ಭಯ, ತರ್ಕ ಮತ್ತು ರಾಜಕಾರಣ

Date:

Advertisements
ಭಯವು ಪರಧರ್ಮ, ಪರಜಾತಿ, ಪರಭಾಷಿಕರ, ಪರವರ್ಣ, ಪರಪ್ರಾಂತ್ಯದವರ ಕುರಿತು ವಿಸ್ತಾರಗೊಂಡಿತು. ಮನುಷ್ಯನ ಮೂಲಭಯ ಜೀವಭಯ. ಜೀವಕ್ಕೆ ಕುತ್ತು ಅನ್ಯರಿಂದ ಮಾತ್ರ ಅನ್ನುವ ಮಟ್ಟಕ್ಕೆ ಮನುಷ್ಯ ಬಂದು ತಲುಪಿದ. ಈ ಅನ್ಯರ ಭಯವನ್ನು ವಿದೇಶಿಯರ ದಾಳಿ, ವಸಾಹತು ಇತಿಹಾಸ ಮತ್ತಷ್ಟು ಗಟ್ಟಿಗೊಳಿಸಿತು

ನನ್ನ ಶಾಲಾ ದಿನಗಳಲ್ಲಿ ನಮ್ಮೂರಿನ ಬಾವಿಗಳಲ್ಲಿ ಈಜುತ್ತಿದ್ದೆ. ಭಯವಿಲ್ಲದೆ ಈಜುತ್ತಿದ್ದೆ. ಒಮ್ಮೆ ನಾನು ಮತ್ತು ಗೆಳೆಯರು ‘ಅನಕೊಂಡ’ ಅನ್ನುವ ತೀರಾ ಕೆಟ್ಟ ಚಿತ್ರವೊಂದನ್ನು ನೋಡಿದೆವು. ಅದಾದ ಕೆಲವೇ ದಿನಗಳಲ್ಲಿ ‘ಪಿರಾನ’ ಎಂಬ ಚಿತ್ರವನ್ನೂ ನೋಡಿದೆ. ಅನಕೊಂಡ ದಕ್ಷಿಣ ಅಮೆರಿಕದ ಅಮೆಜಾನ್ ನದಿಯಲ್ಲಿ ಕಂಡು ಬರುವ ದೈತ್ಯ ಹಾವುಗಳಾದರೆ, ಪಿರಾನ ಅಮೆಜಾನ್ ಮತ್ತದರ ಉಪನದಿಗಳಲ್ಲಿ ಕಂಡು ಬರುವ ಚೂಪು ಹಲ್ಲಿನ ಮೀನುಗಳು. ನಾವು ನೋಡಿದ ಚಿತ್ರಗಳಲ್ಲಿ ಇವುಗಳು ಮನುಷ್ಯರನ್ನು ಹಿಡಿದು ನುಂಗಿಬಿಡುತ್ತವೆ, ಗುಂಪು ಗುಂಪಾಗಿ ಹಲ್ಲೆ ಮಾಡಿ ಕಚ್ಚಿ ತುಂಡರಿಸಿ ತಿಂಡುಬಿಡುತ್ತವೆ. ಈ ಚಿತ್ರಗಳನ್ನು ನೋಡಿದ ಮೇಲೆ ನಾನು ಮತ್ತೆಂದೂ ನಮ್ಮೂರಿನ ಬಾವಿಗಳಲ್ಲಿ ಸ್ವಚ್ಛಂದವಾಗಿ ಈಜಲು ಆಗಲಿಲ್ಲ. ಅನಕೊಂಡ ಮತ್ತು ಪಿರಾನ ಭಯ! ನಾನು ಈಜುವಾಗ ಅನಕೊಂಡ ಕಾಲಿಗೆ ಸುತ್ತಿಕೊಂಡು ಒಳಸೆಳೆದು ನುಂಗಿಬಿಟ್ಟರೆ, ಪಿರಾನ ಗುಂಪು ದಾಳಿ ನಡೆಸಿ ಕೊಂದುಬಿಟ್ಟರೆ! ಆ ಅಪಾಯಕಾರಿ ಜೀವಗಳು ಅಮೆಜಾನ್‌ನಲ್ಲಿವೆ, ನಾನು ನಮ್ಮ ಹಳ್ಳಿಯಲ್ಲಿದ್ದೇನೆ, ಅವು ಇಲ್ಲಿಗೆ ಬರಲು ಸಾಧ್ಯವೇ ಇಲ್ಲ. ಅಮೆಜಾನ್ ಕಾಡಿನಲ್ಲೂ ಕೂಡ ಅನಕೊಂಡ ಮತ್ತು ಪಿರಾನಗಳು ಮನುಷ್ಯನ ಮೇಲೆ ದಾಳಿ ಮಾಡಿದ್ದು ತೀರಾ ವಿರಳ ಎಂದು ಎಷ್ಟೇ ಲಾಜಿಕ್ ತಿಳಿದಿದ್ದರೂ ನನ್ನ ಭಯ ಶಮನವಾಗಲಿಲ್ಲ. ಆ ಪ್ರಭೇದದ ಹಾವು ಮೀನು ಇಲ್ಲಿಲ್ಲದಿದ್ದರೂ ಮತ್ತಾವುದೋ ಅಪಾಯಕಾರಿ ಹಾವು ಇಲ್ಲಿರಬಹುದು ಎಂದು ನನ್ನ ಮನ ಎಚ್ಚರಿಸುತ್ತಿತ್ತು! I could never swim without fear. ಭಯ ನಿಮ್ಮ ಲಾಜಿಕ್ಅನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸಿಬಿಡುತ್ತದೆ.

