ಸತ್ಯ ಶೋಧ | ಅಂಬೇಡ್ಕರ್ RSS ಶಾಖೆಗೆ ಹೋಗಿದ್ದರು ಎಂಬುದು ಶುದ್ಧ ಸುಳ್ಳು

Date:

Advertisements

ಇತ್ತೀಚಿನ ದಿನಗಳಲ್ಲಿ, ಡಾ. ಬಿ.ಆರ್ ಅಂಬೇಡ್ಕರ್ ಅವರನ್ನು ಪ್ರತಿ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲು ಯತ್ನಿಸುತ್ತಿವೆ. ಆ ಮೂಲಕ ಅಂಬೇಡ್ಕರ್‌ ಅವರು ಪ್ರಭಾವಿಸಿದ ದೇಶದ ಬಹುದೊಡ್ಡ ಸಮುದಾಯಗಳ ಒಲವು ಗಳಿಸಲು ಬಯಸುತ್ತಿವೆ. ಅಂಬೇಡ್ಕರ್ ವಿರುದ್ಧ ಆಗ್ಗಾಗ್ಗೆ ನಾಲಿಗೆ ಹರಿಬಿಡುವ ಬಿಜೆಪಿ ಕೂಡ ಅಂಬೇಡ್ಕರ್ ಹೆಸರನ್ನು ರಾಜಕೀಯವಾಗಿ ಬಳಸಿಕೊಳ್ಳಲು ಯತ್ನಿಸುತ್ತಿದೆ. ಹೀಗಾಗಿಯೇ, ಅಂಬೇಡ್ಕರ್ ಅವರು 1939ರಲ್ಲಿ ಪುಣೆಯ RSS ಶಿಬಿರಕ್ಕೆ ಭೇಟಿ ನೀಡಿದ್ದರು ಎಂದು, ”ಸ್ವಯಂಸೇವಕರು ಇತರ ಜಾತಿಯವರನ್ನು ಸಹ ಸಂಪೂರ್ಣ ಸಮಾನತೆ ಮತ್ತು ಸಹೋದರತ್ವದಿಂದ ನಡೆಸಿಕೊಳ್ಳುತ್ತಿರುವುದನ್ನು ಕಂಡು ನನಗೆ ಆಶ್ಚರ್ಯವಾಗಿದೆ” ಎಂದು ಭಾಷಣ ಮಾಡಿದ್ದರು ಎಂಬ ಸುದ್ದಿಗಳು ಮತ್ತು ಪೋಸ್ಟರ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ನಿನ್ನೆ ಆರ್‌ಎಸ್‌ಎಸ್‌ ಸಂವಹನ ವಿಭಾಗ ಸಹ ಅಂತಹ ಹೇಳಿಕೆಯನ್ನು ಹರಿಬಿಟ್ಟಿದೆ.

image 36 6

ಫ್ಯಾಕ್ಟ್‌ಚೆಕ್‌: ಡಾ. ಬಿ. ಆರ್‌ ಅಂಬೇಡ್ಕರ್‌ ಅವರು ಆರ್‌ಎಸ್‌ಎಸ್‌ ಶಿಬಿರದಲ್ಲಿ ಭಾಗವಹಿಸಿದ ಕುರಿತು ಯಾವುದೇ ಅಧಿಕೃತ ಮಾಹಿತಿಗಳು ಲಭ್ಯವಿಲ್ಲ. ಡಾ. ಅಂಬೇಡ್ಕರ್‌ರವರು ಬದುಕಿದ ಸಂದರ್ಭದಲ್ಲೇ ಅವರಿಂದ ಮಾಹಿತಿ ಪಡೆದು ಜೀವನ ಚರಿತ್ರೆ ರಚಿಸಿದ ಧನಂಜಯ್ ಕೀರ್‌ರವರ ಪುಸ್ತಕ ‘ಡಾ. ಬಾಬಾಸಾಹೇಬ್ ಅಂಬೇಡ್ಕರ್‌’ ಪುಸ್ತಕದಲ್ಲಿ ಎಲ್ಲಿಯೂ ಇದರ ಉಲ್ಲೇಖವಿಲ್ಲ. ಇನ್ನು ಅಂಬೇಡ್ಕರ್‌ವರ ಆಪ್ತ ಸಹಾಯಕ ನಾನಕ್ ಚಂದ್ ರತ್ತು ರವರು ಬರೆದಿರುವ ‘Reminiscences and remembrances of Dr. B.R. Ambedkar’ ಪುಸ್ತಕದಲ್ಲಿಯೂ ಸಹ ಅಂಬೇಡ್ಕರು RSS ಶಾಖೆಗೆ ಭೇಟಿ ನೀಡಿದ ಉಲ್ಲೇಖವಿಲ್ಲ.

