ಭಾರತದಲ್ಲಿ ಚುನಾವಣೆಗಳು ಫೇರ್ ಆಗಿ, ನ್ಯೂಟ್ರಲ್ ಆಗಿ ನಡೆಯುತ್ತವೆ ಎಂಬ ನಂಬಿಕೆಯಲ್ಲಿ ಮತದಾರ ಮತ ಚಲಾಯಿಸುತ್ತಾ ಬಂದಿದ್ದಾನೆ. ದೇಶದಲ್ಲಿ ಪ್ರಜೆಗಳೇ ರಾಜರು ಎಂಬ ಅಹಂ ಚುನಾವಣೆ ಸಮಯದಲ್ಲಾದರೂ ಪ್ರಕಟಗೊಳ್ಳುತ್ತದೆ. ಆದರೆ ಇತ್ತೀಚಿನ ಬೆಳವಣಿಗೆಗಳು ಪ್ರಜಾತಂತ್ರಕ್ಕೆ ಮಾರಕವಾಗಿವೆ.
ಭಾರತದ ರಾಷ್ಟ್ರಪತಿ, ಉಪ ರಾಷ್ಟ್ರಪತಿ, ವಿಧಾಸಭಾ ಮತ್ತು ಲೋಕಸಭಾ ಚುನಾವಣೆಗಳನ್ನು ಪಾರದರ್ಶಕತೆಯಿಂದ ನಡೆಸಲು ಭಾರತ ಚುನಾವಣಾ ಆಯೋಗವಿದೆ. ಇದೊಂದು ಶಾಶ್ವತ ಸಾಂವಿಧಾನಿಕ ಸಂಸ್ಥೆ. ಚುನಾವಣೆಗಳ ಮೇಲ್ವಿಚಾರಣೆ ನಡೆಸಲು ಮತ್ತು ನಿಯಂತ್ರಿಸಲು ಆಯೋಗಕ್ಕೆ ಅಧಿಕಾರವಿದೆ. ಮೊದಲು ಚುನಾವಣಾ ಆಯೋಗ ಮುಖ್ಯಸ್ಥರಾಗಿ ಮುಖ್ಯ ಚುನಾವಣಾ ಆಯುಕ್ತರಿರುತ್ತಿದ್ದರು. ನಂತರದ ದಿನಗಳಲ್ಲಿ ಮುಖ್ಯ ಚುನಾವಣಾ ಆಯುಕ್ತರ ಅಧಿಕಾರವನ್ನು ಕೊಂಚ ಮೊಟುಕುಗೊಳಿಸಲು ಮತ್ತಿಬ್ಬರು ಚುನಾವಣಾ ಆಯುಕ್ತರನ್ನು ನೇಮಿಸಲಾಯಿತು.
2023 ರಲ್ಲಿ ಸರ್ವೋಚ್ಚ ನ್ಯಾಯಾಲಯದ ಮುಂದೆ ಚುನಾವಣಾ ಆಯುಕ್ತರ ನೇಮಕಾತಿ ಕುರಿತಾದ ಹಲವು ಸಾರ್ವಜನಿಕ ಹಿತಾಸಕ್ತಿ ದಾವೆಗಳಿದ್ದವು. ಚುನಾವಣಾ ಆಯುಕ್ತರ ನೇಮಕಾತಿಗೆ ಒಂದು ವ್ಯವಸ್ಥಿತ ಪ್ರಕ್ರಿಯೆ ಇರಬೇಕು ಎಂಬುದು ಈ ದಾವೆಗಳ ಕೋರಿಕೆಯಾಗಿತ್ತು. ಅಲ್ಲಿಯವರೆಗೆ ಪ್ರಧಾನಮಂತ್ರಿಗಳ ಸಲಹೆಯಂತೆ ಚುನಾವಣಾ ಆಯುಕ್ತರ ನೇಮಕಾತಿಯನ್ನು ದೇಶದ ರಾಷ್ಟ್ರಪತಿಗಳು ಮಾಡುತ್ತಿದ್ದರು. ದೇಶದಲ್ಲಿ ಸೇವೆ ಸಲ್ಲಿಸಿರುವ ಅಧಿಕಾರಿಗಳ ಸೇವಾ ಜೇಷ್ಠತೆ, ಬದ್ಧತೆ, ನಿಷ್ಠೆಯನ್ನು ಪರಿಗಣಿಸಿ ನೇಮಕಾತಿ ನಡೆಯುತಿತ್ತು. ನಮ್ಮ ಪೀಳಿಗೆಯವರಿಗೆ ಚುನಾವಣೆ ನಡೆಸಲು ಆಯೋಗವಿದೆ, ಚುನಾವಣಾ ಆಯುಕ್ತರಿಗೆ ಬಹಳ ದೊಡ್ಡ ಜವಾಬ್ದಾರಿ ಜೊತೆಗೆ ಅಧಿಕಾರದ ವ್ಯಾಪ್ತಿಯು ಇದೆ, ಪ್ರಜಾತಂತ್ರದ ಉಳಿವಿಗೆ ಚುನಾವಣಾ ಆಯೋಗದ ನಿಷ್ಪಕ್ಷಪಾತ ನಿಲುವು, ಕಾರ್ಯದಕ್ಷತೆ ಅತ್ಯಾವಶ್ಯಕ ಎಂದು ಅರಿವಿಗೆ ಬಂದದ್ದು ಟಿ.ಎನ್ ಶೇಷನ್ ಅವರ ಕಾಲದಲ್ಲಿ ಎಂದರೆ ತಪ್ಪಾಗಲಾರದು. ಅಂದಿನ ಪ್ರಧಾನಿ ರಾಜೀವ್ ಗಾಂಧಿ, ವಿ.ಪಿ ಸಿಂಗ್ ಅವರೊಡನೆ ಬಹಳಷ್ಟು ಭಿನ್ನಾಭಿಪ್ರಾಯಗಳಿದ್ದರೂ ಚುನಾವಣಾ ಆಯೋಗ ಕ್ರಾಂತಿಕಾರಿ ಬದಲಾವಣೆಗಳನ್ನು ಆ ದಿನಗಳಲ್ಲಿ ಸಾಧ್ಯವಾಗಿತ್ತು.
ಸಾರ್ವಜನಿಕ ಹಿತಾಸಕ್ತಿ ದಾವೆಗಳನ್ನು ಪರಿಶೀಲಿಸಿದ ಸರ್ವೋಚ್ಚ ನ್ಯಾಯಾಲಯ ಮಾರ್ಚ್ 2, 2023ರಂದು ತೀರ್ಪೊಂದನ್ನು ನೀಡಿತು. ಚುನಾವಣಾ ಆಯುಕ್ತರ (CEC ಮತ್ತು ECs) ಆಯ್ಕೆ ಪ್ರಕ್ರಿಯೆಗೆ ಒಂದು ಸಮಿತಿ ರಚನೆಯಾಗಬೇಕು ಎಂಬ ತೀರ್ಪದು. ಈ ಸಮಿತಿಯ ಸದಸ್ಯರಾಗಿ- ಪ್ರಧಾನ ಮಂತ್ರಿಗಳು, ವಿರೋಧ ಪಕ್ಷದ ನಾಯಕ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿಗಳಿರಬೇಕೆಂದು ಸರ್ವೋಚ್ಚ ನ್ಯಾಯಾಲಯ ತಿಳಿಸಿತು. ಆಯ್ಕೆ ಪ್ರಕ್ರಿಯೆ ಸ್ವತಂತ್ರ, ಪಾರದರ್ಶಕ, ನಿಷ್ಪಕ್ಷಪಾತವಾಗಿರಬೇಕೆಂಬ ಉದ್ದೇಶ ನ್ಯಾಯಾಲಯದಾಗಿತ್ತು. ಸಮಿತಿ ಸಂಬಂಧಿತ ಹೊಸ ಕಾನೂನು ಜಾರಿಗೆ ತರಬೇಕೆಂದು ನ್ಯಾಯಾಲಯ ಸರ್ಕಾರಕ್ಕೆ ಸೂಚಿಸಿತು.
