‘ಹತ್ರಾಸ್ ಕಾಲ್ತುಳಿತಕ್ಕೆ ಕಾರಣವೇನು’? ಮಾಧ್ಯಮಗಳು ವರದಿ ಮಾಡಲು ತಡ ಮಾಡಿದ್ದೇಕೆ?

Date:

Advertisements

ಹತ್ರಾಸ್ ಕಾಲ್ತುಳಿತದಿಂದಾದ ಅಗಾಧ ಸಾವು-ನೋವು ದೇಶದ ಜನರ ಕರಳು ಹಿಸುಕುವಂತೆ ಮಾಡಿದೆ. ಸುದ್ದಿ ವಾಹಿನಿಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹತ್ರಾಸ್‌ ನೆಲದ ಮೇಲೆ ಹಾಗೂ ಸ್ಥಳೀಯ ಆಸ್ಪತ್ರೆಗಳಲ್ಲಿ ಬಿದ್ದಿದ್ದ ಮೃತದೇಹಗಳ ಚಿತ್ರಗಳು-ವಿಡಿಯೋಗಳು ವೈರಲ್‌ ಆಗಿವೆ. ಸ್ಥಳದಲ್ಲಿ ನಿಂತು ಸಾವುಗಳನ್ನು ಕಂಡ ಜನರು ಆಘಾತಗೊಂಡಿದ್ದಾರೆ.

ನಾರಾಯಣ್ ಸಕರ್ ಹರಿ ಅಲಿಯಾಸ್‌ ‘ಭೋಲೆ ಬಾಬಾ’ ಎಂಬ ಸ್ವಯಂ ಘೋಷಿತ ದೇವಮಾನವನ ಧಾರ್ಮಿಕ ಸಭೆಯಲ್ಲಿ ನಡೆದ ಈ ಕಾಲ್ತುಳಿತದಲ್ಲಿ 123 ಜನರು ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ದುರ್ಘಟನೆಯಲ್ಲಿ ತನ್ನ ಇಬ್ಬರು ಮಕ್ಕಳನ್ನು ಕಳೆದುಕೊಂಡ ಮಹಿಳೆಯೊಬ್ಬರು ಮಾನಸಿಕವಾಗಿ ಕುಗ್ಗಿಹೋಗಿದ್ದಾರೆ. ಆಕೆಯ ನೋಟವು ಸರ್ವಸ್ವವೂ ಮುಗಿದುಹೋಯಿತು ಎಂಬಂತೆ ಇದ್ದುದ್ದನ್ನು ಸುದ್ದಿಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಅದಾಗ್ಯೂ, ಭಾರತದ ಬಹುತೇಕ ಮಾಧ್ಯಮಗಳು ಈ ಭೀಕರ ಘಟನೆಯ ಬಗ್ಗೆ ಗಮನ ಹರಿಸಲಿಲ್ಲ. ಭೀಕರತೆಯನ್ನು ಅರಿಯಲಿಲ್ಲ. ಸುದ್ದಿ ಪ್ರಕಟಿಸಲಿಲ್ಲ. ಸಹಾನುಭೂತಿಯನ್ನೂ ಕಳೆದುಕೊಂಡಿರುವ ಪ್ರಮುಖ ಮಾಧ್ಯಮಗಳು ಅಂದು ಲೋಕಸಭೆಯಲ್ಲಿ ರಾಷ್ಟ್ರಪತಿ ಭಾಷಣಕ್ಕೆ ಧನ್ಯವಾದ ನಿರ್ಣಯ ಮಂಡಿಸುತ್ತಿದ್ದ ಪ್ರಧಾನಿ ಮೋದಿ ಭಾಷಣದ ನೇರಪ್ರಸಾರವನ್ನು ಸಂಜೆ 6 ಗಂಟೆಗೆ ಅವರ ಭಾಷಣ ಮುಗಿಯುವವರೆಗೂ ಮುಂದುವರೆಸಿದ್ದವು. ಆವರೆಗೂ, ಹತ್ರಾಸ್‌ ಕಾಲ್ತುಣಿತದ ಘಟನೆಯನ್ನಾಗಲೀ, ಸತ್ತವರ ಕುರಿತಾಗಲೀ ವರದಿ ಪ್ರಸಾರ ಮಾಡಲಿಲ್ಲ.

Advertisements

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಕಾರ, ‘ಸಾವಿನ ಸತ್ಸಂಗ’ (ಎಬಿಪಿ ನ್ಯೂಸ್) ಮಧ್ಯಾಹ್ನ 3.30 ಕ್ಕೆ ಸಂಭವಿಸಿದೆ ಎಂದು ವರದಿಯಾಗಿದೆ. ಹಿಂದೂಸ್ತಾನ್ ಟೈಮ್ಸ್ ಪ್ರತ್ಯಕ್ಷದರ್ಶಿಯೊಬ್ಬರನ್ನು ಉಲ್ಲೇಖಿಸಿ, “ಮೊದಲ ಆಂಬ್ಯುಲೆನ್ಸ್ ಮಧ್ಯಾಹ್ನ 3 ಗಂಟೆಯ ನಂತರ ಬಂದಿತು; ಆ ಹೊತ್ತಿಗೆ ನಾವು ಹೆಚ್ಚಿನ ಜನರನ್ನು ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದೆವು” ಎಂದು ಹೇಳಿರುವುದಾಗಿ ವರದಿಮಾಡಿದೆ.

ಜನರ ಹೇಳಿಕೆಗಳ ಪ್ರಕಾರ, ಘಟನೆಯು ಮಧ್ಯಾಹ್ನ 3 ಗಂಟೆಗೆ ಮೊದಲು ಸಂಭವಿಸಿದೆ. ಅಂದರೆ, ಟಿವಿ ಸುದ್ದಿಗಳು ಬರೋಬ್ಬರಿ 3 ಗಂಟೆಗಳ ಬಳಿಕ ಹೊರಬಂದವು. ‘ಬಾಬಾ ಬಳಿ ಹೋದ ಜನರು ಸಾವನ್ನು ಭೇಟಿಯಾದರು’ ಎಂಬ ಶೀರ್ಷಿಕೆಯಲ್ಲಿ ಆಜ್ ತಕ್ ಸಂಜೆ 6 ಗಂಟೆಗೆ ಸುದ್ದಿ ಪ್ರಸಾರ ಮಾಡಿತು. ಪ್ರಧಾನಿ ಮೋದಿಯವರ ಭಾಷಣ ಮುಗಿಯುವ ಮೊದಲು ಹತ್ರಾಸ್‌ ಘಟನೆಯನ್ನು ವರದಿ ಮಾಡಿದ ಏಕೈಕ ಪ್ರಮುಖ ಸುದ್ದಿವಾಹಿನಿ ‘ಎಬಿಪಿ ನ್ಯೂಸ್‌’ ಮಾತ್ರ.

ಮಂಗಳವಾರ ಸಂಜೆ ಹತ್ರಾಸ್‌ ತಲುಪಿದ ಮಾಧ್ಯಮಗಳು, ಬುಧವಾರ ಬೆಳಗ್ಗೆಯವರೆಗೂ ಸುದ್ದಿ ಬಿತ್ತರಿಸಿದವು. ಆದರೆ, ಬುಧವಾರ ಬೆಳಗ್ಗೆ ರಾಜ್ಯಸಭೆಯಲ್ಲಿ ಮೋದಿ ಭಾಷಣ ಆರಂಭಿಸುತ್ತಿದ್ದಂತೆ ಮತ್ತೆ ನೇರಪ್ರಸಾರ ಮಾಡಲು ಮಾಧ್ಯಮಗಳು ಸಂಸತ್ತಿನತ್ತ ತಮ್ಮ ಕ್ಯಾಮೆರಾವನ್ನು ತಿರುಗಿಸಿದವು.

ಅಂದು, ಮೋದಿ ಭಾಷಣ ಇಲ್ಲದಿದ್ದಾರೆ, ಹೆಚ್ಚಿನ ಮಾಧ್ಯಮಗಳು ಹತ್ರಾಸ್‌ ಘಟನೆಯ ಬಗ್ಗೆ ನಿರಂತರ ಸುದ್ದಿ ಬಿತ್ತರಿಸುತ್ತಿದ್ದವು. ಮೋದಿ ಮೇಲೆ ಕೇಂದ್ರೀಕೃತವಾಗಿದ್ದ ಮಾಧ್ಯಮಗಳು ಘಟನೆ ನಡೆದ ರಾತ್ರಿ ನಾನಾ ವರದಿ, ಚರ್ಚೆಗಳು ಮಾಡಿದವು.ರಾತ್ರಿಯ ವೇಳೆಗೆ ಇಂಡಿಯಾ ಟುಡೆ, ರಿಪಬ್ಲಿಕ್ ಟಿವಿ, ಟೈಮ್ಸ್ ನೌ, ಎನ್‌ಡಿಟಿವಿ 24×7 ಸೇರಿದಂತೆ ಹಲವು ಸುದ್ದಿವಾಹಿನಿಗಳ ಪ್ರತಿನಿಧಿಗಳು ದುರಂತ ನಡೆದ ಸ್ಥಳಕ್ಕೆ ತೆರಳಿ, ಸುದ್ದಿ ಮಾಡಿದರು. ರಾಜಕೀಯ ಮತ್ತು ಆಡಳಿತಾತ್ಮಕ ಲೋಪಗಳನ್ನು ಟೀಕಿಸಿದರು. ರಿಪಬ್ಲಿಕ್ ಟಿವಿಯ ಆಂಕರ್ ಅರ್ನಾಬ್ ಗೋಸ್ವಾಮಿ ಹೇಳುವಂತೆ, “ನಿಮಯಗಳನ್ನು ಉಲ್ಲಂಘಿಸಲು ಧಾರ್ಮಿಕ ನಾಯಕರಿಗೆ ಆಡಳಿತವು ಅವಕಾಶ ಕೊಟ್ಟಿದೆ” ಎಂಬ ಟೀಕೆಗಳು ವ್ಯಕ್ತವಾದವು.

ಪತ್ರಿಕೆಗಳು ಮತ್ತು ಸುದ್ದಿವಾಹಿನಿಗಳು ಪ್ರತ್ಯಕ್ಷದರ್ಶಿಗಳು ಮತ್ತು ಸಂತ್ರಸ್ತರ ಸಂಬಂಧಿಕರನ್ನು ಸಂದರ್ಶಿಸಿದವು. ಟಿವಿ ವಾಹಿನಿಗಳು ತಮ್ಮ ಕ್ಯಾಮೆರಾಗಳನ್ನು ದುಃಖಿತರ ಮೇಲೆ ಕೇಂದ್ರೀಕರಿಸಿದವು. ತಮ್ಮವರನ್ನು ಕಳೆದುಕೊಂಡು, ದುಃಖದಲ್ಲಿದ್ದವರ ಅಳಲು, ಆಕ್ರಂದನವನ್ನು ಸೆರೆ ಹಿಡಿದು, ಪ್ರಸಾರ ಮಾಡಿದವು. ಈ ಮಾಧ್ಯಮಗಳು ಮಾತನಾಡಿಸಿದ ಹಲವರಲ್ಲಿ ಓರ್ವ ವ್ಯಕ್ತಿ, ‘ತನ್ನ ಮೆದುಳು ಕೆಲಸ ಮಾಡುತ್ತಿಲ್ಲ’ ಎಂದು ಹೇಳುವುದನ್ನು ಕಾಣಬಹುದು.

ಸ್ವಯಂಘೋಷಿತ ದೇವಮಾನವ ಭೋಲೆ ಬಾಬಾ ತುಳಿದ ಮಣ್ಣನ್ನು ತೆಗೆದುಕೊಂಡು ತಮ್ಮ ಹಣೆಗೆ ಲೇಪಿಸಿಕೊಳ್ಳಲು ಜನರು ಮುಗಿಬಿದ್ದಿದ್ದರಿಂದ ಹಾಗೂ ಆತನ ಖಾಸಗಿ ರಕ್ಷಣಾ ಗುಂಪು ಜನರನ್ನು ದೂರಕ್ಕೆ ತಳ್ಳಿದ್ದರಿಂದ ಕೆಲ ಜನರು ಬಿದ್ದರೆ, ಕೆಲವರು ಓಡಿದರು. ಪರಿಣಾಮ, ಕಾಲ್ತುಳಿತದ ದುರ್ಘಟನೆ ನಡೆದುಹೋಗಿತ್ತು. ಈ ಘಟನೆಯಲ್ಲಿ ಏನಾಯಿತು ಎಂಬುದನ್ನು ತೋರಿಸಲು ಮಾಧ್ಯಮಗಳು ಪ್ರತ್ಯಕ್ಷದರ್ಶಿಗಳ ಮೊರೆಹೋದವು.

ಬಡವರ ಮೂಡನಂಬಿಕೆಯು ಅವರದ್ದೇ ಸಾವಿಗೆ ಕಾರಣವಾಗಿದೆ. ಅಲಂಕಾರಿಕ ಕಾರುಗಳನ್ನು ಇಷ್ಟಪಡುವ ‘ಸೂಟ್ ಬೂಟ್ ಬಾಬಾ’ನನ್ನು ನೋಡಲು ಹಲವಾರು ಉತ್ತರದ ರಾಜ್ಯಗಳಿಂದ ಹತ್ರಾಸ್‌ಗೆ ಬಂದಿದ್ದರು. ಬಡವರು, ದಲಿತರು ತಮ್ಮ ನೋವಿಗೆ ಪರಿಹಾರ ಕಂಡುಕೊಳ್ಳಲು ಬಾಬಾ ಬಳಿಗೆ ಬಂದಿದ್ದರು ಎಂದು ನ್ಯೂನ್‌ ನೇಷನ್ ಮತ್ತು ಇಂಡಿಯಾ ಟುಡೇ ವರದಿ ಮಾಡಿವೆ.

ಮೃತದೇಹಗಳು ಮತ್ತು ಜನರು ದುಃಖಿಸುತ್ತಿರುವ ದೃಶ್ಯಗಳ ಜೊತೆಗೆ ಸುದ್ದಿ ಮಾಧ್ಯಮಗಳು ‘ಭೋಲೆ ಬಾಬಾ’ ಯಾರು ಮತ್ತು ಕಾಲ್ತುಳಿತಕ್ಕೆ ಕಾರಣವೇನು ಎಂಬುದರ ಕುರಿತು ದೀರ್ಘಕಾಲ ಚರ್ಚೆ ನಡೆಸಿದ್ದವು. ಜನರು ಅಳುತ್ತಿರುವುದನ್ನು ಪ್ರಸಾರ ಮಾಡಿದವು. ಹಾಲಿನ ಬಾಟಲಿ ಹಿಡಿದುಕೊಂಡು ಒಂಟಿಯಾಗಿ ಅಳುತ್ತಿದ್ದ ಎಳೆ ಕಂದಮ್ಮನನ್ನು ಮಾಧ್ಯಮಗಳು ಸೆರೆ ಹಿಡಿದು ಪ್ರಸಾರ ಮಾಡಿದವು.

ದಿ ಹಿಂದೂ, ದಿ ಇಂಡಿಯನ್ ಎಕ್ಸ್‌ಪ್ರೆಸ್ ಮತ್ತು ಅನೇಕ ಟಿವಿ ಚಾನೆಲ್‌ಗಳು ‘ಭೋಲೆ ಬಾಬಾ ಯಾರು?’ ಎಂಬ ಪ್ರಶ್ನೆಗೆ ಉತ್ತರಿಸಿವೆ. ಆತ ಧಾರ್ಮಿಕ ನಾಯಕನಾಗಿ ಬದಲಾಗಿರುವ ಮಾಜಿ ಪೋಲೀಸ್‌ ಎಂದು ಬಹಿರಂಗಪಡಿಸಿವೆ.

ಆದರೆ, ಮಂಗಳವಾರ ಘಟನೆ ನಡೆದ ಮೇಲೆ ಆತ ಪರಾರಿಯಾಗಿದ್ದು, ನಾಪತ್ತೆಯಾಗಿದ್ದಾರೆ. ಅವರು ಎಲ್ಲಿದ್ದಾರೆ. ಎಫ್‌ಐಆರ್‌ನಲ್ಲಿ ಆತನನ್ನು ಯಾಕೆ ಹೆಸರಿಸಲಾಗಿಲ್ಲ ಎಂಬ ಪ್ರಶ್ನೆಗೆ ಈವರೆಗೂ ಉತ್ತರ ದೊರೆತಿಲ್ಲ.

