ಗುಜರಾತ್‌ನಲ್ಲಿ 2021ರಿಂದ ಈವರೆಗೆ ಮೂರು ವರ್ಷದಲ್ಲಿ 16,155 ಕೋಟಿ ರೂ. ಮೌಲ್ಯದ 87,607 ಕಿ.ಗ್ರಾಂ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾದಕ ದ್ರವ್ಯ ರಿವಾರ್ಡ್ ನೀತಿ (ಎನ್‌ಆರ್‌ಪಿ) ಅಡಿಯಲ್ಲಿ ಕಾರ್ಯಾಚರಣೆ ನಡೆಸಿರುವ ಪೊಲೀಸರು 87 ಟನ್ ಮಾದಕ ವಸ್ತುಗಳನ್ನು ವಶಕ್ಕೆ ಪಡೆಸಿದ್ದಾರೆ. ಎನ್ಆರ್‌ಪಿ ಕಾಯ್ದೆಯಡಿ 2,500ಕ್ಕೂ ಹೆಚ್ಚು ಶಂಕಿತರನ್ನು ಬಂಧಿಸಿದ್ದಾರೆ. ಅಲ್ಲದೆ, ಮಾದಕ ವಸ್ತುಗಳು ಮಾರಾಟ ಮತ್ತು ಸಾಗಾಣಿಕೆಯ ಬಗ್ಗೆ ಮಾಹಿತಿ ನೀಡಿದ್ದ 64 ಮಂದಿಗೆ 51,202 ರೂ. ಬಹುಮಾನ ಘೋಷಿಸಿದ್ದಾರೆ. ಎಲ್ಲದೆ, 737 ಮಂದಿಗೆ ಒಟ್ಟು 5.13 ಕೋಟಿ ರೂ. ಬಹುಮಾನ ನೀಡುವ ಪ್ರಸ್ತಾಪವನ್ನು ಎನ್‌ಸಿಬಿ ಸಮಿತಿ ಪರಿಶೀಲಿಸುತ್ತಿದೆ ಎಂದು ವರದಿಯಾಗಿದೆ.
ಎನ್‌ಆರ್‌ಪಿ ನೀತಿಯಡಿ ಡ್ರಗ್ಸ್ ವಶಪಡಿಸಿಕೊಳ್ಳಲು ಪೊಲೀಸರಗೆ ಸಹಾಯ ಮಾಡುವ ಸರ್ಕಾರಿ ನೌಕರರು ತಮ್ಮ ವೃತ್ತಿಜೀವನದಲ್ಲಿ 20 ಲಕ್ಷ ರೂ.ಗಳವರೆಗೆ ಬಹುಮಾನ ಗಳಿಸಬಹುದು. ಅಲ್ಲದೆ, ಸಾಮಾನ್ಯ ಜನರು ಮಾಹಿತಿ ನೀಡಿದರೆ, ಪ್ರತಿ ಪ್ರಕರಣಕ್ಕೆ 2,500 ರೂ. ನೀಡಲಾಗುತ್ತದೆ.
“ಗುಜರಾತ್‌ನ ಯುವಜನರನ್ನು ರಕ್ಷಿಸಲು ಮತ್ತು ಮಾದಕ ವಸ್ತು ಜಾಲಗಳನ್ನು ನಿರ್ಮೂಲನೆ ಮಾಡಲು ‘ಮಾದಕ ವಸ್ತು ಬಹುಮಾನ ನೀತಿ’ಯು ಒಂದು ಪ್ರಮುಖ ಕ್ರಮವಾಗಿದೆ” ಎಂದು ಗೃಹ ಖಾತೆ ರಾಜ್ಯ ಸಚಿವ ಹರ್ಷ ಸಂಘವಿ ಹೇಳಿದ್ದಾರೆ.