ಮಹಿಳೆಯ ಸ್ತನಗಳನ್ನು ಹಿಡಿಯುವುದು, ಪೈಜಾಮಾ ಲಾಡಿ ಎಳೆಯುವುದು ಅಥವಾ ಮುಟ್ಟುವುದು ಅತ್ಯಾಚಾರ ಯತ್ನವಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ. ವಿಚಾರಣೆಯೊಂದರ ವೇಳೆ ಹೈಕೋರ್ಟ್ ನೀಡಿದ ಈ ತೀರ್ಪಿಗೆ ತೀವ್ರ ಟೀಕೆ ವ್ಯಕ್ತವಾಗಿದೆ.
ಇವುಗಳು ಅತ್ಯಾಚಾರ ಯತ್ನ ಅಲ್ಲವೆಂದಾದರೆ, ಬೇರೆ ಯಾವ ಕ್ರಿಯೆ ಅತ್ಯಾಚಾರ ಯತ್ನವಾಗುತ್ತದೆ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಈ ತೀರ್ಪಿನ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.
ಇದನ್ನು ಓದಿದ್ದೀರಾ? ಬಳ್ಳಾರಿ | ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ; ಬಿಜೆಪಿ ಯುವ ಮುಖಂಡನ ಬಂಧನ
2021ರಲ್ಲಿ ಉತ್ತರ ಪ್ರದೇಶದ ಕಾಸ್ಗಂಜ್‌ನಲ್ಲಿ 11 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಪವನ್ ಮತ್ತು ಆಕಾಶ್ ಎಂಬ ಇಬ್ಬರು ಪುರುಷರು ಅತ್ಯಾಚಾರಕ್ಕೆ ಯತ್ನ ನಡೆಸಿದ್ದರು. ಆಕೆಯ ಸ್ತನವನ್ನು ಹಿಡಿದು, ಆಕೆಯ ಪೈಜಾಮಾದ ಲಾಡಿವನ್ನು ಎಳೆದು, ತುಂಡರಿಸಿದ್ದರು. ಆಕೆಯನ್ನು ಕಾಲುವೆಯೆಡೆ ಎಳೆದೊಯ್ಯಲು ಕೂಡಾ ಯತ್ನಿಸಿದ್ದರು.
ಬಾಲಕಿ ಕಿರುಚುವುದನ್ನು ಕೇಳಿ ಸ್ಥಳೀಯರು ಘಟನಾ ಸ್ಥಳಕ್ಕೆ ಧಾವಿಸಿದ್ದು, ಇಬ್ಬರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಈ ಬಗ್ಗೆ ದೂರು ದಾಖಲಿಸಲಾಗಿದ್ದು, ಪವನ್ ಮತ್ತು ಆಕಾಶ್‌ಗೆ ಕೋರ್ಟ್ ಅತ್ಯಾಚಾರ ಮತ್ತು ಪೋಕ್ಸೋ ಪ್ರಕರಣದಡಿ ಸಮನ್ಸ್ ನೀಡಿತ್ತು.
