ಉತ್ತರ ಪ್ರದೇಶದ ಹತ್ರಾಸ್ ಕಾಲ್ತುಳಿತ ದುರ್ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ ಸದ್ಯ 121ಕ್ಕೆ ಏರಿಕೆಯಾಗಿದೆ. ಈ ನಡುವೆ ಮೃತ ದೇಹಗಳನ್ನು ನೋಡಿ ಹೃದಯಾಘಾತದಿಂದ ಪೊಲೀಸ್ ಕಾನ್ಸ್ಟೆಬಲ್ ಸಾವನ್ನಪ್ಪಿರುವ ಘಟನೆ ನಡೆದಿದೆ.
ಇಟಾಹ್ ಜಿಲ್ಲೆಯ ಅವಘರ್ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲಾದ ಕಾನ್ಸ್ಟೆಬಲ್ ರವಿ ಹತ್ರಾಸ್ ಸತ್ಸಂಗದಲ್ಲಿ ಕಾಲ್ತುಳಿತದಿಂದ ಸಾವನ್ನಪ್ಪಿದ ಜನರ ಮೃತದೇಹಗಳನ್ನು ನೋಡಿದ ಬಳಿಕ ಹೃದಯಾಘಾತಕ್ಕೆ ಒಳಗಾಗಿದ್ದು ಇಟಾಹ್ ವೈದ್ಯಕೀಯ ಕಾಲೇಜಿನಲ್ಲಿ ನಿಧನರಾದರು ಎಂದು ಎಬಿಪಿ ನ್ಯೂಸ್ ವರದಿ ಮಾಡಿದೆ.
ರವಿ ಒಂದು ತಿಂಗಳಿನಿಂದ ತನ್ನ ಸಹೋದ್ಯೋಗಿ ಶೇಖರ್ ಪ್ರೇಮಿಯೊಂದಿಗೆ ಕ್ಯೂಆರ್ಟಿ ಕರ್ತವ್ಯದ ಮೇರೆಗೆ ಇಟಾಹ್ ನಗರದಲ್ಲಿ ನೆಲೆಸಿದ್ದರು. ಹತ್ರಾಸ್ ಘಟನೆಯ ಬಳಿಕ ತ್ವರಿತವಾಗಿ ಇಟಾಹ್ ವೈದ್ಯಕೀಯ ಕಾಲೇಜಿಗೆ ಹೋಗುವಂತೆ ರವಿ ಅವರಿಗೆ ಸೂಚಿಸಲಾಗಿತ್ತು.
ಇದನ್ನು ಓದಿದ್ದೀರಾ? ಹತ್ರಾಸ್ ಕಾಲ್ತುಳಿತ ದುರಂತ| ಮೃತರ ಸಂಖ್ಯೆ 121ಕ್ಕೆ ಏರಿಕೆ, ಸತ್ಸಂಗ ನಡೆಸಿದ ಭೋಲೆ ಬಾಬಾ ನಾಪತ್ತೆ
ಇಟಾಹ್ ವೈದ್ಯಕೀಯ ಕಾಲೇಜಿಗೆ ಬಂದ ರವಿ ಅವರು ಮೃತ ದೇಹಗಳನ್ನು ನೋಡಿ ತಲೆ ತಿರುಗಿ ಬಿದ್ದಿದ್ದಾರೆ. ಅವರನ್ನು ಬಿಸಿಲಿನ ಧಗೆಗೆ ತಲೆ ತಿರುಗಿರಬಹುದು ಎಂದು ಹವಾನಿಯಂತ್ರಿತ ಕೊಠಡಿಗೆ ಕರೆದೊಯ್ಯುತ್ತಿದ್ದಂತೆ ರವಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಮೃತ ಮತ್ತು ಪ್ರಜ್ಞಾಹೀನರಾದ ಸಂತ್ರಸ್ತರನ್ನು ಟ್ರಕ್ಗಳು ಮತ್ತು ಟೆಂಪೋಗಳಲ್ಲಿ ಸಿಕಂದರಾವ್ ಟ್ರಾಮಾ ಸೆಂಟರ್ಗೆ ಕರೆತರಲಾಗಿತ್ತು. ಆರೋಗ್ಯ ಕೇಂದ್ರದ ಹೊರಗೆ ಜನರು ಜಮಾಯಿಸಿದ್ದ ಕಾರಣ ಮೃತದೇಹಗಳನ್ನು ಎಲ್ಲೆಂದರಲ್ಲಿ ಇರಿಸಲಾಗಿದೆ. ಮಂಜಿನ ಗೆಡ್ಡೆಯ ಮೇಲೆ ಮಲಗಿಸಲಾಗಿದೆ.
रात हाथरस अस्पताल का मंजर बर्दाश्त से बाहर था… भला बच्चों की कौन सी आस्था होती है? बतौर परिजन थोड़ी तो समझ रखनी होगी. #HathrasStampede #HathrasAccident pic.twitter.com/pXwosGzFyE
— Amrit Tiwari (Vistaar News) (@amrit2tweet) July 3, 2024
ಇನ್ನು ಹತ್ರಾಸ್ ಕಾಲ್ತುಳಿತ ಪ್ರಕರಣದಲ್ಲಿ ಈವರೆಗೆ 121ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ ಅಧಿಕ ಮಂದಿ ಮಹಿಳೆಯರಾಗಿದ್ದು ಮಕ್ಕಳು ಕೂಡ ಸಾವನ್ನಪ್ಪಿದ್ದಾರೆ. ಭೋಲೆ ಬಾಬಾ ಎಂದು ಕರೆಯಲ್ಪಡುವ ಬೋಧಕನ ನೇತೃತ್ವದಲ್ಲಿ ನಡೆಸಿದ ಸತ್ಸಂಗದ ಬಳಿಕ ಈ ಕಾಲ್ತುಳಿತ ಉಂಟಾಗಿದ್ದು ಸದ್ಯ ಬಾಬಾ ನಾಪತ್ತೆಯಾಗಿದ್ದಾರೆ. ಜನರು ಭೋಲೆ ಬಾಬಾ ಪೋಸ್ಟರ್ಗಳಿಗೆ ಕಲ್ಲೆಸೆದು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
#हाथरस में हुए दर्दनाक घटना के बाद “बाबा के पोस्टर पर पत्थर चलाते युवक” ,घटना स्थल की वीडियो हुई वायरल#HathrasStampede #HathrasAccident #HathrasNews #Hathrasstamped #HathrasTragedy #hathrash #Lucknow#India#NCR pic.twitter.com/rKrDnPXFoP
— sanjeev Journalist (@sbhatnagar76) July 3, 2024