ಕೋವಿಡ್ ಸಾಂಕ್ರಾಮಿಕದ ಮೊದಲ ಮತ್ತು ಎರಡನೇ ಅಲೆಯ ಸಂದರ್ಭದಲ್ಲಿ ಸಾವನ್ನಪ್ಪಿದ್ದ ವೈದ್ಯರ ಕುಟುಂಬಕ್ಕೆ ಪರಿಹಾರ ನೀಡಿರುವ ಬಗ್ಗೆ ಮಾಹಿತಿಯನ್ನು ನೀಡಲು ಸರ್ಕಾರ ನಿರಾಕರಿಸಿದೆ. ಈ ಬಗ್ಗೆ ಮಾಹಿತಿ ಕೋರಿ ಆರ್‌ಟಿಐ ಅರ್ಜಿ ಸಲ್ಲಿಸಲಾಗಿತ್ತು. ಆರ್‌ಟಿಐ ಕಾರ್ಯಕರ್ತ ಡಾ. ಕೆವಿ ಬಾಬು ಅರ್ಜಿ ಸಲ್ಲಿಸಿದ್ದರು.
ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ 2,244 ವೈದ್ಯರ ಪೈಕಿ 475 ವೈದ್ಯರ ಕುಟುಂಬಕ್ಕೆ ಶೇಕಡ 29 ವೈದ್ಯರ ಕುಟುಂಬಕ್ಕೆ ಪರಿಹಾರವನ್ನು ನೀಡಲಾಗಿದೆ ಎಂದು ಸರ್ಕಾರ ತಿಳಿಸಿತ್ತು. ಆದರೆ ಈ ವರ್ಷ ಕೇಂದ್ರ ಆರೋಗ್ಯ ಸಚಿವಾಲಯ ಆರ್‌ಟಿಐ ಅರ್ಜಿಗೆ ಪ್ರತಿಕ್ರಿಯಿಸಲು ನಿರಾಕರಿಸಿದೆ. “ದತ್ತಾಂಶವು ವಸ್ತು ರೂಪದಲ್ಲಿ ಲಭ್ಯವಿಲ್ಲ” ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಇದನ್ನು ಓದಿದ್ದೀರಾ? ಬಿಜೆಪಿ ಸರ್ಕಾರದ ಕೋವಿಡ್ ಹಗರಣ | ಮೊದಲ ಎಫ್‌ಐಆರ್ ದಾಖಲು
ಇನ್ನು ಕೋವಿಡ್‌ನಿಂದಾಗಿ ಮೃತಪಟ್ಟ ವೈದ್ಯರ ನಿಗದಿತ ಸಂಖ್ಯೆಯನ್ನು ಸರ್ಕಾರ ಬಹಿರಂಗಪಡಿಸಿಲ್ಲ. ಆದರೆ ಭಾರತೀಯ ವೈದ್ಯರ ಅಸೋಸಿಯೇಷನ್ (ಐಎಂಎ) ಪ್ರಕಾರ ಮೃತ ವೈದ್ಯರ ಸಂಖ್ಯೆ 1,596ಕ್ಕೂ ಅಧಿಕವಿದೆ.
ಸುಮಾರು 4 ಲಕ್ಷಕ್ಕೂ ಅಧಿಕ ಸದಸ್ಯರನ್ನು ಹೊಂದಿರುವ ಐಎಂಎ ಕೋವಿಡ್‌ನ ಎರಡನೇ ಅಲೆಯ ಸಂದರ್ಭದಲ್ಲಿ ಕೋವಿಡ್‌ನಿಂದ ಮೃತಪಟ್ಟ ವೈದ್ಯರ ಚಿತ್ರದ ಸಹಿತ ಸಂಪೂರ್ಣ ಮಾಹಿತಿಯನ್ನು ಆರೋಗ್ಯ ಸಚಿವಾಲಯಕ್ಕೆ ನೀಡಿದ್ದಾರೆ.
ಇನ್ನು ಕೋವಿಡ್‌ಗೆ ಬಲಿಯಾದ ವೈದ್ಯರ ಕುಟುಂಬಕ್ಕೆ ಪರಿಹಾರ ನೀಡಿದ ರಾಜ್ಯವಾರು ಪಟ್ಟಿಯ ಅರ್ಜಿಗೂ ಸರ್ಕಾರ ಇದೇ ಪ್ರತಿಕ್ರಿಯೆಯನ್ನು ನೀಡಿದೆ. “ದತ್ತಾಂಶವು ವಸ್ತು ರೂಪದಲ್ಲಿ ಲಭ್ಯವಿಲ್ಲ. ಹಾಗಾಗಿ ಆರ್‌ಟಿಐ ಕಾಯ್ದೆಯ ಸೆಕ್ಷನ್ 7(9) ಅಡಿಯಲ್ಲಿ ಮಾಹಿತಿ ನೀಡಲಾಗದು” ಎಂದು ತಿಳಿಸಿದೆ.
