ಹೊಸ ಮತದಾರರಿಗೆ ಪೋಷಕರ ‘SIR’ ವಿವರ ಕಡ್ಡಾಯ: ಗೊಂದಲ ಸೃಷ್ಟಿಸಿದ ಚುನಾವಣಾ ಆಯೋಗ

Date:

ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ನಡೆಸುತ್ತಿರುವ ಚುನಾವಣಾ ಆಯೋಗವು ಪ್ರಕ್ರಿಯೆಯ ಅಡಿಯಲ್ಲಿ ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಬಯಸುವ ಹೊಸ ಮತದಾರರಿಗೆ ಆಯೋಗವು ಹೊಸದೊಂದು ಕಡ್ಡಾಯ ನಿಯಮವನ್ನು ಜಾರಿಗೆ ತಂದಿದೆ. ಹೊಸ ನಿಯಮದ ಪ್ರಕಾರ, ಹೊಸದಾಗಿ ಅರ್ಜಿ ಸಲ್ಲಿಸುವ ಮತದಾರರು ಎಸ್‌ಐಆರ್ ಪ್ರಕ್ರಿಯೆಯಲ್ಲಿ ದಾಖಲಾಗಿರುವ ತಮ್ಮ ಪೋಷಕರ (ತಂದೆ/ತಾಯಿ/ಪೋಷಕರು) ಸಂಪೂರ್ಣ ವಿವರಗಳನ್ನು ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ. ಆದರೆ, ಅಧಿಕೃತ ಶಾಸನಬದ್ಧ ನಿಯಮಗಳಿಗೆ ಯಾವುದೇ ತಿದ್ದುಪಡಿ ತರದೆ, ಕೇವಲ ಆನ್‌ಲೈನ್ ಪೋರ್ಟಲ್‌ನಲ್ಲಿ ಈ ಹೊಸ ನಿಯಮವನ್ನು ಸೇರಿಸಿರುವುದು ಈ ವಿರೋಧಕ್ಕೆ ಕಾರಣವಾಗಿದೆ.

- Advertisement -

ಚುನಾವಣಾ ಆಯೋಗವು ಇತ್ತೀಚೆಗೆ ಬಿಹಾರ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ SIR ಪ್ರಕ್ರಿಯೆಯನ್ನು ನಡೆಸಿದೆ. ಈ ವೇಳೆ ಹಲವಾರು ಅರ್ಹರೂ ತಮ್ಮ ಮತದಾನದ ಹಕ್ಕನ್ನು ಕಳೆದುಕೊಂಡಿದ್ದಾರೆ. ಇದೀಗ ತೀವ್ರ ವಿರೋಧದ ನಡುವೆಯೂ ದೇಶ ಹಲವು ರಾಜ್ಯಗಳಲ್ಲಿ ಎಸ್‌ಐಆರ್ ನಡೆಸುತ್ತಿದೆ. ಇದೀಗ ಹೊಸ ನಿಯಮವನ್ನು ವಿಸ್ತರಿಸಲಾಗಿದ್ದು ಹೊಸ ಮತದಾರರು ತಮ್ಮ ಪೋಷಕರು ಈಗಾಗಲೇ ಎಸ್‌ಐಆರ್‌ನಲ್ಲಿ ಮಾನ್ಯತೆ ಪಡೆದಿರುವ ದಾಖಲೆಗಳನ್ನು ಹೊಂದಿದ್ದಾರೆಯೇ ಎಂಬುದನ್ನು ಸಾಬೀತುಪಡಿಸಬೇಕಾಗುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸಂವಿಧಾನದಲ್ಲಿ ಇಂಪೀಚ್‌ಮೆಂಟ್‌ ಮೂಲಕ ಮುಖ್ಯ ಚುನಾವಣಾ ಆಯುಕ್ತರನ್ನು ಪದಚ್ಯುತಿಗೊಳಿಸಲು...

ಮುಖ್ಯ ಚುನಾವಣಾ ಆಯುಕ್ತರಾದ ಗ್ಯಾನೇಶ್ ಕುಮಾರ್ ಅವರಿಗೆ 2023ರ ಕಾಯ್ದೆಯ ಮೂಲಕ ಸರ್ಕಾರ ಕಾನೂನು ರಕ್ಷಣೆ ಕೊಟ್ಟಿರಬಹುದು, ಆದರೆ ಅವರಿಗೆ ಯಾವುದೇ ರೀತಿಯ ಸಾಂವಿಧಾನಿಕ ರಕ್ಷಣೆ ಇಲ್ಲ. ಹಾಗಾಗಿ ಅವರು ತಾವಾಗಿಯೇ ರಾಜೀನಾಮೆ...

