ರಾಜ್ಯ ಸಿಎಂ ಗಾದಿಗೆ ಕಣ್ಣಿಟ್ಟ ಎಚ್‌ಡಿಕೆ; ಬಿಹಾರದ ನಿತೀಶ್‌ ಹಾದಿಯಲ್ಲಿ ಕುಮಾರಸ್ವಾಮಿ?

Date:

ರಾಜ್ಯದ ಕಾಂಗ್ರೆಸ್‌ ಸರ್ಕಾರದ ದುರಾಡಳಿತಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ. 2028ರಲ್ಲಿ ಕರ್ನಾಟಕದಲ್ಲಿ ಜೆಡಿಎಸ್‌-ಬಿಜೆಪಿ ಮೈತ್ರಿಕೂಟದ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ. ಈ ಬಾರಿ ಅಧಿಕಾರಕ್ಕೆ ಬಂದರೆ ತಮ್ಮ ಮತ್ತೊಂದು ಮುಖವನ್ನು ತೋರಿಸುವುದಾಗಿ ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್‌.ಡಿ. ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.  

- Advertisement -

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ನಾನು ಈ ಹಿಂದೆ ಅಧಿಕಾರದಲ್ಲಿದ್ದಾಗ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿಲ್ಲ. ಎಲ್ಲದಕ್ಕೂ ಮುಕ್ತ ಅವಕಾಶ ನೀಡಿದ್ದೆ. ಈಗಲೂ ಹೇಳುತ್ತಿದ್ದೇನೆ, ಅಧಿಕಾರದಲ್ಲಿರುವ ಪಕ್ಷ ತನ್ನ ದುರಾಡಳಿತಕ್ಕೆ ಬೆಲೆ ತೆರಬೇಕಾಗುತ್ತದೆ. ಚದುರಂಗದ ಆಟದಲ್ಲಿ ನಡೆಗಳನ್ನು ಹೇಗೆ ಆಡಬೇಕು ಎಂಬುದು ಅವರಿಗಷ್ಟೇ ಅಲ್ಲ, ನನಗೂ ಗೊತ್ತಿದೆ. ಕಾಯಿಯನ್ನು ಹೇಗೆ ಚಲಿಸಬೇಕು ಎಂಬುದು ನನಗೂ ತಿಳಿದಿದೆ. ಆ ಸಮಯ ಬರಲಿದೆ, ಅಲ್ಲಿಯವರೆಗೆ ಕಾಯೋಣ ಎಂದು ಮಾರ್ಮಿಕವಾಗಿ ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಿಯಾಂಡ್ ಬೆಂಗಳೂರು: ಡಿಜಿಟಲ್ ಆರ್ಥಿಕತೆಯಲ್ಲಿ ರಾಯಚೂರಿಗೆ ಸಿಗುವುದೇ ಪ್ರತ್ಯೇಕ...

ಕರ್ನಾಟಕದ ಅಭಿವೃದ್ಧಿ ಬೆಂಗಳೂರಿಗೆ ಮಾತ್ರ ಸೀಮಿತವಾಗದೆ ರಾಜ್ಯದ ವಿವಿಧ ನಗರಗಳಿಗೂ ತಲುಪಬೇಕು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರದ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (KDEM) ‘Beyond Bengaluru’ ಯೋಜನೆಯನ್ನು ಜಾರಿಗೊಳಿಸಿದೆ. ಐಟಿ, ಐಟಿಇಎಸ್,...

ರಾಯಚೂರು | ಸ್ಥಳೀಯ ಸಂಸ್ಥೆ ಚುನಾವಣೆ: ಆಕಾಂಕ್ಷಿಗಳ ಲೆಕ್ಕಾಚಾರ...

ಜಿಲ್ಲಾ ಪಂಚಾಯತ್‌ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಕರಡು ಮೀಸಲಾತಿ ಪ್ರಕಟವಾಗುತ್ತಿದ್ದಂತೆ ರಾಯಚೂರು ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣಾ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮೀಸಲಾತಿ ಬದಲಾವಣೆಯಿಂದ ಕೆಲವರ ಸ್ಪರ್ಧೆಯ ಲೆಕ್ಕಾಚಾರ ತಲೆಕೆಳಗಾಗಿದ್ದರೆ, ಮತ್ತೊಂದೆಡೆ...

ಹೊಸ ಓದು | ನಟರಾಜ್ ಹುಳಿಯಾರ್ ಅವರ ‘ಡಾಕ್ಟರ್...

ಇತ್ತೀಚೆಗೆ ಲೋಕಾರ್ಪಣೆಗೊಂಡ ನಟರಾಜ್ ಹುಳಿಯಾರ್ ಅವರ 'ಡಾಕ್ಟರ್ ಸಾಹೇಬ್- ರಾಮಮನೋಹರ ಲೋಹಿಯಾ ಜೀವನಯಾನ' ಕೃತಿಯಿಂದ ಆಯ್ದ 'ಲೋಹಿಯಾ ಮತ್ತು ಕರ್ನಾಟಕ' ಅಧ್ಯಾಯ, ಭಾನುವಾರದ ವಿರಾಮದ ಓದಿಗಾಗಿ... 'ಮಾರ್ಕ್ಸ್, ಗಾಂಧಿ ಅಂಡ್ ಸೋಷಲಿಸಂ' ಪುಸ್ತಕಕ್ಕೆ ಮುನ್ನುಡಿ...

2028ರಲ್ಲಿ ಜೆಡಿಎಸ್‌-ಬಿಜೆಪಿ ಮೈತ್ರಿಕೂಟ ಅಧಿಕಾರಕ್ಕೆ ಮರಳುವುದು ಖಚಿತ ಎಂದ ಅವರು, ಪ್ರಸ್ತುತ ಕಾಂಗ್ರೆಸ್‌ ಸರ್ಕಾರದ ಆಡಳಿತ ವೈಫಲ್ಯಗಳಿಗೆ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಆರೋಪಿತ ಸ್ಟಿಂಗ್‌ ಆಪರೇಷನ್‌ ಪ್ರಕರಣದ ಕುರಿತು ಮಾತನಾಡಿದ ಕುಮಾರಸ್ವಾಮಿ, ಅಕ್ಟೋಬರ್‌ 17ರಂದು ಶನಿವಾರ ಪೊಲೀಸ್‌ ಮಹಾನಿರ್ದೇಶಕರನ್ನು ಭೇಟಿಯಾಗಿ, ಪ್ರಕರಣದ ಬಗ್ಗೆ ಸಮರ್ಪಕ ತನಿಖೆ ನಡೆಸುವಂತೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದರು. ಅಲ್ಲಿ ಹಾಜರಿದ್ದವರ ಮುಖಗಳನ್ನು ನೋಡಿದಾಗಲೇ ಸರಿಯಾದ ತನಿಖೆ ನಡೆಯುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಈ ಪ್ರಕರಣದಲ್ಲಿ ಇನ್ನೂ ಯಾರ್ಯಾರು ಸಿಲುಕಿದ್ದಾರೆ ಎಂಬುದು ನನಗೆ ತಿಳಿದಿಲ್ಲ ಎಂದು ಹೇಳಿದರು.

ಆರೋಪಿತ ಸ್ಟಿಂಗ್‌ ಆಪರೇಷನ್‌ ಹಿಂದೆ ಇರುವ ವ್ಯಕ್ತಿಯ ವಿರುದ್ಧ ಈವರೆಗೆ ಏಕೆ ಕ್ರಮ ಕೈಗೊಂಡಿಲ್ಲ? ಆ ವ್ಯಕ್ತಿಯೇ ಬಹಿರಂಗವಾಗಿ ಜವಾಬ್ದಾರಿ ಹೊತ್ತುಕೊಂಡಿದ್ದಾರೆ ಮತ್ತು 100ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡಿದ್ದಾರೆ ಎಂಬ ಆರೋಪವಿದೆ. ಹಾಗಾದರೆ ನಾನಿನ್ನೂ ಯಾವ ದಾಖಲೆಗಳನ್ನು ಒದಗಿಸಬೇಕು? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ರಾಜ್ಯ ಸರ್ಕಾರವು ಆ ವ್ಯಕ್ತಿಯ ಮುಂದೆ ಶರಣಾದಂತೆ ವರ್ತಿಸುತ್ತಿದೆ ಮತ್ತು ಆತನನ್ನು ಪೋಷಿಸುತ್ತಿದೆ. ಅಲ್ಲದೆ, ಮಾಜಿ ಪ್ರಧಾನಿಯೊಬ್ಬರ ಬಗ್ಗೆ ಆ ವ್ಯಕ್ತಿ ಏಕವಚನದಲ್ಲಿ ಅಗೌರವದಿಂದ ಮಾತನಾಡಿದ್ದಾನೆ ಹಾಗೂ ಸಂಬಂಧವಿಲ್ಲದ ಪ್ರಕರಣಗಳನ್ನು ಪರಸ್ಪರ ಜೋಡಿಸುತ್ತಿದ್ದಾನೆ. ಕಳೆದ ಒಂದು ವಾರದಿಂದ ಗೃಹ ಸಚಿವರು ನಡೆದುಕೊಳ್ಳುತ್ತಿರುವ ರೀತಿಯನ್ನು ಗಮನಿಸಿದರೆ, ತಮ್ಮನ್ನು ಕೆರಳಿಸುವಂತೆ ಮುಖ್ಯಮಂತ್ರಿ ಸೂಚನೆ ನೀಡಿರುವ ಅನುಮಾನ ಮೂಡುತ್ತಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು.

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಸರ್ಕಾರಕ್ಕೆ ಮಾಹಿತಿ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈಗ ಸರ್ಕಾರವೇ ತಮ್ಮ ಬಳಿ ದಾಖಲೆಗಳನ್ನು ಕೇಳುತ್ತಿರುವುದು ವಿಪರ್ಯಾಸ ಎಂದು ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಜತೆಗೆ 2028ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿಯುವ ವಿಶ್ವಾಸವನ್ನೂ ತೋರ್ಪಡಿಸಿದ್ದಾರೆ. ಆದರೆ ಅದು ಅಷ್ಟು ಸುಲಭವಲ್ಲ ಎನ್ನುವುದು ವಿಶ್ಲೇಷಕರ ಅಭಿಪ್ರಾಯ.

ಕಾಂಗ್ರೆಸ್‌ ಸರ್ಕಾರದ ವಿರುದ್ಧ ಾರೋಪ ಮಾಡುತ್ತಾ ತಮ್ಮ ರಾಜಕೀಯ ನೆಲೆ ಗಟ್ಟಿಗೊಳಿಸಲು ಯತ್ನಿಸುತ್ತಿದ್ದರೂ, ಅವರಿಗೆ ಅಷ್ಟು ಸುಲಭವಾಗಿ ಸಿಎಂ ಗಾದಿ ದಕ್ಕುವುದು ಕಷ್ಟಸಾಧ್ಯ ಎಂಬ ಚರ್ಚೆ ರಾಜಕೀಯ ವಲಯದಲ್ಲಿದೆ. ಏಕೆಂದರೆ ಕೇಂದ್ರದಲ್ಲಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಜೋಡಿಯ ಬಿಗಿ ಹಿಡಿತವಿರುವ ಎನ್‌ಡಿಎ ಮೈತ್ರಿಕೂಟದಲ್ಲಿ ಪ್ರಾದೇಶಿಕ ನಾಯಕರಿಗೆ ದಂಡನಾಯಕನ ಸ್ಥಾನ ಬಿಟ್ಟುಕೊಡುವುದು ಸುಲಭದ ಮಾತಲ್ಲ ಎಂಬುದು ಸ್ಪಷ್ಟ. ಬಿಹಾರದಲ್ಲಿ ಜೆಡಿಯು ನಾಯಕ ನಿತೀಶ್ ಕುಮಾರ್ ಅವರು ಎದುರಿಸಿದ ರಾಜಕೀಯ ಅನಿವಾರ್ಯತೆಗಳು ಮತ್ತು ಕುಸಿತದ ಛಾಯೆ ಇಲ್ಲೂ ಆವರಿಸಬಹುದು ಎಂಬ ಆತಂಕ ಹಾಗೂ ವಿಶ್ಲೇಷಣೆಗಳು ಇದೀಗ ಮುನ್ನೆಲೆಗೆ ಬಂದಿವೆ.

ನರೇಂದ್ರ ಮೋದಿ ಮತ್ತು ಅಮಿತ್ ಶಾ ಜೋಡಿ ನೇತೃತ್ವದ ಬಿಜೆಪಿ ಸರ್ಕಾರ ಮಿತ್ರಪಕ್ಷಗಳ ಜೊತೆ ಚುನಾವಣಾ ಹೊಂದಾಣಿಕೆ ಮಾಡಿಕೊಳ್ಳುವಾಗ ಅಥವಾ ಸರ್ಕಾರ ರಚಿಸುವಾಗ ಒಂದು ನಿರ್ದಿಷ್ಟವಾದ ರಾಜಕೀಯ ತಂತ್ರಗಾರಿಕೆಯನ್ನು ಅನುಸರಿಸುತ್ತದೆ. ಬಿಜೆಪಿ ಎಂದಿಗೂ ತಳಮಟ್ಟದಲ್ಲಿ ತನ್ನದೇ ಆದ ಸಂಘಟನೆಯನ್ನು ವಿಸ್ತರಿಸಲು ಪ್ರಾಮುಖ್ಯತೆ ನೀಡುತ್ತದೆಯೇ ಹೊರತು, ಮೈತ್ರಿಪಕ್ಷದ ನೆರಳಿನಲ್ಲಿ ಸಂಪೂರ್ಣವಾಗಿ ಅಡಗಿಹೋಗುವುದಿಲ್ಲ. ಆರಂಭದಲ್ಲಿ ಮಿತ್ರಪಕ್ಷಗಳಿಗೆ ಮುಂಚೂಣಿ ಸ್ಥಾನ ನೀಡಿದರೂ, ಕ್ರಮೇಣ ಆ ಪಕ್ಷದ ಮತಬ್ಯಾಂಕ್ ಮತ್ತು ರಾಜಕೀಯ ನೆಲೆಯನ್ನು ತನ್ನದಾಗಿಸಿಕೊಳ್ಳುವಲ್ಲಿ ಬಿಜೆಪಿ ಹೈಕಮಾಂಡ್ ಅತ್ಯಂತ ನುರಿತವಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ ಮತ್ತು ಪ್ರಮುಖ ರಾಜ್ಯಗಳಲ್ಲಿ ಮೈತ್ರಿ ಸರ್ಕಾರಗಳಿದ್ದರೂ, ನೀತಿ ನಿರೂಪಣೆ, ಆಡಳಿತದ ಚುಕ್ಕಾಣಿ ಮತ್ತು ಪ್ರಮುಖ ರಾಜಕೀಯ ನಿರ್ಧಾರಗಳ ವಿಷಯದಲ್ಲಿ ಹೈಕಮಾಂಡ್‌ನದ್ದೇ ಅಂತಿಮ ತೀರ್ಮಾನವಾಗಿರುತ್ತದೆ. ಸುಲಭವಾಗಿ ದೊಡ್ಡ ಸಿಎಂ ಗಾದಿಯನ್ನು ಅಥವಾ ಸಂಪೂರ್ಣ ಅಧಿಕಾರವನ್ನು ದೀರ್ಘಕಾಲ ಬೇರೆಯವರಿಗೆ ಬಿಟ್ಟುಕೊಡುವ ರಾಜಕೀಯ ಸಂಸ್ಕೃತಿ ಬಿಜೆಪಿಯ ಇತಿಹಾಸದಲ್ಲೇ ಇಲ್ಲ.

ಇದನ್ನೂ ಓದಿ: ಎಚ್‌ಎಂಟಿ ಕೈಗಡಿಯಾರಕ್ಕೆ ಮುಗಿಬಿದ್ದ ಜನ: ಕರ್ನಾಟಕದ ಉದ್ಯಮದ ಪುನಶ್ಚೇತನಕ್ಕೆ ಎಚ್‌ಡಿಕೆ ಹೆಜ್ಜೆ

ಬಿಹಾರ ರಾಜಕಾರಣದ ಉದಾಹರಣೆಯನ್ನೇ ತೆಗೆದುಕೊಂಟರೆ, ರಾಜ್ಯ ರಾಜಕಾರಣದಲ್ಲಿ ದಶಕಗಳ ಕಾಲ ಅಧಿಪತಿಯಾಗಿ ಮೆರೆದ ಜೆಡಿಯು (JDU) ನಾಯಕ ನಿತೀಶ್ ಕುಮಾರ್ ಅವರು ಬಿಹಾರದಲ್ಲಿ ಹಲವು ಬಾರಿ ಮೈತ್ರಿಗಳನ್ನು ಬದಲಾಯಿಸುತ್ತಾ ಬಂದಿದ್ದರೂ, ರಾಷ್ಟ್ರೀಯ ಪಕ್ಷದ ಬಲವಾದ ಚುನಾವಣಾ ಯಂತ್ರ ಮತ್ತು ರಾಷ್ಟ್ರೀಯ ರಾಜಕೀಯದ ಪ್ರಭಾವದ ಮುಂದೆ ಪ್ರಾದೇಶಿಕ ನಾಯಕರು ತಮ್ಮ ಸ್ವಾಯತ್ತತೆಯನ್ನು ಶಾಶ್ವತವಾಗಿ ಉಳಿಸಿಕೊಳ್ಳುವುದು ಕಷ್ಟವಾಯಿತು. ಕಾಲಕ್ರಮೇಣ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿಕೂಟದ ಒಳಗೆಯೇ ಶಾಸಕರ ಬಲ ಬದಲಾಗುತ್ತಾ ಹೋದಂತೆ, ಪ್ರಾದೇಶಿಕ ನಾಯಕರ ಹಿರಿಯತನಕ್ಕೆ ಸೀಮಿತ ಗೌರವ ಸಿಗುತ್ತದೆಯೇ ಹೊರತು ಹಿಂದಿನಂತೆ ರಾಜಕೀಯ ಮೇಲುಗೈ ಉಳಿಯುವುದಿಲ್ಲ ಎಂಬುದು ಸಾಬೀತಾಯಿತು. ಕೊನೆಗೆ, ಸುದೀರ್ಘ ಕಾಲ ಮುಖ್ಯ ಮಂತ್ರಿಯಾಗಿ ಮೆರೆದ ನಿತೀಶ್ ಕುಮಾರ್ ಅವರು ರಾಜ್ಯ ರಾಜಕಾರಣದ ಮುಖ್ಯ ಪೀಠದಿಂದ ನಿರ್ಗಮಿಸಿ, ಸಂಸತ್ತಿನ ಮೇಲ್ಮನೆಗೆ (ರಾಜ್ಯಸಭೆ) ತೆರಳಬೇಕಾದ ಅನಿವಾರ್ಯ ರಾಜಕೀಯ ಸನ್ನಿವೇಶ ನಿರ್ಮಾಣವಾಯಿತು. ಇದು ರಾಷ್ಟ್ರೀಯ ಮೈತ್ರಿ ರಾಜಕಾರಣದಲ್ಲಿ ಪ್ರಾದೇಶಿಕ ದೈತ್ಯರೊಬ್ಬರು ಕ್ರಮೇಣ ಅಂಚಿಗೆ ಸರಿಯಬೇಕಾದ ದುಸ್ಥಿತಿಯನ್ನು ಬಿಂಬಿಸುತ್ತದೆ.

