ಉತ್ತರಾಖಂಡ| ನಿರ್ಜನ ಪ್ರದೇಶ; 24 ಗ್ರಾಮಗಳಲ್ಲಿಲ್ಲ ಒಂದೇ ಒಂದು ಮತಗಟ್ಟೆ!

Date:

Advertisements

ಉತ್ತರಾಖಂಡದಲ್ಲಿ ಏಪ್ರಿಲ್ 19 ರಂದು ಲೋಕಸಭೆ ಚುನಾವಣೆ ನಡೆಯಲಿದ್ದು ನಿರ್ಜನ ಪ್ರದೇಶ ಎಂದು ಗುರುತಿಸಲಾದ ಸುಮಾರು 24 ಗ್ರಾಮಗಳಲ್ಲಿಲ್ಲ ಒಂದೇ ಒಂದು ಮತಗಟ್ಟೆ ಕೂಡಾ ಇರುವುದಿಲ್ಲ.

ಅಧಿಕೃತವಾಗಿ ಈ 24 ಗ್ರಾಮಗಳನ್ನು ‘ನಿರ್ಜನ ಗ್ರಾಮಗಳು’ ಎಂದು ಕರೆಯಲಾಗುತ್ತದೆಯಾದರೂ ಕೂಡಾ ಸ್ಥಳೀಯರು ಮಾತ್ರ ‘ಭೂತ ಗ್ರಾಮಗಳು’ ಅಥವಾ ಗೋಸ್ಟ್ ವಿಲೇಜಸ್ (ghost villages) ಎಂದು ಕರೆಯುತ್ತಾರೆ.

ರಾಜ್ಯ ಚುನಾವಣಾ ಆಯೋಗ ನೀಡಿರುವ ಅಂಕಿಅಂಶಗಳ ಪ್ರಕಾರ, ಸ್ವಾತಂತ್ರ್ಯ ನಂತರ ಕಳೆದ 16 ಲೋಕಸಭೆ ಚುನಾವಣೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ 24 ಗ್ರಾಮಗಳು ಈ ಬಾರಿ ಮಾತ್ರ ನಿರ್ಜನ ಪ್ರದೇಶವಾಗಿ ಮಾರ್ಪಟ್ಟಿದೆ.

Advertisements

ಇದನ್ನು ಓದಿದ್ದೀರಾ?   ಈಗ ಸ್ವತಂತ್ರ, ನ್ಯಾಯೋಚಿತ ಚುನಾವಣೆ ನಡೆಯುತ್ತಿಲ್ಲ: ಶಿವಸುಂದರ್‌ ಆತಂಕ

ಈ ಪ್ರದೇಶವನ್ನು ಚುನಾವಣಾ ಪ್ರಕ್ರಿಯೆಯಿಂದ ಹೊರಗಿಡಲು ಪ್ರಮುಖ ಕಾರಣ ರಾಜ್ಯ ವಲಸೆ ಆಯೋಗದ ವರದಿ. ಈ ವರದಿಯಲ್ಲಿ ಈ 24 ಗ್ರಾಮಗಳನ್ನು ‘ಜನವಸತಿ ಇಲ್ಲದ ಗ್ರಾಮಗಳು’ ಅಥವಾ ‘ನಿರ್ಜನ ಪ್ರದೇಶ’ ಎಂದು ಗುರುತಿಸಲಾಗಿದೆ.

ಆಯೋಗದ ಸಂಶೋಧನೆಗಳ ಪ್ರಕಾರ, ಈ ಗ್ರಾಮಗಳನ್ನು ಈಗ ಜನವಸತಿಯಿಲ್ಲದ ಪ್ರದೇಶ ಎಂದು ಪರಿಗಣಿಸಲಾಗಿದೆ. ಈ ಗ್ರಾಮಗಳು ಅಲ್ಮೋರಾ, ತೆಹ್ರಿ, ಚಂಪಾವತ್, ಪೌರಿ ಗರ್ವಾಲ್, ಪಿಥೋರಗಢ್ ಮತ್ತು ಚಮೋಲಿ ಜಿಲ್ಲೆಗಳಲ್ಲಿದೆ.

ತೆಹ್ರಿ ಗರ್ವಾಲ್‌ನಲ್ಲಿ 9, ಚಂಪಾವತ್‌ನಲ್ಲಿ 5, ಪೌರಿ ಗರ್ವಾಲ್‌ನಲ್ಲಿ 3, ಪಿಥೋರಗಢ್‌ನಲ್ಲಿ 3, ಅಲ್ಮೋರಾದಲ್ಲಿ 2, ಚಮೋಲಿಯಲ್ಲಿ 2 ಗ್ರಾಮಗಳು ಗೋಸ್ಟ್ ವಿಲೇಜ್ ಎಂದು ಕರೆಯಲ್ಪಟ್ಟಿದೆ.

