ದೇಶದ ಹಲವಾರು ಭಾಗಗಳಲ್ಲಿ ಬಿಸಿ ಗಾಳಿ, ತಾಪಮಾನ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದ್ದು ಕೆಲವು ನಗರಗಳಲ್ಲಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ‘ರೆಡ್ ಅಲರ್ಟ್’ ಘೋಷಿಸಿದೆ. ರಾಜಸ್ಥಾನ, ದೆಹಲಿ, ಪಂಜಾಬ್, ಹರಿಯಾಣ, ಚಂಡೀಗಢ ಮತ್ತು ಮಧ್ಯಪ್ರದೇಶಗಳಿಗೆ ಐಎಂಡಿ ಎಚ್ಚರಿಕೆ ನೀಡಿದೆ.
ದೆಹಲಿಯಲ್ಲಿ ಗರಿಷ್ಠ 46 ಡಿಗ್ರಿ ತಾಪಮಾನ ಇರಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ. ಉತ್ತರ ಪ್ರದೇಶದಲ್ಲಿ ಬಿಸಿಗಾಳಿ ಅಧಿಕವಾಗಿದ್ದು ಐಎಂಡಿ ಆರೆಂಜ್ ಅಲರ್ಟ್ ಘೋಷಿಸಿದೆ.
#WATCH | Several parts of India continue to experience heatwave conditions as temperatures continue to remain high. Visuals from Jaipur in Rajasthan. The city recorded a maximum temperature of 46.6 degrees Celsius today.
As per IMD, heatwave conditions will prevail in… pic.twitter.com/BM1KT2uAq9
— ANI (@ANI) May 28, 2024
“ರಾಜಸ್ಥಾನದ ಅನೇಕ ಅಥವಾ ಹೆಚ್ಚಿನ ಭಾಗಗಳಲ್ಲಿ ಬಿಸಿಗಾಳಿ ಇರಲಿದೆ. ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿಯ ಕೆಲವು ಅಥವಾ ಹಲವು ಭಾಗಗಳಲ್ಲಿ ತಾಪಮಾನ ಅಧಿಕವಾಗಿರಲಿದೆ. ಪಶ್ಚಿಮ ಉತ್ತರ ಪ್ರದೇಶ, ಪಶ್ಚಿಮ ಮಧ್ಯಪ್ರದೇಶದ ಕೆಲವು ಭಾಗಗಳಲ್ಲಿ ಮೇ 27ರಿಂದ 29ರವರೆಗೆ ತಾಪಮಾನ ಅಧಿಕವಾಗಿರಲಿದೆ. ಅದಾದ ಬಳಿಕ ಕ್ರಮೇಣ ಕಡಿಮೆಯಾಗಲಿದೆ” ಎಂದು ಐಎಂಡಿ ಬುಲೆಟಿನ್‌ನಲ್ಲಿ ತಿಳಿಸಿದೆ.
ಇದನ್ನು ಓದಿದ್ದೀರಾ? ಬಿಸಿಗಾಳಿ | ಅಹಮದಾಬಾದ್‌ನಲ್ಲಿ ಆಸ್ಪತ್ರೆಗೆ ದಾಖಲಾದ ಬಾಲಿವುಡ್ ನಟ ಶಾರೂಖ್ ಖಾನ್
ಮಂಗಳವಾರದಂದು, ರಾಜಸ್ಥಾನದ ಚುರು ದೇಶದಲ್ಲಿ ಅತಿ ಹೆಚ್ಚು ತಾಪಮಾನ 50.5 ಡಿಗ್ರಿ ಸೆಲ್ಸಿಯಸ್ ಅನ್ನು ದಾಖಲಾಗಿದೆ. ರಾಜಸ್ಥಾನದಲ್ಲಿ ಮಂಗಳವಾರ ಬಿಸಿಗಾಳಿಗೆ ಮೂವರು ಸಾವನ್ನಪ್ಪಿದರೆ, ತಾಪಮಾನದಿಂದ ಅಸ್ವಸ್ಥತೆಗೆ ಒಳಗಾಗಿರುವವರ ಸಂಖ್ಯೆಯು 3,965ಕ್ಕೆ ಏರಿಕೆಯಾಗಿದೆ.
ಅತೀ ಅಧಿಕ ತಾಪಮಾನವಿರುವ ಹತ್ತು ನಗರಗಳು
1. ಚುರು, ರಾಜಸ್ಥಾನ: 50.5°C
2. ಸಿರ್ಸಾ, ಹರಿಯಾಣ: 50.3°C
3. ಮುಂಗೇಶಪುರ, ದೆಹಲಿ: 49.9°C
4. ಝಾನ್ಸಿ, ಉತ್ತರ ಪ್ರದೇಶ: 49.0°C
5. ಪೃಥ್ವಿಪುರ (ನಿವಾರಿ), ಮಧ್ಯಪ್ರದೇಶ: 48.5°C
6. ದಾಲ್ತೋಂಗಂಜ್, ಜಾರ್ಖಂಡ್: 47.5°C
7. ಭಟಿಂಡಾ, ಪಂಜಾಬ್: 47.2°C
8. ಡೆಹ್ರಿ, ಬಿಹಾರ: 47.0°C
9. ಮುಂಗೇಲಿ, ಛತ್ತೀಸ್‌ಗಢ: 47.0°C
10. ಬೌಧ್, ಒಡಿಶಾ: 45.9°C
ಇದನ್ನು ಓದಿದ್ದೀರಾ? ರೆಮಲ್ ಚಂಡಮಾರುತ| ಬಂಗಾಳ, ಬಾಂಗ್ಲಾದೇಶದಲ್ಲಿ 16 ಮಂದಿ ಸಾವು
ಮಳೆ ಮುನ್ಸೂಚನೆ ನೀಡಿದ ಐಎಂಡಿ
ದೇಶದ ಕೆಲವು ರಾಜ್ಯಗಳಲ್ಲಿ ಬಿಸಿಯ ತಾಪ ಅಧಿಕವಾಗಿದ್ದರೆ, ಇನ್ನೂ ಕೆಲವು ಪ್ರಮುಖ ನಗರಗಳಲ್ಲಿ ರೆಮಲ್ ಚಂಡಮಾರುತದಿಂದಾಗಿ ಭಾರೀ ಮಳೆಯಾಗಿದೆ. ಈಶಾನ್ಯ ರಾಜ್ಯಗಳಲ್ಲಿ ಭಾರೀ ಮಳೆ ಕಾರಣ ರೆಡ್ ಅಲರ್ಟ್ ಘೋಷಿಸಲಾಗಿದೆ. ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾದಲ್ಲಿ ಮೇ 29ರಂದು ಸುಮಾರು 115.5 ರಿಂದ 204.4 ಮಿಮೀ ಮಳೆಯಾಗುವ ಸಾಧ್ಯತೆಯಿದೆ. ಅಸ್ಸಾಂ, ಮೇಘಾಲಯ ಮತ್ತು ಅರುಣಾಚಲ ಪ್ರದೇಶಗಳಲ್ಲಿ ಮೇ 9ರಿಂದ ಜೂನ್ 1ರವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.