ಜನವರಿ 14ರಂದು ಗುಜರಾತ್‌ನಲ್ಲಿ ಉತ್ತರಾಯಣ ಆಚರಣೆ ಮಾಡುತ್ತಿರುವ ಸಂದರ್ಭದಲ್ಲಿ ಗಾಳಿಪಟದ ಹರಿತವಾದ ಮಾಂಜಾ ದಾರ ಆರು ಮಂದಿಯ ಕೊರಳಿಗೆ ಉರುಳಾಗಿ ಪರಿಣಮಿಸಿ ಸಾವನ್ನಪ್ಪಿದ್ದಾರೆ, ನೂರಕ್ಕೂ ಅಧಿಕ ಮಂದಿಗೆ ಗಾಯವಾಗಿದೆ ಎಂದು ಹೇಳಲಾಗಿದೆ.
ಹರಿತವಾದ, ಗಾಜಿನಿಂದ ಲೇಪಿತವಾದ ದಾರಗಳಿಂದ ಹಲವು ಮಂದಿಗೆ ತೀವ್ರವಾದ ಗಾಯಗಳಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ. ಇನ್ನು ಈ ಹಬ್ಬದ ದಿನದಂದೇ ರಾಜ್ಯದಲ್ಲಿ ತುರ್ತು ಸೇವೆಗೆ ಒತ್ತಡ ಹೆಚ್ಚಾಗಿದೆ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ತಮಿಳುನಾಡು | ಗಾಳಿಪಟಕ್ಕೆ ಬಳಸುವ ಮಾಂಜಾ ದಾರ; ತಯಾರಿಕೆ – ಮಾರಾಟ ನಿಷೇಧ
ಇನ್ನು 14ರಂದು ರಾತ್ರಿ 9 ಗಂಟೆಯ ವೇಳೆ 108 ತುರ್ತು ಸಹಾಯವಾಣಿಗೆ 4,256 ಕರೆಗಳು ಬಂದಿದೆ. ಹಬ್ಬದ ನಡುವೆ ಈ ಸೇವೆಯನ್ನು ತುರ್ತಾಗಿ ನೀಡುವಲ್ಲಿ ಅಡಚಣೆ ಉಂಟಾಗಿದೆ ಎಂದು ಹೇಳಲಾಗಿದೆ.
ರಾಜ್‌ಕೋಟ್‌ನಲ್ಲಿ ಗಾಳಿಪಟದ ದಾರ ಗಂಟಲನ್ನೇ ಸೀಳಿದ್ದು ಬೈಕ್ ಸವಾರ ಒಬ್ಬರು ಸಾವನ್ನಪ್ಪಿದ್ದಾರೆ. ಇನ್ನು ಸುರೇಂದ್ರ ನಗರದಲ್ಲಿಯೂ ಇದೇ ರೀತಿಯ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಇನ್ನು ಹಲೋಲ್‌ನ ರಹತ್ಲಾವ್ ಗ್ರಾಮದ 5 ವರ್ಷದ ಕುನಾಲ್ ಎಂಬ ಬಾಲಕ ಕತ್ತನ್ನು ಗಾಳಿಪಟದ ದಾರ ಸೀಳಿದ್ದು ಬಾಲಕ ಸಾವನ್ನಪ್ಪಿದ್ದಾನೆ.
ಇನ್ನು ಕಸ್ಬಾ ಪ್ರದೇಶದಲ್ಲಿ ವಿದ್ಯುತ್ ತಂತಿಯಲ್ಲಿ ಸಿಲುಕಿದ್ದ ಗಾಳಿಪಟ ದಾರವನ್ನು ತೆಗೆದುಹಾಕಲು ಪ್ರಯತ್ನಿಸುವಾಗ ಮಹಿಳೆಯೊಬ್ಬರು ವಿದ್ಯುತ್ ತಗುಲಿ ಸಾವನ್ನಪ್ಪಿದ್ದಾರೆ. ಇನ್ನು ಮಹಿಳೆಯನ್ನು ರಕ್ಷಿಸಲು ಯತ್ನಿಸಿದ ಸಹೋದರ ಕೂಡಾ ವಿದ್ಯುತ್ ತಗುಲಿ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದೆ.
