ಆಂಧ್ರಪ್ರದೇಶ | ದೌಲೇಶ್ವರಂನಲ್ಲಿ ಮತ್ತೆ ಪ್ರವಾಹದ ಆತಂಕ; ಹೈಅಲರ್ಟ್‌ ಘೋಷಣೆ

Date:

Advertisements

ಗೋದಾವರಿ ನದಿ ಉಕ್ಕಿ ಹಿಯುತ್ತಿದ್ದು, ನದಿಗೆ ಒಳಹರಿವು ಹೆಚ್ಚಾಗಿದೆ. ಪರಿಣಾಮ, ಗೋದಾವರಿ ಜಲಾನಯ ಪ್ರದೇಶ ಮತ್ತು ಪೋಲಾವರಂ ಹಿನ್ನೀರು ಪ್ರದೇಶಗಳಲ್ಲಿ ‘ಹೈಅಲರ್ಟ್‌’ ಘೋಷಿಸಲಾಗಿದೆ. ಭದ್ರಾಚಲಂ ಮತ್ತು ದೌಲೇಶ್ವರಂ ಪಟ್ಟಣಗಳ ತಗ್ಗು ಪ್ರದೇಶಗಳು ಮುಳುಗಡೆಯಾಗುವ ಸಾಧ್ಯತೆ ಇದ್ದು, ಮತ್ತೆ ಪ್ರವಾಹವಾಗುವ ಆತಂಕ ಎದುರಾಗಿದೆ.

ಶನಿವಾರ ರಾತ್ರಿ 8 ಗಂಟೆಗೆ ಭದ್ರಾಚಲಂನಲ್ಲಿ ನೀರಿನ ಮಟ್ಟ 53.8 ಅಡಿ ಇದ್ದು, ದೌಲೇಶ್ವರಂ ಬ್ಯಾರೇಜ್‌ನಲ್ಲಿ ನೀರಿನ ಮಟ್ಟ 17 ಅಡಿ ಮೀರುತ್ತಿದೆ. ಮುಂದಿನ ದಿನಗಳಲ್ಲಿ ಹಲವು ಪ್ರದೇಶಗಳು ಮುಳುಗಡೆಯಾಗುವ ಸಾಧ್ಯತೆ ಇದ್ದು, ಹೈಅಲರ್ಟ್‌ ಘೋಷಿಸಲಾಗಿದೆ.

ದೌಲೇಶ್ವರಂನ ನದಿ ಸಂರಕ್ಷಣಾಧಿಕಾರಿ ಕಾಶಿ ವಿಶ್ವೇಶ್ವರರಾವ್ ಪ್ರಕಾರ, ಸುಮಾರು 14 ಲಕ್ಷ ಕ್ಯೂಸೆಕ್ ನೀರನ್ನು ಬಂಗಾಳಕೊಲ್ಲಿಗೆ ಬಿಡಲಾಗುತ್ತಿದೆ. ಕೇಂದ್ರ ಜಲ ಆಯೋಗದ ಪ್ರಕಾರ, ಮಹಾರಾಷ್ಟ್ರ, ಛತ್ತೀಸ್‌ಗಢ ಮತ್ತು ಒಡಿಶಾದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಕಾರಣ ಗೋದಾವರ ಉಕ್ಕು ಹರಿಯುತ್ತಿದ್ದು, ಮುಂದಿನ ಮೂರು ದಿನಗಳಲ್ಲಿ ಪ್ರವಾಹದ ಒಳಹರಿವು ಹೆಚ್ಚಾಗುವ ನಿರೀಕ್ಷೆಯಿದೆ.

Advertisements

ಪ್ರವಾಹ ಪರಿಹಾರ ಕಾರ್ಯಾಚರಣೆಗಾಗಿ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಿಂದ 21,051 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ. 13,289 ಜನರನ್ನು 82 ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಈಗಾಗಲೇ, ವೇಲೇರುಪಾಡು ಮತ್ತು ಕುಕ್ಕುನೂರು ಮಂಡಲಗಳು ಪ್ರವಾಹಕ್ಕೆ ಸಿಲುಕಿವೆ. ಈ ಪ್ರದೇಶದ ಚಿಂತೂರು, ಯೆಟಪಾಕ, ಕುನವರಂ, ವಿಆರ್ ಪುರಂ ಮಂಡಲಗಳಲ್ಲಿ ಗ್ರಾಮಗಳು ಮತ್ತು ಜಮೀನುಗಳು ಮುಳುಗಡೆಯಾಗಿವೆ. ಪ್ರವಾಹ ಪೀಡಿತ ಜಿಲ್ಲೆಗಳ ವೇಲೇರುಪಾಡು, ಸೀತಾಗ್ರಾಮ, ಚಿಂತೂರು, ವಿಆರ್ ಪುರಂ, ಜಂಗಾರೆಡ್ಡಿಗುಡೆಂ, ಅಮಲಾಪುರಂ, ಕುನವರಂಗಳಲ್ಲಿ ಪ್ರವಾಹದ ಮಟ್ಟ ಹೆಚ್ಚಾದರೆ ಕ್ಷಿಪ್ರ ಕಾರ್ಯಾಚರಣೆಗೆ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಸಿಬ್ಬಂದಿಗಳಮನ್ನು ನಿಯೋಜಿಸಲಾಗಿದೆ.

newindianexpress%2F2024 07%2F9ab81b54 bed6 4b91 a323 110381ebef69%2Fwarning

ಕೃಷ್ಣಾ ನದಿಯಲ್ಲಿ ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ಐತಿಹಾಸಿಕ ಸಂಗಮೇಶ್ವರ ಸ್ವಾಮಿ ದೇವಸ್ಥಾನ ಮುಳುಗಡೆಯಾಗಿದೆ. ದೇವಾಲಯದ ಗೋಪುರಗಳು ಮಾತ್ರ ಗೋಚರಿಸುತ್ತಿವೆ. ಕೊತಪಲ್ಲಿ ಮಂಡಲದಲ್ಲಿರುವ ಈ ದೇವಾಲಯವು ಪ್ರತಿ ವರ್ಷ ಎಂಟು ತಿಂಗಳ ಕಾಲ ನೀರಿನಲ್ಲಿ ಮುಳುಗಿರುತ್ತದೆ. ನಾಲ್ಕು ತಿಂಗಳು ಮಾತ್ರ ಭಕ್ತರಿಗೆ ಕಾಣಸಿಗುತ್ತದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X