ಈಗಾಗಲೇ ಅಂಬೇಡ್ಕರ್‌ರವರ ಜೀವಿತಾವದಿಯಲ್ಲಿ ಮಾಡಿದ ಭಾಷಣಗಳು ಮತ್ತು ಅವರ ಬರವಣಿಗೆಗಳನ್ನೆಲ್ಲ ಸಂಗ್ರಹಿಸಿದ ‘ಅಂಬೇಡ್ಕರ್ ಭಾಷಣ ಮತ್ತು ಬರಹಗಳು’ ಸರಣಿಯಲ್ಲಿಯೂ ಸಹ ಇದರ ವಿವರಗಳಿಲ್ಲ. ಆದರೆ ದಿ ಪ್ರಿಂಟ್‌ ವೆಬ್‌ಸೈಟ್‌ನಲ್ಲಿ ರಾಜೀವ್ ತುಲಿ ಎಂಬ RSS ಕಾರ್ಯಕರ್ತ ಬರೆದ ಲೇಖನದಲ್ಲಿ ಅಂಬೇಡ್ಕರ್‌ರವರು RSS ಶಾಖೆಗೆ ಭೇಟಿ ನೀಡಿದ್ದರು ಎಂದಿದ್ದಾರೆ. ಆದರೆ ಅವರು ಅದಕ್ಕೆ ಯಾವುದೇ ಆಧಾರ ಒದಗಿಸಿಲ್ಲ. ಮುಂದುವರೆದು ದತ್ತೋಪಂಥ ತೇಂಗಡಿ ಎಂಬ ಆರ್‌ಎಸ್‌ಎಸ್‌ ವ್ಯಕ್ತಿ 1954ರ ಭಂಡಾರ ಉಪ ಚುನಾವಣೆಯಲ್ಲಿ ಅಂಬೇಡ್ಕರ್‌ರವರು ಚುನಾವಣಾ ಏಜೆಂಟ್ ಆಗಿದ್ದರು ಎಂದು ರಾಜೀವ್ ತುಲಿ ಬರೆದಿದ್ದಾರೆ. ಅವರು ಆ ಲೇಖನದಲ್ಲಿ ರಾಜಬಾಹು ಖೋಬ್ರಗಡೆ ಎಂಬುವವರನ್ನು ಉಲ್ಲೇಖಿಸಿದ್ದಾರೆ.