ಆಡಳಿತದಲ್ಲಿರುವ ಸರ್ಕಾರ ಸರ್ವೋಚ್ಚ ನ್ಯಾಯಾಲಯದ ಸೂಚನೆಯಂತೆ ಸಮಿತಿ ರಚಿಸಿ ಪ್ರಜಾತಂತ್ರವನ್ನು ಬಲಗೊಳಿಸುತ್ತದೆ ಎಂಬ ನಂಬಿಕೆ ಎಲ್ಲರಲ್ಲಿತ್ತು. ಸರ್ಕಾರ CEC ಮತ್ತು other ECs act 2023- Appointment, conditions of Service and Term of Office ಜಾರಿಗೆ ತಂದಿತು. ಸರ್ವೋಚ್ಚ ನ್ಯಾಯಾಲಯದ ಸೂಚನೆಯಂತೆ ಸಮಿತಿಯು ರಚನೆಯಾಯಿತು. ಆದರೆ ಕಥೆಯಲ್ಲಿ ಅನಿರೀಕ್ಷಿತ ತಿರುವೊಂದಿತ್ತು! ಅಪಾಯಕಾರಿ ತಿರುವು. ತ್ರಿಸದಸ್ಯ ಸಮಿತಿಯಲ್ಲಿ ಭಾರತದ ನ್ಯಾಯಮೂರ್ತಿಗಳ ಬದಲಾಗಿ ಕೇಂದ್ರ ಸಚಿವರನ್ನು ಸೇರಿಸಲಾಗಿತ್ತು! ಈ ರೀತಿ ಚುನಾವಣಾ ಆಯುಕ್ತರ ನೇಮಕಾತಿ ಪ್ರಕ್ರಿಯೆ ಸಂಪೂರ್ಣ ಆಡಳಿತಾರೂಢ ಸರ್ಕಾರದ ಮುಷ್ಟಿಗೆ ಬಂತು. ಹೀಗೆ ಈಗಿನ ಮುಖ್ಯ ಚುನಾವಣಾ ಅಧಿಕಾರಿಗಳ ನೇಮಕಾತಿ ಸಮಿತಿಯಲ್ಲಿದ್ದವರು ಪ್ರಧಾನ ಮಂತ್ರಿ, ಕೇಂದ್ರ ಗೃಹಸಚಿವರ ಮತ್ತು ಪ್ರತಿಪಕ್ಷಗಳ ನಾಯಕ. ಈ ಪ್ರಕ್ರಿಯೆ ಸರಿಯಿಲ್ಲ, ಸಮಿತಿ ರಚನೆ ಪಕ್ಷಪಾತಿಯಾದದ್ದು ಎಂದು ತೀವ್ರವಾಗಿ ಪ್ರತಿಪಕ್ಷದ ನಾಯಕ ವಿರೋಧಿಸಿದರೂ ಹೊಸ ಚುನಾವಣಾ ಅಧಿಕಾರಿಗಳ ಆಯ್ಕೆ ನಡು ರಾತ್ರಿಯಲ್ಲಿ ನಡೆದೇ ಹೋಯಿತು. ಪ್ರತಿಪಕ್ಷದ ನಾಯಕ Dissent Note ಅನ್ನು ಪ್ರಧಾನಿ ಮತ್ತು ರಾಷ್ಟ್ರಪತಿಗಳಿಗೆ ಸಲ್ಲಿಸಿ ತೃಪ್ತಿಪಡಬೇಕಾಯಿತು.
ಈ ಲೇಖನ ಓದಿದ್ದೀರಾ?: 1947 – ಅಂದು ಭಾರತವು ಸ್ವಾತಂತ್ರ್ಯ ಗಳಿಸಿತು; ಇಂದು ಜಾತ್ಯತೀತ ಸಂಸ್ಕೃತಿಯನ್ನು ಕಳೆದುಕೊಳ್ಳುತ್ತಿದೆ!