ದಿಕ್ಕು ತೋಚದೆ ತಬ್ಬಿಬ್ಬಾಗಿರುವ ಚುನಾವಣಾ ಆಯೋಗ: ದಿನೇ ದಿನೆ...

ಸೆಪ್ಟೆಂಬರ್ 23ರ 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯ ವರದಿಯ ನಂತರ ಆಯೋಗ ಹಲವು ಸ್ಪಷ್ಟನೆಗಳನ್ನು ನೀಡಿದ್ದರೂ, ಒಂದು ಮುಖ್ಯ ಪ್ರಶ್ನೆಗೆ ಇನ್ನೂ ಉತ್ತರವಿಲ್ಲ: ಕಾನೂನುಬದ್ಧವಾಗಿ ಮತದಾರರ ಪಟ್ಟಿಯಲ್ಲಿದ್ದ 16 ಲಕ್ಷಕ್ಕೂ ಹೆಚ್ಚು ಜನರ...

ಸ್ಟಿಂಗ್ ಆಪರೇಷನ್ | ಭ್ರಷ್ಟಾಚಾರ ಬಯಲಿಗೆಳೆಯುವ ಸಾಧನವಾಗಬೇಕೇ ವಿನಾ...

ಆಡಳಿತ ಪಕ್ಷವನ್ನು ಪ್ರಶ್ನಿಸುವುದು ಪ್ರಜಾಪ್ರಭುತ್ವದ ಮೂಲಭೂತ ಕರ್ತವ್ಯ. ಆದರೆ, ವಿರೋಧ ಪಕ್ಷಗಳಿಗೂ ತಮ್ಮ ಆರೋಪಗಳನ್ನು ಸಮರ್ಥಿಸುವ ಹೊಣೆಗಾರಿಕೆ ಇದೆ. ರಾಜಕೀಯ ಲಾಭಕ್ಕಾಗಿ ಗಂಭೀರ ಆರೋಪಗಳನ್ನು ಮುಂದಿಡುವುದು ಮತ್ತು ಅವುಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಪ್ರಕ್ರಿಯೆಯನ್ನು...

ಇದನ್ನೂ ಓದಿ: ಬಂಗಾಳದಲ್ಲಿ 93.71% ಮತದಾನ; ದೇಶದ ಚುನಾವಣಾ ಇತಿಹಾಸದಲ್ಲೇ ಅತ್ಯಧಿಕ: ಚುನಾವಣಾ ಆಯೋಗ

ಇದರಂತೆ ಇನ್ನು ಮುಂದೆ 18 ವರ್ಷ ತುಂಬಿ ಹೊಸದಾಗಿ ಮತದಾರರ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸುವ ಯುವಕ-ಯುವತಿಯರು ಅಥವಾ ಹೊಸದಾಗಿ ಹೆಸರು ನೊಂದಾಯಿಸುವವರು ಕೇವಲ ತಮ್ಮ ವೈಯಕ್ತಿಕ ದಾಖಲೆಗಳನ್ನು ನೀಡಿದರೆ ಸಾಲದು. ಅದರೊಂದಿಗೆ ಈ ಹಿಂದಿನ SIR ಪ್ರಕ್ರಿಯೆಯ ವೇಳೆ ಅವರ ಪೋಷಕರ ಹೆಸರು ಯಾವ ಭಾಗದ (Part Number) ಮತದಾರರ ಪಟ್ಟಿಯಲ್ಲಿದೆ ಎಂಬ ವಿವರ ನೀಡಬೇಕು. ಪೋಷಕರ Voter ID ಸಂಖ್ಯೆ (EPIC Number) ಮತ್ತು ಅವರ ಕುಟುಂಬದ ಲಿಂಕ್ ಅನ್ನು ಅರ್ಜಿಯಲ್ಲಿ ಸ್ಪಷ್ಟವಾಗಿ ನಮೂದಿಸಬೇಕಾಗುತ್ತದೆ.

ಚುನಾವಣಾ ಆಯೋಗದ ಅಧಿಕೃತ ‘ಇಸಿನೆಟ್’ (ECINET) ಪೋರ್ಟಲ್‌ನಲ್ಲಿ ಇರುವ ಆನ್‌ಲೈನ್ ಫಾರ್ಮ್ 6 ರಲ್ಲಿ ಮಾತ್ರ ಈ ಹೊಸ ನಿಯಮದಂತೆ ಕಾಲಂ ಇದೆ. ಆದರೆ, ಇದೇ ವೆಬ್‌ಸೈಟ್‌ನಲ್ಲಿ ಆಫ್‌ಲೈನ್ ಸಲ್ಲಿಕೆಗಾಗಿ ಲಭ್ಯವಿರುವ ಡೌನ್‌ಲೋಡ್ ಮಾಡಬಹುದಾದ ಫಾರ್ಮ್‌ನಲ್ಲಿ ಈ ಬದಲಾವಣೆ ಇಲ್ಲ. ಇದು ಹೊಸ ಮತದಾರರಲ್ಲಿ ಗೊಂದಲ ಉಂಟು ಮಾಡಿದೆ.

