ಜಮ್ಮು ಕಾಶ್ಮೀರದಲ್ಲಿ ಮತ್ತು ಹರಿಯಾಣದಲ್ಲಿ ನಡೆದ ವಿಧಾನಸಭೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯು ನಾಳೆ ಬೆಳಿಗ್ಗೆ 8 ಗಂಟೆಗೆ ಆರಂಭವಾಗಲಿದೆ. ಅಕ್ಟೋಬರ್ 5ರಂದು ಮತದಾನ ಪ್ರಕ್ರಿಯೆ ಕೊನೆಯಾಗಿದ್ದು, ಅಕ್ಟೋಬರ್ 8ರಂದು ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
ಹರಿಯಾಣದ ಎಲ್ಲಾ 90 ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 5ರಂದು ಮತದಾನ ನಡೆದಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟು ಮೂರು ಹಂತದಲ್ಲಿ ಚುನಾವಣೆ ನಡೆದಿದೆ. ಸೆಪ್ಟೆಂಬರ್ 18ರಂದು 24 ಕ್ಷೇತ್ರಗಳಲ್ಲಿ, ಸೆಪ್ಟೆಂಬರ್ 25ರಂದು 26 ಕ್ಷೇತ್ರಗಳಲ್ಲಿ ಮತ್ತು ಅಕ್ಟೋಬರ್ 1ರಂದು 40 ಕ್ಷೇತ್ರಗಳಲ್ಲಿ ಮತದಾನ ನಡೆದಿದೆ.
ಇದನ್ನು ಓದಿದ್ದೀರಾ? ಜಮ್ಮು ಕಾಶ್ಮೀರ ವಿಧಾನಸಭೆ ಚುನಾವಣೆ: ಮೊದಲ ಹಂತದ 24 ಕ್ಷೇತ್ರಗಳಲ್ಲಿ ಮತದಾನ ಆರಂಭ
ಹರಿಯಾಣದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಜೆಪಿ, ಇಂಡಿಯನ್ ನ್ಯಾಷನಲ್ ಲೋಕ ದಳ ಕಣದಲ್ಲಿರುವ ಪ್ರಮುಖ ಪಕ್ಷಗಳಾದರೆ, ಜಮ್ಮು ಕಾಶ್ಮೀರದಲ್ಲಿ ಬಿಜೆಪಿ, ಕಾಂಗ್ರೆಸ್, ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್, ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಕಣದಲ್ಲಿದೆ.
ಹರಿಯಾಣ ವಿಧಾನಸಭೆ ಚುನಾವಣೆ
ಮತದಾರರ ಪಟ್ಟಿಯ ಪ್ರಕಾರ ಹರಿಯಾಣದಲ್ಲಿ ಒಟ್ಟು 2,03,00,255 ಮತದಾರರಿದ್ದಾರೆ. ಪ್ರಸ್ತುತ ಬಿಜೆಪಿ ಹರಿಯಾಣದಲ್ಲಿ ಅಧಿಕಾರದಲ್ಲಿದೆ. ಮನೋಹರ್ ಲಾಲ್ ಖಟ್ಟರ್ 2014ರಿಂದ 2024ರವರೆಗೆ ಹರಿಯಾಣ ಮುಖ್ಯಮಂತ್ರಿಯಾಗಿದ್ದು ಈ ವರ್ಷದ ಮಾರ್ಚ್‌ನಲ್ಲಿ ನಯಾಬ್ ಸಿಂಗ್ ಸೈನಿ ಸಿಎಂ ಆದರು.
ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ ಹರಿಯಾಣದಲ್ಲಿ ಗದ್ದುಗೆಯನ್ನು ಕಳೆದುಕೊಳ್ಳಲಿದೆ, ಅಧಿಕಾರ ಕಾಂಗ್ರೆಸ್ ಕೈ ಸೇರಲಿದೆ ಎಂದು ಹೇಳಿದೆ. ಬಿಜೆಪಿಯ ಭವಿಷ್ಯ ನಾಳೆ ನಿರ್ಧಾರವಾಗಲಿದೆ.