ಪ್ರತಿಪಕ್ಷದ ನಾಯಕ ಇತ್ತೀಚಿಗೆ ನಡೆಸಿದ ಪತ್ರಿಕಾಗೋಷ್ಠಿ ಮತ್ತು ಚುನಾವಣಾ ಆಯೋಗದ ಮೇಲೆ ಮಾಡಿರುವ ಆರೋಪಗಳನ್ನು ಈ ಹಿನ್ನಲೆಯಲ್ಲಿ ನಾವು ಗ್ರಹಿಸಬೇಕಿದೆ. 2019ರ ಲೋಕಸಭಾ ಚುನಾವಣೆ ವೇಳೆಯಲ್ಲಿ ಮಥುರಾ ಲೋಕಸಭಾ ಕ್ಷೇತ್ರದಲ್ಲಿ ಕಾಣೆಯಾದ ಮುಸ್ಲಿಂ ಮತದಾರರ ಹೆಸರುಗಳು, ಗುಜರಾತಿನಲ್ಲಿ ಮತದಾರರ ಪಟ್ಟಿಯಿಂದ ನಾಪತ್ತೆಯಾದ 700 ಮೀನುಗಾರರ ಹೆಸರುಗಳು, ಚುನಾವಣೆ ವೇಳೆಯಲ್ಲಿ ದ್ವೇಷಭರಿತ ಭಾಷಣಗಳ ಕುರಿತು ಚುನಾವಣಾ ಆಯೋಗ ತಳೆದ ಆತಂಕಾರಿ ಮೌನ, ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಳ ಹಠಾತ್ ಮುಂದೂಡಿದೆ, ಮತ ಚಲಾಯಿಸಿದ ಮತದಾರರ ವಿವರಗಳನ್ನು ನೀಡಲು ಆಗುತ್ತಿರುವ ವಿಳಂಬ, ಮತ್ತೀಗ ಚುನಾವಣೆಗೆ ಮುನ್ನ ಬಿಹಾರದಲ್ಲಿ ನಡೆಯುತ್ತಿರುವ SIR- Special Intensive Revision- ಮತದಾರರ ವಿಶೇಷ ತೀವ್ರ ಪರಿಕ್ಷರಣೆ ಎಲ್ಲವನ್ನೂ ಮೇಲೆ ವಿವರಿಸಿದ chronology ಮೂಲಕವೇ ನೋಡಬೇಕಿದೆ.
ಭಾರತದಲ್ಲಿ ಚುನಾವಣೆಗಳು ಫೇರ್ ಆಗಿ, ನ್ಯೂಟ್ರಲ್ ಆಗಿ ನಡೆಯುತ್ತವೆ ಎಂಬ ನಂಬಿಕೆಯಲ್ಲಿ ಮತದಾರ ಮತ ಚಲಾಯಿಸುತ್ತಾ ಬಂದಿದ್ದಾನೆ. ದೇಶದಲ್ಲಿ ಪ್ರಜೆಗಳೇ ರಾಜರು ಎಂಬ ಅಹಂ ಚುನಾವಣೆ ಸಮಯದಲ್ಲಾದರೂ ಪ್ರಕಟಗೊಳ್ಳುತ್ತದೆ. ಆದರೆ ಇತ್ತೀಚಿನ ಬೆಳವಣಿಗೆಗಳು ಪ್ರಜಾತಂತ್ರಕ್ಕೆ ಮಾರಕವಾಗಿವೆ. ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯಲ್ಲಿ ಪ್ರಧಾನ ಮಂತ್ರಿ, ಕೇಂದ್ರ ಸಚಿವ ಮತ್ತು ಪ್ರತಿಪಕ್ಷದ ನಾಯಕರಿದ್ದರೆ, 2:1 ಅನುಪಾತದಲ್ಲಿ ಯಾರು ಆಯ್ಕೆಯಾಗುತ್ತಾರೆ ಎಂಬುದು ಕಾಮನ್ ಸೆನ್ಸ್. ಪ್ರತಿಪಕ್ಷದ ನಾಯಕ ತನ್ನ ಪಕ್ಷದ ಉಳಿವಿಗಾಗಿ ಮಾತ್ರ ಹೋರಾಟ ಮಾಡುತ್ತಿದ್ದಾರೆ ಅಂತ ಅಂದುಕೊಂಡರೆ ನಿಜವಾಗಲೂ ನಮ್ಮ ಪ್ರಜಾತಂತ್ರ ಅಳಿವಿನ ಅಂಚಿನಲ್ಲಿದೆ ಎಂದರ್ಥ.
https://shorturl.fm/SGwU4
This information iss invaluable. Whsre can I find out more?