ವಿಕಸನ ಪ್ರಕ್ರಿಯೆಯಲ್ಲಿ ಮನುಷ್ಯ ಬದುಕುಳಿಯುವುದಕ್ಕೆ ಭಯ ಸಹಕರಿಸಿದೆ. ಭಯಭೀತನಾದ ಮನುಷ್ಯನಲ್ಲಿ ಹೃದಯದ ಬಡಿತ ಹೆಚ್ಚುತ್ತದೆ, ರಕ್ತವು ಕಾಲು-ಕೈಗಳೆಡೆಗೆ ಹರಿಯ ತೊಡಗುತ್ತದೆ, ಕಣ್ಣೋಟ ವಿಸ್ತಾರಗೊಳ್ಳುತ್ತದೆ, ಸ್ನಾಯುಗಳು ಗಟ್ಟಿಯಾಗುತ್ತವೆ, ಮನುಷ್ಯ ಒತ್ತಡಕ್ಕೊಳಗಾಗುತ್ತಾನೆ, ಆಲೋಚನೆಗಳು ಅತಿಯಾಗುತ್ತವೆ. ಕಾಡಿನಲ್ಲಿ ಅಲೆಯುತ್ತಿದ್ದ ಮಾನವನ ಮುಂದೆ ಥಟ್ ಎಂದು ಹುಲಿಯೋ ಆನೆಯೋ ಪ್ರತ್ಯಕ್ಷವಾದಾಗ ಆತನ ದೇಹ ಮತ್ತು ಮೆದುಳು ಈ ರೀತಿ ಪ್ರತಿಕ್ರಿಯೆ ನೀಡದಿದ್ದರೆ ಆತ ಬದುಕುಳಿಯುವ ಸಾಧ್ಯತೆ ಎಲ್ಲಿತ್ತು? ವಿಕಸನದ ಹಾದಿಯಲ್ಲಿ ನಮ್ಮ ಉಳಿವಿಗಾಗಿಯೇ ಫ್ಲೈಟ್, ಫೈಟ್ ಮತ್ತು ಫ್ರೀಜ್ ರೆಸ್ಪಾನ್ಸ್ (ಪಲಾಯನ, ಹೋರಾಟ ಮತ್ತು ಸ್ಥಬ್ಧ) ರೂಢಿಸಿಕೊಂಡೆವು. ಆದರೀಗ ಮನುಷ್ಯ ಕಾಡಿನಿಂದ ಹೊರಬಂದು ದೊಡ್ಡ ದೊಡ್ಡ ನಗರಗಳಲ್ಲಿ ನೆಲೆಸಿದ್ದಾನೆ. ಇಲ್ಲೀಗ ಹುಲಿ ಬಂತು ಹುಲಿ ಎಂದು ಭಯ ಹುಟ್ಟಿಸಲು ಸಾಧ್ಯವಿಲ್ಲ.