Advertisements
image 36

ಇದಕ್ಕೆ ಪ್ರತಿಯಾಗಿ ರಾಜಬಾಹು ಖೋಬ್ರಗಡೆಯವರ ಮೊಮ್ಮಗ ದೀಪಂಕರ್ ಕಾಂಬ್ಳೆ ಎಂಬುವವರು ವೆಲಿವಾಡ ಎಂಬ ವೆಬ್‌ಸೈಟ್‌ನಲ್ಲಿ ಫ್ಯಾಕ್ಟ್ ಚೆಕ್ ಲೇಖನವೊಂದನ್ನು ಬರೆದಿದ್ದಾರೆ. ರಾಜೀವ್ ತುಲಿಯವರಿಗೆ ವಿದರ್ಭ ಪ್ರಾಂತ್ಯದ ಬಗ್ಗೆ ಯಾವುದೇ ಅರಿವಿಲ್ಲದೆ ಸುಳ್ಳು ಬರೆದಿದ್ದಾರೆ, ಆದರೆ ನಾನು ಅದೇ ಪ್ರಾಂತ್ಯದಲ್ಲಿ ಹುಟ್ಟಿ ಬೆಳೆದವನು. ತಮ್ಮ ತಾತ ಮತ್ತು ತಂದೆಯವರು ಅಂಬೇಡ್ಕರ್‌ರವರ ಚಳವಳಿಯಲ್ಲಿ ಭಾಗಿಯಾದವರು. ಅವರನ್ನು ಮಾತನಾಡಿಸಿದಾಗ ಅಂಬೇಡ್ಕರ್ ಆರ್‌ಎಸ್‌ಎಸ್‌ ಶಾಖೆಗೆ ಹೋದರು ಮತ್ತು ಅವರಿಗೆ ದತ್ತೋಪಂಥ ತೇಂಗಡಿ ಎಂಬ ಆರ್‌ಎಸ್‌ಎಸ್‌ ವ್ಯಕ್ತಿ ಚುನಾವಣಾ ಏಜೆಂಟ್ ಆಗಿದ್ದರು ಎಂಬುದು ಸುಳ್ಳು ಎಂದು ನಿರೂಪಿಸಿದ್ದಾರೆ.

ಈ ವರದಿ ಓದಿದ್ದೀರಾ?: ಫ್ಯಾಕ್ಟ್‌ ಚೆಕ್ | ‘ಮೋದಿಗೆ 100 ಕೋಟಿ ರೂ. ಕೊಟ್ಟಿದ್ದೇನೆ ಎಂದರೆ, ಅವರನ್ನೂ ಬಂಧಿಸ್ತಿರಾ’; ಕೇಜ್ರಿವಾಲ್ ಪ್ರಶ್ನಿಸಿದ್ದು ಸತ್ಯವೇ?

”ಅಂಬೇಡ್ಕರ್‌ RSS ಶಾಖೆಗೆ ಭೇಟಿ ನೀಡಿ ಅವರ ಸಮಾನತೆ ಮತ್ತು ಶಿಸ್ತು ಕಂಡು ಭಾಷಣ ಮಾಡಿದರು, ಕೊನೆಯಲ್ಲಿ ಭಾರತ್ ಮಾತಾಕೀ ಕೈ ಎಂದು ಕೂಗಿದರು. ಬಾಳಾಸಾಹೇಬ್ ಸಾಳುಂಕೆ ಅವರೇ ಇವೆಲ್ಲವನ್ನೂ ತಮ್ಮ ದಿನಚರಿಯಲ್ಲಿ ಬರೆದುಕೊಂಡಿದ್ದಾರೆ. ಅವರ ದಿನಚರಿಯ ಎಲ್ಲ ಸಂಗತಿಗಳನ್ನೂ ಮುದ್ರಿಸಿ ಹೊರತಂದ ಅವರ ಪುತ್ರ ಕಾಶ್ಯಪ್ ಸಾಳುಂಕೆ ಅವರ ‘ಹಮಾರೆ ಸಾಹಬ್’ ಪುಸ್ತಕದಲ್ಲಿ ಈ ಸಂಗತಿಗಳನ್ನು ಯಥಾವತ್ತಾಗಿ ನಮೂದಿಸಲಾಗಿದೆ” ಎಂದು ಕೆಲವು ವಿಷಯಗಳನ್ನು ವಾಟ್ಸ್ಯಾಪ್‌ನಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದನ್ನು ಮಹಾರಾಷ್ಟ್ರದ ಅಂಬೇಡ್ಕರ್‌ವಾದಿಗಳು ಅಲ್ಲಗಳೆದಿದ್ದಾರೆ. ಆ ದಿನಚರಿಯ ಚಿತ್ರಗಳನ್ನು ಹಾಕಿ ಎಂದು ಸವಾಲು ಹಾಕಿದ್ದಾರೆ. ಆದರೆ ಕಾಶ್ಯಪ್ ಸಾಳುಂಕೆ ಯಾವುದೇ ದಿನಚರಿ ಹಾಗೂ ಇತರ ದಾಖಲೆಗಳನ್ನು ಒದಗಿಸಿಲ್ಲ.