ಇದನ್ನು ಓದಿದ್ದೀರಾ? ಹರಿಯಾಣ ವಿಧಾನಸಭೆ ಚುನಾವಣೆ | ರಾಹುಲ್ ಭೇಟಿಯಾದ ವಿನೇಶ್ ಫೋಗಟ್, ಬಜರಂಗ್ ಪುನಿಯಾ
2019ರಲ್ಲಿ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 40 ಸ್ಥಾನ ಗೆದ್ದಿದೆ. ಬಿಜೆಪಿಗೆ ಹತ್ತು ಕ್ಷೇತ್ರಗಳಲ್ಲಿ ಗೆದ್ದ ದುಶ್ಯಂತ್ ಚೌಟಾಲಾ ಅವರ ಜನನಾಯಕ್ ಜನತಾ ಪಕ್ಷ (ಜೆಜೆಪಿ) ಬೆಂಬಲ ನೀಡಿ ಸಮ್ಮಿಶ್ರ ಸರ್ಕಾರ ರಚಿಸಲಾಗಿತ್ತು. ಮನೋಹರ್ ಲಾಲ್ ಖಟ್ಟರ್ ಮುಖ್ಯಮಂತ್ರಿಯಾದರೆ ದುಶ್ಯಂತ್ ಉಪಮುಖ್ಯಮಂತ್ರಿಯಾದರು. ಕಾಂಗ್ರೆಸ್ 31 ಸ್ಥಾನಗಳನ್ನು ಗೆದ್ದು ಪ್ರತಿಪಕ್ಷವಾಯಿತು. ಭಾರತೀಯ ರಾಷ್ಟ್ರೀಯ ಲೋಕದಳ ಕೇವಲ ಒಂದು ಸ್ಥಾನವನ್ನು ಗೆದ್ದಿತ್ತು.
ಹರಿಯಾಣದ ಪ್ರಮುಖ ಅಭ್ಯರ್ಥಿಗಳು
ಲಾಡ್ವಾದಲ್ಲಿ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ (ಬಿಜೆಪಿ), ಗರ್ಹಿ ಸಂಪ್ಲಾ-ಕಿಲೋಯ್ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ (ಕಾಂಗ್ರೆಸ್), ಜೂಲಾನಾದಲ್ಲಿ ವಿನೇಶ್ ಫೋಗಟ್ (ಕಾಂಗ್ರೆಸ್), ಬದ್ಲಿಯಲ್ಲಿ ಓಂ ಪ್ರಕಾಶ್ ಧನಕರ್ (ಬಿಜೆಪಿ), ನಾರ್ನಾಂಡ್‌ನಿಂದ ಕ್ಯಾಪ್ಟನ್ ಅಭಿಮನ್ಯು (ಬಿಜೆಪಿ), ಉಚ್ಚನ ಕಲಾನ್‌ನಲ್ಲಿ ದುಶ್ಯಂತ್ ಚೌತಾಲಾ (ಜೆಜೆಪಿ), ಉಚ್ಚನ ಕಲಾನ್‌ನಲ್ಲಿ ಬ್ರಿಜೇಂದ್ರ ಸಿಂಗ್ (ಕಾಂಗ್ರೆಸ್) ಕಣದಲ್ಲಿದ್ದಾರೆ.
VIDEO | Haryana elections 2024: "People have given a lot of love to Congress, and it will form the government tomorrow," says Congress leader Bajrang Punia (@BajrangPunia) on exit poll predictions. #HaryanaElections2024
— Press Trust of India (@PTI_News) October 7, 2024
(Full video available on PTI Videos -… pic.twitter.com/Ugq7jeR8CM
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆ
ಮತದಾರರ ಪಟ್ಟಿಯ ಪ್ರಕಾರ ಜಮ್ಮು ಮತ್ತು ಕಾಶ್ಮೀರದಲ್ಲಿ 88,66,704 ಮತದಾರರು ಇದ್ದಾರೆ. 370ನೇ ವಿಧಿ ರದ್ದು ಮಾಡಿದ ಬಳಿಕ 2019ರಿಂದ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗಿದೆ. ಮೆಹಬೂಬಾ ಮುಫ್ತಿ ನೇತೃತ್ವದ ಪಿಡಿಪಿಯು ಬಿಜೆಪಿಗೆ ನೀಡಿದ್ದ ಬೆಂಬಲವನ್ನು ಹಿಂಪಡೆದ ಬಳಿಕ 2018ರಲ್ಲಿ ರಾಜ್ಯಪಾಲರು ಸರ್ಕಾರವನ್ನು ವಿಸರ್ಜಿಸಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಕೊನೆಯ ಬಾರಿಗೆ 2014ರಲ್ಲಿ ವಿಧಾನಸಭೆ ಚುನಾವಣೆ ನಡೆದಿತ್ತು.
