ಮಂಡಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಸಂಸದೆಯಾಗಿ ಕಂಗನಾ ರಣಾವತ್ ಆಯ್ಕೆ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿ ಹಿಮಾಚಲ ಪ್ರದೇಶ ಹೈಕೋರ್ಟ್ ಬುಧವಾರ ಕಂಗನಾ ರಣಾವತ್ ಅವರಿಗೆ ನೋಟಿಸ್ ಜಾರಿ ಮಾಡಿದೆ.
ಅರ್ಜಿದಾರರಾದ ಲಾಯಕ್ ರಾಮ್ ನೇಗಿ ಅವರು ಮಂಡಿಯಿಂದ ಸ್ಪರ್ಧಿಸಲು ತಮ್ಮ ನಾಮಪತ್ರವನ್ನು ಚುನಾವಣಾಧಿಕಾರಿ ತಪ್ಪಾಗಿ ತಿರಸ್ಕರಿಸಿದ್ದಾರೆ ಎಂದು ಆರೋಪಿಸಿದರು.
ನೋಟಿಸ್ ಜಾರಿ ಮಾಡಿದ ನ್ಯಾಯಮೂರ್ತಿ ಜ್ಯೋತ್ಸ್ನಾ ರೇವಾಲ್ ಅವರು ಆಗಸ್ಟ್ 21ರೊಳಗೆ ಉತ್ತರವನ್ನು ಸಲ್ಲಿಸುವಂತೆ ಕಂಗನಾ ರಣಾವತ್ ಅವರಿಗೆ ಸೂಚಿಸಿದರು.
ಮಂಡಿ ಲೋಕಸಭಾ ಕ್ಷೇತ್ರದಿಂದ ರಣಾವತ್ ಅವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ವಿಕ್ರಮಾದಿತ್ಯ ಸಿಂಗ್ ಅವರನ್ನು 74,755 ಮತಗಳಿಂದ ಸೋಲಿಸಿದರು. ವಿಕ್ರಮಾದಿತ್ಯ ಸಿಂಗ್ ಅವರಿಗೆ 4,62,267 ಮತಗಳು ಲಭಿಸಿದರೆ, ರಣಾವತ್ ಅವರು 5,37,002 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.
ಇದನ್ನು ಓದಿದ್ದೀರಾ? ಹಿಮಾಚಲ ಪ್ರದೇಶ: ಕಂಗನಾ ರಣಾವತ್‌ಗೆ ಕಪ್ಪು ಬಾವುಟ ಪ್ರದರ್ಶನ
ಅರಣ್ಯ ಇಲಾಖೆಯ ಮಾಜಿ ನೌಕರ ನೇಗಿ ಅವರು ಅಕಾಲಿಕ ನಿವೃತ್ತಿಯನ್ನು ಪಡೆದು ಚುನಾವಣಾಧಿಕಾರಿಗೆ ನಾಮಪತ್ರದ ಜೊತೆಗೆ ಇಲಾಖೆಯಿಂದ ‘ನೋ ಡ್ಯೂ ಸರ್ಟಿಫಿಕೇಟ್’ ಸಲ್ಲಿಸಿದ್ದಾರೆ ಎಂದು ಹೇಳಿದರು.
ಆದರೆ, ವಿದ್ಯುತ್, ನೀರು ಮತ್ತು ದೂರವಾಣಿ ಇಲಾಖೆಗಳಿಂದ ‘ನೋ ಡ್ಯೂ ಸರ್ಟಿಫಿಕೇಟ್’ ಸಲ್ಲಿಸಲು ಒಂದು ದಿನ ಕಾಲಾವಕಾಶ ನೀಡಿದ್ದು, ಅದನ್ನು ಸಲ್ಲಿಸಿದಾಗ ಚುನಾವಣಾಧಿಕಾರಿ ಅದನ್ನು ಸ್ವೀಕರಿಸದೆ ನಾಮಪತ್ರ ತಿರಸ್ಕರಿಸಿದ್ದಾರೆ ಎಂದು ದೂರಲಾಗಿದೆ.
ತನ್ನ ನಾಮಪತ್ರವನ್ನು ಅಂಗೀಕರಿಸಿದ್ದರೆ ತಾನು ಚುನಾವಣೆಯಲ್ಲಿ ಗೆಲ್ಲಬಹುದಿತ್ತು, ಆದ್ದರಿಂದ ಈ ಚುನಾವಣೆಯನ್ನು ರದ್ದು ಮಾಡಬೇಕು ಎಂದು ಲಾಯಕ್ ರಾಮ್ ನೇಗಿ ಅರ್ಜಿಯಲ್ಲಿ ತಿಳಿಸಿದ್ದಾರೆ.
BREAKING:
Himachal Pradesh High Court issues notice to BJP MP Kangana Ranaut over petition challenging her election from Mandi Lok Sabha seat. Petitioner alleges her nomination was accepted incorrectly after his own was wrongly rejected. #KanganaRanaut #MandiLokSabha pic.twitter.com/M9QQdUgalc
— Smriti Sharma (@SmritiSharma_) July 25, 2024