ಖ್ಯಾತ ಅಸ್ಸಾಮಿ ಸಂಗೀತ ಸಂಯೋಜಕ, 84 ವರ್ಷದ ರಾಮನ್ ಬರುವಾ ನಾಪತ್ತೆಯಾಗಿದ್ದಾರೆ. ಗುವಾಹಟಿಯ ಲತಾಸಿಲ್ ಪ್ರದೇಶದ ತನ್ನ ಮನೆಯಿಂದ ಬೆಳಿಗ್ಗೆ ಹತ್ತಿರದ ದೇವಸ್ಥಾನಕ್ಕೆ ಹೋಗಿದ್ದು ಸಂಜೆಯಾದರೂ ಹಿಂದಿರುಗಿಲ್ಲ.
ರಾಮನ್ ಬರುವಾ ಹಿಂದಿರುಗದ ಕಾರಣ ಅವರ ಕುಟುಂಬವು ಪೊಲೀಸರಿಗೆ ಮಾಹಿತಿ ನೀಡಿದೆ. ಸದ್ಯ ರಾಮನ್ ಅವರಿಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಬರುವಾ ಹಠಾತ್ ಕಣ್ಮರೆಯಾದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ಅಸ್ಸಾಂ ಪ್ರವಾಹ | ನೀರಿನ ಮಟ್ಟ ಇಳಿಕೆ, ಮೃತರ ಸಂಖ್ಯೆ 109ಕ್ಕೆ ಏರಿಕೆ
“ಅವರ (ರಾಮನ್ ಬರುವಾ) ಅನುಪಸ್ಥಿತಿಯು ಅವರ ಕುಟುಂಬ, ಸ್ನೇಹಿತರು ಮತ್ತು ಅಸಂಖ್ಯಾತ ಅಭಿಮಾನಿಗಳನ್ನು ಚಿಂತೆಗೀಡು ಮಾಡಿದೆ. ನಾನು ರಾಮನ್ ಬರುವಾ ಅವರನ್ನು ಪತ್ತೆ ಮಾಡಲು ತ್ವರಿತ ಕ್ರಮಕೈಗೊಳ್ಳಯವಂತೆ ಗುವಾಹಟಿ ಪೊಲೀಸರಲ್ಲಿ ಮನವಿ ಮಾಡಿದ್ದೇನೆ” ಎಂದು ಹೇಳಿದರು.
ಬರುವಾರ್ ಸಂಗೇರ್, ಮುಕುಟ, ಲಲಿತಾ, ಕೊಕಡೆಯುಟ ಮತ್ತು ನಾಟಿ ಅರು ಹಟಿ ಸೇರಿದಂತೆ ಹಲವಾರು ಅಸ್ಸಾಮಿ ಚಲನಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ.
I am deeply concerned about the sudden disappearance of Sri Ramen Baruah, missing since this morning. His absence worries his family, friends, and countless admirers. I have asked Commissioner of @GuwahatiPol Sri Diganta Bora to mobilize all resources and take swift action to…
— Himanta Biswa Sarma (@himantabiswa) July 22, 2024