ಕಾಂಗ್ರೆಸ್‌ನ ಸುಪ್ರಿಯಾ ಶ್ರೀನಾಥೆ ಮತ್ತು ಬಿಜೆಪಿಯ ದಿಲೀಪ್ ಘೋಷ್ ಅವರ ವಿವಾದಾತ್ಮಕ ಹೇಳಿಕೆಗಳ ನಂತರ, ಭಾರತದ ಚುನಾವಣಾ ಆಯೋಗ ಸೋಮವಾರ “ಮಾದರಿ ನೀತಿ ಸಂಹಿತೆಯ ಅವಧಿಯಲ್ಲಿ ಸಾರ್ವಜನಿಕ ಹೇಳಿಕೆಗಳಲ್ಲಿ ಜಾಗರೂಕರಾಗಿರಿ” ಎಂದು ನಾಯಕರಿಗೆ ಎಚ್ಚರಿಕೆ ನೀಡಿದೆ.
ಚುನಾವಣಾ ಆಯೋಗವು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಿದ ಆದೇಶದಲ್ಲಿ, ಎಂಸಿಸಿ ಉಲ್ಲಂಘನೆಗೆ ಸಂಬಂಧಿಸಿದಂತೆ ನೋಟಿಸ್ ನೀಡಿದ ನಂತರ ಚುನಾವಣಾ ಆಯೋಗವು ಇಬ್ಬರು ನಾಯಕರ ಉತ್ತರಗಳನ್ನು ಸ್ವೀಕರಿಸಿದ ನಂತರ ಎಚ್ಚರಿಕೆ ನೀಡಿದ್ದು, ಮಹಿಳೆಯರ ಘನತೆಯ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡುವುದು ಖಂಡನೀಯ ಎಂದು ದಿಲೀಪ್ ಘೋಷ್ ಮತ್ತು ಸುಪ್ರಿಯಾ ಶ್ರಿನಾಥೆ ಅವರನ್ನು ತರಾಟೆಗೆ ತೆಗೆದುಕೊಂಡಿದೆ.
ನೀತಿ ಸಂಹಿತೆ ಉಲ್ಲಂಘನೆಗಳ ಬಗ್ಗೆ ನಾಯಕರುಗಳಿಗೆ ನೀಡಲಾದ ನೋಟಿಸ್‌ಗಳಿಗೆ ಉತ್ತರಗಳನ್ನು ಸ್ವೀಕರಿಸಿದ ನಂತರ ಆಯೋಗವು ಇಂದು ತನ್ನ ಆದೇಶದಲ್ಲಿ, ಅವರು ಕೆಳಮಟ್ಟದ ವೈಯಕ್ತಿಕ ದಾಳಿಯನ್ನು ಮಾಡಿದ್ದಾರೆ. ಇದರಿಂದಾಗಿ ಮಾದರಿ ನೀತಿ ಸಂಹಿತೆಯ ನಿಬಂಧನೆಗಳನ್ನು ಉಲ್ಲಂಘಿಸಿದ್ದಾರೆಂದು ಅವರಿಗೆ ಮನವರಿಕೆಯಾಗಿದೆ” ಎಂದು ತಿಳಿಸಿದೆ. ಎಂಸಿಸಿ ಅವಧಿಯಲ್ಲಿ ಸಾರ್ವಜನಿಕ ಹೇಳಿಕೆಗಳಲ್ಲಿ ಜಾಗರೂಕರಾಗಿರಲು ಚುನಾವಣಾ ಆಯೋಗವು ನಾಯಕರಿಗೆ ಎಚ್ಚರಿಕೆ ನೀಡಿದೆ.
“ಈ ಸಮಯದಿಂದ ಅವರ ಚುನಾವಣೆಗೆ ಸಂಬಂಧಿಸಿದ ಸಂವಹನಗಳನ್ನು ಆಯೋಗವು ವಿಶೇಷವಾಗಿ ಮತ್ತು ಹೆಚ್ಚುವರಿಯಾಗಿ ಮೇಲ್ವಿಚಾರಣೆ ಮಾಡುತ್ತದೆ. ಸಾರ್ವಜನಿಕ ಡೊಮೇನ್‌ನಲ್ಲಿ ಸಂವಹನ ನಡೆಸುವಾಗ ಜಾಗರೂಕರಾಗಿರುವಂತೆ ಹಾಗೂ ಅಂತಹ ಯಾವುದೇ ಅವಹೇಳನಕಾರಿ ಪ್ರತಿಕ್ರಿಯೆಗಳು ಮತ್ತು ನೀತಿ ಸಂಹಿತೆ ಮಾರ್ಗಸೂಚಿಗಳ ಉಲ್ಲಂಘನೆ ನಡೆಸದಂತೆ ತಮ್ಮ ಕಾರ್ಯಕರ್ತರನ್ನು ಸಂವೇದನಾಶೀಲಗೊಳಿಸಲು ಪಕ್ಷದ ಮುಖ್ಯಸ್ಥರಿಗೆ ಎಚ್ಚರಿಕೆ ನೋಟಿಸ್‌ನ ಪ್ರತಿಯನ್ನೂ ಕೂಡ ನೀಡಲಾಗಿದೆ” ಎಂದು ಚುನಾವಣಾ ಆಯೋಗ ತಿಳಿಸಿದೆ.
ಕಂಗನಾ ರಣಾವತ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ವೇದಿಕೆಯ ಅಧ್ಯಕ್ಷೆ ಸುಪ್ರಿಯಾ ಶ್ರಿನಾಥೆ ಅವರಿಗೆ ಮತ್ತು ಮಮತಾ ಬ್ಯಾನರ್ಜಿ ವಿರುದ್ಧ ಆಕ್ಷೇಪಾರ್ಹ ಮತ್ತು ಅಗೌರವದ ಕಾಮೆಂಟ್ ಮಾಡಿದ್ದಕ್ಕಾಗಿ ಪಶ್ಚಿಮ ಬಂಗಾಳದ ಸಂಸದ ದಿಲೀಪ್ ಘೋಷ್ ಇಬ್ಬರಿಗೂ ಚುನಾವಣಾ ಆಯೋಗವು ಶೋಕಾಸ್ ನೋಟಿಸ್ ನೀಡಿತ್ತು.
ಈ ಸುದ್ದಿ ಓದಿದ್ದೀರಾ? ಬಿಜೆಪಿ ಮೈತ್ರಿ ಬೆನ್ನಲ್ಲೇ ಆರ್‌ಎಲ್‌ಡಿಗೆ ಆಘಾತ; ಪಕ್ಷ ತೊರೆದ ರಾಷ್ಟ್ರೀಯ ಉಪಾಧ್ಯಕ್ಷ!
