ಹರಿಯಾಣ ಚುನಾವಣೆಯ ಫಲಿತಾಂಶ ಬಹುತೇಕ ಹೊರಬೀಳುತ್ತಿದ್ದಂತೆ, “ಎಂದಿಗೂ ಅತಿಯಾದ ಆತ್ಮವಿಶ್ವಾಸ ಇರಬಾರದು, ಯಾವುದೇ ಚುನಾವಣೆಯನ್ನು ಕೇವಲವಾಗಿ ಪರಿಗಣಿಸಬಾರದು” ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಹರಿಯಾಣ ಚುನಾವಣೆಯಲ್ಲಿ ಬಿಜೆಪಿ ಕಾಂಗ್ರೆಸ್‌ಗಿಂತ ಮುನ್ನಡೆಸ ಸಾಧಿಸಿದ್ದು, ಎಕ್ಸಿಟ್ ಪೋಲ್ ಫಲಿತಾಂಶ ತಲೆಕೆಳಗಾಗಿದೆ. ಈ ಬೆನ್ನಲ್ಲೇ ಎಎಪಿ ಮುನ್ಸಿಪಲ್ ಕೌನ್ಸಿಲರ್‌ಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಅರವಿಂದ್ ಕೇಜ್ರಿವಾಲ್ ಅವರು “ಎಂದಿಗೂ ಅತಿಯಾದ ಆತ್ಮವಿಶ್ವಾಸ ಇರಬಾರದು” ಎಂದಿದ್ದಾರೆ.
“ದೆಹಲಿ ಚುನಾವಣೆ ಸಮೀಪಿಸುತ್ತಿದೆ. ಮೊದಲನೆಯದಾಗಿ ನಾವು ಯಾವುದೇ ಚುನಾವಣೆಯನ್ನು ಲಘುವಾಗಿ ಪರಿಗಣಿಸಬಾರದು. ಈಗ ಫಲಿತಾಂಶ ಏನೆಂದು ತಿಳಿದಿಲ್ಲ. ಆದರೆ ಎಂದಿಗೂ ಅತಿಯಾದ ಆತ್ಮವಿಶ್ವಾಸ ಇರಬಾರದು ಎಂಬುದು ಇಂದಿನ ಚುನಾವಣೆಯಿಂದ ಎಲ್ಲರಿಗೂ ಸಿಕ್ಕ ಪಾಠವಾಗಿದೆ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಎಎಪಿ ಹರಿಯಾಣದಲ್ಲಿ ಸ್ಪರ್ಧಿಸಿದ್ದೇ ಕಾಂಗ್ರೆಸ್ ಸೋಲಿಸಲು; ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ ಆರೋಪ
“ಯಾವುದೇ ಚುನಾವಣೆಯನ್ನು ನಾವು ಲಘುವಾಗಿ ಪರಿಗಣಿಸಬಾರದು. ಎಲ್ಲಾ ಚುನಾವಣೆಗಳೂ ಕಠಿಣವಾಗಿರುತ್ತದೆ. ಪ್ರತಿ ಚುನಾವಣೆಯಲ್ಲಿ ಪ್ರತಿ ಕ್ಷೇತ್ರದಲ್ಲಿ ಸ್ಪರ್ಧೆಯೂ ಕಠಿಣವಾಗಿರುತ್ತದೆ. ನಾವು ಅದಕ್ಕಾಗಿ ಕಷ್ಟಪಟ್ಟು ಪ್ರಯತ್ನ ಮಾಡಬೇಕು. ನಿಮ್ಮ ಶಾಸಕರ ಜೊತೆಗೆ ಗಲಾಟೆ ಮಾಡಬೇಡಿ” ಎಂದು ಹರಿಯಾಣದಲ್ಲಿ ಕಾಂಗ್ರೆಸ್ ಒಳಜಗಳದ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಹಾಗೆಯೇ ಜೊತೆಗೆ ಯಾವುದೇ ವಿಚಾರದಲ್ಲಿ ಜಗಳ ಮಾಡಿಕೊಳ್ಳದಂತೆ, ಸದ್ಯ ಚುನಾವಣೆಯತ್ತ ಗಮನ ಹರಿಸುವಂತೆ ತಮ್ಮ ಕಾರ್ಯಕರ್ತರಿಗೆ ತಿಳಿಸಿದ್ದಾರೆ. ಹಾಗೆಯೇ ಪರಿವಾರದ ಒಳಗೆ ಜಗಳ ಸಾಮಾನ್ಯ, ಚುನಾವಣೆಯಲ್ಲಿ ಗೆದ್ದ ಬಳಿಕ ನಾವು ಅದನ್ನೆಲ್ಲ ನೋಡಿಕೊಳ್ಳುವ ಎಂದರು.
ಹರಿಯಾಣದಲ್ಲಿ ಬಿಜೆಪಿ 49 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೆ ಕಾಂಗ್ರೆಸ್ 35 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
VIDEO | "Let us see what the results are in Haryana. The biggest lesson of this is that one should never be overconfident in the elections," says AAP national convenor Arvind Kejriwal (@ArvindKejriwal), while addressing a gathering of the AAP municipal councillors in Delhi.… pic.twitter.com/Icl1m96qPy
— Press Trust of India (@PTI_News) October 8, 2024