ಭಾರತೀಯ ಚುನಾವಣಾ ಆಯೋಗವು ದೇಶದಲ್ಲಿ ನಡೆಸುತ್ತಿರುವ ಎಸ್‌ಐಆರ್ ಪ್ರಕ್ರಿಯೆ ಆರಂಭದಲ್ಲಿ ಮತದಾರರ ಪಟ್ಟಿಯಿಂದ ಸುಮಾರು 6 ಕೋಟಿ ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ. ಇದರಲ್ಲಿ ಬಹುತೇಕರು ಅರ್ಹರಾದರೂ ತಮ್ಮ ಮತದಾನದ ಹಕ್ಕನ್ನು ಕಳೆದುಕೊಂಡವರು. ಈಗ ತಮ್ಮ ಪೋಷಕರ ಹೆಸರು ಪಟ್ಟಿಯಿಂದ ಡಿಲೀಟ್ ಆಗಿದ್ದರೆ ಹೊಸ ಮತದಾರರು ತಮ್ಮ ಮತದಾನದ ಹಕ್ಕು ಕಳೆದುಕೊಳ್ಳುವ ಆತಂಕ ಉಂಟಾಗಿದೆ.

ಬಡವರು, ಅಲೆಮಾರಿಗಳು ಮತ್ತು ವಲಸೆ ಕಾರ್ಮಿಕರ ಪೋಷಕರು ಹಳೆಯ SIR ದಾಖಲೆಗಳನ್ನು ಹೊಂದಿಲ್ಲದಿರಬಹುದು. ಇದು ಅರ್ಹ ಯುವ ಮತದಾರರನ್ನು ವ್ಯವಸ್ಥಿತವಾಗಿ ಹೊರಗಿಡಲು ಕಾರಣವಾಗುತ್ತದೆ ಎಂಬುದು ಹೋರಾಟಗಾರರ ವಾದವಾಗಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2029ರ ಲೋಕಸಭಾ ಚುನಾವಣೆ: ಸೋಲಲು ಸಿದ್ಧವಿರುವಂತೆ ರಾಹುಲ್‌ಗೆ ಅಮಿತ್ ಶಾ ಸವಾಲು

ವಿಪಕ್ಷಗಳ ಇಂಡಿಯಾ ಒಕ್ಕೂಟ ನಡೆಸಿದ ಬೃಹತ್ ರ‍್ಯಾಲಿಯ ಮಾರನೇ ದಿನವೇ, ಕೇಂದ್ರ...

ಬೀದರ್‌ | ಭ್ರಷ್ಟಾಚಾರದಲ್ಲಿ ಮುಳುಗಿದ ಬಿಜೆಪಿ, ಕಾಂಗ್ರೆಸ್ : ಆಪ್ ಶಾಸಕ ಅನಿಲ್ ಝಾ

ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ....

ಬಿಹಾರ | ಗಂಗಾ ನದಿಯಲ್ಲಿ ದೋಣಿ ಪಲ್ಟಿ: 11ಕ್ಕೂ ಅಧಿಕ ಅಪ್ರಾಪ್ತರ ದಾರುಣ ಸಾವು

ದೋಣಿ ಪಲ್ಟಿಯಾಗಿ ಕನಿಷ್ಠ 11ಕ್ಕೂ ಹೆಚ್ಚು ಅಪ್ರಾಪ್ತರು ಗಂಗಾ ನದಿಯಲ್ಲಿ ಮುಳುಗಿ...

ಜಂತರ್ ಮಂತರ್ ಪ್ರತಿಭಟನೆ: ಸಿಜೆಪಿ ನಾಯಕರಾದ ಸೌರವ್, ರಾಂಕಾ, ಅಜಿಂಕ್ಯಗೆ 5 ದಿನ ನ್ಯಾಯಾಂಗ ಬಂಧನ

ದೆಹಲಿಯ ಜಂತರ್ ಮಂತರ್ ಪ್ರದೇಶದಲ್ಲಿ ಯಾವುದೇ ಪೂರ್ವಾನುಮತಿ ಇಲ್ಲದೆ ಅನಧಿಕೃತವಾಗಿ ಪ್ರವೇಶಿಸಲು...