ಇಸ್ರೋ ಇಂದು (ಅಕ್ಟೋಬರ್ 21)ರ ಬೆಳಗ್ಗೆ 10.0 ಗಂಟೆ ಸುಮಾರಿಗೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಮಾನವಸಹಿತ ಗಗನಯಾನ ನೌಕೆಯ ಸುರಕ್ಷತಾ ಪ್ರಯೋಗ ವಾಹಕದ ಉಡಾವಣೆ ಯಶಸ್ವಿಯಾಗಿ ನೆರವೇರಿದೆ.
ಕ್ರ್ಯೂ ಮಾಡೆಲ್, ಕ್ರ್ಯೂ ಎಸ್ಕೇಪ್ ಮಾಡೆಲ್ ಒಳಗೊಂಡ ಎರಡೂ ಮಾಡೆಲ್ಗಳನ್ನು ಹೊತ್ತು ರಾಕೆಟ್ ಸಾಗಿದ್ದು ನೌಕೆಯನ್ನು ಭೂಮಿಯಿಂದ 17 ಕಿ.ಮೀ. ಎತ್ತರಕ್ಕೆ ಹಾರಿಸಲಾಯಿತು. ನಂತರ ನೌಕೆಯು ಬಂಗಾಳ ಕೊಲ್ಲಿಯ ಸಮುದ್ರಕ್ಕೆ ಯಶಸ್ವಿಯಾಗಿ ಇಳಿಯಿತು.
“ಯೋಜನೆಯ ಯಶಸ್ಸನ್ನು ಘೋಷಿಸಲು ನಾವು ತುಂಬಾ ಸಂತೋಷಪಡುತ್ತೇವೆ. ಸಿಬ್ಬಂದಿ ತಪ್ಪಿಸಿಕೊಳ್ಳುವ ವ್ಯವಸ್ಥೆಯನ್ನು ಪ್ರದರ್ಶಿಸುವುದು ಕಾರ್ಯಾಚರಣೆಯ ಉದ್ದೇಶವಾಗಿತ್ತು” ಎಂದು ಇಸ್ರೋ ಅಧ್ಯಕ್ಷ ಸೋಮನಾಥನ್ ತಿಳಿಸಿದ್ದಾರೆ.
LAUNCH! ISRO's Gaganyaan test capsule launches on a single L40 booster, derived from the strap-on boosters used on the GSLV Mk. 2 rocket, to an altitude of around 11 – 17 kilometers before a test abort is called.
Overview: https://t.co/ABBf9OL25l…
Livestream:… pic.twitter.com/FW5nif3kuK
— Chris Bergin – NSF (@NASASpaceflight) October 21, 2023
ಗಗನಯಾನವನ್ನು ಬೆಳಿಗ್ಗೆ 8.45ಕ್ಕೆ ಉಡಾವಣೆಗೊಳಿಸಬೇಕಿತ್ತು. ಆದರೆ ತಾಂತ್ರಿಕ ಕಾರಣದಿಂದ ಉಡಾವಣೆಗೂ 5 ಸೆಕೆಂಡ್ ಮೊದಲು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ನಂತರ ತಾಂತ್ರಿಕ ಸಮಸ್ಯೆಗಳನ್ನು ಪತ್ತೆಹಚ್ಚಿ ದೋಷಗಳನ್ನು ಸರಿಪಡಿಸಲಾಗಿತ್ತು. ಹವಾಮಾನ ವೈಪರಿತ್ಯದಿಂದ ಸಮಯವನ್ನು 10 ಗಂಟೆಗೆ ಬದಲಾವಣೆ ಮಾಡಲಾಗಿತ್ತು.
Mission Gaganyaan
TV D1 Test Flight is accomplished.
Crew Escape System performed as intended.
Mission Gaganyaan gets off on a successful note. @DRDO_India@indiannavy#Gaganyaan
— ISRO (@isro) October 21, 2023
ಮೂರು ದಿನಗಳ ಕಾಲ 400 ಕಿಲೋಮೀಟರ್‌ಗಳಷ್ಟು ದೂರಕ್ಕೆ ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಮತ್ತು ಅವರನ್ನು ಸುರಕ್ಷಿತವಾಗಿ ಭೂಮಿಗೆ ಕರೆತರುವುದು ಗಗನಯಾನ ನೌಕೆಯ ಉದ್ದೇಶವಾಗಿದೆ.
ಈ ಸುದ್ದಿ ಓದಿದ್ದೀರಾ? ಬಿಜೆಪಿ – ಜೆಡಿಎಸ್ ಮೈತ್ರಿಗೆ ಒಪ್ಪಿಗೆ: ಮಾಜಿ ಪ್ರಧಾನಿ ದೇವೇಗೌಡ ಹೇಳಿಕೆಗೆ ಕೇರಳ ಸಿಎಂ ಆಕ್ರೋಶ
ಚಂದ್ರಯಾನ–3 ಯೋಜನೆಯ ಸಂದರ್ಭದಲ್ಲೂ ಇಸ್ರೋ ಇಂಥದ್ದೊಂದು ಪರೀಕ್ಷಾರ್ಥ ಪ್ರಯೋಗವನ್ನು ನಡೆಸಿತ್ತು. ಅದು ಇಸ್ರೊಗೆ ಯಶಸ್ಸು ತಂದುಕೊಟ್ಟಿತ್ತು. ಇದರ ಫಲವಾಗಿ ವಿಕ್ರಂ ಲ್ಯಾಂಡರ್ ಸುರಕ್ಷಿತವಾಗಿ ಚಂದ್ರನ ದಕ್ಷಿಣ ಧ್ರುವದ ಸಮೀಪ ಇಳಿಯಲು ಸಾಧ್ಯವಾಗಿತ್ತು. ಹೀಗಾಗಿ ಗಗನಯಾನ ಯೋಜನೆಯಲ್ಲಿ ಗಗನಯಾತ್ರಿಗಳ ಸುರಕ್ಷತೆಗಾಗಿ ಈ ಪ್ರಯೋಗ ನಡೆಸಲಾಗಿದೆ.