ಗೂಗಲ್ ಮ್ಯಾಪ್‌ ಅವಾಂತರ | ಕಾಲುವೆಗೆ ಬಿದ್ದ ಕಾರು; ಅಪಾಯದಿಂದ ಕುಟುಂಬ ಪಾರು

Date:

Advertisements

ಗೂಗಲ್ ಮ್ಯಾಪ್ಸ್ ಸೂಚಿಸಿದ ಶಾರ್ಟ್‌ಕಟ್ ರಸ್ತೆಯನ್ನು ಫಾಲೋ ಮಾಡಿದ್ದ ಕುಟುಂಬವೊಂದು ಕಾರು ಸಮೇತ ನಾಲೆಗೆ ಬಿದ್ದರುವ ಘಟನೆ ಕೇರಳದಲ್ಲಿ ನಡೆದಿದೆ. ಅದೃಷ್ಟವಶಾತ್, ಕಾರಿನಲ್ಲಿದ್ದ ಎಲ್ಲರೂ ಪಾರಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಕೇರಳದ ವಯನಾಡ್‌ನಿಂದ ಅಲಪ್ಪುಳಕ್ಕೆ ಕುಟುಂಬವೊಂದು ಕಾರಿನಲ್ಲಿ ಪ್ರಯಾಣಿಸುತ್ತಿತ್ತು. ಈ ವೇಳೆ, ಮಲಪ್ಪುರಂನ ಪೂಂಗೋಡ್‌ ಬಳಿ ಘಟನೆ ನಡೆದಿದೆ.

ಕಾರಿನಲ್ಲಿದ್ದವರು ರಸ್ತೆ ತಿಳಿಯದ ಕಾರಣ, ಗೂಗಲ್ ಮ್ಯಾಪ್‌ ಹಾಕಿಕೊಂಡು, ಅದರ ಸೂಚನೆಯಂತೆ ಪ್ರಯಾಣಿಸುತ್ತಿದ್ದರು. ಈ ವೇಳೆ, ಗೂಗಲ್ ಮ್ಯಾಪ್ ಶಾರ್ಟ್‌ ಕಟ್‌ ರಸ್ತೆಯನ್ನು ಸೂಚಿಸಿದೆ. ಅದರಂತೆ, ಕಾರು ಚಾಲಕ ಕಾರನ್ನು ಚಾಲನೆ ಮಾಡಿದ್ದಾರೆ. ಆದರೆ, ಸರಿಯಾದ ರಸ್ತೆಯಿಲ್ಲದೆ, ಕಾರು ಕಾಲುವೆಗೆ ಉರುಳಿ ಬಿದ್ದಿದೆ.

Advertisements

ಸ್ಥಳೀಯರು ಕಾರಿನಲ್ಲಿದ್ದ ಎಲ್ಲರನ್ನೂ ರಕ್ಷಿಸಿದ್ದಾರೆ. ಕ್ರೇನ್ ಬಳಸಿ ಕಾರನ್ನು ಕಾಲುವೆಯಿಂದ ಮೇಲಕ್ಕೆತ್ತಿದ್ದಾರೆ.

ಕುನ್ನಂಕುಲಂ-ವರವೂರ್ ರಸ್ತೆಯು ತೀಕ್ಷ್ಣವಾದ ತಿರುವುಗಳನ್ನು ಹೊಂದಿದೆ. ಆಗಾಗ್ಗೆ ಅಪಘಾತಗಳು ಸಂಭವಿಸಿದ್ದು, ಕುಖ್ಯಾತಿ ಪಡೆದಿದೆ. ಹೀಗಾಗಿ, ವಾಹನ ಸವಾರರು ಸಾಮಾನ್ಯವಾಗಿ ಕುನ್ನಂಕುಲಂ ರಸ್ತೆಯ ಬದಲಿಗೆ, ವರವೂರ್ ಮಾರ್ಗದಲ್ಲಿ ಪ್ರಯಾಣಿಸುತ್ತಾರೆ. ಆದರೆ, ಕಾರಿನಲ್ಲಿ ತೆರಳುತ್ತಿದ್ದ ಕುಟುಂಬಕ್ಕೆ ಗೂಗಲ್ ಮ್ಯಾಪ್ ಕುನ್ನಂಕುಲಂ-ವರವೂರ್ ರಸ್ತೆಯನ್ನು ಸೂಚಿಸಿದ್ದು, ಆ ರಸ್ತೆಯಲ್ಲಿ ತೆರಳಿದ ಕುಟುಂಬಕ್ಕೆ ನೀರಿಗೆ ಬಿದ್ದಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X