ಶುಕ್ರವಾರ ಮುಂಜಾನೆಯಿಂದ ದೆಹಲಿಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮಳೆಯಿಂದಾಗಿ ನಡೆದ ದುರ್ಘಟನೆಗಳಲ್ಲಿ 8 ಮತ್ತು 10 ವರ್ಷದ ಇಬ್ಬರು ಮಕ್ಕಳು ಸೇರಿದಂತೆ ಪ್ರತ್ಯೇಕ ಘಟನೆಗಳಲ್ಲಿ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ. ನಗರದ ಹಲವು ಪ್ರದೇಶಗಳು ಜಲಾವೃತವಾಗಿದ್ದು, ಭಾರೀ ವಾಹನದಟ್ಟಣೆ (ಟ್ರಾಫಿಕ್ ಜಾಮ್) ಉಂಟಾಗಿದೆ.
ದೆಹಲಿ ವಿಮಾನ ನಿಲ್ದಾಣದಲ್ಲಿ ಕಾರಿನ ಮೇಲೆ ಛಾವಣಿ ಕುಸಿದು ಕಾರಿನ ಮೇಲೆ ಬಿದ್ದು 45 ವರ್ಷದ ಕ್ಯಾಬ್ ಚಾಲಕ ಸಾವನ್ನಪ್ಪಿದ್ದಾರೆ. ಅದೇ ಸಮಯದಲ್ಲಿ ವಸಂತ ವಿಹಾರ್ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟದಲ್ಲಿ ಮೂವರು ಕಾರ್ಮಿಕರು ಮಣ್ಣಿನಡಿ ಸಿಲುಕಿದ್ದಾರೆ.
“ಇದು ನಿರ್ಮಾಣ ಹಂತದಲ್ಲಿರುವ ಸ್ಥಳವಾಗಿದ್ದು, ಕೆಲವು ಕಾರ್ಮಿಕರು ಇಲ್ಲಿಯೇ ಮಲಗಿದ್ದರು, ಮಳೆಯಿಂದಾಗಿ ನೆಲಕ್ಕೆ ಕುಸಿದಿದೆ” ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮೃತ ದೇಹವನ್ನು ಹೊರತೆಗೆಯುವ ಕಾರ್ಯಾಚರಣೆ ನಡೆಯುತ್ತಿದ್ದು ಪೊಲೀಸ್, ಎನ್‌ಡಿಆರ್‌ಎಫ್, ಡಿಡಿಎಂಎ, ನಾಗರಿಕ ಏಜೆನ್ಸಿಗಳು ಸಹ ಸ್ಥಳಕ್ಕೆ ತಲುಪಿವೆ. ಕಾರ್ಯಚರಣೆ ಮುಂದುವರಿದಿದೆ.
ಇದನ್ನು ಓದಿದ್ದೀರಾ? ದೆಹಲಿ | ಭಾರೀ ಮಳೆಯಿಂದಾಗಿ ರಸ್ತೆಗಳು ಜಲಾವೃತ; ಸಂಚಾರ ಅಸ್ತವ್ಯಸ್ತ
ಈಶಾನ್ಯ ದೆಹಲಿಯ ನ್ಯೂ ಉಸ್ಮಾನ್‌ಪುರ ಪ್ರದೇಶದಲ್ಲಿ 8 ಮತ್ತು 10 ವರ್ಷ ವಯಸ್ಸಿನ ಇಬ್ಬರು ಮಕ್ಕಳು ಸಂಜೆ 5 ಗಂಟೆ ಸುಮಾರಿಗೆ ಮಳೆನೀರಿನಿಂದಾಗಿ ತುಂಬಿದ ಕೊಳದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಈ ಬಗ್ಗೆ ಡಿಸಿಪಿ (ಈಶಾನ್ಯ) ಜಾಯ್ ಟಿರ್ಕಿ ಮಾತನಾಡಿದ್ದು, “ಇಬ್ಬರೂ ಹುಡುಗರು ಕೊಳದಲ್ಲಿ ಈಜಲು ಹೋಗಿ ಮುಳುಗಿದ್ದಾರೆ. ಅವರ ದೇಹಗಳನ್ನು ಹೊರತೆಗೆದು ಜೆಪಿಸಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿ ವೈದ್ಯರು ಈ ಮಕ್ಕಳು ಸಾವನ್ನಪ್ಪಿರುವುದಾಗಿ ಹೇಳಿದ್ದಾರೆ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ದೆಹಲಿ ವಿಮಾನ ನಿಲ್ದಾಣದ ಛಾವಣಿ ಕುಸಿದು ಒಬ್ಬರು ಸಾವು, 5 ಮಂದಿಗೆ ಗಾಯ
ಇನ್ನು ಏಳನೇ ಸಾವು ರೋಹಿಣಿ ಪ್ರದೇಶದಿಂದ ವರದಿಯಾಗಿದೆ. 39 ವರ್ಷದ ವ್ಯಕ್ತಿಯೊಬ್ಬರು ಜಲಾವೃತವಾದ ರಸ್ತೆಯಲ್ಲಿ ಕಡಿದು ಬಿದ್ದ ವಿದ್ಯುತ್ ತಂತಿಯಿಂದಾಗಿ ವಿದ್ಯುತ್ ಶಾಕ್‌ಗೆ ಒಳಗಾಗಿ ಸಾವನ್ನಪ್ಪಿದ್ದಾರೆ ಎಂದು ಡಿಸಿಪಿ ರೋಹಿಣಿ ಜಿಎಸ್ ಸಿದ್ದು ತಿಳಿಸಿದ್ದಾರೆ.
— RWFC New Delhi (@RWFC_ND) June 28, 2024