ಮಧ್ಯಪ್ರದೇಶದ ಕುರ್ವೈ ಕೆಥೋರಾ ನಿಲ್ದಾಣದಲ್ಲಿ ಭೋಪಾಲ್-ದೆಹಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಒಂದು ಬೋಗಿಯಲ್ಲಿನ ಬ್ಯಾಟರಿ ಪೆಟ್ಟಿಗೆಗೆ ಇಂದು ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿದ್ದು, ಅದೃಷ್ಟವಶಾತ್ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.
ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ರೈಲು ಬೆಳಗ್ಗೆ 5.40 ರ ಸುಮಾರಿಗೆ ಭೋಪಾಲ್‌ನಿಂದ ಹೊರಟು ದೆಹಲಿಯ ಹಜರತ್ ನಿಜಾಮುದ್ದೀನ್ ನಿಲ್ದಾಣವನ್ನು ಮಧ್ಯಾಹ್ನ 1.10 ರ ಸುಮಾರಿಗೆ ತಲುಪುತ್ತದೆ.
ಸ್ಥಳದಲ್ಲಿ ಬೆಂಕಿ ಹೊತ್ತಿಕೊಂಡು ಚಕ್ರಗಳ ಬಳಿಯಿಂದ ಹೊಗೆ ಹೊರಹೊಮ್ಮುವ ಸ್ಥಳದ ದೃಶ್ಯಗಳು ಮಾಧ್ಯಮಗಳಲ್ಲಿ ವರದಿಯಾಗಿದೆ. ಅಗ್ನಿಶಾಮಕ ದಳವು ಕ್ಷಿಪ್ರವಾಗಿ ಬೆಂಕಿಯನ್ನು ನಂದಿಸಿದ್ದು, ಇಲಾಖೆಯು ಘಟನೆಗೆ ಕಾರಣಗಳನ್ನು ಪರೀಕ್ಷಿಸುತ್ತಿದೆ.
ಈ ಸುದ್ದಿ ಓದಿದ್ದೀರಾ? ಚಂದ್ರಯಾನ 3 ಉಡಾವಣೆ| ಎಲ್ಲ ಮಾಜಿ ಪ್ರಧಾನಿಗಳ ದೂರದೃಷ್ಟಿಗೆ ಸಾಕ್ಷಿ: ಖರ್ಗೆ ಶ್ಲಾಘನೆ
ಬೆಂಕಿ, ಬ್ಯಾಟರಿ ಬಾಕ್ಸ್‌ಗೆ ಸೀಮಿತವಾಗಿದೆ. ತಾಂತ್ರಿಕ ಪರೀಕ್ಷೆ ಮುಗಿದ ತಕ್ಷಣ ರಾಷ್ಟ್ರ ರಾಜಧಾನಿಗೆ ರೈಲು ತೆರಳಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ ‘ವಂದೇ ಭಾರತ್’ ಜಾನುವಾರುಗಳು ಗುದ್ದಿ ದೋಷವುಂಟಾಗಿರುವ ಬಗ್ಗೆ ಸುದ್ದಿಯಾಗಿತ್ತು. ಇತ್ತೀಚಿಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸಂಸತ್ತಿಗೆ ನೀಡಿದ ಉತ್ತರದ ಪ್ರಕಾರ, ಕಳೆದ ವರ್ಷ ಜೂನ್ ಮತ್ತು ಡಿಸೆಂಬರ್ ನಡುವೆ, ವಂದೇ ಭಾರತ್ ರೈಲುಗಳು ಪ್ರಾಣಿಗಳ ಘರ್ಷಣೆಯಿಂದ 68 ಪ್ರಕರಣಗಳು ಉಂಟಾಗಿವೆ. ಇದಲ್ಲದೆ ಹಲವು ಕಡೆ ರೈಲಿನ ಮೇಲೆ ಕಲ್ಲು ತೂರಾಟದ ಅನೇಕ ಘಟನೆಗಳು ನಡೆದಿವೆ.