ಸರ್ಕಾರ ಗೃಹ ಬಂಧನಕ್ಕೆ ಒಳಪಡಿಸುವ ಭೀತಿಯಿಂದ ಆಂಧ್ರ ಪ್ರದೇಶದ ಕಾಂಗ್ರೆಸ್ ಮುಖ್ಯಸ್ಥೆ ವೈ ಎಸ್ ಶರ್ಮಿಳಾ ಅವರು ರಾತ್ರಿಯಿಡಿ ಕಾಂಗ್ರೆಸ್ ಕಚೇರಿಯಲ್ಲೇ ಕಳೆದಿದ್ದಾರೆ. ಶರ್ಮಿಳಾ ರಾತ್ರಿಯಿಡಿ ವಾಸ್ತವ್ಯ ಮಾಡಿರುವ ವಿಡಿಯೋ ಎಲ್ಲಡೆ ವೈರಲ್ ಆಗಿದೆ.
ವೈರಲ್ ಆದ ವಿಡಿಯೋದಲ್ಲಿ ಇರುವಂತೆ ವೈ ಎಸ್ ಶರ್ಮಿಳಾ ಅವರು ವಿಜಯವಾಡದ ಪಕ್ಷದ ಕಚೇರಿಯ ತನ್ನ ಚೇಂಬರ್ ಪಕ್ಕದಲ್ಲೇ ಹಾಸಿಗೆಯಲ್ಲಿ ಮಲಗಿದ್ದಾರೆ. ಕಾರ್ಯಕರ್ತರಿಂದ ಹಮ್ಮಿಕೊಳ್ಳಲಾದ ಚಲೋ ಸೆಕ್ರೆಟ್ರಿಯೇಟ್ ಪ್ರತಿಭಟನೆಯ ನಂತರ ಈ ಬೆಳವಣಿಗೆ ನಡೆದಿದೆ.
ನಿರುದ್ಯೋಗ ಯುವಕರು ಹಾಗೂ ವಿದ್ಯಾರ್ಥಿಗಳ ಸಮಸ್ಯೆ ಪರಿಹರಿಸುವಂತೆ ಕಾಂಗ್ರೆಸ್ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲು ಯೋಜಿಸಿತ್ತು.
ವಿಜಯವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವೈ ಎಸ್ ಶರ್ಮಿಳಾ, ಜಗನ್ ಮೋಹನ್ ರೆಡ್ಡಿ ಕಳೆದ ಐದು ವರ್ಷಗಳಲ್ಲಿ ಯುವಕರು, ನಿರುದ್ಯೋಗಿಗಳು ಹಾಗೂ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪರಿಹರಿಸಲು ಸಂಪೂರ್ಣ ವಿಫಲರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ದೇಣಿಗೆ ನೀಡಿ ಇಲ್ಲವೇ ಇಡಿ, ಐಟಿ ದಾಳಿ ಎದುರಿಸಿ: 30 ಸಂಸ್ಥೆಗಳಿಂದ ₹335 ಕೋಟಿ ಬಿಜೆಪಿಗೆ
ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲೂ ಕೂಡ ಸರ್ಕಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾವು ನಿರುದ್ಯೋಗಿಗಳ ಪರವಾಗಿ ಪ್ರತಿಭಟನೆಗೆ ಕರೆ ನೀಡಿದರೆ, ನೀವು ನಮ್ಮನ್ನು ಗೃಹಬಂಧನಕ್ಕೆ ಒಳಪಡಿಸಲು ಯತ್ನಿಸುತ್ತಿದ್ದೀರಾ? ಪ್ರಜಾಪ್ರಭುತ್ವದಲ್ಲಿ ನಮಗೆ ಪ್ರತಿಭಟಿಸಲು ಹಕ್ಕಿಲ್ಲವೆ? ಮಹಿಳೆಯಾದ ನಾನು ಪೊಲೀಸರ ಗೃಹ ಬಂಧನದಿಂದ ತಪ್ಪಿಸಿಕೊಂಡು ರಾತ್ರಿಯಿಡಿ ಪೊಲೀಸರ ಕಚೇರಿಯಲ್ಲಿ ಕಳೆಯುವುದು ಸರ್ಕಾರಕ್ಕೆ ಖಂಡಿತಾ ನಾಚಿಕೆಗೇಡಿನ ಸಂಗತಿ ಎಂದು ತಿಳಿಸಿದ್ದಾರೆ.
“ಸಾವಿರಾರು ಪೊಲೀಸರು ನಮ್ಮನ್ನು ಸುತ್ತುವರಿದಿದ್ದಾರೆ. ಕಬ್ಬಿಣದ ತಂತಿಗಳನ್ನು ಕಟ್ಟಿ ನಮ್ಮನ್ನು ಒತ್ತೆಯಾಳಾಗಿ ಇಡಲಾಗಿದೆ. ನಾವು ನಿರುದ್ಯೋಗಿಗಳ ಪರ ನಿಂತರೆ ಅವರು ನಮ್ಮನ್ನು ಬಂಧಿಸಲು ಯತ್ನಿಸುತ್ತಿದ್ದಾರೆ.ನಮ್ಮ ಪ್ರಯತ್ನವನ್ನು ತಪ್ಪಿಸುವ ನೀವು ಸರ್ವಾಧಿಕಾರಿಗಳು. ನಿಮ್ಮ ಕ್ರಮಕ್ಕೆ ಇದು ಸಾಕ್ಷಿಯಾಗಿದೆ. ವೈಸಿಪಿ ಸರ್ಕಾರ ನಿರುದ್ಯೋಗಿಗಳ ಕ್ಷಮೆ ಕೇಳಬೇಕು” ಎಂದು ಒತ್ತಾಯಿಸಿದರು.
ಆಂಧ್ರ ಪ್ರದೇಶದ ಸಿಎಂ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರ ಸೋದರಿ ಆಗಿರುವ ವೈ ಎಸ್ ಶರ್ಮಿಳಾ ಅವರು ಜನವರಿ 4ರಂದು ಕಾಂಗ್ರೆಸ್ ಸೇರ್ಪಡೆಗೊಂಡು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿ ನೇಮಕಗೊಂಡರು. ಕಾಂಗ್ರೆಸ್ ಸೇರ್ಪಡೆಗೂ ಮುನ್ನ ತೆಲಂಗಾಣದ ವೈಎಸ್‌ಆರ್ ತೆಲಂಗಾಣ ಪಕ್ಷದ ಅಧ್ಯಕ್ಷರಾಗಿದ್ದರು.
#WATCH | Andhra Pradesh: APCC chief YS Sharmila Reddy spent the night in her party office in Vijayawada to avoid house arrest. (21.2) pic.twitter.com/JyWSnM9EYS
— ANI (@ANI) February 22, 2024
