ಕಾಶ್ಮೀರ ದಾಳಿಯಲ್ಲಿ ಕೇಂದ್ರ ಸರ್ಕಾರದ ವೈಫಲ್ಯ ಮರೆತ ಬಿಜೆಪಿ ನಾಯಕರು; ಇಂದು ಜಮ್ಮು ಕಾಶ್ಮೀರ ಬಂದ್

Date:

Advertisements

ಕಾಶ್ಮೀರದ ಪಹಲ್ಗಾಮ್ ಪಟ್ಟಣದ ಪ್ರವಾಸಿಗರ ಮೇಲೆ ಮಂಗಳವಾರ ನಡೆದ ಭಯೋತ್ಪಾದಕರ ದಾಳಿಯಲ್ಲಿ 28 ಮಂದಿ ಮೃತಪಟ್ಟಿದ್ದು, ಮೇಲ್ನೋಟಕ್ಕೆ ದಾಳಿಯಲ್ಲಿ ಕೇಂದ್ರ ಸರ್ಕಾರದ ವೈಫಲ್ಯ ಎದ್ದು ಕಾಣುತ್ತಿದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮ ಸೇರಿದಂತೆ ಹಲವು ಕಡೆ ಚರ್ಚೆಯಾಗುತ್ತಿದೆ.

ಉಗ್ರರ ದಾಳಿಗೆ ಕಣಿವೆ ರಾಜ್ಯದಲ್ಲಿ ಸೇನೆಯ ಕಡಿತ, ಗುಪ್ತಚರ ವೈಫಲ್ಯ ಹಾಗೂ ಭದ್ರತಾ ವೈಫಲ್ಯ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಕೇಂದ್ರ ಸರ್ಕಾರವು ಇತ್ತೀಚಿನ ಕೆಲವು ತಿಂಗಳುಗಳಿಂದ ಕಾಶ್ಮೀರದಲ್ಲಿ ಸೇನೆಯನ್ನು ಕಡಿತಗೊಳಿಸಿದೆ. ಆದರೆ ಇವೆಲ್ಲ ವೈಫಲ್ಯಗಳು ಸಮಸ್ಯೆಗಳನ್ನು ಬಿಜೆಪಿ ನಾಯಕರು ಚರ್ಚಿಸುತ್ತಿಲ್ಲ.

ಮಾಧ್ಯಮವೊಂದರಲ್ಲಿ ಮಾತನಾಡಿದ ನಿವೃತ್ತ ಮೇಜರ್ ಜನರಲ್ ಜಿ ಡಿ ಭಕ್ಷಿ, ಪಾಕಿಸ್ತಾನದಿಂದ ಅತ್ಯಂತ ಗಂಭೀರ ಮತ್ತು ಸ್ವೀಕಾರಾರ್ಹವಲ್ಲದ ಪ್ರಚೋದನೆ, ಮತ್ತೊಂದು ಸರ್ಜಿಕಲ್‌ ಸ್ಟ್ರೈಕ್‌ ಮಾಡುವ ಸಮಯ ಬಂದಿದೆ. ಪ್ರತೀಕಾರದ ಸಿದ್ಧಾಂತವನ್ನು ಅಳವಡಿಸಿಕೊಳ್ಳಬೇಕಿದೆ. ಇದು ಜೋರಾಗಿ ಮಾತನಾಡುವ ಸಮಯವಲ್ಲ. ಇದು ಕ್ರಮ ಕೈಗೊಳ್ಳುವ ಸಮಯ, ಆ ಮೂರ್ಖ ಕದನ ವಿರಾಮ ಇನ್ನೂ ಏಕೆ ಜಾರಿಯಲ್ಲಿದೆ?. ಕಣಿವೆಯಲ್ಲಿ ಸೇನೆಯನ್ನು ಹೆಚ್ಚಿಸಲಾಗಿಲ್ಲ. ಹೆಚ್ಚು ಆರ್ಥಿಕ ನೆರವನ್ನು ನೀಡಲಾಗಿಲ್ಲ. ಒಂದು ಲಕ್ಷಕ್ಕೂ ಅಧಿಕ ಸೇನೆಯನ್ನು ಕಡಿತಗೊಳಿಸಲಾಗಿದೆ. ನೆರವು ನೀಡುತ್ತಿರುವ ಹಣ ಎಲ್ಲಿ ಹೋಯಿತು. ಇಂತಹ ಹಲವಾರು ಕಾರಣಗಳಿಂದ ದಾಳಿ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisements

ಬಿಜೆಪಿ ನಾಯಕರು ಈ ಕಾರಣಗಳನ್ನು ಮಾತ್ರ ಮುಖ್ಯವಾಹಿನಿಯಲ್ಲಿ ಚರ್ಚಿಸುತ್ತಿಲ್ಲ. ತಮ್ಮದೆ ಪ್ರಚೋದನಾಕಾರಿಯಾದ ಹೇಳಿಕೆಗಳನ್ನು ನೀಡುತ್ತಿರುವುದನ್ನು ನೆಟ್ಟಿಗರು ಸಾಮಾಜಿಕ ಮಾಧ್ಯಮದಲ್ಲಿ ಪ್ರಶ್ನಿಸುತ್ತಿದ್ದಾರೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಜಾತಿ-ಜನಿವಾರಕ್ಕೆ ಜೋತುಬಿದ್ದ ‘ಜಾತ್ಯತೀತ’ ಸರ್ಕಾರ