ಹಾಗಾದ್ರೆ ಈಗ ಭಯ ಯಾವುದರ ಬಗ್ಗೆ ಇರಬಹುದು? ಆಯುಧಗಳನ್ನು ಸೃಷ್ಟಿಸಿ ಕ್ರೂರ ಮೃಗಗಳನ್ನು ಕೊಲ್ಲುವ, ಗುಂಪು ಗುಂಪಾಗಿ ಬೇಟೆಯಾಡುವ ಸಾಮರ್ಥ್ಯ ಬೆಳೆಸಿಕೊಂಡ ನಂತರದ ದಿನಗಳಲ್ಲಿ ಕಾಡುಮನುಷ್ಯ, ಪರ ಬುಡಕಟ್ಟು ಜನಾಂಗದವರ ಬಗ್ಗೆ ಭಯ ಬೆಳೆಸಿಕೊಂಡ. ಪರಜನರು ಬಂದು ನಮ್ಮ ಜಾನುವಾರುಗಳನ್ನು, ಹೆಣ್ಣು ಮಕ್ಕಳನ್ನು, ಆಹಾರವನ್ನು ಕಸಿಯುತ್ತಾರೆ ಎಂಬ ಭಯ ಅವನಲ್ಲಿ ಮೂಡಿತ್ತು. ಅದು ವಾಸ್ತವವೂ ಆಗಿತ್ತು. ತನ್ನನ್ನು ತಾನು ರಕ್ಷಿಸಿಕೊಳ್ಳಲು ರಕ್ಷಣಾ ವ್ಯವಸ್ಥೆ ಮತ್ತು ಸೇನೆಯನ್ನು ಸೃಷ್ಟಿಸಿಕೊಂಡ. ನಮ್ಮದಲ್ಲದವರ ಭಯ ಕಾಲಾನಂತರ ಪರಧರ್ಮ, ಪರಜಾತಿ, ಪರಭಾಷಿಕರ, ಪರವರ್ಣ, ಪರಪ್ರಾಂತ್ಯದವರ ಕುರಿತು ವಿಸ್ತಾರಗೊಂಡಿತು. ಮನುಷ್ಯನ ಮೂಲಭಯ ಜೀವಭಯ. ಜೀವಕ್ಕೆ ಕುತ್ತು ಅನ್ಯರಿಂದ ಮಾತ್ರ ಅನ್ನುವ ಮಟ್ಟಕ್ಕೆ ಮನುಷ್ಯ ಬಂದು ತಲುಪಿದ. ಈ ಅನ್ಯರ ಭಯವನ್ನು ವಿದೇಶಿಯರ ದಾಳಿ, ವಸಾಹತು ಇತಿಹಾಸ ಮತ್ತಷ್ಟು ಗಟ್ಟಿಗೊಳಿಸಿತು.

Advertisements

ಮುಂದುವರೆದು, ಅನ್ಯರ ಕುರಿತು ನಮಗಿರುವ ಭಯವಿಂದು ಅತ್ಯಂತ ಪೋಟೆಂಟ್ ರಾಜಕೀಯ ಸಲಕರಣೆಯಾಗಿದೆ. ಎಲ್ಲ ಫ್ಯಾಸಿಸ್ಟ್ ಒಕ್ಕೂಟಗಳ ಪ್ರಬಲ ಆಯುಧ ಭಯ. ಭಯವನ್ನು ಆಧಾರವಾಗಿಟ್ಟುಕೊಂಡು powerful ರೆಟೋರಿಕ್ ಕಟ್ಟಲಾಗುತ್ತದೆ. ಹೀಗೆ ಕಟ್ಟಿದ ರಿಟೋರಿಕ್‌ಗಳು ಮೇಲ್ನೋಟಕ್ಕೆ ಎಲ್ಲರ ಒಳಿತಿಗಾಗಿ, ದೇಶಕ್ಕಾಗಿ ಎಂದು ಚಲಾವಣೆಗೆ ಬಂದರೂ, ಅವು ತೀರಾ undemocratic ಆದ, ದ್ವೇಷ ಸೂಸುವ, ತರ್ಕರಹಿತ ಯುದ್ಧೋನ್ಮಾದದ ಮಾತುಗಳೇ ಆಗಿರುತ್ತವೆ. ಒಮ್ಮೆ ಭಯ, ದ್ವೇಷವನ್ನ ಮನದಲ್ಲಿ ನೆಟ್ಟರೆ. ನೆಟ್ಟ ಬೀಜಕ್ಕೆ ನೀರು, ಗೊಬ್ಬರ ಹಾಕಿ ಹೆಮ್ಮರವಾಗಿ ನಾವೇ ಬೆಳೆಸಿಕೊಳ್ಳುತ್ತೇವೆ.

