ಇತ್ತೀಚಿಗೆ ವಿವಾಹಿತ ಮಹಿಳೆಯೊಬ್ಬರನ್ನು ಕೊಲೆ ಮಾಡಿದ ಆರೋಪಕ್ಕಾಗಿ 35 ವರ್ಷದ ವಿಮಲ್ ಸೋನಿ ಎಂಬ ಜಿಮ್ ತರಬೇತುದಾರರೊಬ್ಬರನ್ನು ಕಾನ್ಪುರದಲ್ಲಿ ಸ್ಥಳೀಯ ಪೊಲೀಸರು ಬಂಧಿಸಿದ್ದರು. ಕೊಲೆಗೆ ‘ದೃಶ್ಯಂ’ ಸಿನಿಮಾ ಪ್ರೇರಣೆ ಎಂಬುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.
ವಿವಾಹಿತ ಮಹಿಳೆ ಎಕ್ತಾ ಕಪೂರ್ ಎಂಬುವರ ಜೊತೆ ಸಂಬಂಧ ಹೊಂದಿದ್ದ ಜಿಮ್ ತರಬೇತುದಾರ ಆಕೆಯನ್ನು ಕೊಲೆ ಮಾಡಿ ಶವವನ್ನು ಕಾನ್ಪುರದ ಸಿವಿಲ್ ಲೈನ್ಸ್‌ನಲ್ಲಿರುವ ಜಿಲ್ಲಾಧಿಕಾರಿ ಅವರ ನಿವಾಸದ ಬಳಿ ಹೂತಿದ್ದ.
ತಾನು ಮದುವೆಯಾಗಲು ವಿವಾಹಿತ ಮಹಿಳೆ ಆಕ್ಷೇಪಿಸಿದ ಕಾರಣ ಕೊಲೆ ಮಾಡಿದ್ದ. ಕೊಲೆ ಮಾಡಿ ಶವವನ್ನು ಹೂಳಲು ಬಾಲಿವುಡ್‌ನ ಅಜಯ್ ದೇವಗನ್ ಅಭಿನಯದ ‘ದೃಶ್ಯಂ ಚಿತ್ರದಿಂದ ಪ್ರೇರಾಪಿತನಾಗಿದ್ದ.
ಮಹಿಳೆಯನ್ನು ಕೊಲೆ ಮಾಡಿ ಆಕೆಯ ಶವವನ್ನು ಜಿಲ್ಲಾಧಿಕಾರಿ ಮನೆಯ ಮುಂದಿನ ಆಫೀಸರ್ಸ್ ಕ್ಲಬ್ ಕಾಂಪೌಂಡ್‌ನಲ್ಲಿ ವಿಮಲ್ ಸೋನಿ ಸಮಾಧಿ ಮಾಡಿದ್ದ. ‘ದೃಶ್ಯಂ’ ಸಿನಿಮಾದಿಂದ ಸ್ಫೂರ್ತಿ ಪಡೆದ ಆರೋಪಿ, ಶವವನ್ನು ಹೂಳಲು ಜಿಲ್ಲಾಧಿಕಾರಿ ನಿವಾಸದ ಬಳಿಯ ಜಾಗ ಆಯ್ಕೆ ಮಾಡಿಕೊಂಡಿದ್ದಾನೆ.
ಆದರೆ, ವಿಮಲ್ ಸೋನಿಯ ಕೃತ್ಯ ನಾಲ್ಕು ತಿಂಗಳುಗಳ ಬಳಿಕ ಬಯಲಾಗಿತ್ತು. ಪೊಲೀಸರು ಕಳೆದ ಶನಿವಾರ ಆರೋಪಿಯನ್ನು ಬಂಧಿಸಿದ್ದರು. 32 ವರ್ಷದ ಏಕ್ತಾ ಗುಪ್ತಾ ಅವರನ್ನು ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ವಿಮಲ್ ಒಪ್ಪಿಕೊಂಡಿದ್ದ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಒಳ ಮೀಸಲಾತಿ ತೀರ್ಮಾನ: ಹೋರಾಟಕ್ಕೆ ಸಂದ ಜಯ, ಕಾಯಿಸದಿರಲಿ ಸರ್ಕಾರ
‘ಜೂನ್ 24ರಂದು ವಿಮಲ್, ಜಿಮ್‌ಗೆ ಬಂದಿದ್ದ ಏಕ್ತಾಳನ್ನು ತಮ್ಮ ಸಂಬಂಧದ ಬಗ್ಗೆ ಚರ್ಚಿಸುವ ಉದ್ದೇಶದಿಂದ ಏಕಾಂತ ಸ್ಥಳಕ್ಕೆ ಕರೆದೊಯ್ದಿದ್ದಾನೆ. ಅಲ್ಲಿ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ. ಈ ವೇಳೆ ವಿಮಲ್, ಏಕ್ತಾಳ ಕುತ್ತಿಗೆಗೆ ಬಲವಾಗಿ ಗುದ್ದಿದ ಕಾರಣ ಆಕೆ ಮೃತಪಟ್ಟಿದ್ದಾಳೆ’ ಎಂದು ಮಾಹಿತಿ ನೀಡಿದ್ದಾರೆ.
ಪತ್ನಿ ಮನೆಗೆ ಬಾರದಿರುವುದನ್ನು ಆತಂಕಗೊಂಡು ಪತಿ ರಾಹುಲ್ ಗುಪ್ತ ಎಂಬುವವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನನ್ವಯ ಪ್ರಕರಣದ ಜಾಡು ಹಿಡಿದ ಪೊಲೀಸರು ನಾಲ್ಕು ತಿಂಗಳ ಬಳಿಕ ಆರೋಪಿಯನ್ನು ಬಂಧಿಸಿದ್ದರು.
‘ದೃಶ್ಯಂ ಚಲನಚಿತ್ರದಿಂದ ಪ್ರೇರಿತನಾದ ವಿಮಲ್ ಮೃತ ದೇಹವನ್ನು ಜಿಲ್ಲಾಧಿಕಾರಿಗಳ ಕಚೇರಿಯ ಬಳಿ ಹೂತುಹಾಕಿದರೆ ಯಾರಿಗೂ ಅನುಮಾನ ಬರುವುದಿಲ್ಲ. ಪತ್ತೆಯಾಗುವ ಸಾಧ್ಯತೆ ಕಡಿಮೆ ಎಂದು ತಿಳಿದು ಕಾಂಪೌಂಡ್ ಬಳಿ ಸಮಾಧಿ ಮಾಡಿರುವುದಾಗಿ ತಿಳಿಸಿದ್ದಾನೆ.
ಪೊಲೀಸರು ಪತ್ತೆಹಚ್ಚುವುದನ್ನು ತಪ್ಪಿಸಲು ಆತ ಈ ಪ್ರದೇಶದ ಸಮೀಪದಲ್ಲಿ ಮೊಬೈಲ್ ಫೋನ್ ಬಳಕೆಯನ್ನೂ ನಿಲ್ಲಿಸಿದ್ದ. ಆದರೂ ಪೊಲೀಸರು ಶವ ಪತ್ತೆಹಚ್ಚಿ, ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿಯು ಏಕ್ತಾಳನ್ನು ಕೊಲೆ ಮಾಡಿದ್ದಾನೆ ಎನ್ನಲಾದ ಸ್ಥಳವು ಜಿಲ್ಲಾಧಿಕಾರಿ ಅವರ ಕ್ಯಾಂಪ್ ಆಫೀಸ್‌ನಿಂದ ಕೆಲವು ಮೀಟರ್‌ಗಳಷ್ಟು ದೂರದಲ್ಲಿತ್ತು.
