ಸರ್ಕಾರಿ ನಿವಾಸದಲ್ಲೇ ಇರುವ ಮಾಜಿ ಸಿಜೆಐ ಚಂದ್ರಚೂಡ್; ಖಾಲಿ ಮಾಡಿಸಲು ಕೇಂದ್ರಕ್ಕೆ ಸುಪ್ರೀಂ ಪತ್ರ

Date:

Advertisements

ಭಾರತದ ಮಾಜಿ ಮುಖ್ಯ ನ್ಯಾಯಾಧೀಶ (ಸಿಜೆಐ) ಡಿ.ವೈ ಚಂದ್ರಚೂಡ್ ಅವರು ತಮ್ಮ ನಿವೃತ್ತಿಯ ಬಳಿಕವೂ ಮುಖ್ಯ ನ್ಯಾಯಾಧೀಶರ ಅಧಿಕೃತ ನಿವಾಸದಲ್ಲೇ ವಾಸಿಸುತ್ತಿದ್ದಾರೆ ಎಂಬುದನ್ನು ಸುಪ್ರೀಂ ಕೋರ್ಟ್‌ ಗಮನಿಸಿದೆ. ನ್ಯಾಯಾಡಳಿದ ಆಡಳಿತವು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ಬಂಗಲೆಯನ್ನು ಖಾಲಿ ಮಾಡಿಸಿ ನ್ಯಾಯಾಲಯದ ವಸತಿ ನಿಲಯಕ್ಕೆ ಹಿಂತಿರುಗಿಸುವಂತೆ ಸೂಚಿಸಿದೆ.

ಸುಪ್ರೀಂ ಕೋರ್ಟ್‌ನಲ್ಲಿ ಪ್ರಸ್ತುತ ಸಿಜೆಐ ಬಿ.ಆರ್ ಗವಾಯಿ ಸೇರಿದಂತೆ 33 ನ್ಯಾಯಾಧೀಶರು ಕಾರ್ಯನಿರ್ವಹಿಸುತ್ತಿದ್ದಾರೆ. ನ್ಯಾಯಾಲಯಕ್ಕೆ 34 ನ್ಯಾಯಾಧೀಶರ ನೇಮಕಕ್ಕೆ ಅನುಮೋದಿಸಲಾಗಿದೆ. ಆದಾಗ್ಯೂ, ಓರ್ವ ನ್ಯಾಯಾಧೀಶರ ಕೊರತೆ ಇದೆ. ಆದಾಗ್ಯೂ, ಇನ್ನೂ ನಾಲ್ವರು ನ್ಯಾಯಾಧೀಶರಿಗೆ ಸರ್ಕಾರಿ ವಸತಿ ಹಂಚಿಕೆಯಾಗಿಲ್ಲ. ನಾಲ್ವರಲ್ಲ ಒಬ್ಬರು ಸರ್ಕಾರಿ ಅತಿಥಿ ಗೃಹದಲ್ಲಿ ವಾಸಿಸುತ್ತಿದ್ದಾರೆ. ನ್ಯಾಯಾಧೀಶರಿಗೆ ವಸತಿ ಹಂಚಿಕೆ ಮಾಡಲು ಚಂದ್ರಚೂಡ್ ಅವರು ನಿವಾಸವನ್ನು ಖಾಲಿ ಮಾಡಬೇಕಾದ ಅಗತ್ಯವಿದೆ ಎಂಬುದನ್ನು ನ್ಯಾಯಾಲಯ ಗಮನಿಸಿದೆ.

ಡಿ.ವೈ ಚಂದ್ರಚೂಡ್ ಅವರು 2024ರ ನವೆಂವರ್ 10ರಂದು ನಿವೃತ್ತರಾದರು. ಸರ್ಕಾರಿ ನಿಯಮಗಳ ಪ್ರಕಾರ, ಸೇವೆ ಸಲ್ಲಿಸುತ್ತಿರುವ ಮುಖ್ಯ ನ್ಯಾಯಾಧೀಶರು ತಮ್ಮ ಅಧಿಕಾರಾವಧಿಯಲ್ಲಿ ‘ಟೈಪ್ VIII’ ಬಂಗಲೆಯಲ್ಲಿ ವಾಸಿಸುವ ಅರ್ಹತೆ ಹೊಂದಿರುತ್ತಾರೆ. ನಿವೃತ್ತಿಯ ನಂತರ, ಅವರು ಆರು ತಿಂಗಳವರೆಗೆ ಬಾಡಿಗೆ ರಹಿತವಾಗಿ ‘ಟೈಪ್ VII’ ಸರ್ಕಾರಿ ಬಂಗಲೆಯಲ್ಲಿ ವಾಸಿಸಬಹುದು. ಆದರೆ, ಚಂದ್ರಚೂಡ್‌ ಅವರು ನಿವೃತ್ತಿಯಾಗಿ 8 ತಿಂಗಳುಗಳು ಕಳೆದರೂ ಇನ್ನೂ ಟೈಪ್ VIII ಬಂಗಲೆಯಲ್ಲಿಯೇ ವಾಸಿಸುತ್ತಿದ್ದಾರೆ.

