ಹದಿನಾರನೇ ಹಣಕಾಸು ಆಯೋಗದ ಅಧ್ಯಕ್ಷ, 71 ವರ್ಷ ವಯಸ್ಸಿನ ಅರವಿಂದ್ ಪನಗಾರಿಯಾ ಅವರು ಶನಿವಾರ ರಾಷ್ಟ್ರ ರಾಜಧಾನಿಯಲ್ಲಿ ತಮ್ಮ ಮೊದಲ ಮತ ಚಲಾಯಿಸಿರುವುದಾಗಿ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
“ಪ್ರಾಯಶಃ ಮೊದಲ ಬಾರಿಗೆ ಮತದಾನ ಮಾಡಿದ ಅತೀ ಹಳೆಯ ಮತದಾರ ಎಂಬ ಹೆಗ್ಗಳಿಕೆಯನ್ನು ನಾನು ಹೊಂದಿದ್ದೇನೆ. ಮತ ಚಲಾಯಿಸಿದ ಬಗ್ಗೆ ನಿಜವಾದ ಹೆಮ್ಮೆ” ಎಂದು ತನ್ನ ಎಕ್ಸ್ ಪೋಸ್ಟ್‌ನಲ್ಲಿ ಅರವಿಂದ್ ಪನಗಾರಿಯಾ ಬರೆದುಕೊಂಡಿದ್ದಾರೆ.
Most likely, I have the distinction of being the oldest first-time voter at my polling booth. Real proud of it!! pic.twitter.com/UvmQ6FWJZI
— Arvind Panagariya (@APanagariya) May 25, 2024
71ರ ಹರೆಯದ ಪನಗಾರಿಯಾ ಅವರು ತಮ್ಮ ಮೊದಲ ಮತ ಚಲಾಯಿಸಲು ಉತ್ಸುಕರಾಗಿರುವುದಾಗಿ ಶುಕ್ರವಾರ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಸುದ್ದಿ ವಿವರ | ತೆರಿಗೆ ಪಾಲು ಹಂಚಿಕೆಯಲ್ಲಿ ದಕ್ಷಿಣದ ರಾಜ್ಯಗಳಿಗೆ ನ್ಯಾಯ ಸಿಕ್ಕಿದೆಯೇ?
ಪನಗಾರಿಯಾ ಅವರು ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿದ್ದಾರೆ. ಜಗದೀಶ್ ಭಗವತಿ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಭಾರತೀಯ ರಾಜಕೀಯ ಆರ್ಥಿಕತೆಯ ಪ್ರಾಧ್ಯಾಪಕರಾಗಿದ್ದಾರೆ. ಕಳೆದ ವರ್ಷ ಡಿಸೆಂಬರ್ 31ರಂದು 16ನೇ ಹಣಕಾಸು ಆಯೋಗದ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
2015ರಿಂದ 2017ರವರೆಗೆ ಪನಗಾರಿಯಾ ಅವರು ನೀತಿ ಆಯೋಗದ ಅಧ್ಯಕ್ಷರಾಗಿದ್ದರು. ಅರವಿಂದ್ ಪನಗಾರಿಯಾ ಅವರು ಭಾರತ-ಅಮೆರಿಕನ್ ಪ್ರಮುಖ ಆರ್ಥಿಕ ತಜ್ಞ ಎಂದು ಗುರುತಿಸಿಕೊಂಡಿದ್ದಾರೆ.