ವರ್ಣಭೇದದ ವಿರುದ್ಧ ಧ್ವನಿ ಎತ್ತಿದ್ದ ಖ್ಯಾತ ರೂಪದರ್ಶಿ ಸ್ಯಾನ್ ರೆಚಲ್ ಆತ್ಮಹತ್ಯೆ

Date:

ವರ್ಣಭೇದದ ವಿರುದ್ಧ ಧ್ವನಿ ಎತ್ತಿದ್ದ, ಖ್ಯಾತ ರೂಪದರ್ಶಿ ಸ್ಯಾನ್ ರೆಚಲ್ ಗಾಂಧಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 26 ವರ್ಷದ ರೆಚಲ್ ಜುಲೈ 5ರಂದು ನಿದ್ರೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅವರನ್ನು ಮೊದಲು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

- Advertisement -

ಚಿಕ್ಕ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡ ರೆಚಲ್, ಮಾಡೆಲಿಂಗ್ ವೃತ್ತಿಜೀವನದಲ್ಲಿ ತೊಡಗಿಕೊಂಡರು. ವರ್ಣಭೇದದ ವಿರುದ್ಧ ಧ್ವನಿ ಎತ್ತಿದ್ದವರು ರೆಚಲ್. ‘ಬಿಳಿ ಬಣ್ಣ’ದ ತ್ವಚೆಯೇ ಇರಬೇಕು ಎಂಬ ಮಾನದಂಡಗಳನ್ನು ಬಹಿರಂಗವಾಗಿ ಪ್ರಶ್ನಿಸಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

​ಮೋದಿ-ಶಾ ಅಸಲಿ ಮುಖ ಅನಾವರಣ: ಅಂಕಿತಾ ಭಂಡಾರಿ ಕೊಲೆ...

ವೇದಿಕೆಗಳಲ್ಲಿ ‘ಬೇಟಿ ಬಚಾವೋ’ ಎಂದು ಭಾಷಣ ಬಿಗಿಯುವ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು, ಹಾಡಹಗಲೇ ಕೊಲೆಯಾದ ಬಡ ಯುವತಿಯ ಸಾವಿನ ಸುತ್ತ ಕಳಂಕದ ಹುತ್ತ ಹೊತ್ತಿರುವ...

ನಿದ್ರೆಯಲ್ಲೂ ಮಿದುಳಿಗೆ ಮಸಾಜ್‌! ಮಾತ್ರೆಯಿಲ್ಲದೆ ಗಾಢ ನಿದ್ರೆ ತರಬಲ್ಲದೇ...

ಒತ್ತಡದ ಬದುಕಿನಲ್ಲಿ ನೆಮ್ಮದಿಯ ನಿದ್ರೆ ಎನ್ನುವುದೇ ಹಲವರ ಕನಸು. ನಿದ್ರೆಗಾಗಿ ಮಾತ್ರೆಗಳ ಮೊರೆ ಹೋಗುವವರ ಸಂಖ್ಯೆಯೂ ಕಡಿಮೆಯಿಲ್ಲ. ಇಂತಹವರ ಸಮಸ್ಯೆಗೆ ಪರ್ಯಾಯವೊಂದು ಸಿಕ್ಕರೆ ಹೇಗಿರಬಹುದು? ಮೆದುಳಿಗೆ ಅಲ್ಟ್ರಾಸೌಂಡ್‌ ತರಂಗಗಳ ಮೂಲಕ ಪ್ರಚೋದನೆ ನೀಡಿ...