ಬಿಳಿಯ ಯುರೋಪಿಯನ್ನರು ಕೋಟ್ಯಂತರ ಕಪ್ಪು ವರ್ಣದವರನ್ನು ಆಫ್ರಿಕಾದಿಂದ ಅಮೆರಿಕಕ್ಕೆ ಜಾನುವಾರುಗಳಂತೆ ಹೊತ್ತು ತಂದರು, ಸರಪಳಿಗಳಲ್ಲಿ ಬಿಗಿದು ಒಂದು ಜಾತ್ರೆಯಿಂದ ಇನ್ನೊಂದು ಜಾತ್ರೆಗೆ ದನಗಳಂತೆ ಕರೆದುಕೊಂಡು ಹೋದರು, ಮಾರುಕಟ್ಟೆಗಳಲ್ಲಿ ಅವರನ್ನು ಮಾರಿದವರು, 250 ವರುಷಗಳ ಕಾಲ ಅವರನ್ನು ಅಮಾನವೀಯವಾಗಿ ಕಂಡರು. ಇಷ್ಟೆಲ್ಲ ಕರಾಳ ಇತಿಹಾಸವಿದ್ದರು ಕಪ್ಪು ವರ್ಣದವರು, ಮೆಕ್ಸಿಕನ್ನುರು ಅಮೆರಿಕದ ಬಿಳಿಯರಿಗೆ ಮಾರಕವೆಂಬ ಭಯ ಬಿಳಿಯ ಅಮೆರಿಕನ್ನರಲ್ಲಿ ಇಂದಿಗೂ ಇದೆ. ಅವರನ್ನು ನಾವು ಹದ್ದುಬಸ್ತಿನಲ್ಲಿಡದಿದ್ದರೆ ಅವರ ಉಪಟಳ ನಿಯಂತ್ರಣ ಮೀರಿ ಹೋಗುತ್ತದೆ ಎಂಬ ಆತಂಕವಿದೆ!

ಈ ಲೇಖನ ಓದಿದ್ದೀರಾ?: ಉಗ್ರರ ದಾಳಿಗೆ ಹತ್ತು ದಿನ: ‘ಹುಡುಕಿ ಹುಡುಕಿ ಬೇಟೆ’ಯಾಡುತ್ತಿರುವುದು ಯಾರನ್ನು?

2010ರಲ್ಲಿ ಬರಾಕ್ ಒಬಾಮಾ ಜಾರಿಗೆ ತಂದ ‘ಒಬಾಮಾ ಕೇರ್’ (ಒಬಾಮ ಕೇರ್) ಎನ್ನುವ ಆರೋಗ್ಯ ಸ್ಕೀಮ್ ಸಾಕಷ್ಟು ಚರ್ಚೆಗೆ ಕಾರಣವಾಯಿತು. ಕಪ್ಪು ವರ್ಣದ ಅಧ್ಯಕ್ಷರೊಬ್ಬರು ಜಾರಿಗೆ ತಂದ ಆರೋಗ್ಯ ಸ್ಕೀಮ್ ಕಡುಬಡವರಿಗೂ, ಕಪ್ಪು ವರ್ಣದವರಿಗೂ ಆರೋಗ್ಯ ಸೌಲಭ್ಯ ಸಿಗುವಂತೆ ಮಾಡಿತು. ಬಿಳಿಯರು ಕೂಡ ಇದರ ಫಲಾನುಭವಿಗಳಾಗಿದ್ದರೂ ಒಬಾಮ ಕೇರ್ ವಿರುದ್ಧ ರೆಟೋರಿಕ್ ಹರಿಯಬಿಡಲಾಯಿತು. ಈ ಭಾಗ್ಯ ಸ್ಕೀಮ್‌ನಿಂದ ಅಮೆರಿಕದ ಸಂಪತ್ತು ಖಾಲಿಯಾಗುತ್ತಿದೆ, ಅನ್ಯರು ಹಿಗ್ಗುತ್ತಿದ್ದಾರೆ, ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂಬ ಗುಲ್ಲು ಎಬ್ಬಿಸಲಾಯಿತು. 2016ರ ಚುನಾವಣೆ ಹೊತ್ತಿಗೆ ‘ಮೇಕ್ ಅಮೆರಿಕಾ ಗ್ರೇಟ್ ಅಗೈನ್’ – make America great again ಎಂಬ ಸ್ಲೋಗನ್ನೊಂದಿಗೆ ಟ್ರಂಪ್ ತಯಾರಿದ್ದರು. ಭಯದಿಂದ ರೆಟೋರೀಕ್, ರೆಟೋರೀಕ್‌ನಿಂದ ದಾಂಧಲೆ ಧ್ರುವೀಕರಣ, ಧ್ರುವೀಕರಣದಿಂದ ಅಧಿಕಾರ.