ಈ ಕುರಿತು ಮತ್ತಷ್ಟು ಹುಡುಕಿದಾಗ ಆಯುಷ್ ನದೀಂಪಳ್ಳಿ ಮತ್ತು ರಾಹುಲ್ ಎ ಶಾಸ್ತ್ರಿ ಎಂಬ ಆರ್‍‌ಎಸ್ಎಸ್ ಕಾರ್ಯಕರ್ತರು ಬರೆದಿರುವ ‘The Founder of RSS: Dr. Hedgewar seer Patriot and Nation Builder’ ಎಂಬ ಪುಸ್ತಕದಲ್ಲಿ ಇದೇ ರೀತಿ ಬರೆಯಲಾಗಿದೆ. ಆದರೆ ಲೇಖಕರು ಅವುಗಳಿಗೆ ಯಾವುದೇ ಮಾಹಿತಿ ಮೂಲವನ್ನು ತಿಳಿಸಿಲ್ಲ. ಪತ್ರಿಕಾ ವರದಿಯನ್ನೂ ಸಾಕ್ಷಿಯನ್ನೂ ಒದಗಿಸಿಲ್ಲ.

ಮುಂದುವರಿದು ಆರ್‌ಎಸ್‌ಎಸ್‌ ಎಂಬ ಪುಸ್ತಕದ ಕರ್ತೃ ಎಂ.ಜಿ. ಚಿತ್ಕಾರ ಬರೆದಿರುವ ‘Dr. Ambedkar and Social Justice’ನಲ್ಲಿ ಈ ಮೇಲಿನ ಸುಳ್ಳಿನ ಜೊತೆಗೆ ಅಂಬೇಡ್ಕರರು 1936ರ ಮಕರ ಸಂಕ್ರಾಂತಿಯಂದು ಆರ್‌ಎಸ್‌ಎಸ್‌ ಶಾಖೆಗೆ ಭೇಟಿ ನೀಡಿದ್ದರೆಂದು ಬರೆಯಲಾಗಿದೆ. ಆದರೆ ಯಥಾಪ್ರಕಾರ ಯಾವುದೇ ಮಾಹಿತಿ ಮೂಲವನ್ನೂ ಹಾಗೂ ಪತ್ರಿಕಾ ವರದಿಯನ್ನು ಅದರಲ್ಲಿ ಉಲ್ಲೇಖಿಸಿಲ್ಲ.

ಡಾ. ಅಂಬೇಡ್ಕರ್‌ರವರು ತಮ್ಮ ಪ್ರಬುದ್ಧ ಭಾರತದಲ್ಲಿ ವಿ.ಡಿ ಸಾವರ್ಕರ್‌ರವರನ್ನು ಟೀಕಿಸಿ ಲೇಖನ ಬರೆದಿದ್ದರು. ಅವರು ಆರ್‌ಎಸ್‌ಎಸ್‌ ವಿಚಾರಕ್ಕೆ ವಿರುದ್ಧವಾಗಿದ್ದರು. ಅವರು ತಮ್ಮ ‘Scheduled Castes Federation’ ಪಕ್ಷದ ಪ್ರಣಾಳಿಕೆಯಲ್ಲಿ ಹಿಂದೂ ಮಹಾಸಭಾ ಅಥವಾ ಆರ್‌ಎಸ್‌ಎಸ್‌ನಂತಹ ಪ್ರತಿಗಾಮಿ ಗುಂಪುಗಳೊಂದಿಗೆ ಯಾವುದೇ ಹೊಂದಾಣಿಕೆಗಳನ್ನು ಮಾಡಿಕೊಳ್ಳುವಂತಿಲ್ಲ ಎಂದು ಸೂಚಿಸಿದ್ದರು (ಸಂಪುಟ 17, ಪುಟ 359). ಅಲ್ಲದೇ, ಆರ್‌ಎಸ್‌ಎಸ್‌ ಒಂದು ಅಪಾಯಕಾರಿ ಸಂಘಟನೆ ಎಂದಿದ್ದರು (ಇಂಗ್ಲಿಷ್ ಸಂಪುಟ 15, ಪುಟ 560). ಹಾಗಾಗಿ ಅವರು ಆರ್‌ಎಸ್‌ಎಸ್‌ ಶಾಖೆಗೆ ಹೋಗಿದ್ದರು ಎಂಬುದು ಸಂಪೂರ್ಣ ಸುಳ್ಳಾಗಿದೆ.

