ಆಂಧ್ರಪ್ರದೇಶದ ತಿರುಪತಿಯ ಎರಡು ಪ್ರಮುಖ ಹೋಟೆಲ್‌ಗಳಿಗೆ ಶನಿವಾರ ಹೊಸ ಬಾಂಬ್ ಬೆದರಿಕೆಗಳು ಬಂದಿವೆ. ಇದಾದ ಒಂದು ದಿನದ ನಂತರವೇ ತಿರುಪತಿಯ ಹಲವು ಹೋಟೆಲ್‌ಗಳಿಗೆ ಬಾಂಬ್ ಬೆದರಿಕೆ ಬಂದಿವೆ
ಪೊಲೀಸರು ಹೊಟೇಲ್‌ಗಳಲ್ಲಿ ಸಂಪೂರ್ಣ ಶೋಧ ನಡೆಸಿದ್ದು, ಇದು ಹುಸಿ ಬಾಂಬ್ ಬೆದರಿಕೆ ಎಂಬುದು ಖಚಿತವಾಗಿದೆ. ಇನ್ನು ಬಾಂಬ್ ಬೆದರಿಕೆ ಇಮೇಲ್‌ನಲ್ಲಿ ಉದಯನಿಧಿ ಸ್ಟಾಲಿನ್ ಪತ್ನಿ ಕಿರುತಿಗ ಉದಯನಿಧಿ ಹೆಸರು ಉಲ್ಲೇಖಿಸಲಾಗಿದೆ.
ಜೊತೆಗೆ ತಮಿಳುನಾಡಿನಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಮತ್ತು ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಒಳಗಾಗಿರುವ ಮಾದಕ ವಸ್ತು ಕಳ್ಳಸಾಗಣೆ ಜಾಲದ ಆರೋಪಿ ಜಾಫರ್ ಸಾದಿಕ್ ಹೆಸರನ್ನು ಕೂಡಾ ಉಲ್ಲೇಖಿಸಲಾಗಿದೆ.
ಇದನ್ನು ಓದಿದ್ದೀರಾ? ಇಂಡಿಗೋ, ಏರ್ ಇಂಡಿಯಾ ಸೇರಿ ಮತ್ತೆ 85 ವಿಮಾನಗಳಿಗೆ ಬಾಂಬ್ ಬೆದರಿಕೆ
ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರ ಪತ್ನಿ ‘ಕಿರುತಿಗ ಉದಯನಿಧಿ ಅವರಿಂದ ಗಮನವನ್ನು ಬೇರೆಡೆಗೆ ಸೆಳೆಯಲು’ ಸ್ಫೋಟಗಳನ್ನು ನಡೆಸಲು ತಮಿಳುನಾಡಿನ ಉನ್ನತ ಪೋಲೀಸರು ಪಾಕ್ ಐಎಸ್‌ಐ ಜೊತೆ ಕೈ ಜೋಡಿಸಿದೆ’ ಎಂದು ಇಮೇಲ್‌ನಲ್ಲಿ ಅಸ್ಪಷ್ಟವಾಗಿ ಬರೆಯಲಾಗಿದೆ.
ರಾಜ್ ಪಾರ್ಕ್ ಮತ್ತು ಪೈ ವೈಸ್‌ರಾಯ್ ಹೋಟೆಲ್‌ಗಳಿಗೆ ಕಳುಹಿಸಿದ ಇಮೇಲ್‌ನಲ್ಲಿ, “ಬಿಡಿಡಿಎಸ್ ಬಿಟ್ಟಿರುವ ಹೋಟೆಲ್ ಪೈಪ್‌ಲೈನ್‌ಗಳಲ್ಲಿ ಸಲ್ಫರ್ ಆಧಾರಿತ ಸುಧಾರಿತ ಇಡಿಗಳನ್ನು ಇಡಲಾಗಿದೆ. 10.35ಗೆ ಅದನ್ನು ಸ್ಥಳಾಂತರಿಸಿ” ಎಂದು ಹೇಳಲಾಗಿದೆ.
ಶುಕ್ರವಾರದ ಬಾಂಬ್ ಬೆದರಿಕೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮತ್ತು ಐಎಸ್‌ಐ ಭಾಗಿಯಾಗಿರುವ ಬಗ್ಗೆ ಉಲ್ಲೇಖಿಸಲಾಗಿದೆ. “ಜಾಫರ್ ಸಾದಿಕ್ ಬಂಧನದಿಂದಾಗಿ ಅಂತಾರಾಷ್ಟ್ರೀಯ ಒತ್ತಡ ಅಧಿಕವಾಗಿದೆ. ಪ್ರಕರಣದಲ್ಲಿ ಎಂಕೆ ಸ್ಟಾಲಿನ್ ಅವರ ಕುಟುಂಬದ ಒಳಗೊಳ್ಳುವಿಕೆಯಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಶಾಲೆಗಳಲ್ಲಿ ಇಂತಹ ಸ್ಫೋಟಗಳು ಅಗತ್ಯವಾಗಿವೆ” ಎಂದು ಇಮೇಲ್ ಹೇಳಿದೆ.
ತಮಿಳು ಚಲನಚಿತ್ರ ನಿರ್ಮಾಪಕ ಮತ್ತು ಮಾಜಿ ಡಿಎಂಕೆ ಕಾರ್ಯಕರ್ತ ಜಾಫರ್ ಸಾದಿಕ್ ಅವರನ್ನು ಜುಲೈನಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಪ್ರಕರಣದ ತನಿಖೆ ನಡೆಯುತ್ತಿದೆ.
