ಇತ್ತೀಚೆಗೆ ಮರಿ ಹಾಕಿದ್ದ ಹೆಣ್ಣು ನಾಯಿಯನ್ನು ವೃದ್ಧನೊಬ್ಬ ನಿರ್ಮಾಣ ಹಂತದಲ್ಲಿದ್ದ ಶೌಚಾಲಯಕ್ಕೆ ಎಳೆದೊಯ್ದು, ಅಸಭ್ಯವಾಗಿ ವರ್ತಿಸಿರುವ ಘಟನೆ ಮಹಾರಾಷ್ಟ್ರದ ನೈಗಾಂವ್‌ನಲ್ಲಿ ನಡೆದಿದೆ. ವೃದ್ಧನನ್ನು ಪ್ರಾಣಿ ಕಾರ್ಯಕರ್ತೆಯೊಬ್ಬರು ಹಿಡಿದಿದ್ದು, ಪ್ರಾಣಿಗಳ ಮೇಲೆ ಇಂತಹ ಕ್ರೌರ್ಯ ಎಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ನಾಯಿಯನ್ನು ವೃದ್ಧಿ ಎಳೆದೊಯ್ದಿದ್ದನ್ನು ಗಮನಿಸಿದ ಕಾರ್ಯಕರ್ತೆ, ಆತನನ್ನು ಹಿಡಿದಿದ್ದಾರೆ. ನಾಯಿಯನ್ನು ರಕ್ಷಿಸಿದ್ದಾರೆ. ಘಟನೆಯ ದೃಶ್ಯಗಳನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವೃದ್ಧನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಇನ್ಟ್‌ಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ಕಾರ್ಯಕರ್ತೆ, “ವೃದ್ಧ ತನ್ನ ಕಾಮವಾಂಚೆ ತೀರಿಸಿಕೊಳ್ಳಲು ನಾಯಿಯನ್ನು ಶೌಚಾಲಯಕ್ಕೆ ಎಳೆದೊಯ್ದಿದ್ದಾನೆ. ತಾಯಿ ನಾಯಿಯ ಮೇಲಾದ ಕ್ರೌರ್ಯವನ್ನು ನಾವು ವಿವರಿಸಲು ಸಾಧ್ಯವಿಲ್ಲ. ಇಂತಹ ಕೃತ್ಯಗಳನ್ನು ಸಹಿಸಲಾಗದು. ಈ ರೀತಿಯ ಅಮಾನವೀಯ ನಡವಳಿಕೆಯ ವಿರುದ್ಧ ನಾವು ನಿಲುವು ತೆಗೆದುಕೊಳ್ಳಬೇಕು. ಪ್ರಾಣಿಗೆ ನ್ಯಾಯ ದೊರೆಯಬೇಕು” ಎಂದು ಆಗ್ರಹಿಸಿದ್ದಾರೆ.
ಕಾಮುಕರ ಕಾಮವಾಂಚೆ ಮತ್ತು ವಿಕೃತಿ ಹೆಚ್ಚುತ್ತಿದೆ. ಹೆಣ್ಣುಮಕ್ಕಳ ಮೇಲೆ ಸರಾಸರಿ ಪ್ರತಿ ಗಂಟೆಗೊಂದು ಅತ್ಯಾಚಾರ, ಲೈಂಗಿಕ ದೌರ್ಜನ್ಯಗಳು ನಡೆಯುತ್ತಿವೆ. ಪೋಕ್ಸೋ, ನಿರ್ಭಯಾ ಕಾಯ್ದೆಗಳ ಹೊರತಾಗಿಯು ಕಾಮುಕರ ಅಟ್ಟಹಾಸಕ್ಕೆ ಮಿತಿಯೇ ಇಲ್ಲದಂತಾಗಿದೆ. ಕಾಮುಕರು ತಮ್ಮ ಕಾಮವಾಂಚೆ ತೀರಿಸಿಕೊಳ್ಳಲು ಪ್ರಾಣಿಗಳ ಮೇಲೂ ವಿಕೃತಿ ಮೆರೆಯುವ ಪ್ರಕರಣಗಳೂ ಇತ್ತೀಚೆಗೆ ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ಇಂತಹ ಕೃತ್ಯಗಳನ್ನು ತಡೆಯಲು ಸರ್ಕಾರಗಳು ಇನ್ನೂ ಕಠಿಣ ಕ್ರಮಗಳ ಜೊತೆಗೆ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡಬೇಕಿದೆ.