ಮಹಿಳೆಯೊಬ್ಬರ ಮೇಲೆ 18 ಮಂದಿ ಕಾಮುಕರು 18 ತಿಂಗಳುಗಳ ಕಾಲ ನಿರಂತರವಾಗಿ ಸಾಮೂಹಿಕ ಅತ್ಯಾಚಾರ ಎಸಗಿರುವ ಆಘಾತಕಾರಿ, ಹೃದಯವಿದ್ರಾವಕ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ತನ್ನ ಕುಟುಂಬಸ್ಥರ ಸುರಕ್ಷತೆಯ ಬಗ್ಗೆ ಭಯಗೊಂಡಿದ್ದ ಮಹಿಳೆ ನಿರಂತರ ದೌರ್ಜನ್ಯವನ್ನು ಸಹಿಸಿಕೊಂಡಿದ್ದರು ಎಂದು ವರದಿಯಾಗಿದೆ.
ರಾಜಸ್ಥಾನದ ದುಧ್ವಖರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಅತ್ಯಾಚಾರ ಕೃತ್ಯದ ವಿಡಿಯೋ ಮಾಡಿಟ್ಟುಕೊಂಡಿದ್ದ ಕಾಮುಕರು ಆಕೆಯನ್ನು ನಿರಂತರವಾಗಿ ಬ್ಲಾಕ್‌ಮೇಲ್ ಮಾಡುತ್ತಿದ್ದರು ಮತ್ತು ಕುಟುಂಬಸ್ಥರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು. ಹೀಗಾಗಿ, ಆಕೆ ತನ್ನ ಮೇಲಿನ ದೌರ್ಜನ್ಯದ ಬಗ್ಗೆ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ನಿರಂತರ ದೌರ್ಜನ್ಯವನ್ನು ಸಹಿಸಲಾಗದೆ, ಊರು ತೊರೆದಿದ್ದ ಮಹಿಳೆ ಪೊಲೀಸರನ್ನು ಸಂಪರ್ಕಿಸಿದ್ದು, ದೂರು ದಾಖಲಿಸಿದ್ದಾರೆ.
ಪೊಲೀಸ್ ವರದಿಗಳ ಪ್ರಕಾರ, ಮಹಿಳೆಯ ಮೇಲೆ ಕಳೆದ ಒಂದೂವರೆ ವರ್ಷಗಳಿಂದ ಗ್ಯಾನ್ ಸಿಂಗ್ ಮತ್ತು ಆತನ ಗುಂಪು ಸಾಮೂಹಿಕ ಅತ್ಯಾಚಾರ ಎಸಗಿದೆ. ಆರೋಪಿ ಗ್ಯಾನ್ ಸಿಂಗ್ ಎಂಬಾತ ಮಹಿಳೆಯ ನೆರೆಹೊರೆಯ ನಿವಾಸಿಯೇ ಆಗಿದ್ದಾನೆ. ಆತ 18 ತಿಂಗಳ ಹಿಂದೆ ತನ್ನ ಮನೆಗೆ ಮಹಿಳೆಯನ್ನು ಆಹ್ವಾನಿಸಿದ್ದನು. ಆತನ ಮನೆಗೆ ಮಹಿಳೆ ಹೋದಾಗ, ಮನೆಯಲ್ಲಿ ಕೂಡಿಹಾಕಿ ಗ್ಯಾನ್ ಸಿಂಗ್ ಅತ್ಯಾಚಾರ ಎಸಗಿದ್ದಾನೆ. ಘಟನೆ ಬಗ್ಗೆ ಯಾರಿಗಾದರೂ ಹೇಳಿದರೆ ಆಕೆಯ ಮಕ್ಕಳು ಮತ್ತು ಕುಟುಂಬಸ್ಥರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದನೆಂದು ಆರೋಪಿಸಲಾಗಿದೆ.
ನಂತರ, ಕುಟುಂಬಸ್ಥರನ್ನು ಕೊಲ್ಲುವ ಬೆದರಿಕೆ ಹಾಕಿದ್ದ ಗ್ಯಾನ್ ಸಿಂಗ್ ಸಂತ್ರಸ್ತ ಮಹಿಳೆಗೆ ಬೇರೆ ಸ್ಥಳದಲ್ಲಿ ತನ್ನನ್ನು ಭೇಟಿ ಮಾಡುವಂತೆ ಒತ್ತಾಯಿಸಿದ್ದಾನೆ. ಅಲ್ಲಿ ಆರೋಪಿ ಗ್ಯಾನ್ ಸಿಂಗ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಬ್ಲಾಕ್‌ಮೇಲ್ ಮಾಡುವುದಕ್ಕಾಗಿ ಕೃತ್ಯವನ್ನು ವಿಡಿಯೋ ಮಾಡಿಕೊಂಡಿದ್ದಾರೆ. ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಸಿ, ವಿವಿಧ ಸ್ಥಳಗಳಲ್ಲಿ ಆಕೆಯ ಮೇಲೆ ನಿರಂತರವಾಗಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆಯ ದೂರಿನಲ್ಲಿ ವಿವರಿಸಲಾಗಿದೆ.
ಆರೋಪಿಗಳನ್ನು ಗ್ಯಾನ್ ಸಿಂಗ್, ಆತನ ಸಹಚರರಾದ ಭಾಲ್ ಸಿಂಗ್, ಕಾನ್ ಸಿಂಗ್, ನಾಥು ಸಿಂಗ್, ಭನ್ವರ್ ಸಿಂಗ್, ಲಕ್ಷ್ಮಣ್ ಸಿಂಗ್, ರಾಮಾವತಾರ್, ಮುಖೇಶ್, ಮಹೇಂದ್ರ, ರಾಮದಯಾಳ್, ರಘುವೀರ್, ಧನ್ನೆ ಸಿಂಗ್, ಪ್ರೇಮ್ ಸಿಂಗ್, ಪವನ್, ರಾಕೇಶ್, ರಂಜಿತ್ ಸಿಂಗ್, ರೂಪ್ ಸಿಂಗ್ ಮತ್ತು ಮಹೇಂದ್ರ ಸಿಂಗ್ ಎಂದು ಗುರುತಿಸಲಾಗಿದೆ.
ಈ ವರದಿ ಓದಿದ್ದೀರಾ?: ಶೋಷಿತರ ವಿರುದ್ಧ ಅಸ್ತ್ರವಾದ ಅತ್ಯಾಚಾರ; ಇಸ್ರೇಲ್‌ನಿಂದ ಹೇಯ ಕೃತ್ಯ – ಭಾರತವೂ ಹೊರತಾಗಿಲ್ಲ
ಸಂತ್ರಸ್ತ ಮಹಿಳೆಯ ಪತಿ ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ಕಾರಣ, ಆಕೆಯ ಧೈರ್ಯವಾಗಿ ಯಾರೂ ಇರಲಿಲ್ಲ. ಪರಿಣಾಮ, ಕಾಮುಕರ ಗುಂಪಿನ ದೌರ್ಜನ್ಯವನ್ನು ಮಹಿಳೆ ಸಹಿಸಿಕೊಂಡಿದ್ದರು. ಆದರೆ, ಕಾಮುಕರ ದೌರ್ಜನ್ಯ ಹೆಚ್ಚಾಗಿದ್ದರಿಂದ, ಆಕೆ ತನ್ನ ಮಕ್ಕಳೊಂದಿಗೆ ಊರು ತೊರೆದು, ಹನುಮಾನ್‌ಗಢದಲ್ಲಿ ವಾಸಿಸಲಾರಂಭಿಸಿದ್ದರು. ಆದರೆ, ಆರೋಪಿಗಳು ಅಲ್ಲಿಯೂ ಆಕೆಗೆ ಹಿಂಸೆ ಕೊಡಲಾರಂಭಿಸಿದ್ದರು. ಸಂತ್ರಸ್ತೆಗೆ ಫೋನ್ ಕರೆ ಮಾಡಿದ್ದ ಆರೋಪಿಗಳು, ಗ್ರಾಮಕ್ಕೆ ವಾಪಸ್ ಬರದಿದ್ದರೆ ವೀಡಿಯೊಗಳನ್ನು ಹರಿಬಿಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿದೆ.
