ಪ್ರಯಾಣಿಕರ ದಟ್ಟಣೆಯಿಂದಾಗಿ ರೈಲಿನಿಂದ ಬಿದ್ದು ಐವರು ಸಾನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.
ಮಹಾರಾಷ್ಟ್ರದಲ್ಲಿ ಜನರ ಪ್ರತಿನಿತ್ಯದ ಸಂಚಾರಕ್ಕೆ ರೈಲು ಪ್ರಮುಖ ಸಾರಿಗೆ ವ್ಯವಸ್ಥೆಯಾಗಿದೆ. ಪ್ರತಿ ದಿನ ಲಕ್ಷಾಂತರ ಮಂದಿ ಪ್ರಯಾಣಿಸುತ್ತಾರೆ. ಆದರೆ ಅದಕ್ಕೆ ತಕ್ಕುದಾದ ರೈಲ್ವೆ ವ್ಯವಸ್ಥೆ ಇಲ್ಲ. ಸುರಕ್ಷತೆ ಕ್ರಮವೂ ಇಲ್ಲ ಎಂಬ ಆರೋಪಗಳು ಆಗಾಗೇ ಕೇಳಿಬರುತ್ತಿದೆ.
ಸೋಮವಾರ ಬೆಳಿಗ್ಗೆ ಮುಂಬೈನಲ್ಲಿ ರೈಲಿನಲ್ಲಿ ಪ್ರಯಾಣಿಕರ ಸಂಖ್ಯೆ ಅಧಿಕವಾಗಿದ್ದ ಕಾರಣ ಜನರು ಹೊರಬಿದ್ದಿದ್ದಾರೆ. ಐವರು ಮೃತಪಟ್ಟರೆ ಹಲವು ಮಂದಿ ಗಾಯಗೊಂಡಿದ್ದಾರೆ. ಕೇಂದ್ರ ರೈಲ್ವೆಯ ದಿವಾ ಮತ್ತು ಕೋಪರ್ ರೈಲು ನಿಲ್ದಾಣಗಳ ನಡುವೆ ಈ ಘಟನೆ ಸಂಭವಿಸಿದೆ.
ಇದನ್ನು ಓದಿದ್ದೀರಾ? ಮುಂಬೈನಲ್ಲಿ ಭಾರೀ ಮಳೆ | ನಾಲ್ವರ ಸಾವು; ಶಾಲಾ-ಕಾಲೇಜುಗಳಿಗೆ ರಜೆ
ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್(CSMT) ಕಡೆಗೆ ಹೋಗುತ್ತಿದ್ದ ಸ್ಥಳೀಯ(ಲೋಕಲ್) ರೈಲಿನಲ್ಲಿ 10ರಿಂದ 12 ಪ್ರಯಾಣಿಕರು ಬೋಗಿಗಳಿಂದ ಹೊರ ಬಿದ್ದಿದ್ದಾರೆ. ರೈಲು ತುಂಬಾ ಜನದಟ್ಟಣೆಯಿಂದ ತುಂಬಿತ್ತು. ಘಟನೆ ಸಂಭವಿಸಿದಾಗ ಪ್ರಯಾಣಿಕರು ಬಾಗಿಲಿನಲ್ಲಿ ನೇತಾಡುತ್ತಿದ್ದರು.
HEART BREAKING 💔 The news of 5 people dying after falling from a packed train in Mumbai, the financial capital of India is sad.
— Shruti Dhore (@ShrutiDhore) June 9, 2025
This is the plight of Indian Railways. Almost 7 deaths everyday.
Today marks the completion of "11 years of Amrit Kaal" – and the secrets of Modi's… pic.twitter.com/fK2F7s00gr
ಗಾಯಾಳುಗಳನ್ನು ಕಲ್ವಾ ಆಸ್ಪತ್ರೆಗೆ ಸಾಗಿಸಲಾಗಿದ್ದು, ಐವರು ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಮೃತ ಪ್ರಯಾಣಿಕರು 30–35 ವರ್ಷ ವಯಸ್ಸಿನವರು ಎಂದು ವರದಿಯಾಗಿದೆ. ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ.
ಮುಂಬೈ ಸಬ್‌ಅರ್ಬನ್ ರೈಲ್ವೆಗಾಗಿ ತಯಾರಿಸಲಾಗುತ್ತಿರುವ ರೈಲಿನಲ್ಲಿ ಸ್ವಯಂಚಾಲಿತ ಬಾಗಿಲು ಮುಚ್ಚುವ ಸೌಲಭ್ಯವಿರುವ ರೇಕ್‌ಗಳನ್ನು ಸಿದ್ಧಪಡಿಸಲಾಗುವುದು ಎಂದು ರೈಲ್ವೆ ಮಂಡಳಿ ಸೋಮವಾರ ಘೋಷಿಸಿದೆ. ಸದ್ಯ ಸೇವೆಯಲ್ಲಿರುವ ಬೋಗಿಗಳನ್ನು ಮರುವಿನ್ಯಾಸಗೊಳಿಸಲಾಗುವುದು. ಬಾಗಿಲು ಮುಚ್ಚುವ ಸೌಲಭ್ಯ ಮಾಡಲಾಗುವುದು ಎಂದು ಮಂಡಳಿಯು ಘೋಷಿಸಿದೆ.
