ಹುಡುಗರಿಗಿಂತ ಹೆಣ್ಣು ಮಕ್ಕಳು ಹೆಚ್ಚಾಗಿ 12ನೇ ತರಗತಿ (ಪಿಯುಸಿ) ನಂತರದ ವಿದ್ಯಾಭ್ಯಾಸ ಮುಂದುವರೆಸಲು ಬಯಸುತ್ತಾರೆ ಎಂದು ವಾರ್ಷಿಕ ಶಿಕ್ಷಣ ವರದಿ-2023 ಬಹಿರಂಗಪಡಿಸಿದೆ.
ಶಿಕ್ಷಣವು ತಮ್ಮ ಅಧ್ಯಯನದಲ್ಲಿನ ಆಸಕ್ತಿಯಲ್ಲಿ ಸಕ್ರಿಯಗೊಳಿಸುತ್ತದೆ. ಉತ್ತಮ ಮಹಿಳೆಯಾಗಲು ನೆರವಾಗುತ್ತದೆ ಎಂದು ಹೆಣ್ಣು ಮಕ್ಕಳು ನಂಬಿಸಿದ್ದಾರೆ ಎಂದು ಸಮೀಕ್ಷಾ ವರದಿ ಹೇಳಿದೆ.
ಸಾಮಾನ್ಯವಾಗಿ, ಹುಡಿಗಿಯರಿಗಿಂತ ಹುಡುಗರು ವಿದ್ಯಾಭ್ಯಾಸವನ್ನು ಮುಂದುವರೆಸಲು ಇಚ್ಛಿಸುತ್ತಿಲ್ಲ. ಅವರು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅಸಕ್ತಿ ಹೊಂದಿಲ್ಲ. ಅವರ ಕುಟುಂಬಸ್ಥರು ಶಿಕ್ಷಣಕ್ಕೆ ಒತ್ತುಕೊಟ್ಟರೂ, ಹುಡುಗರು ಶಿಕ್ಷಣವನ್ನು ಕಡಿತಗೊಳಿಸಬಹುದು. ಆದರೆ, ಹುಡುಗಿರಯಲ್ಲಿ ಈ ನಿರ್ಧಾರಗಳು ಅವರ ಕೈಯಲ್ಲಿರುವುದಿಲ್ಲ ಎಂದು ವರದಿ ಹೇಳಿದೆ.
“ಹುಡುಗಿಯರು ಕನಿಷ್ಠ ಪದವಿಪೂರ್ವ ಹಂತದವರೆಗೆ ಅಧ್ಯಯನ ಮಾಡಲು ಬಯಸುತ್ತಾರೆ. ಆದರೆ, ಹುಡುಗರು ಪಿಯುಸಿ ನಂತರ ತಮ್ಮ ಶಿಕ್ಷಣವನ್ನು ನಿಲ್ಲಿಸುವ ಮಾತನಾಡುತ್ತಾರೆ. ಅವರು ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರೆ, ಸಾಕು ಎಂಬ ಭಾವನೆಯಲ್ಲಿದ್ದಾರೆ” ಎಂದು ವರದಿ ವಿವರಿಸಿದೆ.
ಈ ಸುದ್ದಿ ಓದಿದ್ದೀರಾ?: ಅಸ್ಸಾಂನಲ್ಲಿ ‘ನ್ಯಾಯ್ ಯಾತ್ರೆ’ | ಕೆಲವೇ ಮೀಟರ್ ಮಾರ್ಗ ಬದಲಿಸಿದ್ದಕ್ಕೆ ರಾಹುಲ್ ವಿರುದ್ಧ ಎಫ್‌ಐಆರ್
“ಹೆಣ್ಣುಮಕ್ಕಳಲ್ಲಿ ತಮ್ಮ ಮದುವೆಯ ವಯಸ್ಸಿಗೆ ಸಂಬಂಧಿಸಿದಂತೆ ಸಾಮಾಜಿಕ ರೂಢಿಗಳನ್ನು ಬದಲಾಯಿಸುವುದು ತಮ್ಮ ಕಲಿಕೆಯ ಪ್ರಮುಖ ಅಂಶವಾಗಿದೆ. ಹೆಚ್ಚಿನ ಹುಡುಗಿಯರು 21 ಅಥವಾ 22ನೇ ವಯಸ್ಸಿನ ನಂತರ ಮದುವೆಯಾಗಬೇಕು ಎನ್ನುತ್ತಾರೆ. ಅಲ್ಲಿಯವರೆಗೆ ವ್ಯಾಸಂಗ ಮುಂದುವರಿಸಲು ತಮ್ಮ ಸಮಯ ನೀಡುತ್ತಾರೆ” ಎಂದು ವರದಿ ತಿಳಿಸಿದೆ.
“ಈ ವಯಸ್ಸಿನವರೆಗೆ ಅವರ ವ್ಯಾಸಂಗವು ಸ್ನಾತಕ ಮತ್ತು ಸ್ನಾತಕ್ಕೊತ್ತರ ಶಿಕ್ಷಣವನ್ನು ಪಡೆಯಬಹುದು. ಇದು ಸಾಮಾಜಿಕವಾಗಿ ಅವರು ಗುರುತಿಸಿಕೊಳ್ಳಲು ಹಾಗೂ ಉದ್ಯೋಗ ಹೊಂದಲು ನೆರವಾಗುತ್ತದೆ” ಎಂದು ವರದಿ ಹೇಳಿದೆ.
ಆದರೆ, “ಹುಡುಗರು ಸಾಧ್ಯವಾದಷ್ಟು ಬೇಗ ಹಣ ಸಂಪಾದಿಸುವ ಯೋಜನೆಯನ್ನು ಹೊಂದಿದ್ದಾರೆ. 14-18 ವಯಸ್ಸಿನ ಎಷ್ಟೋ ಹುಡುಗರು ಶಾಲೆಯಲ್ಲಿ ಓದುತ್ತಿರುವಾಗಲೇ ದುಡಿಯಲು ಪ್ರಾರಂಭಿಸಿದ್ದಾರೆ. ಹಣಕಾಸಿನ ಮುಗ್ಗಟ್ಟಿನ ಸಂದರ್ಭಗಳಲ್ಲಿ, ಹುಡುಗರು ತಮ್ಮ ಶಾಲಾ ಶುಲ್ಕವನ್ನು ಪಾವತಿಸಲು ಬಯಸಿದರೆ ತಮ್ಮದೇ ಆದ ಆದಾಯದ ಮೂಲಗಳನ್ನು ಕಂಡುಕೊಳ್ಳುವ ಆಯ್ಕೆಯನ್ನು ಹೊಂದಬೇಕಾಗಿದೆ” ಎಂದು ವರದಿ ವಿವರಿಸಿದೆ.
ವಾರ್ಷಿಕ ಶಿಕ್ಷಣ ವರದಿಯ ಸಮೀಕ್ಷೆಯು ದೇಶದ 26 ರಾಜ್ಯಗಳ 28 ಜಿಲ್ಲೆಗಳಲ್ಲಿ ನಡೆದಿದೆ ಸಮೀಕ್ಷೆಗೆ 14-18 ವಯಸ್ಸಿನ ಒಟ್ಟು 34,745 ಮಂದಿಯನ್ನು ಒಳಪಡಿಸಲಾಗಿದೆ.