ತಮ್ಮ ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಮುಂದಿಟ್ಟು ರೈತರು ನಡೆಸುತ್ತಿರುವ ಪ್ರತಿಭಟನೆಗೆ 100 ದಿನಗಳು ಪೂರ್ಣವಾಗಿದ್ದು ಇದನ್ನು ಗುರುತಿಸುವ ನಿಟ್ಟಿನಲ್ಲಿ ಶಂಭು ಮತ್ತು ಇತರ ಗಡಿ ಭಾಗಗಳಲ್ಲಿ ರೈತರು ಜಮಾಯಿಸಿದ್ದಾರೆ.
ಫೆಬ್ರವರಿ 13ರಂದು ಭದ್ರತಾ ಪಡೆಗಳು ತಮ್ಮ ‘ದೆಹಲಿ ಚಲೋ’ ಮೆರವಣಿಗೆಯನ್ನು ತಡೆದ ನಂತರ ರೈತರು ಶಂಭು ಮತ್ತು ಖಾನೌರಿ ಗಡಿಗಳಲ್ಲಿ ಮೊಕ್ಕಾಂ ಹೂಡಿದ್ದಾರೆ.
Today’s farmer protest (23 may 2024)
Their mission:- 100 days of “Delhi Chalo”. pic.twitter.com/SjIL2h2CHu— The Truth (@CrazyHIGAMINGF2) May 23, 2024
ಈ ಬಗ್ಗೆ ಮಾತನಾಡಿದ ಕಿಸಾನ್ ಮಜ್ದೂರ್ ಸಂಘರ್ಷ್ ಸಮಿತಿಯ ಮುಖಂಡ ಸರ್ವಾನ್ ಸಿಂಗ್ ಪಂಧೇರ್, “ಶಂಭು, ಖಾನೌರಿ ಮತ್ತು ದಬ್ವಾಲಿ ಗಡಿಗಳಲ್ಲಿ ಈಗ ರೈತರು ಜಮಾಯಿಸಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ನಮ್ಮ ಪ್ರತಿಭಟನೆಯನ್ನು ಮುಂದುವರೆಸಲು ದೆಹಲಿಯತ್ತ ಹೋಗುವುದನ್ನು ತಡೆಯುತ್ತಿದೆ” ಎಂದು ಆರೋಪಿಸಿದರು.
ಇದನ್ನು ಓದಿದ್ದೀರಾ? ರೈತ ಹೋರಾಟ | ಸರ್ಕಾರದ ದಮನಕ್ಕೆ ಬಗ್ಗದ ‘ದೆಹಲಿ ಚಲೋ’; ಈವರೆಗೆ 6 ರೈತರು ಸಾವು
ಪಂಜಾಬ್ ಮತ್ತು ಹರಿಯಾಣ ನಡುವಿನ ಗಡಿ ಭಾಗಗಳಲ್ಲಿ ಭಾರೀ ಪೊಲೀಸ್ ಪಡೆಯನ್ನು ನಿಯೋಜಿಸಿರುವುದನ್ನು ಪಂಧೇರ್ ಖಂಡಿಸಿದರು.
ಗುರುವಾರ ಪಟಿಯಾಲಾ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರೈತರು ಪ್ರಶ್ನೆಗಳನ್ನು ಕೇಳಲು ಬಯಸಿದ್ದು, ಅವರಿಗೆ ಪ್ರವೇಶ ನೀಡದಿದ್ದರೆ ಧರಣಿ ನಡೆಸುವುದಾಗಿ ಕೆಎಂಎಂ ನಾಯಕ ಎಚ್ಚರಿಕೆ ನೀಡಿದ್ದಾರೆ.
ಇದನ್ನು ಓದಿದ್ದೀರಾ? ದೆಹಲಿ ಚಲೋ ಪುನರಾರಂಭ: ರೈತರತ್ತ ಅಶ್ರುವಾಯು ಪ್ರಯೋಗ, ಮಾತುಕತೆಗೆ ಕೇಂದ್ರ ಪ್ರಸ್ತಾಪ
ಮೇ 23ರಂದು ಪಟಿಯಾಲಾದಲ್ಲಿ ಮೊದಲ ರ್‍ಯಾಲಿ ನಡೆಸುವ ಮೂಲಕ ಮೋದಿ ರಾಜ್ಯದಲ್ಲಿ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಲಿದ್ದಾರೆ. ಪಂಜಾಬ್‌ನ 13 ಲೋಕಸಭಾ ಸ್ಥಾನಗಳಿಗೆ ಜೂನ್ 1 ರಂದು ಮತದಾನ ನಡೆಯಲಿದೆ.
ಇನ್ನು ಪಂಜಾಬ್‌ನಲ್ಲಿ ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ ಬಿಜೆಪಿ ಅಭ್ಯರ್ಥಿಗಳು ರೈತರಿಂದ ಪ್ರತಿಭಟನೆ ಎದುರಿಸುತ್ತಿದ್ದಾರೆ. ತಮ್ಮ ಬೇಡಿಕೆಗಳನ್ನು ಒಪ್ಪದ ಬಿಜೆಪಿ ನಾಯಕರನ್ನು ರೈತರು ಪ್ರಶ್ನಿಸುತ್ತಿದ್ದು, ಕಪ್ಪು ಬಾವುಟವನ್ನು ಪ್ರದರ್ಶಿಸುತ್ತಿದ್ದಾರೆ.