ಇಂದು ಜಮ್ಮು- ಕಾಶ್ಮೀರ ಬಂದ್ ಗೆ ಮೆಹಬೂಬಾ, ಮಿರ್ವೈಝ್ ಕರೆ

ಪಹಲ್ಗಾಂವ್ ನಲ್ಲಿ ನಡೆದ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಬುಧವಾರ ಜಮ್ಮು ಕಾಶ್ಮೀರದಲ್ಲಿ ಬಂದ್ ಆಚರಿಸುವಂತೆ ಪಿಡಿಪಿ ಮುಖ್ಯಸ್ಥೆ ಮತ್ತು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಮತ್ತು ಹುರಿಯತ್ ಮುಖಂಡ ಮಿರ್ವೈಝ್ ಉಮರ್ ಫಾರೂಕ್ ಅವರು ಪ್ರತ್ಯೇಕ ಕರೆ ನೀಡಿದ್ದಾರೆ.

ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಬಂದ್ ಆಚರಿಸುವಂತೆ ಮೆಹಬೂಬಾ ಮುಫ್ತಿ ಹಾಗೂ ಮಿರ್ವೈಝ್ ಕರೆ ನೀಡಿರುವುದು ಇದೇ ಮೊದಲು.”ಇದು ಕೇವಲ ಆಯ್ದ ಕೆಲವರ ವಿರುದ್ಧ ನಡೆದ ದಾಳಿಯಲ್ಲ. ಇದು ನಮ್ಮ ಮೇಲೆ ನಡೆದ ದಾಳಿಯೂ ಹೌದು. ಈ ಶೋಕ ಮತ್ತು ಸಂಕಷ್ಟದ ಸಂದರ್ಭದಲ್ಲಿ ನಾವು ಜತೆಗಿರುತ್ತೇವೆ ಎಂದು ಮೆಹಬೂಬಾ ಹೇಳಿದ್ದಾರೆ.

ಜಮ್ಮು ಚೇಂಬರ್ ಅಂಡ್ ಬಾರ್ ಅಸೋಸಿಯೇಶನ್ ನೀಡಿರುವ ಬಂದ್ ಕರೆಯ ಬೆನ್ನಲ್ಲೇ ಮೆಹಬೂಬಾ ಕೂಡ ಬಂದ್ ಗೆ ಕರೆ ನೀಡಿದ್ದಾರೆ.

“ಪಹಲ್ಗಾಂವ್ ನಲ್ಲಿ ಅಮಾಯಕರ ಮೇಲೆ ನಡೆದ ಘೋರ ಘಟನೆಯಲ್ಲಿ ಜೀವ ಕಳೆದುಕೊಂಡ ಅಮಾಯಕರ ಗೌರವಾರ್ಥವಾಗಿ ಬಂದ್ ಆಚರಿಸುವಂತೆ ನೀಡಿರುವ ಬಂದ್ ಕರೆಗೆ ಇಡೀ ಕಾಶ್ಮೀರ ಜನತೆ ಒಗ್ಗಟ್ಟಾಗಿ ಸ್ಪಂದಿಸಬೇಕು” ಎಂದು ಅವರು ಹೇಳಿದ್ದಾರೆ.
ಈ ಪೈಶಾಚಿಕ ಕೃತ್ಯದ ವಿರುದ್ಧ ನಾವು ಒಗ್ಗಟ್ಟಾಗಿ ಇದ್ದೇವೆ ಮತ್ತು ನಮ್ಮ ಮೌನವನ್ನು ನಾವು ಭಯೋತ್ಪಾದನೆ ಒಪ್ಪಿಕೊಂಡಿದ್ದೇವೆ ಎಂದು ತಪ್ಪಾಗಿ ಭಾವಿಸಬಾರದು ಎಂಬ ಸ್ಪಷ್ಟ ಸಂದೇಶವನ್ನು ನಾವು ರವಾನಿಸಬೇಕಿದೆ ಎಂದು ಪಕ್ಷದ ಮುಖ್ಯಸ್ಥ ಯಾಸಿರ್ ರಿಷಿ ಹೇಳಿಕೆ ನೀಡಿದ್ದಾರೆ.

ಈ ನಡುವೆ ಭಯೋತ್ಪಾದಕರು ಜಮ್ಮುವಿನ ಕಿಶ್ತವಾಢ ದಿಂದ, ಕೋಕರ್ನಾಗ್ ಮೂಲಕ ಬೈಸರನ್‌ಗೆ ಬಂದಿರ ಬಹುದು ಎಂದು ಅಧಿಕಾರಿಗಳು ಊಹಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

Download Eedina App Android / iOS

X