ಕರ್ನಾಟಕದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರು ಎನ್‌ಡಿಎ ಮೈತ್ರಿಕೂಟದಲ್ಲಿದ್ದರೂ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಹೋರಾಟ ನಡೆಸುತ್ತಾ ತಮ್ಮದೇ ಆದ ಪ್ರಾದೇಶಿಕ ಅಸ್ತಿತ್ವವನ್ನು ಗಟ್ಟಿಗೊಳಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೆ, ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ತನ್ನದೇ ಹಿಡಿತವನ್ನು ಹೊಂದಿರುವಾಗ, ಪ್ರಾದೇಶಿಕ ಪಕ್ಷವೊಂದು ಸಿಎಂ ಗಾದಿಯಂತಹ ಅತ್ಯುನ್ನತ ಸ್ಥಾನವನ್ನು ಏರುವುದು ಅಷ್ಟು ಸುಲಭದ ಮಾತಲ್ಲ ಎಂಬುದಕ್ಕೆ ಬಿಹಾರದ ವಿದ್ಯಮಾನಗಳೇ ಸಾಕ್ಷಿ. ಒಂದು ವೇಳೆ ಮೈತ್ರಿ ಸರ್ಕಾರಗಳಲ್ಲಿ ಅವಕಾಶಗಳು ದೊರೆತರೂ, ದೀರ್ಘಕಾಲದವರೆಗೆ ಸ್ವಂತ ಬಲವಿಲ್ಲದೆ ಪ್ರಾದೇಶಿಕ ನಾಯಕರು ಉನ್ನತ ಅಧಿಕಾರವನ್ನು ಕಾಯ್ದುಕೊಳ್ಳುವುದು ರಾಷ್ಟ್ರೀಯ ಪಕ್ಷಗಳ ಬಿಗಿ ವಾತಾವರಣದಲ್ಲಿ ಅತ್ಯಂತ ಸವಾಲಿನ ಕೆಲಸ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಾಮಾ Vs ಚಾಚಾ: ಬಿಜೆಪಿ ಬಿರುಕನ್ನು ಬಯಲು ಮಾಡಿದ ಮಧ್ಯಪ್ರದೇಶ ಆದಿವಾಸಿ ಪ್ರತಿಭಟನೆ

ಈ ವಿವಾದವು ಕೇವಲ ಒಂದು ಅರಣ್ಯ ಭೂಮಿ ತೆರವು ಪ್ರಕರಣವಾಗಿ ಉಳಿದಿಲ್ಲ....

‘ನೊಬೆಲ್’ ಪುರಸ್ಕೃತೆಗೆ ಶುಭಾಷಯ ಕೋರದ ಮೋದಿ ಸರ್ಕಾರ; ‘ಕ್ಷುದ್ರ ಆಡಳಿತ’ ಎಂದು ತರೂರ್ ವಾಗ್ದಾಳಿ

ಈ ವರ್ಷದ ಪ್ರತಿಷ್ಠಿತ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಭಾಜನರಾಗಿರುವ ಭಾರತೀಯ ಮೂಲದ...

ಮಣಿಪುರದಲ್ಲಿ ಮುಂದುವರಿದ ರಕ್ತಪಾತ: ತೌಬಾಲ್‌ನಲ್ಲಿ ಭುಗಿಲೆದ್ದ ಘರ್ಷಣೆ; ಒಬ್ಬರು ಸಾವು, ಹಲವರಿಗೆ ಗಾಯ

ಮಣಿಪುರದಲ್ಲಿ ಹಿಂಸಾಚಾರ ಹೆಚ್ಚಳವಾಗುತ್ತಲೇ ಇದೆ. ತೌಬಾಲ್ ಜಿಲ್ಲೆಯಲ್ಲಿ ಭಾನುವಾರ ನಡೆದ ತೀವ್ರ...

ಬಾಲಿವುಡ್‌ ನಟ ಟೈಗರ್‌ ಶ್ರಾಫ್‌ ಕಾರಿನ ಮೇಲೆ ಗುಂಡಿನ ದಾಳಿ: ಹೊಣೆ ಹೊತ್ತ ಲಾರೆನ್ಸ್ ಬಿಷ್ಣೋಯ್‌ ಗ್ಯಾಂಗ್?‌

ಬಾಲಿವುಡ್ ನಟ ಟೈಗರ್ ಶ್ರಾಫ್ ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಭಾನುವಾರ ಗುಂಡಿನ...