ಶಿಕ್ಷಕರೊಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಮಾಜಿ ಶಾಸಕ ಹಾಗೂ ಭೂಗತ ಪಾತಕಿ ಮುಖ್ತಾರ್ ಅನ್ಸಾರಿ ಅವರಿಗೆ ಘಾಜಿಪುರ ಸಂಸದ/ಶಾಸಕ ನ್ಯಾಯಾಲಯ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.
2009ರಲ್ಲಿ ಘಾಜೀಪುರದ ಕರಂಡಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶಿಕ್ಷಕರಾಗಿದ್ದ ಕಪಿಲ್ ದಿಯೊ ಸಿಂಗ್ ಎಂಬುವವರ ಹತ್ಯೆ 2010ರ ಕೊಲೆ ಯತ್ನ ಪ್ರಕರಣದಲ್ಲಿ ಶಿಕ್ಷೆ ವಿಧಿಸಲಾಗಿದೆ.
ಶಿಕ್ಷೆಯ ಜೊತೆ ಮುಖ್ತಾರ್ ಅನ್ಸಾರಿ 5 ಲಕ್ಷ ರೂ. ದಂಡವನ್ನು ವಿಧಿಸಲಾಗಿದೆ. ಅನ್ಸಾರಿಯ ಆಪ್ತ ಸಹಾಯಕ ಅವರ ಆಪ್ತ ಸಹಾಯಕ ಸೋನು ಯಾದವ್ ಎಂಬಾತನಿಗೆ 2 ಲಕ್ಷ ರೂಪಾಯಿ ದಂಡದೊಂದಿಗೆ ಐದು ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿದೆ.
ಪ್ರಸ್ತುತ ಬಂದಾ ಜೈಲಿನಲ್ಲಿರುವ ಮುಖ್ತಾರ್ ಅನ್ಸಾರಿಗೆ ಕಳೆದ 13 ತಿಂಗಳ ಅವಧಿಯಲ್ಲಿ ಇದು ಆರನೇ ಶಿಕ್ಷೆಯಾಗಿದೆ. 2010ರ ದರೋಡೆಕೋರ ಪ್ರಕರಣದಲ್ಲಿ ಘಾಜಿಪುರ ಸಂಸದ/ಶಾಸಕ ನ್ಯಾಯಾಲಯ ಗುರುವಾರ ಅನ್ಸಾರಿ ಅವರನ್ನು ದೋಷಿ ಎಂದು ತೀರ್ಪು ನೀಡಿತ್ತು.
ಐದು ಬಾರಿ ಶಾಸಕರಾಗಿರುವ ಅನ್ಸಾರಿ ವಿರುದ್ಧ ಕೊಲೆ, ಅಪಹರಣ, ಸುಲಿಗೆ, ಬೆದರಿಕೆ, ಅಕ್ರಮ ಶಸ್ತ್ರಾಸ್ತ್ರ ಹೊಂದುವಿಕೆ ಇತ್ಯಾದಿ ಸೇರಿ 60 ಕ್ರಿಮಿನಲ್ ಪ್ರಕರಣಗಳಿವೆ.
ಘಾಜಿಪುರ ಹೆಚ್ಚುವರಿ ಜಿಲ್ಲಾ ಸರ್ಕಾರಿ ವಕೀಲ (ಕ್ರಿಮಿನಲ್) ನೀರಜ್ ಶ್ರೀವಾಸ್ತವ ಅವರ ಪ್ರಕಾರ, ಸಬೂವಾ ನಿವಾಸಿ ಕಪಿಲ್ ದಿಯೋ ಸಿಂಗ್ ಸಬುವಾ ಹತ್ಯೆ ಪ್ರಕರಣದಲ್ಲಿ 2009ರಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಈ ಸುದ್ದಿ ಓದಿದ್ದೀರಾ? ನಾರಾಯಣ ಮೂರ್ತಿಯ ವಾರಕ್ಕೆ 70 ಗಂಟೆ ದುಡಿಮೆ ಹೇಳಿಕೆ: ನೆಟ್ಟಿಗರಿಂದ ಆಕ್ರೋಶ
ಈ ವರ್ಷ ಜೂನ್ 5 ರಂದು ವಾರಣಾಸಿ ಸಂಸದ/ಶಾಸಕ ನ್ಯಾಯಾಲಯವು ಅನ್ಸಾರಿ ಅವರನ್ನು ಈ ಹಿಂದೆ ಅಪರಾಧಿ ಎಂದು ಘೋಷಿಸಿತ್ತು. ಮಾಜಿ ಕಾಂಗ್ರೆಸ್ ಶಾಸಕ ಮತ್ತು ಹಾಲಿ ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್ ರೈ ಅವರ ಹಿರಿಯ ಸಹೋದರ ಅವದೇಶ್ ರೈ ಅವರ ಹತ್ಯೆಗೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.
ಏಪ್ರಿಲ್ 29, 2023 ರಂದು, 2005 ರ ನವೆಂಬರ್ 29 ರಂದು ಬಿಜೆಪಿ ಶಾಸಕ ಕೃಷ್ಣಾನಂದ ರೈ ಹತ್ಯೆಗೆ ಸಂಬಂಧಿಸಿದಂತೆ 2007 ರಲ್ಲಿ ಅನ್ಸಾರಿ ವಿರುದ್ಧ ಘಾಜಿಪುರ ಸಂಸದ/ಶಾಸಕ ನ್ಯಾಯಾಲಯವು 10 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು.
2007 ರ ಇನ್ನೊಂದು ಪ್ರಕರಣದಲ್ಲಿ, ಮುಖ್ತಾರ್ ಮತ್ತು ಆತನ ಸಹೋದರ ಸಂಸದ ಅಫ್ಜಲ್ ಅನ್ಸಾರಿ ತಪ್ಪಿತಸ್ಥರು ಎಂದು ತೀರ್ಪು ನೀಡಿ ಕ್ರಮವಾಗಿ ಹತ್ತು ವರ್ಷ ಮತ್ತು ನಾಲ್ಕು ವರ್ಷಗಳ ಶಿಕ್ಷೆಯನ್ನು ವಿಧಿಸಲಾಗಿತ್ತು.
ಉತ್ತರ ಪ್ರದೇಶ ಪೊಲೀಸ್ ಅಧಿಕಾರಿಗಳ ಪ್ರಕಾರ, ಇಲ್ಲಿಯವರೆಗೆ, ದರೋಡೆಕೋರ ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ ಅನ್ಸಾರಿ ಮತ್ತು ಅವರ ತಂಡದ ಸದಸ್ಯರ ಒಡೆತನದ 300 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಅಲ್ಲದೆ 284.77 ಲಕ್ಷ ರೂ. ಮೌಲ್ಯದ ಆಸ್ತಿಯನ್ನು ನಾಶಪಡಿಸಲಾಗಿದೆ.