ಉತ್ತರ ಪ್ರದೇಶದ ಹತ್ರಾಸ್ ಕಾಲ್ತುಳಿತ ದುರ್ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ ಸದ್ಯ 121ಕ್ಕೆ ಏರಿಕೆಯಾಗಿದ್ದು, ಈ ಸಂಖ್ಯೆಯು ನಿರಂತರವಾಗಿ ಹೆಚ್ಚಾಗುತ್ತಿದೆ. ಈ ನಡುವೆ ಸತ್ಸಂಗ ನಡೆಸಿದ ಭೋಲೆ ಬಾಬಾ ನಾಪತ್ತೆಯಾಗಿದ್ದಾರೆ ವರದಿಯಾಗಿದೆ.
ಮಂಗಳವಾರ ನಡೆದ ಈ ಭಾರೀ ಕಾಲ್ತುಳಿತದ ಬಳಿಕ ಇಲ್ಲಿನ ಸರ್ಕಾರಿ ಆಸ್ಪತ್ರೆಯೊಳಗೆ ನೂರಾರು ಶವಗಳಿದೆ. ಸಂತ್ರಸ್ತರ ಸಂಬಂಧಿಕರು ತಮ್ಮ ಪ್ರೀತಿಪಾತ್ರರ ಪಾರ್ಥಿವ ಶರೀರವನ್ನು ಮನೆಗೆ ಕೊಂಡೊಯ್ಯಲು ಆಸ್ಪತ್ರೆ ಆವರಣದಲ್ಲಿ ಕಾಯುತ್ತಿದ್ದಾರೆ.
ಮೃತರಲ್ಲಿ ಬಹುತೇಕರು ಮಹಿಳೆಯರು ಮತ್ತು ಮಕ್ಕಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯ ಕೊತ್ವಾಲಿ ಸಿಕಂದರಾವ್ ಪ್ರದೇಶದಲ್ಲಿ ಧಾರ್ಮಿಕ ಬೋಧಕ ಭೋಲೆ ಬಾಬಾ ಅವರ ಸತ್ಸಂಗ ನಡೆದಿದೆ. ಮಧ್ಯಾಹ್ನ 3.30ರ ಸುಮಾರಿಗೆ ಬಾಬಾ ಸ್ಥಳದಿಂದ ನಿರ್ಗಮಿಸುತ್ತಿದ್ದಂತೆ ಕಾಲ್ತುಳಿತ ಸಂಭವಿಸಿದೆ.
ಇದನ್ನು ಓದಿದ್ದೀರಾ? ಉತ್ತರ ಪ್ರದೇಶ | ಹತ್ರಾಸ್ ಕಾಲ್ತುಳಿತ ಘಟನೆ: ಈವರೆಗೆ ಮೃತಪಟ್ಟವರ ಸಂಖ್ಯೆ 116
ಕಾಲ್ತುಳಿತ ನಡೆದ ಸ್ಥಳಕ್ಕೆ ಸಮೀಪವಿರುವ ಸಿಕಂದರಾ ರಾವ್ ಸಮುದಾಯ ಆರೋಗ್ಯ ಕೇಂದ್ರದ ಹೊರಗೆ ಅನೇಕರು ತಮ್ಮ ನಾಪತ್ತೆಯಾದ ಕುಟುಂಬ ಸದಸ್ಯರಿಗಾಗಿ ತಡರಾತ್ರಿಯವರೆಗೆ ಹುಡುಕಾಟ ನಡೆಸಿದ್ದಾರೆ.
ಇನ್ನು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ರಾಜೇಶ್ ಎಂಬವರು, “ನಾನು ಸುದ್ದಿ ವಾಹಿನಿಯಲ್ಲಿ ನನ್ನ ತಾಯಿಯ ಚಿತ್ರವನ್ನು ನೋಡಿ ಅವರನ್ನು ಗುರುತಿಸಿದೆ. ಅವರು ನಮ್ಮ ಹಳ್ಳಿಯ ಇತರ ಎರಡು ಡಜನ್ ಜನರೊಂದಿಗೆ ಇಲ್ಲಿ ಕಾರ್ಯಕ್ರಮಕ್ಕೆ ಬಂದಿದ್ದರು” ಎಂದು ಹೇಳಿದ್ದಾರೆ.
#WATCH | A day after the tragedy, the slippers of the victims lying on the ground where the stampede occurred during a religious event in Uttar Pradesh’s Hathras. Forensic experts at the site are collecting evidence as part of the investigation.
CM Yogi Adityanath yesterday… pic.twitter.com/JRQxpL4xx8
— ANI (@ANI) July 3, 2024
ಇನ್ನು ಅಂಶು ಮತ್ತು ಪಬಲ್ ಕುಮಾರ್ ಎಂಬವರು ತಮ್ಮ ಸೋದರಸಂಬಂಧಿಯ ತಂದೆ ಗೋಪಾಲ್ ಸಿಂಗ್ (40) ಅವರ ಹುಡುಕಾಟದಲ್ಲಿದ್ದು, “ಅವರು ಕಾರ್ಯಕ್ರಮಕ್ಕೆ ಹೋಗಿದ್ದರು ಆದರೆ ಇನ್ನೂ ಮನೆಗೆ ಹಿಂದಿರುಗಿಲ್ಲ. ಅವರು ಫೋನ್ ಕೂಡ ತೆಗೆದುಕೊಂಡು ಹೋಗಿಲ್ಲ. ಸಿಂಗ್ ಬಾಬಾ ಅವರ ಅನುಯಾಯಿ ಅಲ್ಲ. ಆದರೆ ಪರಿಚಯಸ್ಥರ ಒತ್ತಾಯದ ಮೇರೆಗೆ ಮೊದಲ ಬಾರಿಗೆ ಕಾರ್ಯಕ್ರಮಕ್ಕೆ ಹೋಗಿದ್ದರು” ಎಂದು ಪಿಟಿಐಗೆ ತಿಳಿಸಿದರು.
ಮಂಗಳವಾರ ತಡರಾತ್ರಿ ಉಪ ಪೊಲೀಸ್ ವರಿಷ್ಠಾಧಿಕಾರಿ ಸುನೀಲ್ ಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, “ನಾವು ಸತ್ಸಂಗ ನಡೆಸಿದ ಪ್ರದೇಶದಲ್ಲಿ ಹುಡುಕಾಟ ನಡೆಸಿದೆವು. ಬಾಬಾ ಅಲ್ಲಿ ಇಲ್ಲಿ” ಎಂದು ಎಎನ್‌ಐಗೆ ತಿಳಿಸಿದರು.
#WATCH | Mainpuri | Hathras Stampede | Deputy SP Sunil Kumar says, “We did not find Baba ji inside the campus…He is not here…” https://t.co/zrjkIrVzph pic.twitter.com/KN7Dls4mOU
— ANI (@ANI) July 2, 2024