ಹಸು ಕಳ್ಳಸಾಗಣೆ ಆರೋಪದ ಮೇಲೆ ಇಬ್ಬರು ಯುವಕರನ್ನು ಗೋರಕ್ಷಕ ಪುಂಡರು ಅಮಾನುಷವಾಗಿ ಥಳಿಸಿದ್ದು, ಓರ್ವನನ್ನು ಕೊಂದಿರುವ ಹೃದಯವಿದ್ರಾವಕ ಘಟನೆ ಹರಿಯಾಣದ ಪಲ್ವಾಲ್‌ನಲ್ಲಿ ನಡೆದಿದೆ. ಯುವಕರ ವಾಹನವನ್ನು ಪೊಲೀಸರು ತಡೆದಿದ್ದು, ಬಳಿಕ ಯುಕರನ್ನು ಪೊಲೀಸರೇ ಗೋರಕ್ಷಕ ದುಷ್ಕರ್ಮಿಗಳ ಗುಂಪಿನ ವಶಕ್ಕೆ ನೀಡಿದ್ದಾರೆ ಎಂದು ಆರೋಪಿಲಾಗಿದೆ.
ಪಲ್ವಾಲ್‌ನಲ್ಲಿ ಇಬ್ಬರು ಯುವಕರು – ಬಾಲ್ ಕಿಶನ್ ಮತ್ತು ಸಂದೀಪ್ – ಹಸುಗಳನ್ನು ಪಿಕಪ್ ವಾಹನದಲ್ಲಿ ಸಾಗಿಸುತ್ತಿದ್ದರು. ಈ ವೇಳೆ, ಅವರನ್ನು ಪೊಲೀಸರು ತಡೆದಿದ್ದಾರೆ. ಬಳಿಕ, ಯುವಕರನ್ನು ಗೋರಕ್ಷಕರ ಹೆಸರಿನಲ್ಲಿ ದಾಂಧಲೆ ನಡೆಸುತ್ತಿದ್ದ ದುಷ್ಕರ್ಮಿಗಳ ಗುಂಪಿಗೆ ಒಪ್ಪಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಇಬ್ಬರನ್ನೂ ಅಮಾನುಷವಾಗಿ ಥಳಿಸಿದ ಹಿಂದುತ್ವವಾದಿ ಗೋರಕ್ಷಕ ದುಷ್ಕರ್ಮಿಗಳು, ಗಾಯಾಳುಗಳನ್ನು ಗುರುಗ್ರಾಮದ ಕಾಲುವೆಗೆ ಎಸೆದಿದ್ದಾರೆ. ಸಂದೀಪ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಬಾಲ್ ಕಿಶನ್ ಬದುಕುಳಿದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಉಳಿದವರ ಬಂಧನಕ್ಕೆ ಹುಡುಕಾಟ ನಡೆಸುತ್ತಿದ್ದಾರೆ.
ಘಟನೆಯ ಬಗ್ಗೆ ವಿವರಿಸಿರುವ ಬಾಲ್ ಕಿಶನ್, “ಫೆಬ್ರವರಿ 22ರಂದು ಘಟನೆ ನಡೆದಿದೆ. ರಾಜಸ್ಥಾನದ ಗಂಗಾನಗರದಿಂದ ಉತ್ತರ ಪ್ರದೇಶದ ಲಕ್ನೋಗೆ ಪಿಕಪ್ ವ್ಯಾನ್‌ನಲ್ಲಿ ಎರಡು ಹಸುಗಳನ್ನು ಸಾಗಿಸುತ್ತಿದ್ದೆವು. ಈ ವೇಳೆ, ದಾರಿ ತಪ್ಪಿ ಬೇರೊಂದು ರಸ್ತೆಯಲ್ಲಿ ಸಾಗಿದ್ದೆವು. ನಮ್ಮನ್ನು ಪೊಲೀಸ್ ವಾಹನವೊಂದು ತಡೆದು ನಿಲ್ಲಿಸಿತು. ಬಳಿಕ, ಗೋರಕ್ಷಕರೆಂದು ಕರೆಯಲ್ಪಡುವ ಗುಂಪಿಗೆ ಒಪ್ಪಿಸಿತು. ಗೋರಕ್ಷಕರು ನಮ್ಮನ್ನು ಎಳೆದೊಯ್ದು, ಅಮಾನುಷವಾಗಿ ಥಳಿಸಿದರು. ನಮ್ಮನ್ನು ಕೊಲ್ಲಲೆಂದು ಸಿಲಾನಿ ಗ್ರಾಮದ ಬಳಿಯ ಗುರುಗ್ರಾಮ ಕಾಲುವೆಗೆ ಎಸೆದರು. ನೀರಿನಲ್ಲಿ ಮುಳುಗಿ ಸಂದೀಪ್ ಸಾವನ್ನಪ್ಪಿದ್ದಾರೆ. ನಾನು ಬದುಕುಳಿದು ಕಾಲುವೆಯಿಂದ ಹೊರಬಂದೆ” ಎಂದು ಹೇಳಿದ್ದಾರೆ.
Self-proclaimed 'gau rakshaks' kidnapped a truck driver and a conductor on suspicion of cow smuggling in #Haryana's #Palwal, brutally beat them up, and threw the duo into a canal, assuming both were dead.
— Hate Detector 🔍 (@HateDetectors) March 6, 2025
Driver #Balkishan survived, but conductor #Sandeep died. Five accused out… pic.twitter.com/v8yvHfPL7d
“ಸೋಹ್ನಾ ಪೊಲೀಸ್ ಠಾಣೆಗೆ ತೆರಳಿ, ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ. ನನ್ನನ್ನು ಪೊಲೀಸರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದರು” ಎಂದು ಹೇಳಿದ್ದಾರೆ.
ಪೊಲೀಸರು ಸಂದೀಪ್ ಅವರ ಮೃತದೇಹವನ್ನು ಪತ್ತೆ ಮಾಡಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಅಲ್ಲದೆ, ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೂ ಮೂವರು ಆರೋಪಿಗಳು ಪರಾಗಿಯಾಗಿದ್ದು, ಅವರ ಸುಳಿವು ಕೊಟ್ಟವರಿಗೆ ತಲಾ 5,000 ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.