(ವಿಸ್ಮಯಕಾರಿ ವಿಷಯ ಒಂದಿದೆ. ಭ್ರಷ್ಟಾಚಾರದ ವಿರುದ್ಧ ಸಮರ ಸಾರಿ ಅಧಿಕಾರಕ್ಕೆ ಬರುವ ಫ್ಯಾಸಿಸ್ಟ್ ಸರ್ಕಾರಗಳೆಲ್ಲವೂ ಪತನಗೊಂಡ ಸರ್ಕಾರಕ್ಕಿಂತ ಹೆಚ್ಚು ಭ್ರಷ್ಟವಾಗಿರುತ್ತವೆ. ಆದರೆ, ಆ ಭ್ರಷ್ಟಾಚಾರವನ್ನು ಪ್ರಶ್ನಿಸುವ ಹಂತಕ್ಕೆ ಜನ ಹೋಗಲಾರರು. ಅನ್ಯರನ್ನು ನಿಯಂತ್ರಣದಲ್ಲಿಟ್ಟಿದ್ದಾರೆ ಎಂಬ ಭಾವ ಸಾಕು ಭ್ರಷ್ಟಾಚಾರ, ಕುದುರೆ ವ್ಯಾಪಾರ, ಮತ್ತೆಲ್ಲಾ ಅನೈತಿಕ ನಡೆಗಳನ್ನು ಮಾಫಿ ಮಾಡಲು!)

9/11, 2001ರ ನಂತರದ ಭಯಗ್ರಸ್ತ ಅಮೆರಿಕನ್ ಸಮಾಜ ಅಫ್ಘಾನಿಸ್ತಾನ್, ಇರಾಕ್, ಲಿಬಿಯಾಗಳ ಮೇಲೆ ದಾಳಿ ಮಾಡಲು ಸಮ್ಮತಿಸಿತು. ಸದ್ದಾಂ ಹುಸೈನ್ ಬಳಿ weapons of mass destructions ಇದೆ ಎಂಬ ಕಟ್ಟುಕಥೆಗಳನ್ನು ನಂಬಿ ಜಾರ್ಜ್ ಬುಷ್ ನಂತಹ ಸರ್ವಾಧಿಕಾರಿಯನ್ನು ಮರುಚುನಾಯಿಸಿತು. ಅಮೆರಿಕವು ಪ್ರಸ್ತುತ ಇಸ್ರೇಲ್ ಸದೃಢವಾಗಿ ಬೆಳೆಸುತ್ತಿರುವ war economy ಯನ್ನೂ ಮಾನ್ಯ ಮಾಡಿತು. ಮನುಷ್ಯನ ತೀರಾ ಖಾಸಗಿ ವಿಷಯಗಳಿಗೂ access ನೀಡುವ ತಂತ್ರಜ್ಞಾನ ಬಳಕೆಗೆ ಒಪ್ಪಿಗೆ ನೀಡಿತು. ತನ್ನೆಲ್ಲ ಅಸ್ಮಿತೆಯನ್ನು ಕಳೆದುಕೊಂಡು ಕೇವಲ ಅಂಕಿಗಳಾಗಿರಲು ಒಪ್ಪಿತು.

