ಡಿಎನ್‌ಎ ಹೋಲಿಕೆ ಮೂಲಕ ಗುಜರಾತ್ ವಿಮಾನ ದುರಂತದಲ್ಲಿ ಮೃತಪಟ್ಟವರ ಗುರುತು ಪತ್ತೆ ಮಾಡಲಾಗಿದ್ದು, ಒಟ್ಟಾಗಿ ಈ ಭೀಕರ ವಿಮಾನ ಅಪಘಾತದಲ್ಲಿ 260 ಮಂದಿ ಸಾವನ್ನಪ್ಪಿದ್ದಾರೆ ಅಧಿಕಾರಿಗಳು ತಿಳಿಸಿದ್ದಾರೆ.
2023ರ ಜೂನ್ 12ರಂದು ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾದ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನ ಅಪಘಾತಕ್ಕೀಡಾಗಿದ್ದು ಸುಮಾರು 16 ದಿನಗಳ ನಂತರ ಎಲ್ಲ ಮೃತದೇಹಗಳ ಗುರುತು ಪತ್ತೆಹಚ್ಚಲಾಗಿದೆ. ದುರಂತದಲ್ಲಿ ಗುಜರಾತ್‌ನ ಭುಜ್‌ನ 32 ವರ್ಷದ ಪ್ರಯಾಣಿಕ ಹೊರತುಪಡಿಸಿ ವಿಮಾನದಲ್ಲಿದ್ದ 241 ಮಂದಿಯೂ ಮೃತಪಟ್ಟಿದ್ದಾರೆ. ಇದನ್ನು ಹೊರತುಪಡಿಸಿ ವಿಮಾನ ಪತನಗೊಂಡ ಸ್ಥಳದಲ್ಲಿದ್ದ 19 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನು ಓದಿದ್ದೀರಾ? ಗುಜರಾತ್ ವಿಮಾನ ದುರಂತ | 190 ಸಂತ್ರಸ್ತರ ಗುರುತು ಪತ್ತೆ, 159 ಮೃತದೇಹಗಳು ಕುಟುಂಬಸ್ಥರಿಗೆ ಹಸ್ತಾಂತರ
ಈ ಹಿಂದೆ ವೈದ್ಯಕೀಯ ಅಧಿಕಾರಿಗಳು ಪಟ್ಟು 270 ಮೃತದೇಹಗಳು ಲಭಿಸಿದೆ ಎಂದು ಹೇಳಿಕೆ ನೀಡಿದ್ದರು. ಆದರೆ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆಗೂ ಲಭಿಸಿದೆ ಎನ್ನಲಾದ ಮೃತದೇಹಗಳ ಸಂಖ್ಯೆಯ ನಡುವೆ ವ್ಯತ್ಯಾಸ ಕಂಡುಬಂದಿತ್ತು. ಇದು ಗೊಂದಲಕ್ಕೆ ಕಾರಣವಾಗಿತ್ತು. ಇದೀಗ ಅಂತಿಮವಾಗಿ ಮೃತರ ಸಂಖ್ಯೆಯನ್ನು ಖಚಿತಪಡಿಸಲಾಗಿದೆ.
ಅಂತಿಮವಾಗಿ ಲಂಡನ್‌ಗೆ ತೆರಳುತ್ತಿದ್ದ ಭುಜ್‌ನ ದಹಿಂಸರ್ ನಿವಾಸಿ ಅನಿಲ್ ಲಾಲ್ಜಿ ಖಿಮಾನಿ ಡಿಎನ್‌ಎ ಹೊಂದಿಕೆ ಮಾಡಲಾಗಿದೆ. ಬೋರ್ಡಿಂಗ್ ಪಟ್ಟಿಯಲ್ಲಿ ಹೆಸರಿದ್ದರೂ ಡಿಎನ್‌ಎ ಹೊಂದಾಣಿಕೆ ವಿಳಂಬವಾಗಿದೆ. ತಂದೆ ಲಾಲ್ಜಿಭಾಯಿ ಖಿಮಾನಿ ಅವರಿಗೆ ಮಗನ ದೇಹವನ್ನು ಗುರುತಿಸಲೂ ಸಾಧ್ಯವಾಗದ ಕಾರಣ ಹೆಚ್ಚು ಸಮಯ ತೆಗೆದುಕೊಂಡಿದೆ ಹೇಳಲಾಗಿದೆ. ಸದ್ಯ ಮೃತದೇಹ ಹಸ್ತಾಂತರಿಸಲಾಗಿದೆ.
ಸಿವಿಲ್ ಆಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ. ರಾಕೇಶ್ ಜೋಶಿ ಅವರ ಪ್ರಕಾರ, ಒಟ್ಟು 260 ಮೃತದೇಹಗಳನ್ನು ಹಸ್ತಾಂತರಿಸಲಾಗಿದೆ. ಮೃತರಲ್ಲಿ, 181 ಭಾರತೀಯ ಪ್ರಜೆಗಳಾಗಿದ್ದರೆ, 52 ಯುಕೆ, ಏಳು ಪೋರ್ಚುಗಲ್, ಒಬ್ಬ ಕೆನಡಿಯನ್ ಪ್ರಜೆಗಳಾಗಿದ್ದಾರೆ. ಅಪಘಾತ ನಡೆದ ಸ್ಥಳದಲ್ಲಿದ್ದ 19 ಮಂದಿಯೂ ಮೃತಪಟ್ಟಿದ್ದಾರೆ.
