ಟಿ-ಶರ್ಟ್‌ಗಳಲ್ಲಿ ಭೂಗತ ಪಾತಕಿಗಳಾದ ಲಾರೆನ್ಸ್ ಬಿಷ್ಣೋಯಿ ಹಾಗೂ ದಾವೂದ್ ಇಬ್ರಾಹಿಂ ಭಾವಚಿತ್ರ ಬಳಸಿ ಮಾರಾಟ ಮಾಡುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇ ಕಾಮರ್ಸ್ ಕಂಪನಿಗಳಾದ ಫ್ಲಿಪ್‌ಕಾರ್ಟ್, ಅಲಿ ಎಕ್ಸ್‌ಪ್ರೆಸ್, ಟೀಶಾಪರ್ ಹಾಗೂ ಎಟ್‌ಸೇ ಕಂಪನಿಗಳ ವಿರುದ್ಧ ಮಹಾರಾಷ್ಟ್ರ ಸೈಬರ್ ಪೊಲೀಸ್ ಎಫ್‌ಐಆರ್ ದಾಖಲಿಸಿದೆ.
ಟಿ-ಶರ್ಟ್‌ಗಳಲ್ಲಿ ಬಳಸಲಾಗಿರುವ ಈ ಇಬ್ಬರು ಪಾತಕಿಗಳು ದೇಶದ ವಿವಿಧ ರಾಜ್ಯಗಳಲ್ಲಿ ಕೊಲೆ, ಭಯೋತ್ಪಾದಕ ಚಟುವಟಿಕೆ ಸೇರಿದಂತೆ ಹಲವು ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಇಬ್ಬರು ಅಪರಾಧಿಗಳ ಭಾವಚಿತ್ರಗಳನ್ನು ಉತ್ಪನ್ನಗಳಲ್ಲಿ ಬಳಸುವುದರಿಂದ ಯುವ ಸಮೂಗದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಾರಾಷ್ಟ್ರ ರಾಜ್ಯ ಸೈಬರ್ ಇಲಾಖೆಯ ಐಜಿಪಿ ಕಚೇರಿ ಪ್ರಕಟಣೆ ಹೊರಡಿಸಿದ್ದು,ಆಕ್ಷೇಪಾರ್ಹ ಉತ್ಪನ್ನಗಳನ್ನು ಬಳಸಿದ ಇ ಕಾಮರ್ಸ್ ಮಾರಾಟಗಾರ ಕಂಪನಿಗಳಾದ ಫ್ಲಿಪ್‌ಕಾರ್ಟ್, ಅಲಿ ಎಕ್ಸ್‌ಪ್ರೆಸ್,ಟೀಶಾಪರ್ ಹಾಗೂ ಎಟ್ಸೆ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿಳಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ವಕ್ಫ್ ಧರಣಿಗೂ, ಬಿಜೆಪಿ ಬಂಡಾಯಕ್ಕೂ ಶೋಭಾ ನಾಯಕಿಯಾಗಿದ್ದೇಕೆ?
“ಈ ಕ್ರಮವು ಡಿಜಿಟಲ್ ನಿರ್ವಹಣಾ ಸುರಕ್ಷತಾ ನಿರ್ವಹಣೆಗೆ ಕಾಪಾಡಿಕೊಳ್ಳಲು ಹಾಗೂ ಸಾರ್ವಜನಿಕ ಸ್ಥಳದಲ್ಲಿ ಪ್ರಚೋದಕ ವಿಷಯಗಳನ್ನು ಅಸ್ಥಿರಗೊಳಿಸುವುದನ್ನು ತಡೆಯುವುದಕ್ಕೆ ಮಹಾರಾಷ್ಟ್ರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ” ಎಂದು ಪೊಲೀಸ್ ಪ್ರಕಟಣೆಯಲ್ಲಿ ಹೇಳಲಾಗಿದೆ.
“ಇಂತಹ ಉತ್ಪನ್ನಗಳು ಅಪರಾಧ ವ್ಯಕ್ತಿತ್ವವುಳ್ಳವರನ್ನು ಆರಾಧಿಸಲಾಗಿದ್ದು, ಈ ರೀತಿ ಪ್ರಚಾರ ಮಾಡುವುದು ಸಮಾಜಕ್ಕೆ ಹಾನಿಕಾರಕವಾಗಿದ್ದು, ಯುವಕರ ಮನಸ್ಸುಗಳ ಮೇಲೆ ನಕಾರಾತ್ಮಕ ಪ್ರಭಾವ ಬೀರಿ ಅವರ ವ್ಯಕ್ತತ್ವವನ್ನು ಹಾಳು ಮಾಡುತ್ತದೆ. ಮಹಾರಾಷ್ಟ್ರ ಸೈಬರ್ ಇಲಾಖೆ ಇದನ್ನು ಹಾನಿಕಾರಕ ವಸ್ತು ಎಂದು ಪರಿಗಣಿಸಿದ್ದು, ಯುವಕರನ್ನು ತಪ್ಪುದಾರಿಗೆಳೆಯಲು ಉಡುಪುಗಳಂತಹ ಉತ್ಪನ್ನಗಳಲ್ಲಿ ಕ್ರಿಮಿನಲ್ ವ್ಯಕ್ತಿಗಳನ್ನು ಅನಾವರಣಗೊಳಿಸಲಾಗುತ್ತಿದೆ” ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಕಂಪನಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಅಡಿಗಳಲ್ಲಿ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅಡಿಗಳಲ್ಲಿ ಎಫ್‌ಐಆರ್ ದಾಖಲಿಸಲಾದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