ಉತ್ತರಾಯಣ ಆಚರಣೆಯ ಸಮಯದಲ್ಲಿ ಮೆಹ್ಸಾನಾ ಜಿಲ್ಲೆಯಲ್ಲಿ ಮತ್ತೊಂದು ದುರಂತ ಘಟನೆ ಸಂಭವಿಸಿದೆ. ವಡ್ನಾಗರ ತಾಲೂಕಿನ ವಡ್ಬಾರ್ ಗ್ರಾಮದ 35 ವರ್ಷದ ಮನ್ಸಾಜಿ ರಗುಂಜಿ ಠಾಕೋರ್ ದಾರ ತಗುಲಿ ಸಾವನ್ನಪ್ಪಿದ್ದಾರೆ.
ಇದನ್ನು ಓದಿದ್ದೀರಾ? ಗದಗ | ಮಾಂಜಾ ದಾರ ಬಳಕೆ ನಿಷೇಧ; ಬಳಕೆ ಮಾಡುವುದು ಕಂಡುಬಂದಲ್ಲಿ ಕಠಿಣ ಕ್ರಮ: ಡಿಸಿ
ಇನ್ನು ಉತ್ತರಾಯಣ ಹಬ್ಬದ ಸಂದರ್ಭದಲ್ಲಿ ಪ್ರಾಣಿಗಳು, ಪಕ್ಷಿಗಳು ಮತ್ತು ಜನರಿಗೆ ಗಾಯಗಳಾಗಿರುವ ವರದಿಯಾಗಿದೆ. ಸಂಜೆ 6 ಗಂಟೆಯ ಹೊತ್ತಿಗೆ ಕರುಣಾ ಅನಿಮಲ್ ಆ್ಯಂಬುಲೆನ್ಸ್ 1,402 ತುರ್ತು ಕರೆಗಳನ್ನು ಸ್ವೀಕರಿಸಿದ್ದು, ಈ ಪೈಕಿ ಪ್ರಾಣಿಗಳ ರಕ್ಷಣೆಗೆ 758 ಮತ್ತು ಪಕ್ಷಿಗಳ ರಕ್ಷಣೆಗೆ 644 ಕರೆಗಳು ಬಂದಿದೆ.
ಸಾಮಾನ್ಯವಾಗಿ ಪ್ರತಿದಿನ 3,000ರಿಂದ 4,000 ತುರ್ತು ಸೇವೆಯ ಕರೆಗಳು 108ಕ್ಕೆ ಬರುತ್ತದೆ. ಆದರೆ ಜನವರಿ 14 ಮತ್ತು 15 ರಂದು ಕರೆಗಳ ಪ್ರಮಾಣ ಶೇಕಡ 70ರಷ್ಟು ಹೆಚ್ಚಳವಾಗಿದೆ. ಜನವರಿ 14ರಂದು ಅಂದಾಜು 4,900 ಮತ್ತು ಜನವರಿ 15ರಂದು 4,500 ಪ್ರಕರಣಗಳು ದಾಖಲಾಗಿವೆ.
ರಾಜ್ಯದಲ್ಲಿ ಉತ್ತರಾಯಣ ಹಬ್ಬದ ಹಿನ್ನೆಲೆಯಲ್ಲಿ ಗಾಳಿಪಟ ಹಾರಿಸಲು ಬಳಸುವ ಎಲ್ಲಾ ರೀತಿಯ ಗಾಜು ಲೇಪಿತ ದಾರಗಳನ್ನು ನಿಷೇಧಿಸಲಾಗಿದೆ ಎಂದು ಗುಜರಾತ್ ಹೈಕೋರ್ಟ್ ಶುಕ್ರವಾರ ಸ್ಪಷ್ಟಪಡಿಸಿದೆ. ಆದರೂ ಕೂಡಾ ಬಳಸಲಾಗಿದೆ.