ಇದನ್ನು ಓದಿದ್ದೀರಾ?  ಲೋಕಸಭೆ ಚುನಾವಣೆ| ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ, ಇಬ್ಬರಿಗೆ ಗಾಯ

ಫೆಬ್ರವರಿ 2023 ರಲ್ಲಿ ಬಿಡುಗಡೆಯಾದ ಎರಡನೇ ವರದಿಯು 2018 ಮತ್ತು 2022 ರ ನಡುವೆ ರಾಜ್ಯದ 6,436 ಗ್ರಾಮ ಪಂಚಾಯತ್‌ಗಳಿಂದ ತಾತ್ಕಾಲಿಕ ವಲಸೆ ನಡೆದಿದೆ ಎಂದು ಉಲ್ಲೇಖಿಸಿದೆ.

“ಮೂರು ಲಕ್ಷಕ್ಕೂ ಹೆಚ್ಚು ಜನರು ಉದ್ಯೋಗಕ್ಕಾಗಿ ತಮ್ಮ ಹಳ್ಳಿಯನ್ನು ತೊರೆದಿದ್ದಾರೆ. ಅದೇನೇ ಇದ್ದರೂ, ಅವರು ಮತ್ತೆ ವಾಪಾಸ್ ಬಂದಿದ್ದಾರೆ. ಏಕಕಾಲದಲ್ಲಿ, ರಾಜ್ಯದ 2067 ಗ್ರಾಮ ಪಂಚಾಯಿತಿಗಳಲ್ಲಿ ಶಾಶ್ವತ ವಲಸೆ ಮಾಡಲಾಗಿದೆ. ನಿವಾಸಿಗಳು ಉದ್ಯೋಗ, ಶಿಕ್ಷಣ, ಆರೋಗ್ಯ ಕಾರಣದಿಂದಾಗಿ ಹಳ್ಳಿಗಳನ್ನು ತೊರೆದು, ಹಿಂದಿರುಗಿಲ್ಲ” ಎಂದು ವರದಿಯು ಹೇಳುತ್ತದೆ.

ವರದಿ ಪ್ರಕಾರ ಹಲವಾರು ಜನರು ತಮ್ಮ ಪೂರ್ವಜರ ಭೂಮಿಯನ್ನು ಮಾರಾಟ ಮಾಡಿದ್ದಾರೆ. ಇನ್ನು ಹಲವಾರು ಭೂಮಿಗಳು ಹಾಗೆಯೇ ಬಂಜರು ಆಗಿದೆ. ಜನರಿಲ್ಲದೆ ಅಲ್ಮೋರಾ ಜಿಲ್ಲೆಯ 80 ಗ್ರಾಮ ಪಂಚಾಯತ್‌ಗಳನ್ನೇ ಮುಚ್ಚಲಾಗಿದೆ. 2018 ಮತ್ತು 2022 ರ ನಡುವೆ ರಾಜ್ಯದ 24 ಹಳ್ಳಿಗಳು ಸಂಪೂರ್ಣವಾಗಿ ಜನರಿಲ್ಲದ ಹಳ್ಳಿಯಾಗಿದೆ ಎಂದು ಆಯೋಗದ ವರದಿ ತಿಳಿಸಿದೆ.

ಇದನ್ನು ಓದಿದ್ದೀರಾ?   ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿ ಗಲಭೆ ಸೃಷ್ಟಿಸಲಿದೆ: ಮಮತಾ ಬ್ಯಾನರ್ಜಿ ಎಚ್ಚರಿಕೆ

ಈ ಕಾರಣದಿಂದಾಗಿ ಈ ನಿರ್ಜನ ಪ್ರದೇಶದಲ್ಲಿ ಚುನಾವಣೆಯ ಯಾವುದೇ ಪ್ರಕ್ರಿಯೆ ನಡೆಯುವುದಿಲ್ಲ. ಈ ಪ್ರದೇಶದಲ್ಲಿ ಯಾವುದೇ ಮತಗಟ್ಟೆ ಸ್ಥಾಪಿಸಲಾಗುವುದಿಲ್ಲ ಮತ್ತು ಅಭ್ಯರ್ಥಿಗಳು ಅಲ್ಲಿ ಪ್ರಚಾರ ಮಾಡುತ್ತಿಲ್ಲ.

ಈ ಬಗ್ಗೆ ಪತ್ರಿಕೆಗೆ ಪ್ರತಿಕ್ರಿಯಿಸಿದ ಉತ್ತರಾಖಂಡದ ಮುಖ್ಯ ಚುನಾವಣಾಧಿಕಾರಿ ಬಿವಿಆರ್‌ಸಿ ಪುರುಷೋತ್ತಮ್, “ಚುನಾವಣಾ ಆಯೋಗವು 50 ಕ್ಕಿಂತ ಕಡಿಮೆ ಮತದಾರರು ವಾಸಿಸುವ ರಾಜ್ಯದ ಅತ್ಯಂತ ದೂರದ ಪ್ರದೇಶಗಳಲ್ಲಿಯೂ ಮತಗಟ್ಟೆಗಳನ್ನು ಸ್ಥಾಪಿಸಿದೆ. ಆದರೆ ಈ 24 ಗ್ರಾಮಗಳದ್ದು ವಲಸೆಗೆ ಸಂಬಂಧಿಸಿದ ಸಮಸ್ಯೆಯಾಗಿದೆ” ಎಂದು ಸ್ಪಷ್ಟಪಡಿಸಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X