ಈ ಸಮನ್ಸ್ ಅನ್ನು ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟ್‌ಗೆ ಆರೋಪಿಗಳು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಾಮ ಮನೋಹರ್ ನಾರಾಯಣ ಮಿಶ್ರಾ ದಾಖಲಾಗಿದ್ದ ಪ್ರಕರಣವನ್ನು ತಿದ್ದುಪಡಿ ಮಾಡಿದ್ದಾರೆ. ಇದು ಅತ್ಯಾಚಾರ ಯತ್ನವಲ್ಲ ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಐವರು ಮಹಿಳೆಯರ ಅತ್ಯಾಚಾರ; ಬಿಜೆಪಿಯ ಒಡನಾಡಿ, ಭಾರತೀಯ ಮೂಲದ ವ್ಯಕ್ತಿಗೆ ಆಸ್ಟ್ರೇಲಿಯಾದಲ್ಲಿ 40 ವರ್ಷ ಜೈಲು ಶಿಕ್ಷೆ
“ಆರೋಪಿಗಳಾದ ಪವನ್ ಮತ್ತು ಆಕಾಶ್ ವಿರುದ್ಧ ಹೊರಿಸಲಾದ ಆರೋಪಗಳನ್ನು ನೋಡಿದಾಗ ಇದು ಅತ್ಯಾಚಾರ ಪ್ರಯತ್ನದ ಅಪರಾಧವಲ್ಲ ಎಂದು ತಿಳಿಯುತ್ತದೆ. ಅತ್ಯಾಚಾರ ಪ್ರಯತ್ನ ಮತ್ತು ದೌರ್ಜನ್ಯದ ಬಗ್ಗೆ ನಿಜವಾದ ವ್ಯತ್ಯಾಸ ತಿಳಿದಿರಬೇಕು. ಆರೋಪಿಗಳು ಅತ್ಯಾಚಾರ ಮಾಡುವ ಉದ್ದೇಶ ಹೊಂದಿದ್ದರು ಎಂಬ ಯಾವ ಪುರಾವೆಯೂ ಇಲ್ಲ” ಎಂದು ರಾಮ ಮನೋಹರ್ ಹೇಳಿದ್ದಾರೆ.
“ಆಕಾಶ್ ಬಾಲಕಿಯನ್ನು ಕಾಲುವೆಯೆಡೆ ಎಳೆದೊಯ್ಯಲು ಯತ್ನಿಸಿದ್ದಾನೆ ಮತ್ತು ಪೈಜಾಮಾದ ಲಾಡಿಯನ್ನು ಎಳೆದು ತುಂಡರಿಸಿದ್ದಾನೆ ಎಂಬ ಆರೋಪವಿದೆ. ಇದರಿಂದಾಗಿ ಸಂತ್ರಸ್ತೆ ನಗ್ನವಾಗಿದ್ದಾಳೆ ಎಂಬುದು ಉಲ್ಲೇಖಿಸಲಾಗಿಲ್ಲ. ಸಂತ್ರಸ್ತೆ ಮೇಲೆ ಲೈಂಗಿಕ ಕ್ರಿಯೆ ನಡೆಸಲು ಯತ್ನಿಸಲಾಗಿದೆ ಎಂಬ ಆರೋಪವಿಲ್ಲ. ಆದ್ದರಿಂದಾಗಿ ಇದು ಅತ್ಯಾಚಾರ ಯತ್ನ ಪ್ರಕರಣವಾಗುವುದಿಲ್ಲ” ಎಂದು ಮಿಶ್ರಾ ತನ್ನ ಆದೇಶದಲ್ಲಿ ಹೇಳಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ಕೊಪ್ಪಳದಲ್ಲಿ ದಾರುಣ ಘಟನೆ: ವಿದೇಶಿ ಯುವತಿಯ ಸಹಿತ ಸ್ಥಳೀಯ ಯುವತಿಗೆ ಹಲ್ಲೆಗೈದು ಅತ್ಯಾಚಾರ ನಡೆಸಿದ ದುರುಳರು!
ಸದ್ಯ ಈ ತೀರ್ಪನ್ನು ಹಲವು ಮಂದಿ ಪ್ರಶ್ನಿಸಿದ್ದಾರೆ. ಹಿರಿಯ ವಕೀಲೆ ಇಂದಿರಾ ಜೈ ಸೀಂಗ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, “ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಸುಮೋಟೋ ಪ್ರಕರಣ ದಾಖಲಿಸಿಕೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ. ಹಾಗೆಯೇ ಸಾಮಾಜಿಕ ಮಾಧ್ಯಮದಲ್ಲಿ ಈ ತೀರ್ಪಿಗೆ ಟೀಕೆ ವ್ಯಕ್ತವಾಗಿದೆ.