ತಂತ್ರಜ್ಞಾನ ಬೆಳೆದಂತೆಲ್ಲ ಜಗತ್ತು ಸಣ್ಣದಾಗುತ್ತಾ ಹೋಗಬೇಕಾಗಿತ್ತು. ಆದರೆ, ಮನಗಳು ಸಣ್ಣದಾಗುತ್ತಿವೆ. ಜನ ಬೆರತಂತೆಲ್ಲ ಪ್ರೀತಿ ಹಿಗ್ಗಬೇಕಿತ್ತು ದ್ವೇಷ ಹಿರಿದಾಗುತ್ತಿದೆ. ಹೀಗೇಕೆ ಆಗುತ್ತಿದೆ? ಟೆಕ್ನಾಲಜಿ ಬಳಸುತ್ತಾ, ಸಾಮಾಜಿಕ ಜಾಲತಾಣಗಳಿಂದ ಸದಾ manipulationಗೆ ಒಳಗಾಗುತ್ತಾ multiculutral ಜಗತ್ತಿನಲ್ಲಿ ಬದುಕುವ ಸವಾಲುಗಳೇನು? ಟೆಕ್ನಾಲಜಿ ಡ್ರಿವನ್ ವಾತಾವರಣದಲ್ಲಿ ಅನ್ಯರ ಭಯ ಮತ್ತು ಹೈಪರ್ ನೇಷನಲಿಸಂ ಉಲ್ಬಣಗೊಳ್ಳುತ್ತದೆಯೆ? ಭಯ, ಬಂಡವಾಳ ಮತ್ತು ರಾಷ್ಟ್ರೀಯತೆ ನಡುವಿನ ಸಂಬಂಧಗಳೇನು? ಕಾಡು ಮನುಷ್ಯನಿಗಿದ್ದ ಸಹಜ ಭಯಕ್ಕೂ ಮತ್ತೆ ಇಂದು ನಮ್ಮೆಲ್ಲರಲ್ಲಿ ಬಿತ್ತಲಾಗುತ್ತಿರುವ ಭಯಕ್ಕೂ ಇರುವ ವ್ಯತ್ಯಾಸವೇನು? ಬಿತ್ತಲಾದ ಭಯದಿಂದ ನಾವೆಷ್ಟು ಟಾಕ್ಸಿಕ್ ಆಗುತ್ತಾ ಸಾಗಿದ್ದೇವೆ? ಟಾಕ್ಸಿಕ್ ಮನಸ್ಥಿತಿ ಧ್ರುವೀಕರಣಕ್ಕೆ ಹೇಗೆ ದಾರಿ ಮಾಡಿಕೊಟ್ಟಿದೆ? ಟಾಕ್ಸಿಕ್ ಮನಸ್ಥಿತಿಗೆ ಬಲಿಯಾಗುವವರು ಯಾರು ಮತ್ತು ಧ್ರುವೀಕರಣದ ಲಾಭ ಪಡೆದವರು ಯಾರು? ನಮ್ಮಲ್ಲಿ ಬಿತ್ತಲಾಗಿರುವ ಭಯವನ್ನು ‘ಆಧಾರ’ವಾಗಿಟ್ಟುಕೊಂಡು ಪ್ರಭುತ್ವ ನಮ್ಮ ವೈಯಕ್ತಿಕ ಸ್ವಾತಂತ್ರ್ಯವನ್ನು ಹೇಗೆ ಮುಟುಕುಗೊಳಿಸುತ್ತಿದೆ ಮತ್ತದಕ್ಕೆ ನಾವು ಹೇಗೆ ಅನುಮತಿ ನೀಡುತ್ತಾ ಸಾಗಿದ್ದೇನೆ? ಭಯ ಮಾನವನನ್ನು ಎಲ್ಲಿಗೆ ಕರೆದುಕೊಂಡು ನಿಲ್ಲಿಸಬಹುದು? ವಿಕಸನದೆಡೆಗೋ ಅವಸಾನದೆಡೆಗೊ?

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

‍ಹರೀಶ್ ಗಂಗಾಧರ್
‍ಹರೀಶ್ ಗಂಗಾಧರ್
‍ಲೇಖಕ, ಪ್ರಾಧ್ಯಾಪಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗದಗ | ಮುಶಿಗೇರಿ ವಸತಿ ನಿಲಯಕ್ಕೆ ಮೂಲ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಗೋಳು ಕೇಳೋರ್ಯಾರು?

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ವಸತಿ...

Download Eedina App Android / iOS

X