ಮುಂಬೈನ ಕುರ್ಲಾ ರೈಲು ನಿಲ್ದಾಣದ ಬಳಿ ಸೋಮವಾರ ರಾತ್ರಿ ನಡೆದ ಭೀಕರ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ. 29 ಮಂದಿ ಗಾಯಗೊಂಡಿದ್ದಾರೆ.
ಜನದಟ್ಟಣೆಯ ಮಾರುಕಟ್ಟೆಯ ಪ್ರದೇಶದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬೆಸ್ಟ್ ಬಸ್ ಫುಟ್‌ಪಾತ್‌ಗೆ ನುಗ್ಗಿ ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ನಾಲ್ವರು ಸಾವನ್ನಪ್ಪಿದ್ದಾರೆ. ಮೇಲ್ನೋಟಕ್ಕೆ ಬಸ್ ಬ್ರೇಕ್ ಫೇಲ್ ಆಗಿ ಈ ದುರ್ಘಟನೆ ಸಂಭವಿಸಿರಬಹುದು ಎನ್ನಲಾಗಿದೆ.
ಇದನ್ನು ಓದಿದ್ದೀರಾ? ಮುಂಬೈ ಪೊಲೀಸ್ ಸೋಗಿನಲ್ಲಿ ಪೊಲೀಸ್‌ಗೆ ಕರೆ ಮಾಡಿ ಸಿಕ್ಕಿಬಿದ್ದ ವಂಚಕ; ವಿಡಿಯೋ ವೈರಲ್
ಮೃತರನ್ನು ಶಿವಂ ಕಶಪ್ (18), ಕಾನಿಸ್ ಫಾತಿಮಾ ಗುಲಾಮ್ ಕಾಜಿ (55) ಮತ್ತು ಅಫೀಲ್ ಅಬ್ದುಲ್ ಸಲೀಮ್ ಶಾ (19) ಎಂದು ಗುರುತಿಸಲಾಗಿದೆ. ನಾಲ್ಕನೇ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಇನ್ನು ಹಲವು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
🚨 Tragic accident: BEST bus #332 (Kurla-Andheri route) Royal Hotel, Kurla. 3 dead, 20 injured after bus collides with multiple vehicles near Anjum-e-Islam school on SG Barve Marg. Initial reports suggest brake failure. Emergency services on scene. #Mumbai #KurlaAccident pic.twitter.com/E5flJdrbRX
— Tabrej Khan (Rajput) 🇮🇳 (@tabrej) December 9, 2024
ಕುರ್ಲಾ ವೆಸ್ಟ್‌ನ ಎಸ್‌ಜಿ ಬರ್ವೆ ಮಾರ್ಗದಲ್ಲಿರುವ ಅಂಜುಮನ್-ಎ-ಇಸ್ಲಾಂ ಶಾಲೆಯ ಎದುರು ರಾತ್ರಿ 9.50ರ ಸುಮಾರಿಗೆ ಈ ಘಟನೆ ನಡೆದಿದೆ. ಎಲೆಕ್ಟ್ರಿಕ್ ಬಸ್ ಕುರ್ಲಾ ಮತ್ತು ಅಂಧೇರಿ ನಿಲ್ದಾಣಗಳ ನಡುವೆ ಮಾರ್ಗ ಸಂಖ್ಯೆ 332ರಲ್ಲಿ ಸಂಚರಿಸುತ್ತಿತ್ತು.
ಬಸ್ ಚಾಲಕ ಪರಾರಿಯಾಗಲು ಯತ್ನಿಸಿದ್ದು, ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಚಾಲಕ ಸಂಜಯ್ ಮೋರೆ ವಿರುದ್ಧ ಎಫ್‌ಐಆರ್ ದಾಖಲಿಸಿ ಬಂಧಿಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ಸತ್ಯನಾರಾಯಣ್ ತಿಳಿಸಿದ್ದಾರೆ.