ಇತ್ತೀಚೆಗೆ ದೆಹಲಿ ಹೈಕೋರ್ಟ್ ಕೂಡಾ ಇಂತಹುದ್ದೆ ತೀರ್ಪು ನೀಡಿತ್ತು. “ಬಾಲಕಿಯ ತುಟಿಯನ್ನು ಸ್ಪರ್ಶಿಸುವುದು ಅಥವಾ ಒತ್ತುವುದು, ಆಕೆಯ ಪಕ್ಕದಲ್ಲಿ ಮಲಗುವುದು ಪೋಕ್ಸೊ ಅಡಿಯಲ್ಲಿರುವ ತೀವ್ರ ಸ್ವರೂಪದ ಲೈಂಗಿಕ ಹಲ್ಲೆ ಆಗುವುದಿಲ್ಲ” ಎಂದು ಹೇಳಿದೆ.
ಸ್ತನ ಮುಟ್ಟುವುದು, ಪೈಜಾಮಾ ಎಳೆದು ಯಾರೂ ಇಲ್ಲದ ಕಾಲುವ ಎಡೆ ಎಳೆದೊಯ್ಯುವುದು ಅತ್ಯಾಚಾರ ಯತ್ನವಲ್ಲ ಎಂದಾದರೆ, ಬೇರೆ ಯಾವುದು ಅತ್ಯಾಚಾರ ಯತ್ನ ಎಂಬ ಪ್ರಶ್ನೆ ಇಲ್ಲಿ ಹುಟ್ಟುತ್ತದೆ. ಮಹಿಳೆಯ ದೇಹದ ಯಾವ ಅಂಗವನ್ನಾದರೂ ಆಕೆಯ ಒಪ್ಪಿಗೆ ಇಲ್ಲದೆ ಮುಟ್ಟಿದರೆ ಅದು ಲೈಂಗಿಕ ದೌರ್ಜನ್ಯವಾಗುತ್ತದೆ. ಹಾಗೆಯೇ ಆಕೆಯನ್ನು ನಗ್ನಳಾಗಿಸುವ ಯತ್ನ ಮಾಡಿದರೆ ಅದು ಖಂಡಿತವಾಗಿಯೂ ಅತ್ಯಾಚಾರ ಯತ್ನವಾಗುತ್ತದೆ.
ಹೆಣ್ಣು ಎಲ್ಲಾ ವಲಯದಲ್ಲಿ ಮುನ್ನಡೆ ಸಾಧಿಸಿದರೂ ಇಂದಿಗೂ ಆಕೆಯ ಮೇಲೆ ನಡೆಯುವ ದೌರ್ಜನ್ಯ ನಿಂತಿಲ್ಲ, ಕಡಿಮೆಯೂ ಆಗಿಲ್ಲ. ಪುರುಷರು ಆಕೆಯನ್ನು ನೋಡುವ ಕಣ್ಣು ಇಂದಿಗೂ ಬದಲಾಗಿಲ್ಲ. ದೇಶದಲ್ಲಿ ಪ್ರತಿ 15 ನಿಮಿಷಕ್ಕೊಮ್ಮೆ ಓರ್ವ ಮಹಿಳೆಯ ಮೇಲೆ ಅತ್ಯಾಚಾರ ನಡೆಯುತ್ತದೆ ಎಂದು ಸರ್ಕಾರದ ವರದಿ ಹೇಳುತ್ತದೆ. ಅತ್ಯಾಚಾರಕ್ಕೆ ಹೆಣ್ಣು ಮೈ ತೋರುವಂತೆ ಬಟ್ಟೆ ಧರಿಸುವುದೇ ಕಾರಣ ಎಂಬ ಆರೋಪವನ್ನು ಈ ಪುರುಷ ಪ್ರಧಾನ ಸಮಾಜ ಮಾಡುತ್ತದೆ. ಆದರೆ ನಾಲ್ಕು ವರ್ಷದ ಮಗುವಿನ ಮೇಲೆ, 80 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರ ನಡೆಸಲು ಯಾವ ಬಟ್ಟೆ, ಯಾವ ಅಂಗ ಆಕರ್ಷಿಸುತ್ತದೆ?

Proper guide lines to advocates need toimpose
Tirupu Kottiro Magalige E Gatane Nadediddare Ivaru En Maduttiddaru,