಮಕೂರು ದಸರಾ' ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ಅಧಿಕಾರಿಗಳ ಕುಟುಂಬಸ್ಥರು, ರಾಜಕಾರಣಿಗಳ ಹಿಂಬಾಲಕರು...

ಚಿಂತಾಮಣಿ | ಸಿದ್ದರಾಮಯ್ಯ ವೈಯಕ್ತಿಕ ಚಾರಿತ್ರ್ಯವಧೆ ಮಾಡುವ ಸಣ್ಣತನ ನಮಗಿಲ್ಲ: ಪ್ರತಾಪ್ ಸಿಂಹ

ನಗರದ ಪಾಲಿಟೆಕ್ನಿಕ್ ಮೈದಾನದ ಮಾತಾ ಭಾರತಿ ಮಂಗಳ ಮಂಟಪದಲ್ಲಿ ಆಯೋಜಿಸಿದ್ದ ದಸರಾ...

ಚಿತ್ರದುರ್ಗದಲ್ಲಿ ಅ.26ರಂದು ವಾಲ್ಮೀಕಿ ಜಯಂತಿ: ಸರಳ ಆಚರಣೆಗೆ ಜಿಲ್ಲಾಡಳಿತ ಸಿದ್ಧತೆ

ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ, ಚಿತ್ರದುರ್ಗ...

ತುಮಕೂರು ದಸರಾ: ಹೊರ ರಾಜ್ಯದವರಿಗೆ ವಿಶೇಷ ಆತಿಥ್ಯ- ಸ್ಥಳೀಯರಿಗೆ ಗೇಟಿನಾಚೆ ಆಸನ

ತುಮಕೂರು ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಕಳೆದ ಒಂದು ವಾರದಿಂದ ನಡೆಯುತ್ತಿರುವ...