Advertisements

ಚಂದ್ರಚೂಡ್ ಅವರ ನಿವೃತ್ತಿಯ ಬಳಿಕ ಇಬ್ಬರು ಭಾರತದ ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ. ಚಂದ್ರಚೂಡ್ ಬಳಿಕ ಸಂಜೀವ್ ಖನ್ನಾ ಅವರು ಸಿಜೆಐ ಆಗಿದ್ದರು. ಇತ್ತೀಚೆಗೆ, ಅವರೂ ನಿವೃತ್ತರಾಗಿದ್ದು, ಪ್ರಸ್ತುತ ಸಿಜೆಐ ಆಗಿ ಬಿ.ಆರ್. ಗವಾಯಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಇಬ್ಬರೂ ಮುಖ್ಯ ನ್ಯಾಯಮೂರ್ತಿಗಳಿಗಾಗಿ ಇರುವ ‘ಕೃಷ್ಣ ಮೆನನ್ ಮಾರ್ಗ್’ ಬಂಗಲೆ-5ಕ್ಕೆ ಸ್ಥಳಾಂತರಗೊಳ್ಳದೇ, ಹಿಂದೆ ತಾವಿದ್ದ ನಿವಾಸದಲ್ಲೇ ಇರಲು ನಿರ್ಧರಿಸಿದ್ದರಿಂದ, ಈವರೆಗೆ ಚಂದ್ರಚೂಡ್ ಅವರು ಬಂಗಲೆ ಖಾಲಿ ಮಾಡದೇ ಇರುವ ವಿಚಾರದ ಬಗ್ಗೆ ಹೆಚ್ಚಿನ ಗಮನ ಕೊಡಲಾಗಿರಲಿಲ್ಲ. ಆದರೆ, ಈಗ ಇತರ ನ್ಯಾಯಾಧೀಶರಿಗೆ ಬಂಗಲೆ ಹಂಚಿಕೆಯಲ್ಲಿ ಕೊರತೆಯಾಗಿದ್ದು, ಚಂದ್ರಚೂಡ್ ಅವರು ನ್ಯಾಯಾಧೀಶರ ನಿವಾಸವನ್ನು ಖಾಲಿ ಮಾಡದೇ ಇರುವುದು ಮುನ್ನೆಲೆಗೆ ಬಂದಿದೆ.

ಇದೀಗ, ಸುಪ್ರೀಂ ಕೋರ್ಟ್ ಆಡಳಿತವು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಕ್ಕೆ ಪತ್ರ ಬರೆದಿದ್ದು, ಬಂಗಲೆಯನ್ನು ತಕ್ಷಣವೇ ಖಾಲಿ ಮಾಡಿಸುವಂತೆ ಒತ್ತಾಯಿಸಿದೆ. “ನಿವೃತ್ತ ನ್ಯಾಯಮೂರ್ತಿ ಡಾ. ಡಿ.ವೈ ಚಂದ್ರಚೂಡ್ ಅವರಿಂದ ಕೃಷ್ಣ ಮೆನನ್ ಮಾರ್ಗದಲ್ಲಿರುವ ಬಂಗಲೆಯ ಸಂಖ್ಯೆ 5ಅನ್ನು ಯಾವುದೇ ವಿಳಂಬವಿಲ್ಲದೆ ಖಾಲಿ ಮಾಡಿಸುವಂತೆ ನಾನು ನಿಮ್ಮನ್ನು ವಿನಂತಿಸುತ್ತೇನೆ. ಏಕೆಂದರೆ, ಚಂದ್ರಚೂಡ್ ಅವರು ಸರ್ಕಾರ ಬಂಗಲೆಯಲ್ಲಿ ವಾಸಿಸಲು ಅನುಮತಿಸಲಾಗುವ ಸಮಯವು 2025ರ ಮೇ 31ಕ್ಕೆ ಮುಗಿದಿದೆ. ಜೊತೆಗೆ, 2022ರ ನಿಯಮಗಳಲ್ಲಿ ಒಂದಾದ ನಿಯಮ 3B ಅಡಿಯಲ್ಲಿ ಒದಗಿಸಲಾಗಿರುವ ಆರು ತಿಂಗಳ ಅವಧಿ ಕೂಡ 2025 ಮೇ 10ಕ್ಕೆ ಮುಕ್ತಾಯಗೊಂಡಿದೆ” ಎಂದು ಪತ್ರದಲ್ಲಿ ಸುಪ್ರೀಂ ಕೋರ್ಟ್‌ ಅಧಿಕಾರಿ ತಿಳಿಸಿದ್ದಾರೆ.

