ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ ಚುನಾವಣಾ ಆಯೋಗವು (ಇಸಿ) ಮಹಾರಾಷ್ಟ್ರ ಪೊಲೀಸ್ ಮಹಾನಿರ್ದೇಶಕಿ ರಶ್ಮಿ ಶುಕ್ಲಾ ಅವರನ್ನು ಸೋಮವಾರ ವರ್ಗಾವಣೆ ಮಾಡಿದೆ. ವಿಪಕ್ಷಗಳಿಂದ ಫೋನ್ ಕದ್ದಾಲಿಕೆ ಆರೋಪದ ಬೆನ್ನಲ್ಲೇ ಮಹಾರಾಷ್ಟ್ರ ಸರ್ಕಾರ ಈ ಕ್ರಮವನ್ನು ಕೈಗೊಂಡಿದೆ.
ಆದರೆ ರಾಜ್ಯ ಡಿಜಿಪಿ ಹುದ್ದೆಯ ಜವಾಬ್ದಾರಿಯನ್ನು ಹಿರಿಯ ಅಧಿಕಾರಿ ವಹಿಸಿಕೊಳ್ಳಬೇಕು ಎಂದು ಇಸಿ ಹೇಳಿದೆ. ತಾತ್ಕಾಲಿಕವಾಗಿ 1989ರ ಬ್ಯಾಚ್‌ನ ಐಪಿಎಸ್ ಅಧಿಕಾರಿ, ಮುಂಬೈ ಪೊಲೀಸ್ ಕಮಿಷನರ್ ವಿವೇಕ್ ಫನ್ಸಾಲ್ಕರ್ ಅವರಿಗೆ ಅಧಿಕಾರ ನೀಡಲಾಗುವುದು.
ಇದನ್ನು ಓದಿದ್ದೀರಾ? ತೆಲಂಗಾಣ | ಫೋನ್ ಕದ್ದಾಲಿಕೆ ಪ್ರಕರಣ: ಗುಪ್ತಚರ ಬ್ಯೂರೋದ ಮಾಜಿ ಮುಖ್ಯಸ್ಥ ಪ್ರಮುಖ ಆರೋಪಿ!
ಇನ್ನು ಮಂಗಳವಾರದೊಳಗೆ ಮೂವರು ಅರ್ಹ ಅಧಿಕಾರಿಗಳ ಸಮಿತಿಯನ್ನು ಕಳುಹಿಸುವಂತೆಯೂ ಇಸಿ ಸರ್ಕಾರಕ್ಕೆ ಸೂಚನೆ ನೀಡಿದೆ. ಈ ಪೈಕಿ ಒಬ್ಬರನ್ನು ಡಿಜಿಪಿಯಾಗಿ ನೇಮಿಸಲಾಗುತ್ತದೆ.
2025ರ ಏಪ್ರಿಲ್‌ನಲ್ಲಿ ನಿವೃತ್ತರಾಗಲಿರುವ ವಿವೇಕ್ ಫನ್ಸಾಲ್ಕರ್ ಸದ್ಯ ಅತ್ಯಂತ ಹಿರಿಯ ಅಧಿಕಾರಿಯಾಗಿದ್ದಾರೆ. ಇನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮುಖ್ಯಸ್ಥ ಸದಾನಂದ್ 2026ರ ಡಿಸೆಂಬರ್‌ನಲ್ಲಿ ನಿವೃತ್ತರಾಗಲಿದ್ದು ಅವರು 1990ರ ಬ್ಯಾಚ್‌ನ ಅಧಿಕಾರಿಯಾಗಿದ್ದಾರೆ. ಇನ್ನು ಸದಾನಂದ್ ಅವರ ಬ್ಯಾಚ್‌ಮೇಟ್ ಬಿಪಿನ್ ಕುಮಾರ್ ಸಿಂಗ್ ಮುಂದಿನ ವರ್ಷ ಅಕ್ಟೋಬರ್‌ನಲ್ಲಿ ನಿವೃತ್ತರಾಗಲಿದ್ದಾರೆ. ಸಂಜಯ್ ಕುಮಾರ್ ವರ್ಮಾ 2028ರಲ್ಲಿ ನಿವೃತ್ತರಾಗಲಿದ್ದಾರೆ.
