ಪ್ರಾಯಶ್ಚಿತ್ತಕ್ಕಾಗಿ ಪ್ರಧಾನಿಯವರು ಕನ್ಯಾಕುಮಾರಿಗೆ ಹೋಗಬೇಕೆಂದುಕೊಂಡಿದ್ದರೆ ಒಳ್ಳೆಯದು ಎಂದು ರಾಜ್ಯಸಭಾ ಸದಸ್ಯರಾದ ಕಪಿಲ್ ಸಿಬಲ್ ನರೇಂದ್ರ ಮೋದಿಯವರನ್ನು ಕುಟುಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿವೇಕದ ಬಗ್ಗೆ ಅರ್ಥ ಗೊತ್ತಿಲ್ಲದ ವ್ಯಕ್ತಿ ಧ್ಯಾನ ಮಾಡಿದರೆ ಏನು ಪ್ರಯೋಜನ. ಪ್ರಾಯಶ್ಚಿತ್ತಕ್ಕಾಗಿ ಹೋಗುತ್ತಿದ್ದರೆ ಒಳ್ಳೆಯ ವಿಷಯ ಅಥವಾ ಸ್ವಾಮಿ ವಿವೇಕಾನಂದರ ಬರವಣಿಗೆಗಳು ಹಾಗೂ ಮಾತುಗಳಿಗಗಿ ಸ್ಪೂರ್ತಿ ಪಡೆಯಲು ಹೋಗಬೇಕೆಂದುಕೊಂಡಿದ್ದರೆ ಅದು ಕೂಡ ಒಳ್ಳೆಯದು” ಎಂದು ಕಪಿಲ್ ಸಿಬಲ್ ಹೇಳಿದ್ದಾರೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ 10 ವರ್ಷಗಳಲ್ಲಿ ಅಭಿವೃದ್ಧಿಯ ಬಗ್ಗೆ ಏನು ಮಾತನಾಡಲಿಲ್ಲ. ಏಕೆಂದರೆ 10 ವರ್ಷಗಳ ದುರಾಡಳಿತದಿಂದ ಏನು ಸಾಧಿಸಲಿಲ್ಲ ಎಂದು ಕಪಿಲ್ ಸಿಬಲ್ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಸ್ವಾಮಿ ವಿವೇಕಾನಂದ ಅವರ ಸ್ಮರಣಾರ್ಥವಾಗಿ ನಿರ್ಮಿಸಲಾಗಿರುವ ಶಿಲಾ ಸ್ಮಾರಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೇ 30ರಂದು ಮೂರು ದಿನಗಳ ಕಾಲ ಧ್ಯಾನಕ್ಕಾಗಿ ತೆರಳುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಜೈಲಿಗೆ ಕಳಿಸುವ ಮೋದಿ ಗ್ಯಾರಂಟಿಯು ‘ಜನತಂತ್ರದ ಜನನಿ’ಯ ಅಣಕ ಅಲ್ಲವೇ?
ಈ ನಡುವೆ ಪ್ರಧಾನಿಯ ಕನ್ಯಾಕುಮಾರಿ ಭೇಟಿಯನ್ನು ತಮಿಳುನಾಡು ಕಾಂಗ್ರೆಸ್ ವಿರೋಧಿಸಿದೆ. ಕಾಂಗ್ರೆಸ್ ಸಮಿತಿಯ ಮುಖ್ಯಸ್ಥರಾದ ಕೆ ಸೆಲ್ವಪೆರುನಾಥಗೈ ಅವರು, ಮಾದರಿ ನೀತಿ ಸಂಹಿತಿ ಜಾರಿಯಲ್ಲಿರುವ ಕಾರಣ ಪ್ರಧಾನ ಮಂತ್ರಿಯವರ ಈ ಕಾರ್ಯಕ್ರಮಕ್ಕೆ ಚುನಾವಣಾ ಆಯೋಗ ಅನುಮತಿ ನೀಡಬಾರದು. ಇಂತಹ ನಡೆಯು ಪ್ರಚಾರದ ನಂತರವು ಪರೋಕ್ಷವಾಗಿ ಪ್ರಚಾರ ಮಾಡುವ ಪ್ರಯತ್ನವಾಗುತ್ತದೆ ಎಂದು ತಿಳಿಸಿದ್ದಾರೆ.
“ಚುನಾವಣೆಗೂ ಮುನ್ನ 48 ಗಂಟೆಗಳು ಮೌನ ಅವಧಿಯಾಗಿರುವ ಸಂದರ್ಭದಲ್ಲಿ ಮೋದಿಯವರು ಮಾಧ್ಯಮಗಳ ಮೂಲಕ ರಹಸ್ಯ ರೀತಿಯಲ್ಲಿ ಪ್ರಚಾರ ಮಾಡುತ್ತಿರುವುದು ಇದರಲ್ಲಿ ಸ್ಪಷ್ಟವಾಗಿದೆ” ಎಂದು ತಮಿಳುನಾಡು ಕಾಂಗ್ರೆಸ್ ಮುಖ್ಯಸ್ಥರು ತಿಳಿಸಿದ್ದಾರೆ.
“ಇದಕ್ಕೆ ಸಂಬಂಧಿಸಿದಂತೆ ನಾಳೆ ಚುನಾವಣಾ ಆಯೋಗಕ್ಕೆ ಪತ್ರವನ್ನು ನೀಡುತ್ತೇವೆ. ಅಗತ್ಯವೆನಿಸಿದರೆ ಗೌರವಾನ್ವಿತ ನ್ಯಾಯಾಲಯಕ್ಕೂ ಮನವಿ ಮಾಡುತ್ತೇವೆ” ಎಂದು ಕೆ ಸೆಲ್ವಪೆರುನಾಥಗೈ ಹೇಳಿದ್ದಾರೆ.