1935ರ ಹೊತ್ತಿಗೆ ಡಾ. ಬಿ.ಆರ್ ಅಂಬೇಡ್ಕರ್‌ ಅವರು ಹಿಂದು ಧರ್ಮದ ಜಾತಿಪದ್ದತಿ, RSS ಮತ್ತು ಹಿಂದು ಮಹಾಸಭಾದ ಕಟುವಿಮರ್ಶಕರಾಗಿದ್ದರು. ತಮ್ಮ ಮೂಕ ನಾಯಕ, ಬಹಿಷ್ಕೃತ ಭಾರತ ಮತ್ತು ಪ್ರಬುದ್ಧ ಭಾರತದಲ್ಲಿ ಹಿಂದು ಧರ್ಮದಲ್ಲಿ ಆಚರಿಸಲ್ಪಡುತ್ತಿರುವ ಅನಿಷ್ಟ ಪದ್ದತಿಗಳ, ಜಾತಿ ವ್ಯವಸ್ಥೆ ಮತ್ತು ಬ್ರಾಹ್ಮಣವಾದದ ವಿರುದ್ದ ಸರಣಿ ಲೇಖನಗಳನ್ನು ಪ್ರಕಟಿಸಿದ್ದರು. ಹಿಂದೂವಾಗಿ ಹುಟ್ಟಿದ್ದೇನೆ, ಆದರೆ ಹಿಂದೂವಾಗಿ ಸಾಯಲಾರೆ ಎಂದು ಘೋಷಿಸಿದ್ದ ಅಂಬೇಡ್ಕರ್‌ರವರು ಕೊನೆಗೆ ಹಿಂದು ಧರ್ಮ ತೊರೆದು ಬೌದ್ದ ಧರ್ಮವನ್ನು ಅನುಸರಿಸಿದರು. ಆದ್ದರಿಂದ ಆರ್‌ಎಸ್‌ಎಸ್‌ ಕೃಪಾಪೋಷಿತ ಸುದ್ದಿ ಮಾಧ್ಯಮಗಳು ವರದಿ ಮಾಡಿರುವಂತೆ ಅಂಬೇಡ್ಕರ್‌ರವರು ಆರ್‌ಎಸ್‌ಎಸ್‌ ಕೆಲಸ-ಕಾರ್ಯಗಳನ್ನು ಶ್ಲಾಘಿಸಿದ್ದರು, ಶಾಖೆಗೆ ಭೇಟಿ ನೀಡಿದ್ದರು, ಹಿಂದುರಾಷ್ಟ್ರಕ್ಕೆ ಪರೋಕ್ಷವಾಗಿ ಬೆಂಬಲ ಸೂಚಿಸಿದ್ದರು ಎಂಬುದು ಸುಳ್ಳು.

ಕೃಪೆ: ಕನ್ನಡ ಫ್ಯಾಕ್ಟ್‌ಚೆಕ್.ಕಾಂ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X