ಕಾಮುಕರ ಚಿತ್ರಹಿಂಸೆಯನ್ನು ಸಹಿಲಾಗದೆ ಸಂತ್ರಸ್ತೆಯು ತನ್ನ ಪತಿಯ ಬಳಿ ತಾನು ಎದುರಿಸುತ್ತಿರುವ ಹಿಂಸೆ-ದೌರ್ಜನ್ಯಗಳ ಬಗ್ಗೆ ಹೇಳಿಕೊಂಡಿದ್ದಾರೆ. ಬಳಿಕ, ಆಕೆಯ ಪತಿ ಪೊಲೀಸ್ ಠಾಣೆಗೆ ತೆರಳಿ, ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು 18 ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.
ಗಮನಿಸಿ: ಅತ್ಯಾಚಾರವು ಒಂದು ಗಂಭೀರ ಸಾಮಾಜಿಕ ದುಷ್ಕೃತ್ಯ. ಈ ಕ್ರೂರ ಕೃತ್ಯವು ಸಮಾಜದ ನೈತಿಕತೆ ಮತ್ತು ಮಾನವೀಯತೆಯನ್ನು ಕುಂದಿಸುತ್ತದೆ. ಅತ್ಯಾಚಾರವನ್ನು ತಡೆಯುವುದು ಮತ್ತು ಅತ್ಯಾಚಾರ ಮುಕ್ತ ಸಮಾಜವನ್ನು ನಿರ್ಮಿಸುವುದು ನಮ್ಮೆಲ್ಲರ ಜವಾಬ್ದಾರಿ. ಮಹಿಳೆಯರು ಭಯಮುಕ್ತವಾಗಿ ಬದುಕಲು ಹೆಣ್ಣುಮಕ್ಕಳ ಸುರಕ್ಷತೆ, ಗೌರವ ಮತ್ತು ನ್ಯಾಯವನ್ನು ಕಾಪಾಡಲು ನಾವು ಒಗ್ಗೂಡಿ ಹೋರಾಡಬೇಕು.ಅತ್ಯಾಚಾರದ ವಿರುದ್ಧ ಕಠಿಣ ಕಾನೂನು ಜಾರಿಯಾಗಬೇಕು ಮತ್ತು ಸಮಾಜದಲ್ಲಿ ಜಾಗೃತಿ ಮೂಡಿಸಬೇಕು. ನಮ್ಮ ಕುಟುಂಬಗಳಲ್ಲಿ, ಶಾಲೆಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಹೆಣ್ಣುಮಕ್ಕಳ ಜೊತೆ ಗೌರವ ಮತ್ತು ಸಂವೇದನೆಯಿಂದ ನಡೆದುಕೊಳ್ಳಬೇಕು. ಮಹಿಳೆಯರ ರಕ್ಷಣೆಯ ಹೊಣೆ ನಮ್ಮೆಲ್ಲರದ್ದಾಗಿದೆ.
ಹಿಂದೂ ನಾವೆಲ್ಲ ಒಂದು ಎಂಬ ಗಂಟಲು ಹರಕೊಂಡು ಒದರುವ ಜುಮ್ಲಾ ಗುತ್ತಿಗೆದಾರರು ಎಲ್ಲಿದ್ದಾರೆ ಸಂತ್ರಸ್ತೆ ಮಹಿಳೆಗೆ ನ್ಯಾಯ ಕೊಡಿಸಲು ಮುಂದೆ ಬರುವರಾ,, ಗೋದಿ ಮೀಡಿಯಾಗಳು ಮುಚ್ಚಿಕೊಂಡಿವೆ
ಗೋದಿ ಮೀಡಿಯಾಗಳಿಗೆ ಆರೋಪಿ ಸಾಬ್ ಆಗಿರಬೇಕು ಆಗ ಮಾತ್ರ ಜುಮ್ಲಾ ಗಳನ್ನ ಮಾದ್ಯಮದಲ್ಲಿ ತೋರಿಸುತಾರೆ