ಇದನ್ನು ಓದಿದ್ದೀರಾ? ಹರಿಯಾಣ, ಜಮ್ಮು ಕಾಶ್ಮೀರ ವಿಧಾನಸಭೆ ಚುನಾವಣೆ ವೇಳಾಪಟ್ಟಿ ಬದಲು
2014ರ ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಜೆಕೆಪಿಡಿಪಿ 28 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಬಿಜೆಪಿ 25 ಕ್ಷೇತ್ರಗಳಲ್ಲಿ ಜಯ ಗಳಿಸಿತ್ತು. ಮುಫ್ತಿ ಮೊಹಮ್ಮದ್ ಸಯೀದ್ ನೇತೃತ್ವದಲ್ಲಿ ಜೆಕೆಪಿಡಿಪಿಯೊಂದಿಗೆ ಬಿಜೆಪಿ ಸಮ್ಮಿಶ್ರ ಸರ್ಕಾರ ರಚಿಸಿತು. ಒಮರ್ ಅಬ್ದುಲ್ಲಾ ನೇತೃತ್ವದ ಜೆಕೆಎನ್‌ಸಿ 15 ಸ್ಥಾನಗಳನ್ನು ಗೆದ್ದು ಪ್ರತಿಪಕ್ಷವಾಗಿದೆ. ಕಾಂಗ್ರೆಸ್ 12 ಸ್ಥಾನಗಳಲ್ಲಿ ಗೆಲುವು ಸಾದಿಸಿತ್ತು. ಸಯೀದ್ ಅವರ ಪುತ್ರಿ ಮೆಹಬೂಬಾ ಮುಫ್ತಿ ತನ್ನ ತಂದೆಯ ನಿಧನದ ನಂತರ ಜಮ್ಮು ಕಾಶ್ಮೀರದ ಮುಖ್ಯಮಂತ್ರಿಯಾದರು. ಆದರೆ ಕೇಂದ್ರ ಬಿಜೆಪಿ ಸರ್ಕಾರ 370ನೇ ವಿಧಿ ರದ್ದು ಮಾಡಿದ ಬಳಿಕ ಜಮ್ಮು ಕಾಶ್ಮೀರದಲ್ಲಿ ಬಿಜೆಪಿ ಜೊತೆಗಿನ ಮೈತ್ರಿ ಮುರಿದರು.
ಜಮ್ಮು ಕಾಶ್ಮೀರ ಪ್ರಮುಖ ಅಭ್ಯರ್ಥಿಗಳು
ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ (ಜೆಕೆಎನ್‌ಸಿ) ಗಂದರ್‌ಬಲ್ ಮತ್ತು ಬುದ್ಗಾಮ್‌ನಲ್ಲಿ, ಇಲ್ತಿಜಾ ಮೆಹಬೂಬ ಮುಫ್ತಿ (ಜೆಕೆಪಿಡಿಪಿ) ಶ್ರೀಗುಫ್ವಾರಾ-ಬಿಜ್ಬೆಹರಾನಲ್ಲಿ, ಬನಿಹಾಲ್‌ನಲ್ಲಿ ವಿಕಾರ್ ರಸೂಲ್ ವಾನಿ (ಕಾಂಗ್ರೆಸ್), ಪಾಂಪೋರ್‌ನಲ್ಲಿ ಹಸ್ನೈನ್ ಮಸೂದಿ (ಜೆಕೆಎನ್‌ಸಿ), ದೂರುವಿ ಕ್ಷೇತ್ರದಲ್ಲಿ ಗುಲಾಮ್ ಅಹ್ಮದ್ ಮಿರ್ (ಕಾಂಗ್ರೆಸ್), ನೌಶೆರಾದಿಂದ ರವೀಂದರ್ ರೈನಾ (ಬಿಜೆಪಿ), ಶ್ರೀಗುಫ್ವಾರಾ-ಬಿಜ್‌ಬೆಹರಾದಲ್ಲಿ ಸೋಫಿ ಯೂಸುಫ್ (ಬಿಜೆಪಿ), ಕುಲ್ಗಾಮ್‌ನಲ್ಲಿ ಮೊಹಮದ್ ಯೂಸುಫ್ ತರಿಗಾಮಿ (ಸಿಪಿಎಂ), ಅನಂತನಾಗ್‌ನಲ್ಲಿ ಪೀರ್ಜಾದಾ ಮೊಹಮ್ಮದ್ ಸೈಯದ್ (ಕಾಂಗ್ರೆಸ್), ಚಂಬ್‌ನಲ್ಲಿ ತಾರಾ ಚಂದ್ (ಕಾಂಗ್ರೆಸ್) ಸ್ಪರ್ಧೆಯಲ್ಲಿದ್ದಾರೆ.