ಆತನ ‘ಕಿಲಾ’ ಆಶ್ರಮ ಮೈನ್‌ಪುರಿಯಲ್ಲಿದೆ. ಪೊಲೀಸ್‌ ವರಿಷ್ಠಾಧಿಕಾರಿ ಆಶ್ರಮದೊಳಗೆ ಏಕಾಂಗಿಯಾಗಿ ಹೋಗಿ ಬಂದರು. ‘ನಾನು ಒಳಗೆ ಬಾಬಾನನ್ನು ನೋಡಲಿಲ್ಲ’ ಎಂದು ಅವರು ಹೇಳಿದ್ದಾಗಿ ಎಬಿಪಿ ನ್ಯೂಸ್‌ ವರದಿ ಮಾಡಿದೆ. ಆದರೆ, ಬುಧವಾರ ಬೆಳಗ್ಗೆ 6 ಗಂಟೆವರೆಗೆ ಯಾವುದೇ ಪೊಲೀಸರು ಆಶ್ರಮಕ್ಕೆ ಭೇಟಿ ನೀಡಿರಲಿಲ್ಲ. ಪರಿಶೀಲನೆ ನಡೆಸಿರಲಿಲ್ಲ ಎಂದು ವರದಿಗಾರರು ಹೇಳುತ್ತಾರೆ.

ದುರಂತಕ್ಕೆ ಕಾರಣಗಳ ಬಗ್ಗೆ, ಪೊಲೀಸರು ಹೇಳುವಂತೆ ಜನನಿಬಿಡ ಸ್ಥಳದಲ್ಲಿ ಉಸಿರುಗಟ್ಟುವಿಕೆಯು ಭೀತಿಗೆ ಕಾರಣವಾಯಿತು. ಜನರು ಓಡಿಹೋಗಲು ಮುಂದಾದರು. ಅದು ಕಾಲ್ತುಳಿತಕ್ಕೆ ಕಾರಣವಾಯಿತು. ಆದರೆ, ಹಿಂದೂಸ್ತಾನ್ ಟೈಮ್ಸ್, ಟೈಮ್ಸ್‌ ಆಫ್‌ ಇಂಡಿಯಾ, ಎಕ್ಸ್‌ಪ್ರೆಸ್ ಮತ್ತು ದಿ ಹಿಂದೂ ಪತ್ರಿಕೆಗಳು ನಿಖರ ವರದಿಗಳನ್ನು ಪ್ರಕಟಿಸಿವೆ. ಎಫ್‌ಐಆರ್‌ಗಳು ಎದ್ದುಕಾಣುವ ಲೋಪಗಳನ್ನು ಹೊಂದಿವೆ ಎಂದು ಆ ವರದಿಗಳು ಹೇಳುತ್ತವೆ.

ಇಂಡಿಯಾ ಟುಡೇ ವರದಿಯಂತೆ, ಕಾರ್ಯಕ್ರಮ ನಡೆದ ಸ್ಥಳದಲ್ಲಿ ನಿರ್ಗಮನ-ಪ್ರವೇಶದ ದಿಕ್ಕನ್ನು ಗುರುತಿಸಲಾಗಿರಲಿಲ್ಲ. ಸ್ಥಳದಿಂದ ಹೊರಹೋಗಲು ಯಾವುದೇ ತುರ್ತು ಮಾರ್ಗವಿರಲಿಲ್ಲ ಎಂಬುದರ ಬಗ್ಗೆ ಗಮನ ಸೆಳೆದಿದೆ. News 18 ಸ್ಪಷ್ಟವಾಗಿ, “ಬಾಬಾ ನಿರ್ಗಮಿಸುವಾಗ ಆತನ ಕಾಲಿನ ‘ಧೂಳ್‌’ಅನ್ನು ಪಡೆದುಕೊಳ್ಳಲು ಜನರು ಆತನನ್ನ ಧಾವಿಸಿದರು. ಸ್ಥಳದ ಹೊರಗೆ ವಾಹನವನ್ನು ನಿಲ್ಲಿಸಲಾಗಿತ್ತು. ಆತನನ್ನು ಅಲ್ಲಿಗೆ ಕರೆದೊಯ್ಯರು, ಬಾಬಾನ ಖಾಸಗಿ ರಕ್ಷಣಾ ತಂಡ ಜನರನ್ನು ದೂಡಲು ಆರಂಭಿಸಿತ್ತು. ಅಲ್ಲದೆ, 2 ಲಕ್ಷಕ್ಕೂ ಹೆಚ್ಚು ಜನರು ಸೇರಿದ್ದ ಕಾರ್ಯಕ್ರಮದಲ್ಲಿ, ಜನರನ್ನು ನಿಯಂತ್ರಿಸಲು ಕೇವಲ 72 ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು” ಎಂದು ಹೇಳಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X