ಅಹಮಾದಾಬಾದ್‌ನ ಸರ್ದಾರ್ ವಲ್ಲಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನ ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಹಾಸ್ಟಲ್ ಕಟ್ಟಡವೊಂದರಲ್ಲಿ ಪತನಗೊಂಡಿದೆ. ವಿವಿಧ ದೇಶದವರು ಸೇರಿ 242 ಮಂದಿ ಪ್ರಯಾಣಿಕರಿದ್ದ ಈ ವಿಮಾನ ನೆಲಕ್ಕಪ್ಪಳಿಸುತ್ತಿದ್ದಂತೆ ಭಾರೀ ಸ್ಪೋಟ ಸಂಭವಿಸಿದ್ದು, ಬೆಂಕಿಯಲ್ಲಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ವಿಮಾನದ ಅವಶೇಷಗಳು ವಿಮಾನ ನಿಲ್ದಾಣದ ಸುತ್ತಲೂ ಬಿದ್ದಿದ್ದು, ರಕ್ಷಣಾ ಕಾರ್ಯಚರಣೆ ಆರಂಭಗೊಂಡಿದೆ. ಗುಜರಾತ್‌ನಲ್ಲಿ ಅತಿದೊಡ್ಡ ವಿಮಾನ ಅಪಘಾತ ಇದೆಂದು ಬಣಿಸಲಾಗುತ್ತಿದೆ. ಅಪಘಾತದ ಭೀಕರ ದೃಶ್ಯ ಹೇಗಿತ್ತು ಎಂಬುದನ್ನು ದೃಶ್ಯಗಳು ಹಾಗೂ ಭಾವಚಿತ್ರಗಳಲ್ಲಿ ಗಮನಿಸಬಹುದು.