ಸಾರ್ವಜನಿಕ ಸಭ್ಯತೆ ಮತ್ತು ಹೆಣ್ಣುಮಕ್ಕಳು ಮಾಡಿಕೊಳ್ಳುವ ಲೆಕ್ಕಾಚಾರಗಳು

ಫೀಲ್ಡ್‌ಗೆ ಇಳಿದು ಕೆಲಸ ಮಾಡುವಾಗ ಮಹಿಳಾ ಪತ್ರಕರ್ತೆಯರು ಎದುರಿಸುವ ರಿಸ್ಕ್ ಮತ್ತು ವರದಿ ಮಾಡುವ ಜವಾಬ್ದಾರಿ- ಇವೆರಡನ್ನೂ ನಿಭಾಯಿಸಬೇಕಾದಾಗ ಮಾಡಿಕೊಳ್ಳುವ ಲೆಕ್ಕಾಚಾರಗಳ ಬಗೆಗಿನ ಒಂದು ಸ್ವಾನುಭವ. ಕಳೆದ ಕೆಲವು ವಾರಗಳಿಂದ ಭಾರತದಲ್ಲಿ ಹೆಣ್ಣುಮಕ್ಕಳ ಮೇಲೆ...

ಇದನ್ನು ಓದಿದ್ದೀರಾ? ಅವಮಾನ ಅನುಭವಿಸಿದ್ದ ನಾಯಕ: ದಕ್ಷಿಣ ಆಫ್ರಿಕಾಕ್ಕೆ 27 ವರ್ಷದ ಬಳಿಕ ಐಸಿಸಿ ಟ್ರೋಫಿ ತಂದುಕೊಟ್ಟ

2019ರಲ್ಲಿ ಮಿಸ್ ಡಾರ್ಕ್ ಕ್ವೀನ್ ತಮಿಳುನಾಡು ಪ್ರಶಸ್ತಿಯನ್ನು ಗೆದ್ದಿರುವ ರೆಚಲ್, ನಂತರ 2021ರಲ್ಲಿ ಮಿಸ್ ಪುದುಚೇರಿಯನ್ನು ಗೆದ್ದರು. ಹಾಗೆಯೇ ಲಂಡನ್, ಜರ್ಮನಿ, ಫ್ರಾನ್ಸ್‌ನಲ್ಲಿ ಅಂತಾರಾಷ್ಟ್ರೀಯ ಮಾಡೆಲಿಂಗ್ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದರು. ಹಾಗೆಯೇ ಮಹಿಳೆಯರ ಸುರಕ್ಷತಾ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.

ಇತ್ತೀಚೆಗೆ ವಿವಾಹವಾದ ರೆಚಲ್ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ವರದಿಯಾಗಿದೆ. ಈ ಸಂಬಂಧ ಉರುಲೈಯನ್‌ಪೆಟ್ಟೈ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಸಮಸ್ಯೆಗಳ ಬಗ್ಗೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ, ಸಮಾಲೋಚನೆ ನಡೆಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104.
WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

SIR ಪೂರ್ಣಗೊಂಡ ರಾಜ್ಯಗಳಲ್ಲಿ SSR ಪ್ರಕ್ರಿಯೆ: ಕೇಂದ್ರ ಚುನಾವಣಾ ಆಯೋಗ

'ವಿಶೇಷ ಸಮಗ್ರ ಪರಿಷ್ಕರಣೆ' (SIR- Special Intensive Revision) ಪ್ರಕ್ರಿಯೆ ಪೂರ್ಣಗೊಂಡಿರುವ...

ಕನ್ನಾಟ್ ಪ್ಲೇಸ್‌ನಲ್ಲಿ ಸಿಜೆಪಿ ಪ್ರತಿಭಟನೆ: ತಡೆ ನೀಡಲು ದೆಹಲಿ ಹೈಕೋರ್ಟ್ ನಕಾರ

ಮುಖ್ಯ ಚುನಾವಣಾ ಆಯುಕ್ತರ (ಸಿಇಸಿ) ರಾಜೀನಾಮೆಗೆ ಆಗ್ರಹಿಸಿ ಅಕ್ಟೋಬರ್ 16ರಂದು ದೆಹಲಿಯ...

ಜಂತರ್ ಮಂತರ್ ಪ್ರತಿಭಟನಾ ಸ್ಥಳ ರದ್ದು: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

ನವದೆಹಲಿಯ ಐತಿಹಾಸಿಕ 'ಜಂತರ್ ಮಂತರ್' ಅನ್ನು ಪ್ರತಿಭಟನಾ ಸ್ಥಳಗಳ ಪಟ್ಟಿಯಿಂದ ಅಧಿಕೃತವಾಗಿ...