ಈ ಲೇಖನ ಓದಿದ್ದೀರಾ?: ಜಾತ್ಯತೀತತೆ, ಸಮಾಜವಾದದ ಪ್ರಖರ ಪ್ರತಿಪಾದಕ ಬುದ್ಧ; ಇದನ್ನು ಮರೆಮಾಚಲಾಗದು ಆರ್‌ಎಸ್‌ಎಸ್

ವೈಯಕ್ತಿಕ ಕಾರಣಗಳು ವಿಳಂಬಕ್ಕೆ ಕಾರಣವಾಗಿವೆ ಮತ್ತು ಸುಪ್ರೀಂ ಕೋರ್ಟ್ ಆಡಳಿತಕ್ಕೆ ಈ ಬಗ್ಗೆ ತಿಳಿಸಲಾಗಿದೆ ಎಂದು ನ್ಯಾಯಮೂರ್ತಿ ಚಂದ್ರಚೂಡ್ ಹೇಳಿಕೊಂಡಿದ್ದಾರೆ. “ನಾನು ಸರ್ಕಾರಿ ವಸತಿ ಸೌಕರ್ಯದಲ್ಲಿ ಹೆಚ್ಚು ಕಾಲ ಉಳಿಯಲು ಬಯಸುವುದಿಲ್ಲ. ಆದರೆ, ನನ್ನ ಹೆಣ್ಣುಮಕ್ಕಳಿಗೆ ವಿಶೇಷ ಸೌಕರ್ಯಗಳಿರುವ ಮನೆ ಬೇಕು. ಅಂತಹ ಮನೆಗಾಗಿ ನಾನು ಫೆಬ್ರವರಿಯಿಂದ ಹುಡುಕಾಟ ನಡೆಸುತ್ತಿದ್ದೇನೆ. ಸೇವಾ ಅಪಾರ್ಟ್‌ಮೆಂಟ್‌ಗಳು ಮತ್ತು ಹೋಟೆಲ್‌ಗಳನ್ನು ಸಹ ನೋಡಿದ್ದೇನೆ. ಆದರೆ, ಅವುಗಳಲ್ಲಿ ಯಾವುದೂ ನಮಗೆ ಅಗತ್ಯವಿರುವ ರೀತಿಯಲ್ಲಿಲ್ಲ” ಎಂದು ಚಂದ್ರಚೂಡ್ ಹೇಳಿರುವುದಾಗಿ ‘ಎನ್‌ಡಿಟಿವಿ’ ವರದಿ ಮಾಡಿದೆ.

“ಏಪ್ರಿಲ್ 28 ರಂದು, ನಾನು ಅಂದಿನ ಸಿಜೆಐ ಖನ್ನಾ ಅವರಿಗೆ ಪತ್ರ ಬರೆದಿದ್ದೆ. ಸೂಕ್ತ ವಸತಿ ಸೌಕರ್ಯವನ್ನು ಹುಡುಕುತ್ತಿದ್ದೇನೆ. ಜೂನ್ 30 ರವರೆಗೆ ಬಂಗಲೆಯಲ್ಲಿ ಉಳಿಯಲು ಅವಕಾಶ ನೀಡುವಂತೆ ಕೇಳಿದ್ದೆ. ಆದರೆ, ಅವರಿಂದ ಯಾವುದೇ ಉತ್ತರ ಬಂದಿಲ್ಲ. ಇತ್ತೀಚೆಗೆ, ಹಾಲಿ ಸಿಜೆಐ ಬಿ.ಆರ್ ಗವಾಯಿ ಅವರೊಂದಿಗೆ ಮಾತನಾಡಿದ್ದೇನೆ. ಸಾಧ್ಯವಾದಷ್ಟು ಬೇಗ ನಿವಾಸ ಖಾಲಿ ಮಾಡುವುದಾಗಿ ತಿಳಿಸಿದ್ದೇನೆ” ಎಂದು ಹೇಳಿದ್ದಾರೆ.

“ಸರ್ಕಾರವು ನಮಗೆ ತಾತ್ಕಾಲಿಕವಾಗಿ ನಿವಾಸವೊಂದನ್ನು ಬಾಡಿಗೆಗೆ ನೀಡಿದೆ. ಆದರೆ, ಆ ಬಂಗಲೆಯನ್ನು ಎರಡು ವರ್ಷಗಳಿಂದ ಬಳಸಲಾಗಿಲ್ಲ. ಅದರ ದುರಸ್ತಿ ಮತ್ತು ನವೀಕರಣ ನಡೆಯುತ್ತಿದೆ. ಅದೆಲ್ಲವೂ ಮುಗಿದ ಕೂಡಲೇ ನಾವು ಸ್ಥಳಾಂತರಗೊಳ್ಳುತ್ತೇವೆ. ಈಗಾಗಲೇ ನಮ್ಮ ಹೆಚ್ಚಿನ ವಸ್ತುಗಳು ಪ್ಯಾಕ್ ಆಗಿವೆ. ಸರ್ಕಾರಿ ಬಂಗಲೆಯಲ್ಲಿ ಹೆಚ್ಚು ದಿನ ಉಳಿಯಬೇಕೆಂಬ ಆಸೆಯೇನೂ ನಮಗಿಲ್ಲ. ಆದರೆ, ಅನಿವಾರ್ಯವಾಗಿದೆ. ನಮಗೆ ಬೇರೆ ಆಯ್ಕೆಗಳಿಲ್ಲ” ಎಂದು ಚಂದ್ರಚೂಡ್ ವಿವರಿಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X